ಭಾರತಕ್ಕೆ ಸೂಪರ್-8 ಸವಾಲ್ – SA, ZIM, WIನಲ್ಲಿ ಯಾರು ಡೇಂಜರ್?
ಸೆಮೀಸ್ ಟಿಕೆಟ್ ಲೆಕ್ಕಾಚಾರ ಹೇಗೆ?

2024ರ ಟಿ-20 ವಿಶ್ವಕಪ್ನಲ್ಲಿ ಸೋಲಿಲ್ಲದ ಸರದಾರನಾಗಿ ಚಾಂಪಿಯನ್ ಪಟ್ಟಕ್ಕೇರಿದ್ದ ಭಾರತ 2026ರ ವಿಶ್ವಕಪ್ನಲ್ಲೂ ಅಜೇಯವಾಗಿ ಸೂಪರ್ 8ಗೆ ಕಾಲಿಟ್ಟಿದೆ. ಇನ್ನೇನು ಗ್ರೂಪ್ ಹಂತದ ಪಂದ್ಯಗಳು ಕ್ಲೈಮ್ಯಾಕ್ಸ್ನಲ್ಲಿದ್ದು ಸೆಮಿಫೈನಲ್ ರೇಸ್ ಸ್ಟಾರ್ಟ್ ಆಗುತ್ತೆ. 8 ಪಂದ್ಯಗಳ ನಡುವೆ ನಡೆಯಲಿರೋ ಜಿದ್ದಾಜಿದ್ದಿನ ಕಾಳಗದಲ್ಲಿ ನಾಲ್ಕು ತಂಡಗಳು ಟಾಪ್ 4ಗೆ ಬರಲಿವೆ. ಈಗಾಗ್ಲೇ ಸೂಪರ್ 8ನಲ್ಲಿ ಭಾರತದ ಎದುರಾಳಿಗಳು ಯಾರು ಅನ್ನೋದೂ ರಿವೀಲ್ ಆಗಿದೆ.
ಇದನ್ನೂ ಓದಿ : ನೆದರ್ಲ್ಯಾಂಡ್ ಪಂದ್ಯಕ್ಕಿಲ್ಲ ಬುಮ್ರಾ? – 4ನೇ ವಿಕ್ಟರಿಗೆ ಹೇಗಿದೆ ಪ್ಲೇಯಿಂಗ್ 11?
10ನೇ ಆವೃತ್ತಿಯ ಟಿ-20 ವಿಶ್ವಕಪ್ನಲ್ಲಿ ಟ್ರೋಫಿ ಗೆಲುವಿನ ಫೇವರೆಟ್ ಟೀಂ ಆಗಿರೋ ಟೀಂ ಇಂಡಿಯಾ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್ 8ಗೆ ಕಾಲಿಟ್ಟಿದೆ. ಗ್ರೂಪ್ ಸ್ಟೇಜ್ನಲ್ಲಿ ಟಫ್ ಮ್ಯಾಚ್ ಅಂತಾ ಏನೂ ಇಲ್ದಿದ್ರೂ ಈಗ ಸೂಪರ್ 8ನಲ್ಲಿ ಒಂದೊಳ್ಳೆ ಫೈಟ್ ಅಂತೂ ಇರುತ್ತೆ. ಯಾಕಂದ್ರೆ ಬೇರೆ ಬೇರೆ ಗ್ರೂಪ್ಗಳಿಂದಲೂ ಸ್ಟ್ರಾಂಗ್ ಟೀಮ್ನಲ್ಲಿ ನೆಕ್ಸ್ಟ್ ಲೆವೆಲ್ಗೆ ಸೆಲೆಕ್ಟ್ ಆಗಿದ್ದಾರೆ. ಸೂಪರ್ 8ನ 8 ತಂಡಗಳನ್ನ ಮತ್ತೆ 2 ಗುಂಪುಗಳಾಗಿ ಡಿವೈಡ್ ಮಾಡ್ಲಾಗಿದೆ. ಒಂದೊಂದು ಗುಂಪಿನಲ್ಲಿ ನಾಲ್ಕು ನಾಲ್ಕು ತಂಡಗಳಿದ್ದು ಪ್ರತೀ ಟೀಂ 3 ಮ್ಯಾಚ್ ಆಡ್ಬೇಕಿದೆ. ಇಲ್ಲಿ ಟಾಪ್ 2ನಲ್ಲಿ ಬರೋವ್ರು ಸೆಮೀಸ್ ಆಡಲಿದ್ದು ಆ ನಂತ್ರ ಫೈನಲ್ ನಡೆಯುತ್ತೆ. ಗ್ರೂಪ್ 1ನಲ್ಲಿ ಭಾರತದ ಎದುರಾಳಿಗಳು ಯಾರೂ ಆಲ್ರೆಡಿ ಅನ್ನೋದೂ ಫೈನಲ್ ಆಗಿದೆ.
ಭಾರತದ ಸೂಪರ್ – 8 ಪಂದ್ಯಗಳು!
ದಿನಾಂಕ ಎದುರಾಳಿ ಸ್ಥಳ
ಫೆಬ್ರವರಿ 22 ಸೌತ್ ಆಫ್ರಿಕಾ ಅಹಮದಾಬಾದ್
ಫೆಬ್ರವರಿ 26 ಜಿಂಬಾಬ್ವೆ ಎಂಎ ಚಿದಂಬರಂ
ಮಾರ್ಚ್ 1 ವೆಸ್ಟ್ ಇಂಡೀಸ್ ಕೊಲ್ಕತ್ತಾ
ಸೋ ಈ ಮೂರು ಪಂದ್ಯಗಳಲ್ಲಿ ಭಾರತ ಗೆದ್ದರೆ ಟೀಂ ಇಂಡಿಯಾ ಸೆಮಿಸ್ ಹಂತಕ್ಕೆ ಎಂಟರ್ ಆಗುತ್ತೆ. ಮೂರೂ ಪಂದ್ಯಗಳೂ ಭಾರತಕ್ಕೆ ಇಂಪಾರ್ಟೆಂಟ್ ಇದೆ. ಹಾಗೇ ಈ ಎಲ್ಲಾ ಮ್ಯಾಚಸ್ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭ ಆಗ್ತಾವೆ. 8 ತಂಡಗಳ ಫೈಟ್ನಲ್ಲಿ ಅಂತಿಮವಾಗಿ ನಾಲ್ಕು ತಂಡಗಳು ಸೆಮೀಸ್ಗೆ ಕಾಲಿಡಲಿವೆ. ಮೊದಲ ಸೆಮಿಫೈನಲ್ ಪಂದ್ಯ ಮಾರ್ಚ್ 4 ರಂದು ಮತ್ತು ಎರಡನೇ ಸೆಮೀಫೈನಲ್ ಪಂದ್ಯ ಮಾರ್ಚ್ 5 ರಂದು ನಡೆಯಲಿದೆ. ಎರಡನೇ ಸೆಮಿಫೈನಲ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 8ರಂದು ಫೈನಲ್ ಪಂದ್ಯ ನಡೆಯಲಿದೆ.

ನೋಡಿರಿ

