ಲಂಕೆ ಸುಟ್ಟರೂ ಭಾರತಕ್ಕಿಲ್ಲ ಬಡ್ತಿ – PTC ಹೆಚ್ಚಾದ್ರೂ 5ನೇ ಸ್ಥಾನವೇ ಗಟ್ಟಿ
8 ಪಂದ್ಯ.. WTC ಫೈನಲ್ ಸಾಧ್ಯನಾ?

ಲಂಕೆ ಸುಟ್ಟರೂ ಭಾರತಕ್ಕಿಲ್ಲ ಬಡ್ತಿ – PTC ಹೆಚ್ಚಾದ್ರೂ 5ನೇ ಸ್ಥಾನವೇ ಗಟ್ಟಿ8 ಪಂದ್ಯ.. WTC ಫೈನಲ್ ಸಾಧ್ಯನಾ?

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲೋ ಮೂಲಕ ವಿಶ್ವಟೆಸ್ಟ್ ಚಾಂಪಿಯನ್​ಶಿಪ್​ನಲ್ಲೂ ಜಿಗಿತ ಕಂಡಿದೆ. ಹಾಗಂತ ಇದೇನು ದೊಡ್ಡ ಇಂಪ್ಯಾಕ್ಟ್ ಮಾಡಿಲ್ಲ. ಬಟ್ ಒಂದ್ ರೇಂಜ್​ಗೆ ನಿಟ್ಟುಸಿರು ಬಿಡೋ ಥರ ಮಾಡಿದೆ. ಹಾಗೇ ಮುಂದಿನ ಜರ್ನಿಗೆ ಸ್ವಲ್ಪ ರಿಲ್ಯಾಕ್ಸ್ ಆಗುವಂತೆ ಮಾಡಿದೆ.

ಇದನ್ನೂ ಓದಿ : ಮೊದಲ ಟೆಸ್ಟ್‌ನಲ್ಲಿ ಲಂಕಾ ಬೇಟೆಯಾಡಿದ ಟೀಮ್ ಇಂಡಿಯಾ – 10 ವಿಕೆಟ್ ಕಬಳಿಸಿದ ಮಾನವ್ ಸುತಾರ್

ಭಾರತ ತಂಡ ಮೊದಲ ಎರಡು ಡಬ್ಲ್ಯುಟಿಸಿ ಆವೃತ್ತಿಗಳಲ್ಲಿ ಸತತವಾಗಿ ಫೈನಲ್ ಪ್ರವೇಶಿಸಿತ್ತಾದರೂ, ಎರಡೂ ಬಾರಿ ರನ್ನರ್ಸ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಕಳೆದ ಬಾರಿಯ ಆವೃತ್ತಿಯಲ್ಲಿ ಆರಂಭದಲ್ಲಿ ಪ್ರಾಬಲ್ಯ ಸಾಧಿಸಿದರೂ, ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಸೋಲು ಭಾರತದ ಹ್ಯಾಟ್ರಿಕ್ ಫೈನಲ್ ಕನಸನ್ನು ನುಚ್ಚುನುರು ಮಾಡಿತ್ತು. ಇದೀಗ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 165 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವು 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಭಾರತದ ಬಿಗ್ ಟಾರ್ಗೆಟ್​ಗೆ ಬೂಸ್ಟ್‌ ನೀಡಿದೆ. ಹಾಗೇ ಮುಂದಿನ ಪಂದ್ಯಗಳ ಸೋಲು ಗೆಲುವಿನ ಲೆಕ್ಕಾಚಾರ ಕೂಡ ಕ್ಲಿಯರ್ ಆಗಿದೆ.

ಲಂಕಾ ವಿರುದ್ಧದ ಗೆಲುವಿನ ಲಾಭ!

ಪಂದ್ಯಕ್ಕೂ ಮುನ್ನ 48.15% ರಷ್ಟು ಪರ್ಸೆಂಟೇಜ್ ಹೊಂದಿದ್ದ ಭಾರತ

ಮೊದಲ ಪಂದ್ಯದ ಗೆಲುವಿನ ಬಳಿಕ ಗೆಲುವಿನ ಶೇ. 53.33% ಗೆ ಏರಿಕೆ

2027ರ ಡಬ್ಲ್ಯೂಟಿಸಿ ಸೈಕಲ್ ನಲ್ಲಿ ಆಡಿರುವ 10 ಪಂದ್ಯಗಳಲ್ಲಿ 5ನೇ ಗೆಲುವು

ಭಾರತಕ್ಕೆ 12 ಅಂಕಗಳು ಲಭಿಸಿದ್ದು, ಒಟ್ಟು ಅಂಕಗಳ ಸಂಖ್ಯೆ 64 ಕ್ಕೆ ತಲುಪಿದೆ

ಪಂದ್ಯ ಗೆದ್ರೂ ಅಂಕಪಟ್ಟಿಯಲ್ಲಿ ಬದಲಾವಣೆ ಇಲ್ಲ, 5ನೇ ಸ್ಥಾನವೇ ಕಂಟಿನ್ಯೂ

ಕಳೆದ ವಾರ ಆಸ್ಟ್ರೇಲಿಯಾವನ್ನು ಸೋಲಿಸಿ 4ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ

ಆಸ್ಟ್ರೇಲಿಯಾ 77.78%, ಸೌತ್ ಆಫ್ರಿಕಾ 75.00%, ನ್ಯೂಜಿಲೆಂಡ್ 72.22%

66.67%ನೊಂದಿಗೆ ಬಾಂಗ್ಲಾ 4ನೇ ಸ್ಥಾನ, ಭಾರತಕ್ಕೆ 53.33%ನಲ್ಲಿ 5ನೇ ಸ್ಥಾನ

ಸೋ ಪರ್ಸೆಂಟೇಜ್​ನಲ್ಲಿ ಏರಿಕೆ ಕಂಡಿದ್ರೂ ಸ್ಥಾನದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ಮತ್ತೊಂದ್ಕಡೆ ಭಾರತ ವಿರುದ್ಧದ ಸೋಲಿನ ಬಳಿಕ ಶ್ರೀಲಂಕಾದ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಜರ್ನಿಗೆ ದೊಡ್ಡ ಹೊಡೆತ ಬಿದ್ದಿದೆ. ಪಂದ್ಯಕ್ಕೂ ಮುನ್ನ 41.67% ಹೊಂದಿದ್ದ ಶ್ರೀಲಂಕಾದ PCT, ಈ ಸೋಲಿನ ನಂತರ 33.33% ಗೆ ಕುಸಿದಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಇನ್ನು ಸರಣಿಯ ಎರಡನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯವು ಆಗಸ್ಟ್ 23 ರಿಂದ ಕೊಲಂಬೊದಲ್ಲಿ ಆರಂಭವಾಗಲಿದೆ. ಈ ಪಂದ್ಯ ಗೆದ್ದವ್ರಿಗೆ ಮತ್ತಷ್ಟು ಅಡ್ವಾಂಟೇಜಸ್ ಸಿಗಲಿದೆ. ಡಬ್ಲ್ಯೂಟಿಸಿ ಮೇಲೆ ಕಣ್ಣಿಟ್ಟಿರೋ ಭಾರತಕ್ಕೆ ಕೊಲೊಂಬೊ ಪಂದ್ಯವೂ ಮಾಡು ಇಲ್ಲವೇ ಮಡಿ ಎನ್ನುವಂತೆಯೇ ಇರಲಿದೆ. ಪ್ರಸ್ತುತ ಸೈಕಲ್‌ನಲ್ಲಿ ಭಾರತಕ್ಕೆ ಇನ್ನು ಕೇವಲ 8 ಟೆಸ್ಟ್ ಪಂದ್ಯಗಳು ಬಾಕಿ ಇವೆ. ಬೇರೆ ಯಾರ ಸಪೋರ್ಟ್ ಕೂಡ ಇಲ್ಲದೆ ಫೈನಲ್ ತಲುಪಲು ಭಾರತ ಉಳಿದಿರುವ 8 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳನ್ನು ಗೆಲ್ಲಲೇಬೇಕು. ಒಂದು ವೇಳೆ ಭಾರತ ಉಳಿದ ಎಲ್ಲಾ 8 ಪಂದ್ಯಗಳನ್ನೂ ಗೆದ್ದರೆ, ಅಂಕಗಳ ಶೇಕಡಾವಾರು 74.07% ಗೆ ಏರಲಿದ್ದು, ಡೈರೆಕ್ಟ್ ಫೈನಲ್ ತಲುಪಲಿದೆ. ಅಕಸ್ಮಾತ್ 6 ಪಂದ್ಯಗಳನ್ನ ಗೆದ್ದು 2ರಲ್ಲಿ ಸೋತ್ರೆ ಬೇರೆ ತಂಡಗಳ ಸೋಲು ಗೆಲುವಿನ ಮೇಲೆ ಡಿಪೆಂಡ್ ಆಗ್ಬೇಕಾಗುತ್ತೆ. ಲಂಕಾ ವಿರುದ್ಧದ ಎರಡನೇ ಪಂದ್ಯ ಮುಗಿದ ಮೇಲೆ 2 ಪಂದ್ಯಗಳ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ.  ಆ ನಂತ್ರದಲ್ಲಿ ತವರಿನಲ್ಲೇ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿ ಸವಾಲು ಎದುರಾಗಲಿದೆ. ಹೀಗಾಗಿ ಉಳಿದಿರೋ ಎಲ್ಲಾ ಪಂದ್ಯಗಳಲ್ಲೂ ಮಾಡು ಇಲ್ಲವೇ ಮಡಿ ಎನ್ನುವಂತೆ ಪರ್ಫಾಮ್ ಮಾಡಿದ್ರೆ ಮಾತ್ರವೇ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಟಿಕೆಟ್ ಸಿಗುತ್ತೆ.. ಇಲ್ದಿದ್ರೆ ಈ ಸಲವೂ ಫೈನಲ್ ಟಿಕೆಟ್ ಮಿಸ್ ಆಗುತ್ತೆ.

Shantha Kumari

Leave a Reply

Your email address will not be published. Required fields are marked *