ಸಂಜು ಮುಗಿದ ಅಧ್ಯಾಯ – RCB ಸ್ಟಾರ್ಸ್ ಯಾರೂ ಕಾಣಲ್ವಾ?
ಗಂಭೀರ್ EGOಗೆ ಹೊರ ಬಿದ್ದವರೆಷ್ಟು?

ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ-20ಐ ಸರಣಿಗೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಅನೌನ್ಸ್ ಆಗಿದೆ. ಜುಲೈ 23, 25 ಹಾಗೇ 26ರಂದು ಮೂರು ಪಂದ್ಯಗಳು ನಡೆಯಲಿವೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಸರಣಿಗೆ ಭಾರತ ತಂಡದಲ್ಲಿ ಮೇಜರ್ ಸರ್ಜರಿಯನ್ನೇ ಮಾಡಲಾಗಿದೆ. ಈ ಸರ್ಜರಿಯೇ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅದ್ರಲ್ಲೂ ಬ್ಯಾಟಿಂಗ್ ಯುನಿಟ್ನಲ್ಲಿನ ಬದಲಾವಣೆ ಕಿಚ್ಚು ಹಚ್ಚಿದೆ. ಬೇಕಿದ್ದ ಕಡೆ ಬಿಟ್ಟು ಬೇಡದೇ ಇರೋ ಕಡೆ ಬದಲಾವಣೆ ಮಾಡಿದ್ದಾರೆ ಅನ್ನೋ ಕೂಗು ಎದ್ದಿದೆ.
ಇದನ್ನೂ ಓದಿ : ಒಮ್ಮೆ HERO.. ಮತ್ತೊಮ್ಮೆ ZERO! – ಸಂಜುಗೆ ಸಂಜುನೇ ವಿಲನ್ ಆದ್ರಾ?
ಝಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ 15 ಸದಸ್ಯರ ಟೀಮ್ ಇಂಡಿಯಾವನ್ನು ಅನೌನ್ಸ್ ಮಾಡಿದ್ದು ಕ್ಯಾಪ್ಟನ್ ಹಾಗೇ ವೈಸ್ ಕ್ಯಾಪ್ಟನ್ಸಿಯಲ್ಲಿ ಏನೂ ಚೇಂಜಸ್ ಆಗಿಲ್ಲ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗಿದ್ರೆ ತಿಲಕ್ ವರ್ಮಾ ವೈಸ್ ಕ್ಯಾಪ್ಟನ್ ಆಗಿ ಮುಂದುವರಿತಾರೆ. ಆದ್ರೆ ಈ ಸರಣಿಗೆ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದಲೇ ಕೈಬಿಡಲಾಗಿದೆ. ಌಂಡ್ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಪ್ರಭ್ಸಿಮ್ರಾನ್ ಸಿಂಗ್ಗೆ ಅವಕಾಶ ನೀಡಲಾಗಿದೆ. ಅದ್ರಲ್ಲೂ ಬೌಲಿಂಗ್ ಸ್ಕ್ವಾಡ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ.
ಐಪಿಎಲ್ ಸ್ಟಾರ್ಸ್ ಗೆ ಸಿಕ್ಕಿತು ಡೆಬ್ಯೂ ಅವಕಾಶ!
