ವಿಶ್ವಕಪ್ ನಿಂದ ಟಗರುಪುಟ್ಟಿ OUT? – Ankle Twist ಎಷ್ಟು ಡೇಂಜರಸ್?
ಶ್ರೇಯಾಂಕ ಕನಸನ್ನೇ ಕಸಿಯುತ್ತಾ ಇಂಜುರಿ?

ಮಹಿಳಾ ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಬೊಂಬಾಟ್ ಪ್ರದರ್ಶನ ನೀಡ್ತಿದೆ. ಫಸ್ಟ್ ಮ್ಯಾಚಲ್ಲೇ ಪಾಕಿಸ್ತಾನ ತಂಡವನ್ನ ಸದೆಬಡಿದು ಗ್ರ್ಯಾಂಡ್ ಆಗಿ ಟೂರ್ನಿ ಆರಂಭ ಮಾಡಿದ್ದ ಸಿಂಹಿಣಿಯರು ಎರಡನೇ ಮ್ಯಾಚಲ್ಲಿ ನೆದರ್ಲ್ಯಾಂಡ್ ವಿರುದ್ಧ ಒನ್ ಸೈಡೆಡ್ ಆಗಿ ವಿನ್ ಆಗಿದ್ದಾರೆ. ಹಾಗೇ ಗ್ರೂಪ್ ಎನಲ್ಲಿ ಟೇಬಲ್ ಟಾಪರ್ಸ್. ಈ ಸಲ ಟಿ-20 ವಿಶ್ವಕಪ್ನಲ್ಲಿ ಚೊಚ್ಚಲ ಕಪ್ ಎತ್ತಿ ಹಿಡಿತಾರೆ ಅನ್ನೋವಾಗ್ಲೇ ಸ್ಟಾರ್ ಆಲ್ ರೌಂಡರ್ ಶ್ರೇಯಾಂಕಾ ಪಾಟೀಲ್ ಟೂರ್ನಿಯಿಂದಲೇ ಹೊರಬೀಳೋ ಆತಂಕ ಎದುರಾಗಿದೆ.
ಇದನ್ನೂ ಓದಿ : ಒಂದೇ ದಿನ ಭಾರತ HAT-TRICK – ಬೌಲಿಂಗ್ ALL-OUT ಅಸ್ತ್ರ ಸೂಪರ್
ಇಂಗ್ಲೆಂಡ್ನಲ್ಲಿ ನಡೀತಿರೋ 2026ರ ಮಹಿಳಾ ಟಿ-20 ವಿಶ್ವಕಪ್ನಲ್ಲಿ ಭಾರತದ ಪ್ರದರ್ಶನ ತುಂಬಾನೇ ಚೆನ್ನಾಗಿದೆ. ಪ್ರಸ್ತುತ ಟೂರ್ನಿಯಲ್ಲಿ 2 ಪಂದ್ಯ ಆಡಿದ್ದು ಎರಡರಲ್ಲೂ ಒನ್ ಸೈಡೆಡ್ ಗೆಲುವು ಬಂದಿದೆ. ಈ ಜರ್ನಿ ಹೀಗೆ ಕಂಟಿನ್ಯೂ ಆಗುತ್ತೆ ವಿಶ್ವಕಪ್ ಅನ್ನುವಾಗ್ಲೇ ಕನ್ನಡತಿ ಶ್ರೇಯಾಂಕ ಪಾಟೀಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಇಂಜುರಿಯೇ ವಿಶ್ವಕಪ್ ಕನಸನ್ನೇ ಕಸಿದುಕೊಳ್ಳೋ ಆತಂಕ ತಂದಿದೆ.
ಫೀಲ್ಡಿಂಗ್ ವೇಳೆ ಇಂಜುರಿ.. ನಡೆಯಲೂ ಸಾಧ್ಯವಾಗದೆ ಕಣ್ಣೀರು!
ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಬುಧವಾರ ನಡೆದ ಗ್ರೂಪ್ ಎ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ಕಳ್ಕೊಂಡು 209ರನ್ಸ್ ಕಲೆ ಹಾಕಿತು. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಭಾರತದ ಅತ್ಯಧಿಕ ಸ್ಕೋರ್. ಈ ಟಾರ್ಗೆಟ್ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ಕೇವಲ 114 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಭಾರತ ಪಂದ್ಯವನ್ನು 95 ರನ್‌ಗಳಿಂದ ಗೆದ್ದಿತು. ಆದ್ರೆ ಪಂದ್ಯವನ್ನ ಗೆದ್ವಿ ಅನ್ನೋದಕ್ಕಿಂದ ಶ್ರೇಯಾಂಕ ಅವ್ರ ಇಂಜುರಿಯೇ ತಲೆಬಿಸಿ ತಂದಿಟ್ಟಿದೆ.
ಫಸ್ಟ್ ಓವರ್.. ಫಸ್ಟ್ ಬಾಲ್ ನಲ್ಲೇ ಶ್ರೇಯಾಂಕಗೆ ಇಂಜುರಿ!
ನೆದರ್ ಲ್ಯಾಂಡ್ ಬ್ಯಾಟಿಂಗ್ ವೇಳೆ ತಮ್ಮ ಮೊದಲ ಓವರ್ ಬೌಲ್ ಮಾಡಲು ಬಂದ ಶ್ರೇಯಾಂಕ ಪಾಟೀಲ್ ಅವ್ರ ಫಸ್ಟ್ ಬಾಲ್ನ ಮೊಲ್ಕೆನ್‌ಬೋರ್ ಮಿಡ್-ಆನ್ ಕಡೆಗೆ ಆಡಿದರು. ಹೀಗಾಗಿ ಶ್ರೇಯಾಂಕ ಬೌಲಿಂಗ್ ಮಾಡಿದ ಬಳಿಕ ಚೆಂಡನ್ನು ಹಿಡಿಯಲು ಅದರ ಹಿಂದೆ ಓಡಿದರು. ಚೆಂಡಿನ ಬಳಿ ಹೋದ ಶ್ರೇಯಾಂಕ ಬಾಲ್ ತೆಗೆದುಕೊಳ್ಳಲು ಕೆಳಕ್ಕೆ ಬಾಗಿದರು. ಈ ವೇಳೆ ಬ್ಯಾಲೆನ್ಸ್ ಮಿಸ್ ಆಗಿ ಬಲಗಾಲಿನ ಌಂಕಲ್ ಟ್ವಿಸ್ಟ್ ಆಗಿದೆ. ಅಂದ್ರೆ ಬಲಗಾಲಿನ ಕಣಕಾಲು ತಿರುಚಿದಂತಾಗಿದೆ. ಇದ್ರಿಂದ ತುಂಬಾನೇ ನೋವಿಗೊಳಗಾದ ಶ್ರೇಯಾಂಕ ಮೈದಾನದಲ್ಲೇ ಬಿದ್ದು ನರಳಾಡಿದ್ರು. ಕಣ್ಣೀರು ಹಾಕಿದ್ರು. ಆಗ ಫೀಲ್ಡ್ ಅಂಪೈರ್‌ಗಳು ಮತ್ತು ತಂಡದ ಸದಸ್ಯರು ತಕ್ಷಣವೇ ಫಿಸಿಯೋ ಅವರನ್ನು ಮೈದಾನಕ್ಕೆ ಕರೆಸಿದರು. ಶ್ರೇಯಾಂಕ ಅವರನ್ನು ಪರೀಕ್ಷಿಸಿದ ಫಿಸಿಯೋ ಪ್ರಥಮ ಚಿಕಿತ್ಸೆಯ ಬಳಿಕ ಅವರನ್ನು ಡಗೌಟ್ಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ ಶ್ರೇಯಾಂಕಗೆ ಸರಿಯಾಗಿ ನಿಲ್ಲಲು ಸಹ ಸಾಧ್ಯವಾಗಲಿಲ್ಲ. ಹೀಗಾಗಿ ಕಾರ್ಟ್ ಮತ್ತು ಸ್ಟ್ರೆಚರ್ ತರಿಸಿ ಶ್ರೇಯಾಂಕ ಅವರನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಶ್ರೇಯಾಂಕಾ ಮೈದಾನದಿಂದ ಹೊರಡುವಾಗ ಕಣ್ಣೀರಿಡುತ್ತಿದ್ದದ್ದೇ ಅವ್ರ ನೋವಿನ ತೀವ್ರತೆಯನ್ನ ಹೇಳುತ್ತಿತ್ತು. ಇದೇ ಈಗ ಶ್ರೇಯಾಂಕ ಟೂರ್ನಿಯನ್ನೇ ಮಿಸ್ ಮಾಡಿಕೊಳ್ತಾರಾ ಅನ್ನೋ ಪ್ರಶ್ನೆಗಳನ್ನ ಮೂಡಿಸಿದೆ.
