ಆಸ್ಟ್ರೇಲಿಯನ್ನರ ಹೊಡಿಬಡಿ ಆಟ – ಸಂಕಷ್ಟದಲ್ಲಿ ಟೀಂ ಇಂಡಿಯಾ
ಒಂದು ಪಂದ್ಯ ಓಕೆ.. ಎರಡು ಮ್ಯಾಚ್ ಓಕೆ.. ಬ್ಯಾಕ್ ಟು ಬ್ಯಾಕ್ ಫೇಲ್ಯೂರ್. ಬಹುಶಃ ರೋಹಿತ್ ಶರ್ಮಾ ತಾನು ಕ್ಯಾಪ್ಟನ್ ಅನ್ನೋದ್ರ ಜೊತೆಗೆ ಹಿಟ್ಮ್ಯಾನ್ ಅಂತಾ ಅಭಿಮಾನಿಗಳು ಯಾಕೆ ಕರೆಯುತ್ತಾರೆ ಅನ್ನೋದನ್ನೇ ಮರೆತಂತಿದೆ. ಸ್ಲಾಟ್ ಚೇಂಜ್ ಆದ್ರೂ ಲಕ್ ಮಾತ್ರ ಬದ್ಲಾಗಿಲ್ಲ. ಹಾಗಾದ್ರೆ ರೋಹಿತ್ ನಿವೃತ್ತಿಗೆ ಹತ್ತಿರವಾದ್ರಾ? ಅವ್ರ ಪ್ರದರ್ಶನವೇ ಇದಕ್ಕೆ ಸಾಕ್ಷಿನಾ? ಕ್ರಿಕೆಟ್ ಎಕ್ಸ್ಪರ್ಟ್ಸ್ ಕೂಡ ಇದನ್ನೇ ಹೇಳ್ತಿರೋದೇಕೆ? ಹಿಟ್ಮ್ಯಾನ್ ಎಡವುತ್ತಿರೋದೆಲ್ಲಿ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರೋಹಿತ್ ಶರ್ಮಾ ಕಳಪೆ ಪ್ರದರ್ಶನ – ಜಸ್ಪ್ರೀತ್ ಬುಮ್ರಾಗೆ ಕ್ಯಾಪ್ಟನ್ಸಿ ಒಲಿಯುತ್ತಾ?
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಭಾರತಕ್ಕೆ ಎಷ್ಟು ಇಂಪಾರ್ಟೆಂಟ್ ಅನ್ನೋದು ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೂ ಗೊತ್ತಿರೋದೇ. ಅದ್ರಲ್ಲೂ ನಾಲ್ಕನೇ ಮ್ಯಾಚ್ ಟೀಂ ಇಂಡಿಯಾ ಪಾಲಿಗೆ ನಿರ್ಣಾಯಕ. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್ನಲ್ಲಿ ಉಳೀಬೇಕು ಅಂದ್ರೆ ಈ ಪಂದ್ಯವನ್ನ ಗೆಲ್ಲಲೇಬೇಕು. ಮೊದಲ ಟೆಸ್ಟ್ ಪಂದ್ಯದಲ್ಲಿ ಗೆದ್ದಿದ್ದ ಭಾರತ ಎರಡನೇ ಪಂದ್ಯವನ್ನ ಕೈಚೆಲ್ಲಿಕೊಂಡಿತ್ತು. ಇನ್ನು ಮೂರನೇ ಪಂದ್ಯ ಡ್ರಾ ಆಯ್ತು. ಅಲ್ಲಿಗೆ ಸರಣಿ ಸಮಬಲವಾಗಿದೆ. ಬಟ್ 4ನೇ ಪಂದ್ಯ ಯಾರಿಗೆ ಡಬ್ಲ್ಯುಟಿಸಿ ಫೈನಲ್ ಹಾದಿ ಅನ್ನೋದನ್ನ ಡಿಸೈಡ್ ಮಾಡುತ್ತೆ. ಇಂಥಾ ಟೈಮಲ್ಲೂ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತ್ರ ಕೇರ್ಲೆಸ್ ಆಗಿ ಆಡ್ತಿರೋದೇ ಬೇಸರಕ್ಕೆ ಕಾರಣವಾಗಿದೆ.
ಆಸ್ಟ್ರೇಲಿಯನ್ನರ ಹೊಡಿಬಡಿ ಆಟ.. ಮೊದಲ ಇನ್ನಿಂಗ್ಸ್ ನಲ್ಲಿ 474 ರನ್!
ಟಾಸ್ ಗೆದ್ದುಕೊಂಡ ಆಸ್ಟ್ರೇಲಿಯಾ ಮೊದಲ ದಿನ ಭರ್ಜರಿ ಬ್ಯಾಟಿಂಗ್ ಮಾಡಿತ್ತು. 6 ವಿಕೆಟ್ಗೆ 311 ರನ್ಗಳನ್ನು ಗಳಿಸಿ ಶುಕ್ರವಾರ ಬ್ಯಾಟಿಂಗ್ ಮುಂದುವರೆಸಿತ್ತು. ಇಂದು ಮತ್ತೆ ಭರ್ಜರಿ ಬ್ಯಾಟಿಂಗ್ ಮಾಡಿದ ಆಸಿಸ್ ಪ್ಲೇಯರ್ಸ್ 474 ರನ್ಗೆ ಆಲೌಟ್ ಆಗಿದ್ದಾರೆ. ಇದಾದ ಮೇಲೆ ಮೊದಲ ಇನ್ನಿಂಗ್ಸ್ನ ಬ್ಯಾಟಿಂಗ್ ಮಾಡಲು ಟೀಮ್ ಇಂಡಿಯಾ ಓಪನರ್ಸ್ ಯಶಸ್ವಿ ಜೈಸ್ವಾಲ್ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಕ್ರೀಸ್ಗೆ ಬಂದಿದ್ದರು. ಈ ಪಂದ್ಯವನ್ನು ಭಾರತ ಗೆಲ್ಲಲೇಬೇಕಾದ ಅನಿರ್ವಾಯತೆ ಇದೆ. ಆದರೆ ಟೀಮ್ ಇಂಡಿಯಾ ಪರ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ರೋಹಿತ್ ಶರ್ಮಾ ಮತ್ತೆ ಜವಾಬ್ದಾರಿ ಮರೆತಿದ್ರು. ಇದೀಗ ಟೀಮ್ ಇಂಡಿಯಾ ಸಂಕಷ್ಟದಲ್ಲಿದೆ.