ಇಂಗ್ಲೆಂಡ್ ವಿರುದ್ಧ ಡೆಬ್ಯೂ ಮಾಡಿರೋ ವೈಭವ್ ಸೂರ್ಯವಂಶಿ ಜಿಂಬಾಬ್ವೆ ಸಿರೀಸ್ಗೂ ಸೆಲೆಕ್ಟ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಡೊಮೆಸ್ಟಿಕ್ ಹಾಗೇ ಐಪಿಎಲ್ನಲ್ಲಿ ಸದ್ದು ಮಾಡಿರುವ ಮೂವರು ಯಂಗ್ಸ್ಟರ್ಸ್ಗೂ ಅವಕಾಶ ಸಿಕ್ಕಿದೆ. ಅಂದ್ರೆ ಫಾರ್ ದಿ ಫಸ್ಟ್ ಟೈಂ ಟಿ-20ಐ ತಂಡಕ್ಕೆ ಸೆಲೆಕ್ಟ್ ಆಗಿದ್ದಾರೆ. ಅದ್ರಲ್ಲಿ ಪಂಜಾಬ್ ಕಿಂಗ್ಸ್ ಪರ ಸ್ಫೋಟಕ ಓಪನರ್ ಆಗಿರುವ ವಿಕೆಟ್ ಕೀಪರ್ ಬ್ಯಾಟರ್ ಪ್ರಭ್ಸಿಮ್ರನ್ ಸಿಂಗ್, ಹಾಗೇ ದೇಶಿ ಟೂರ್ನಿಗಳಲ್ಲಿ ವಿಕೆಟ್ ಬೇಟೆಯಾಡಿದ್ದ ವೇಗಿಗಳಾದ ಯಶ್ ಠಾಕೂರ್ ಹಾಗೂ ಅಶೋಕ್ ಶರ್ಮಾ ಟೀಮ್ ಇಂಡಿಯಾ ಜೆರ್ಸಿ ಧರಿಸಲು ಸಜ್ಜಾಗಿದ್ದಾರೆ. ಇನ್ನು ಗಾಯದ ಸಮಸ್ಯೆಯಿಂದಾಗಿ ಲಾಂಗ್ ಬ್ರೇಕ್ನಲ್ಲಿದ್ದ ವೇಗಿ ಮಯಂಕ್ ಯಾದವ್ ಹಾಗೂ ಮತ್ತೊಬ್ಬ ಸ್ಫೋಟಕ ಫಿನಿಶರ್ ರಿಂಕು ಸಿಂಗ್ ತಂಡಕ್ಕೆ ಕಂ ಬ್ಯಾಕ್ ಮಾಡಿದ್ದಾರೆ. ಇನ್ನು ಸನ್ರೈಸರ್ಸ್ ಹೈದರಾಬಾದ್ ಪರ ಮಿಂಚಿದ್ದ ಆಲ್ರೌಂಡರ್ ಹರ್ಷ್ ದುಬೆ ಕೂಡ ತಂಡದಲ್ಲಿದ್ದಾರೆ. ಒಟ್ಟಾರೆ ಹೇಳೋದಾದ್ರೆ ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ , ಇಶಾನ್ ಕಿಶನ್ಪ್ರಭ್ಸಿಮ್ರನ್ ಸಿಂಗ್, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಯಾಂಕ್ ಯಾದವ್ ಸೆಲೆಕ್ಟ್ ಆಗಿದ್ದಾರೆ. ಆದ್ರೆ ಇಲ್ಲಿ ಚರ್ಚೆ ಇರೋದು ಸಂಜು ವಿಚಾರದಲ್ಲಿ.
ವಿಶ್ವಕಪ್ ಹೀರೋ ಮೂರು ಪಂದ್ಯಗಳ ಫೇಲ್ಯೂರ್ ಗೆ ಚಾನ್ಸ್ ಕಳ್ಕೊಂಡ್ರಾ?
2026ರ ಟಿ-20 ವಿಶ್ವಕಪ್ನಲ್ಲಿ ಸೂಪರ್ 8 ಲಾಸ್ಟ್ ಮ್ಯಾಚ್, ಸೆಮಿಫೈನಲ್ ಹಾಗೇ ಫೈನಲ್ ಮ್ಯಾಚಲ್ಲಿ ಸತತ 85+ ರನ್ಸ್ ಹೊಡೆದು ಭಾರತ ವಿಶ್ವಕಪ್ ಗೆಲುವಿನ ಹೀರೋ ಆಗಿದ್ದ ಸಂಜು ಅವ್ರನ್ನ ತಂಡದಿಂದಲೇ ಕೈಬಿಡಲಾಗಿದೆ. ಐರ್ಲೆಂಡ್ ವಿರುದ್ಧದ 2 ಪಂದ್ಯ, ಇಂಗ್ಲೆಂಡ್ ವಿರುದ್ಧದ 1 ಪಂದ್ಯದಲ್ಲಿ ಬಿಗ್ ಸ್ಕೋರ್ ಬಾರದಿದ್ದಕ್ಕೆ ಎರಡನೇ ಪಂದ್ಯದಲ್ಲಿ ಬೆಂಚ್ ಕಾಯಿಸಿದ್ರು. ಈಗ ಜಿಂಬಾಬ್ವೆ ಸರಣಿಗೆ ತಂಡದಿಂದಲೇ ಗೇಟ್ಪಾಸ್ ನೀಡಿದ್ದಾರೆ. ಮಾರ್ಚ್ನಲ್ಲಿ ವಿಶ್ವಕಪ್ ಗೆಲ್ಲಿಸಿದ್ದ ಸೂರ್ಯಕುಮಾರ್ ಯಾದವ್ರನ್ನೂ ತಂಡದಿಂದಲೇ ಹೊರಗಿಡಲಾಗಿತ್ತು. ಬಿಸಿಸಿಐನ ಇದೇ ನಿರ್ಧಾರಗಳೇ ಜನಾಕ್ರೋಶಕ್ಕೆ ಕಾರಣವಾಗಿದೆ. ವಿಶ್ವಕಪ್ ಗೆದ್ದ ನಾಯಕನನ್ನೂ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಕಪ್ ಗೆಲ್ಲಿಸಿದ ಪ್ಲೇಯರ್ ಗೂ ಮರ್ಯಾದೆ ಕೊಡ್ತಿಲ್ಲ ಅಂತಾ ಸೋಶಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಬದಲಾವಣೆ ಮಾಡೋದೇ ಆಗಿದ್ರೆ ತಿಲಕ್ ವರ್ಮಾರನ್ನ ಬದಲಾವಣೆ ಮಾಡ್ಬೋದಿತ್ತು. ಅದನ್ನ ಬಿಟ್ಟು ಸಂಜುಗೆ ಯಾಕೆ ಟಾರ್ಗೆಟ್ ಅನ್ನೋ ಪ್ರಶ್ನೆ ಕೇಳ್ತಿದ್ದಾರೆ. ಅದ್ರ ಜೊತೆಗೆ ಆರ್ಸಿಬಿ ಪ್ಲೇಯರ್ಸ್ ಯಾರೂ ಕಾಣ್ತಿಲ್ವಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ.
ಜಿಂಬಾಬ್ವೆ ಪ್ರವಾಸಕ್ಕೂ ಬೇಡವಾದ್ರಾ ಆರ್ ಸಿಬಿ ಚಾಂಪಿಯನ್ಸ್?
ಇನ್ನು ಈ ಬಾರಿಯೂ ಭಾರತ ತಂಡಕ್ಕೆ ಆರ್ಸಿಬಿಯ ಯಾವುದೇ ಆಟಗಾರನನ್ನ ಆಯ್ಕೆ ಮಾಡದೇ ಇರುವುದೂ ಆಕ್ರೋಶ ವ್ಯಕ್ತವಾಗ್ತಿದೆ. ಆರ್ಸಿಬಿ 2 ಬಾರಿ ಚಾಂಪಿಯನ್ ಆಗುವಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಆಲ್ರೌಂಡರ್ ಕೃನಾಲ್ ಪಾಂಡ್ಯ, ನಾಯಕ ರಜತ್ ಪಾಟೀದಾರ್ ಹಾಗೂ ಯುವ ವೇಗಿ ರಸಿಕ್ ಸಲಂ ಧರ್ ಇವ್ರಲ್ಲಿ ಯಾರೊಬ್ರಿಗೂ ಅವಕಾಶ ಸಿಕ್ಕಿಲ್ಲ. ಈ ಎಲ್ಲಾ ಆಟಗಾರರು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಎಲ್ಲಾ ಆಟಗಾರರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಹೀಗಿದ್ದೂ ಈ ನಾಲ್ವರು ಆಟಗಾರರನ್ನು ಬಿಸಿಸಿಐ ಆಯ್ಕೆ ಸಮಿತಿ ಕಡೆಗಣಿಸಿದೆ. ಇದು ಈ ನಾಲ್ವರು ಆಟಗಾರರಿಗೆ ಅಜಿತ್ ಅಗರ್ಕರ್ ಹಾಗೂ ಗೌತಮ್ ಗಂಭೀರ್ ಜೋಡಿ ಮಾಡಿದ ಅನ್ಯಾಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಸದ್ಯದ ಬೆಳವಣಿಗೆಗಳನ್ನ ನೋಡ್ತಿದ್ರೆ ಸಂಜುರದ್ದು ಮುಗಿದ ಅಧ್ಯಾಯ ಆಗಿದ್ದು ಆರ್ಸಿಬಿ ಆಟಗಾರರಿಗೆ ಅವಕಾಸ ಸಿಗೋದೂ ಕೂಡ ಕನಸಿನ ಮಾತಾಗಿದೆ.

ನೋಡಿರಿ