ಏಕದಿನ ವಿಶ್ವಕಪ್ ನಲ್ಲಿ ಪ್ರತೀಕಾ ರಾವಲ್ ಕೂಡ ಇದೇ ಥರ ಇಂಜುರಿ!
ಕಳೆದ ಅಕ್ಟೋಬರ್ನಲ್ಲಿ ಮಹಿಳಾ ಏಕದಿನ ವಿಶ್ವಕಪ್ ವೇಳೆ ಭಾರತದ ಆಟಗಾರ್ತಿ ಪ್ರತೀಕಾ ರಾವಲ್ ಕೂಡ ಇದೇ ರೀತಿ ಗಾಯಗೊಂಡಿದ್ರು. ಬಾಂಗ್ಲಾದೇಶ ವಿರುದ್ಧ ಲೀಗ್ ಹಂತದ ಕೊನೇ ಮ್ಯಾಚಲ್ಲಿ ಫೀಲ್ಡಿಂಗ್ ವೇಳೆ ಮೊಣಕಾಲು ಮತ್ತು ಪಾದದ ಗಾಯಕ್ಕೆ ತುತ್ತಾಗಿದ್ರು. ಏಳು ಪಂದ್ಯಗಳಿಂದ 51.33 ಸರಾಸರಿ ಮತ್ತು 77.77 ಸ್ಟ್ರೈಕ್ ರೇಟ್‌ನಲ್ಲಿ 308 ರನ್ ಗಳಿಸಿ ಅದ್ಭುತ ಫಾರ್ಮ್ನಲ್ಲಿದ್ದ ಪ್ರತೀಕಾ ನಂತ್ರ ನಾಕೌಟ್ ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ರು. ಆದ್ರೆ ಭಾರತ ಚಾಂಪಿಯನ್ ಪಟ್ಟಕ್ಕೆರಿದ ಮೇಲೆ ಸೆಲೆಬ್ರೇಷನ್ನಲ್ಲಿ ವೀಲ್ ಚೇರ್ನಲ್ಲೇ ಭಾಗಿಯಾಗಿದ್ರು. ಈಗ ಶ್ರೇಯಾಂಕ ಪರಿಸ್ಥಿತಿಯೂ ಹೀಗೇ ಆಗುತ್ತಾ ಅನ್ನೋ ಪ್ರಶ್ನೆಗಳು ಮೂಡಿವೆ. ಯಾಕಂದ್ರೆ ಌಂಕಲ್ ಟ್ವಿಸ್ಟ್ ಆಗಿರೋದ್ರಿಂದ ಅಷ್ಟು ಬೇಗ ರಿಕವರ್ ಆಗೋದು ಕಷ್ಟ ಸಾಧ್ಯ. ಈ ಗಾಯ ಶ್ರೇಯಾಂಕಗೆ ಈಗ ಮತ್ತೆ ಬರೆ ಎಳೆದಿದೆ.
14 ತಿಂಗಳು ದೂರ.. ಖಿನ್ನತೆಗೆ ಒಳಗಾಗಿದ್ದೆ ಎಂದ ಶ್ರೇಯಾಂಕ!
