ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಿಸಲು ದಿನಾಂಕ ನಿಗದಿ – ರೋಹಿತ್ ಶರ್ಮಾ ಟೀಮ್ ಇಂಡಿಯಾ ಲೀಡ್ ಮಾಡೋದು ಫಿಕ್ಸ್

ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಿಸಲು ದಿನಾಂಕ ನಿಗದಿ – ರೋಹಿತ್ ಶರ್ಮಾ ಟೀಮ್ ಇಂಡಿಯಾ ಲೀಡ್ ಮಾಡೋದು ಫಿಕ್ಸ್

ಎಲ್ಲಾ ಕ್ರಿಕೆಟ್ ಫಾಲೋವರ್ಸ್​ಗಳ ಕಣ್ಣು ಈಗ ಐಪಿಎಲ್​ ಮೇಲೆ ನೆಟ್ಟಿದೆ. ಆದ್ರೆ ಐಪಿಎಲ್​ ಮುಗೀತಾನೆ ಮತ್ತೊಂದು ಮೆಗಾ ಕ್ರಿಕೆಟ್ ಟೂರ್ನಿ ಶುರುವಾಗುತ್ತೆ. ಟಿ-20 ವರ್ಲ್ಡ್​ಕಪ್..ಮೇ ಎಂಡ್​ಗೆ ಐಪಿಎಲ್​ ಮುಗಿಯುತ್ತೆ. ಐಪಿಎಲ್​ ಮುಗೀತಾ ಇದ್ದಂತೆ ಜೂನ್​ ಒಂದರಿಂದ ಅಮೆರಿಕ ಮತ್ತು ವೆಸ್ಟ್​​ ಇಂಡೀಸ್​ನಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತೆ. ಆದ್ರೆ ವರ್ಲ್ಡ್​​ಕಪ್​​​ಗೆ ಟೀಂ ಇಂಡಿಯಾದ ಸ್ಕ್ವಾಡ್ ಇನ್ನಷ್ಟೇ ಅನೌನ್ಸ್ ಆಗಬೇಕಿದೆ. ಟಿ20 ವಿಶ್ವಕಪ್​​ನಲ್ಲೀ ರೋಹಿತ್​ ಶರ್ಮಾರೇ ಟೀಂನ್ನ ಲೀಡ್ ಮಾಡ್ತಾರೆ ಅನ್ನೋದು ಕನ್ಫರ್ಮ್ ಆಗಿದೆ. ಹಾರ್ದಿಕ್​ ಪಾಂಡ್ಯ ವೈಸ್​​ಕ್ಯಾಪ್ಟನ್ ಆಗಿರ್ತಾರೆ. ಆದ್ರೆ ವರ್ಲ್ಡ್​ಕಪ್ ಸ್ಕ್ವಾಡ್​ನಲ್ಲಿ ಯಾಱರಿರ್ತಾರೆ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಫಿಟ್ ಬಾಡಿ.. ಹಳೇ ಹೇರ್‌ಸ್ಟೈಲ್ – ಉದ್ದ ಕೂದಲಿನಲ್ಲಿ ಧೋನಿ ಸ್ಟೈಲಿಶ್ ಲುಕ್, ಮಹಿ ಫಿಟ್‌ನೆಸ್‌ಗೆ ಫ್ಯಾನ್ಸ್ ಫಿದಾ