ಶ್ರೇಯಾಂಕಾ ಪಾಟೀಲ್ ಅಧ್ಭುತ ಆಟಗಾರ್ತಿಯಾಗಿದ್ರೂ ಇಂಜುರಿಯೇ ದೊಡ್ಡ ತಲೆಬಿಸಿಯಾಗಿದೆ. ಈ ಹಿಂದೆಯೂ ಅವರು ಕಾಲು ಮತ್ತು ಬೆರಳಿನ ಗಾಯಗಳಿಂದ ಬಳಲುತ್ತಿದ್ದರು. ತಂಡದ ಪ್ರಮುಖ ಸ್ಪಿನ್ನರ್ ಆಗಿರೋ ಶ್ರೇಯಾಂಕ 2024 ರ ಏಷ್ಯಾಕಪ್ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ರು. ಈ ವೇಳೆ 14 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ಹೊರಗಿದ್ದರು. ಇದರ ಜೊತೆಗೆ ಐಪಿಎಲ್ ಸಮಯದಲ್ಲೂ ಶ್ರೇಯಾಂಕ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಆಗ ಎಷ್ಟು ನೋವು ಅನುಭವಿಸಿದ್ರು ಅನ್ನೋದನ್ನ ಇತ್ತೀಚೆಗೆ ಹೇಳಿಕೊಂಡಿದ್ರು. ಕಳೆದ ಭಾನುವಾರ ಪಾಕ್ ವಿರುದ್ಧದ ಗೆಲುವಿನ ಬಳಿಕ ಮಾತನಾಡಿದ್ದ ಶ್ರೇಯಾಂಕ ಇಂಜುರಿ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದೆ ಮತ್ತು ಕ್ರಿಕೆಟ್ನೇ ಬಿಟ್ಟು ಬಿಡಬೇಕು ಅನ್ಕೊಂಡಿದ್ದೆ ಎಂದಿದ್ರು. ಆದ್ರೆ ಕಂ ಬ್ಯಾಕ್ ಬಳಿಕ ಹೊಸ ಜೋಶ್ನಲ್ಲಿ ಪರ್ಫಾಮ್ ಮಾಡ್ತಿದ್ರು. ಪಾಕ್ ವಿರುದ್ಧ ಬೆಸ್ಟ್ ಎಕಾನಮಿಕಲ್ ಆಗಿ ಬೌಲಿಂಗ್ ಮಾಡಿದ್ದ ಶ್ರೇಯಾಂಕ ಈ ಟೂರ್ನಿಯಲ್ಲಿ ಮೇನ್ ಪ್ಲೇಯರ್ ಆಗಿದ್ರು. ಸದ್ಯ ಶ್ರೇಯಾಂಕ ಲಭ್ಯತೆ ಅಥವಾ ಟೂರ್ನಿಯಿಂದ ಹೊರಬಿದ್ದಿರುವ ಕುರಿತು ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ವೇಳೆ ಟೂರ್ನಿ ಆಡೋಕೆ ಸಾಧ್ಯವಾಗದೇ ಇದ್ರೆ ಅವರ ಸ್ಥಾನಕ್ಕೆ ಬದಲಿ ಆಯ್ಕೆಗೆ ಸದ್ಯ ಮೂವರ ಹೆಸರು ರೇಸ್ನಲ್ಲಿದೆ. ತನುಜಾ ಕನ್ವರ್, ಸ್ನೇಹ್ ರಾಣಾ ಹಾಗೇ ಸೈಕಾ ಇಶಾಕ್ ಈ ಮೂವರ ಹೆಸರು ಚರ್ಚೆಯಲ್ಲಿದೆ. ಆದ್ರೆ ಶ್ರೇಯಾಂಕ ಪಾಟೀಲ್ ಅವ್ರೇ ಬೇಗ ರಿಕವರ್ ಆಗಿ ತಂಡಕ್ಕೆ ಜಾಯ್ನ್ ಆಗಲಿ ಅನ್ನೋದೇ ಎಲ್ಲರ ಆಶಯ.

ನೋಡಿರಿ