ಮೇ 1ರಂದು ಅಂದ್ರೆ ಐಪಿಎಲ್​​ ಮಿಡ್ಲ್​​ನಲ್ಲಿ ಟಿ20 ವರ್ಲ್ಡ್​ಕಪ್ ಟೀಂ ಇಂಡಿಯಾದ ಸ್ಕ್ವಾಡ್​ ಅನೌನ್ಸ್​ಮೆಂಟ್ ಆಗುತ್ತೆ. ಟೀಂ ಇಂಡಿಯಾ ಸ್ಕ್ವಾಡ್​​ನ್ನ ಯಾವಾಗ ಅನೌನ್ಸ್ ಮಾಡ್ತೀವಿ ಅನ್ನೋ ಬಗ್ಗೆ ಬಿಸಿಸಿಐ ಡೇಟ್ ಫಿಕ್ಸ್ ಮಾಡಿದೆ. ಆದ್ರೆ ಇಲ್ಲಿ ಬಿಸಿಸಿಐ ಇನ್ನೊಂದು ವಿಚಾರವನ್ನ ಕೂಡ ಸ್ಪಷ್ಟಪಡಿಸಿದೆ. ಮೇ 1ಕ್ಕೆ ಅನೌನ್ಸ್​ ಆಗುವ ಸ್ಕ್ವಾಡ್ ಕಂಪ್ಲೀಟ್ ಫೈನಲ್ ಆಗಿರೋದಿಲ್ಲ. ಮೇ 25ರ ಒಳಗಾಗಿ ಅಂದ್ರೆ ಐಪಿಎಲ್​ ಮುಗಿಯೋ ವೇಳೆಗೆ ವರ್ಲ್ಡ್​​ಕಪ್​ ಸ್ಕ್ವಾಡ್​​ನಲ್ಲೂ ಕೆಲ ಚೇಂಜೆಸ್​​ಗಳಾದ್ರೂ ಆಶ್ಚರ್ಯ ಇಲ್ಲ. ಹಾಗಿದ್ರೆ ವರ್ಲ್ಡ್​ಕಪ್​ ಸ್ಕ್ವಾಟ್​ ಸೆಲೆಕ್ಷನ್​ ವಿಚಾರದಲ್ಲಿ ಬಿಸಿಸಿಐನ ಲೆಕ್ಕಾಚಾರವೇನು? ಮೇ 1ಕ್ಕೆ ಟೀಂ ಅನೌನ್ಸ್ ಮಾಡೋಕೆ ನಿರ್ಧರಿಸಿ, ಮೇ 25ರವರೆಗೂ ಫೈನಲ್​​ ಸ್ಕ್ವಾಡ್​​ನಲ್ಲಿ ಚೇಂಜೆಸ್​​ಗಳನ್ನ ತರೋಕೆ ಆಪ್ಷನ್ ಇಟ್ಟುಕೊಂಡಿರೋದ್ಯಾಕೆ ಅನ್ನೋ ಪ್ರಶ್ನೆ ಬರುತ್ತೆ.

ಈ ಭಾರಿಯ ಐಪಿಎಲ್​​ನಲ್ಲಿ ಭಾರತೀಯ ಆಟಗಾರರು ನೀಡುವ ಪರ್ಫಾಮೆನ್ಸ್ ತುಂಬಾನೆ ಮ್ಯಾಟರ್ ಆಗುತ್ತೆ. ಟಿ20 ವರ್ಲ್ಡ್​​ಕಪ್​​ಗೂ ಮುನ್ನ ಟೀಂ ಇಂಡಿಯಾ ಇನ್ಯಾವುದೇ ಟಿ20 ಮ್ಯಾಚ್​​ಗಳನ್ನ ಆಡ್ತಿಲ್ಲ. ಹೀಗಾಗಿ, ವರ್ಲ್ಡ್​ಕಪ್ ಸ್ಕ್ವಾಡ್​ ಸೆಲೆಕ್ಷನ್​ಗೆ ಐಪಿಎಲ್​ ಪ್ರಮುಖ ಮಾನದಂಡವಾಗಿದೆ. ಈಗಾಗ್ಲೇ ಬಿಸಿಸಿಐ ಸೆಲೆಕ್ಷನ್ ಕಮಿಟಿ ಐಪಿಎಲ್​​ನಲ್ಲಿ 30 ಮಂದಿ ಭಾರತೀಯ ಆಟಗಾರರ ಲಿಸ್ಟ್ ರೆಡಿಮಾಡಿಕೊಂಡಿದೆ. ಈ ಮಂದಿಯ ಪರ್ಫಾಮೆನ್ಸ್ ಮೇಲೆ ಬಿಸಿಸಿಐ ನಿಗಾ ವಹಿಸುತ್ತೆ. ನಂತರ ಈ 30 ಮಂದಿಯ ಪೈಕಿ 15 ಪ್ಲೇಯರ್ಸ್​​ಗಳನ್ನ ವರ್ಲ್ಡ್​​ಕಪ್​ಗೆ ಸೆಲೆಕ್ಟ್ ಮಾಡಲಾಗುತ್ತೆ. ಆದ್ರೆ ಸದ್ಯ ಬಿಸಿಸಿಐ ಲಿಸ್ಟ್ ಮಾಡಿಕೊಂಡಿರೋ ಆ 30 ಮಂದಿ ಪ್ಲೇಯರ್ಸ್​ಗಳು ಯಾರೆಲ್ಲಾ ಅನ್ನೋದನ್ನ ಬಿಸಿಸಿಐ ರಿವೀಲ್ ಮಾಡಿಲ್ಲ. ರಿವೀಲ್ ಮಾಡೋದೂ ಇಲ್ಲ.

ಹಾಗಿದ್ರೆ ಟಿ20 ವರ್ಲ್ಡ್​​ಕಪ್​​ಗೆ ಟೀಂ ಇಂಡಿಯಾದ 15 ಮಂದಿ ಆಟಗಾರರ ಸ್ಕ್ವಾಡ್​ ಹೇಗಿರಬಹುದು? ಸಂಭಾವ್ಯ ತಂಡದಲ್ಲಿ ಯಾರೆಲ್ಲಾ ಇರಬಹುದು ಅನ್ನೋದನ್ನ ನೋಡೋಣ.

ವರ್ಲ್ಡ್​​ಕಪ್​ಗೆ ಟೀಂ ಇಂಡಿಯಾ?

  • ರೋಹಿತ್ ಶರ್ಮಾ
  • ಯಶಸ್ವಿ ಜೈಸ್ವಾಲ್
  • ವಿರಾಟ್ ಕೊಹ್ಲಿ
  • ಶುಬ್ಮನ್ ಗಿಲ್
  • ಕೆ.ಎಲ್.ರಾಹುಲ್ OR ಸಂಜು ಸ್ಯಾಮ್ಸನ್
  • ಸೂರ್ಯಕುಮಾರ್
  • ಹಾರ್ದಿಕ್ ಪಾಂಡ್ಯ
  • ರವೀಂದ್ರ ಜಡೇಜ
  • ರಿಂಕು ಸಿಂಗ್
  • ಧ್ರುವ್ ಜ್ಯುರೆಲ್
  • ಅಕ್ಸರ್ ಪಟೇಲ್
  • ಕುಲ್​ದೀಪ್ ಯಾದವ್
  • ಜಸ್ಪ್ರಿತ್ ಬುಮ್ರಾ
  • ಮೊಹಮ್ಮದ್ ಸಿರಾಜ್
  • ಅರ್ಶ್​ದೀಪ್ ಸಿಂಗ್ OR ಶಿವಮ್ ದುಬೆ

 

ಇದು ಟಿ20 ವರ್ಲ್ಡ್​ಕಪ್​​ಗೆ ಟೀಂ ಇಂಡಿಯಾದ ಸಂಭಾವ್ಯ ತಂಡ. ಆದ್ರೆ ಪೈಕಿ ಕೆಲ ಆಟಗಾರರ ಭವಿಷ್ಯ ಐಪಿಎಲ್​​ ಪರ್ಫಾಮೆನ್ಸ್ ಮೇಲೆಯೇ ನಿಂತಿದೆ. ಈ ಪೈಕಿ ಕೆಎಲ್​ ರಾಹುಲ್ ಮತ್ತು ಸೂರ್ಯ ಕುಮಾರ್ ಯಾದವ್ ವಿಚಾರದಲ್ಲಿ ಏನು ಬೇಕಾದ್ರೂ ಆಗಬಹುದು. ಯಾಕಂದ್ರೆ ಇಬ್ಬರೂ ಸದ್ಯ ಇಂಜ್ಯೂರಿಯಿಂದ ರಿಕವರಿ ಆಗ್ತಾ ಇದ್ದಾರೆ. ಸೂರ್ಯಕುಮಾರ್ ಯಾದವ್​ ಐಸಿಸಿ ಱಂಕಿಂಗ್​ನಲ್ಲಿ ನಂಬರ್-1 ಟಿ20 ಬ್ಯಾಟ್ಸ್​​ಮನ್ ಆಗಿರಬಹುದು. ಆದ್ರೆ ಐಪಿಎಲ್​​ ಸೂರ್ಯಕುಮಾರ್ ಪಾಲಿಗೆ ತುಂಬಾ ಮಹತ್ವದ್ದು.

ಇನ್ನು ಟಿ20 ವರ್ಲ್ಡ್​​ಕಪ್​ಗಾಗಿ ಟೀಂ ಇಂಡಿಯಾ ಮೂವರು ಪೇಸ್​ ಬೌಲರ್ಸ್​ಗಳನ್ನ ಪಿಕ್ ಮಾಡ್ಬಹುದೋ ಏನೊ. . ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆರ್ಶ್​ದೀಪ್ ಸಿಂಗ್ ಅಥವಾ ಶಿವಮ್​ ದುಬೆಯನ್ನ ಸೆಲೆಕ್ಟ್ ಮಾಡಬಹುದು. ಹಾಗೆಯೇ ಟೀಮ್​ನಲ್ಲಿ ಇಬ್ಬರು ಸ್ಪಿನ್ನರ್ಸ್​ಗಳಿರಬಹುದು. ಅಕ್ಸರ್​​ ಪಟೇಲ್​ ಮತ್ತು ಕುಲ್​ದೀಪ್​ ಯಾದವ್ ಇವರಿಬ್ಬರನ್ನ ಕೂಡ ಪಿಕ್ ಮಾಡೋ ಸಾಧ್ಯತೆ ಇದೆ. ಹಾಗೆಯೇ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜ ಇಬ್ಬರೂ ಫುಲ್​ ಫ್ಲೆಡ್ಜ್ ಆಲ್ರೌಂಡರ್ಸ್​ಗಳಿರ್ತಾರೆ. ಶಿವಮ್​ ದುಬೆ ಕೂಡ ಸೆಲೆಕ್ಟ್ ಆದ್ರೆ ಮೂವರು ಬೆಸ್ಟ್​ ಆಲ್ರೌಂಡರ್ಸ್ ಆಗ್ತಾರೆ. ಹಾಗೆಯೇ ಅಕ್ಸರ್ ಪಟೇಲ್ ಕೂಡ ಬ್ಯಾಟಿಂಗ್ ಮಾಡೋ ಕೆಪಾಸಿಟಿ ಹೊಂದಿದ್ದಾರೆ. ಟೋಟಲಿ ಇದೊಂದು ಸ್ಟ್ರಾಂಗ್ ಟೀಮ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಇನ್ನು ವಿರಾಟ್ ಕೊಹ್ಲಿ ಟಿ20 ವರ್ಲ್ಡ್​ಕಪ್​ನಲ್ಲಿ ಆಡಿಯೇ ಆಡ್ತಾರೆ ಅನ್ನೋ ಬಗ್ಗೆ ಇನ್ನೂ ಕೂಡ ಕಂಪ್ಲೀಟ್ ಕ್ಲ್ಯಾರಿಟಿ ಅಂತೂ ಸಿಕ್ಕಿಲ್ಲ. ರೋಹಿತ್​ ಶರ್ಮಾ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿರ್ತಾರೆ ಅಂತಾ ಬಿಸಿಸಿಐ ಈಗಾಗ್ಲೇ ಅನೌನ್ಸ್ ಮಾಡಿರೋದ್ರಿಂದ ಹಿಟ್​​ಮ್ಯಾನ್ ವಿಚಾರದಲ್ಲಿ ಫುಲ್ ಕ್ಲ್ಯಾರಿಟಿ ಸಿಕ್ಕಿದೆ. ಆದ್ರೆ ವಿರಾಟ್ ಕೊಹ್ಲಿ ಟಿ20 ವರ್ಲ್ಡ್​​ಕಪ್​ನಲ್ಲಿ ಆಡಿಯೇ ಆಡ್ತಾರೆ ಅಂತಾ ಬಿಸಿಸಿಐ ಇದುವರೆಗೂ ಯಾವುದೇ ಅಫೀಶಿಯಲ್ ಸ್ಟೇಟ್​ಮೆಂಟ್​ ಕೊಟ್ಟಿಲ್ಲ. ಅದ್ರ ಮೇಲಿಂದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಂತೂ ಐಪಿಎಲ್​​ನಲ್ಲಿ ಕೊಹ್ಲಿ ಆಡೋದು ಡೌಟ್ ಎಂದಿದ್ದಾರೆ. ಒಂದು ವೇಳೆ ಐಪಿಎಲ್​​ನಲ್ಲಿ ಕೊಹ್ಲಿ ಆಡಿಲ್ಲ ಅಂದ್ರೆ ಟಿ20 ವರ್ಲ್ಡ್​ಕಪ್​ಗೆ ವಿರಾಟ್ ಕೊಹ್ಲಿಯನ್ನ ಸೆಲೆಕ್ಟ್ ಮಾಡಬಹುದಾ ಅನ್ನೋ ಪ್ರಶ್ನೆ ಕೂಡ ರೇಸ್ ಆಗುತ್ತೆ. ಒಂದು ವೇಳೆ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್​ನಲ್ಲಿ ಆಡಿದ್ರು ಅಂದ್ರೆ ಗ್ಯಾರಂಟಿ ವರ್ಲ್ಡ್​ಕಪ್ ಸ್ಕ್ಯಾಡ್​​ಗೂ ಸೆಲೆಕ್ಟ್ ಆಗ್ತಾರೆ. ಯಾಕಂದ್ರೆ ಐಪಿಎಲ್​​ನಲ್ಲಿ ಕೊಹ್ಲಿ ಪರ್ಫಾಮ್ ಮಾಡಿಯೇ ಮಾಡ್ತಾರೆ. ಇನ್ನು ವರ್ಲ್ಡ್​​ಕಪ್​ನಂಥಾ ಟೂರ್ನಿಯಲ್ಲಿ ಕೊಹ್ಲಿ ಇಲ್ಲಾಂದ್ರೆ ಮಾರಲಿನೇ ಟೀಮ್​ಗೆ ಹೊಡೆತ ಬೀಳುತ್ತೆ. ಎಲ್ಲಾ ರೀತಿಯಲ್ಲೂ ಲಾಸೇ ಅದು. ಅಂತೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪಾಲಿಗೆ ಇದು ಅಲ್​ಮೋಸ್ಟ್ ಕೊನೆಯ ಟಿ20 ವರ್ಲ್ಡ್​ಕಪ್. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಫಸ್ಟ್ ಟಿ20 ವರ್ಲ್ಡ್​​ಕಪ್​​ನ್ನೇ ಗೆದ್ದ ಬಳಿಕ ಇದುವರೆಗೂ ಟ್ರೋಫಿ ಎತ್ತಿ ಹಿಡಿದಿಲ್ಲ. 2023ರಲ್ಲಿ ವಂಡೇ ವಿಶ್ವಕಪ್ ಬೇರೆ ಮಿಸ್ ಆಗಿದೆ. ಹೀಗಾಗಿ ಈ ಬಾರಿ ರೋಹಿತ್ ಟೀಮ್ ಟಿ20 ವರ್ಲ್ಡ್​ಕಪ್ ಆದ್ರೂ ಗೆಲ್ಲುತ್ತಾ ನೋಡಬೇಕಿದೆ.

Sulekha