ಸಂಜು ಓಪನರ್.. ಪಾಂಡ್ಯ ಫಿನಿಶರ್ – ಕಿಶನ್ ಬಂದ್ರೆ ಹೇಗಿದೆ ಪ್ಲೇಯಿಂಗ್ 11?
ಭಾರತ ತಂಡಕ್ಕೆ ರಾಣಾ ದೃಷ್ಟಿಬೊಟ್ಟು

ಟಿ-20 ವಿಶ್ವಕಪ್ಗೆ ಟೀಂ ಇಂಡಿಯಾ ಅನೌನ್ಸ್ ಆಗಿದೆ. ಮೇಜರ್ ಚೇಂಜಸ್ ಅಂತಾ ಏನೂ ಇಲ್ಲದೇ ಇದ್ರೂ ಬದಲಾವಣೆಗಳನ್ನಂತೂ ಮಾಡಿದ್ದಾರೆ. ಅಜಿತ್ ಅಗರ್ಕರ್ ನಾಯಕತ್ವದ ಆಯ್ಕೆ ಸಮಿತಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲೇ ವರ್ಲ್ಡ್ಕಪ್ಗೆ ಕಾಲಿಡ್ತಿದೆ. ಌಂಡ್ ವೈಸ್ ಕ್ಯಾಪ್ಟನ್ಸಿಯಲ್ಲಿ ಸ್ಮಾರ್ಟ್ ಡಿಸಿಷನ್ ತಗೊಂಡಿದ್ದಾರೆ. ಇತ್ತ ಶುಭ್ಮನ್ ಗಿಲ್ ಫಾರ್ಮುಲಾ ಅಟ್ಟರ್ಫ್ಲ್ಯಾಪ್ ಆಗ್ತಿದ್ದಂತೆ ತಂಡದಿಂದ ಗೇಟ್ಪಾಸ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಪಾಂಡ್ಯ ಸಿಡಿಸಿದ ಸಿಕ್ಸ್‌ನಿಂದ ಕ್ಯಾಮರಾಮ್ಯಾನ್‌ಗೆ ಗಾಯ – ಓಡಿ ಹೋಗಿ ತಬ್ಬಿ ಕ್ಷಮೆ ಕೇಳಿದ ಹಾರ್ದಿಕ್
ಭಾರತ ಮತ್ತು ಶ್ರೀಲಂಕಾ ಆಯೋಜನೆಯಲ್ಲಿ ನಡೆಯಲಿರೋ 2026ರ ಟಿ-20 ವಿಶ್ವಕಪ್ ಫೆಬ್ರವರಿ 7ರಂದು ಆರಂಭವಾಗಲಿದೆ. ಟೋಟಲ್ 20 ತಂಡಗಳಿದ್ದು ನಾಲ್ಕು ಗುಂಪುಗಳಾಗಿ ಫೈಟ್ ಮಾಡ್ತಾರೆ. ಯುಎಇ ವಿರುದ್ಧ ಭಾರತದ ಮೊದಲ ಪಂದ್ಯ ನಡೆಯಲಿದೆ. ಸದ್ಯ ಈ ಟೂರ್ನಿಗೆ ಅನೌನ್ಸ್ ಆಗಿರೋ ಭಾರತ ತಂಡದಲ್ಲಿ ಟಿ-20ಐ ಸಿರೀಸ್ನಲ್ಲಿ ಕಣಕ್ಕಿಳಿತಿದ್ದವ್ರೇ ಆಲ್ಮೋಸ್ಟ್ ಸೆಲೆಕ್ಟ್ ಆಗಿದ್ದಾರೆ. ಬಟ್ ಎರಡು ಮೇಜರ್ ಚೇಂಜಸ್ ಮಾಡಿದ್ದಾರೆ. ಅದ್ರಲ್ಲೂ ಮಾಡ್ಲೇಬೇಕಾಗಿದ್ದ ಬದಲಾವಣೆ ಅಂದ್ರೆ ಶುಭ್ಮನ್ ಗಿಲ್ಗೆ ಗೇಟ್ ಪಾಸ್ ಕೊಟ್ಟಿರೋದು.
ಗಿಲ್ ಪಲ್ಟಿ ಹೊಡೀತಿದ್ದಂತೆ ಅಕ್ಷರ್ ಗೆ ವೈಸ್ ಕ್ಯಾಪ್ಟನ್ಸಿ!
ಗೌತಮ್ ಗಂಭಿರ್ ಹೆಡ್ ಕೋಚ್ ಆದ್ಮೇಲೆ ತುಘಲಕ್ ದರ್ಬಾರ್ ನಡೀತಿದೆ. ಡಿಸರ್ವ್ ಇರೋದು ಹೊರಗಿದ್ದಾರೆ ಇಲ್ಲದೇ ಇರೋ ಕೆಲವ್ರು ಒಳಗಿದ್ದಾರೆ. ನಿಮ್ಗೂ ಗೊತ್ತೇ ಇದೆ. ಌಂಡ್ ಲಾಸ್ಟ್ ಇಯರ್ನಿಂದ ಚೆನ್ನಾಗೇ ಇದ್ದ ತಂಡದಲ್ಲಿ ಕಡ್ಡಿ ಅಲ್ಲಾಡಿಸಿದ್ದು ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್. ಅಕ್ಷರ್ ಪಟೇಲ್ರನ್ನ ವೈಸ್ ಕ್ಯಾಪ್ಟನ್ಸಿಯಿಂದ ತೆಗ್ದು ಶುಭ್ಮನ್ ಗಿಲ್ರನ್ನ ಏಷ್ಯಾಕಪ್ನಲ್ಲಿ ಕರ್ಕೊಂಡು ಬಂದು ಅದೂ ವೈಸ್ ಕ್ಯಾಪ್ಟನ್ಸಿ ಕೊಟ್ಟು ಓಪನರ್ ಆಗಿ ಆಡ್ಸಿದ್ರು. ಅಕ್ಷರ್ರನ್ನ ತೆಗೆದಾಗ ಕಾಮೆಂಟೇಟರ್ ಒಬ್ರು ಪ್ರಶ್ನೆ ಮಾಡಿದ್ರು. ನೀವು ಕರೆಕ್ಟ್ ಆಗಿ ಕಮ್ಯುನಿಕೇಟ್ ಮಾಡಿ ಅಕ್ಷರ್ರನ್ನ ತೆಗೆದ್ರಾ ಅಂತಾ ಪ್ರಶ್ನಿಸಿದ್ರು. ಆದ್ರೆ ಮ್ಯಾನೇಜ್ಮೆಂಟ್ ಉದ್ದೇಶಪೂರ್ವಕವಾಗಿಯೇ ಗಿಲ್ರನ್ನ ಕರೆತಂದದ್ದು ಗೊತ್ತಾಗ್ತಿತ್ತು. ಆಮೇಲೆ ಏನಾಯ್ತು. ಟಾಪ್ ಆರ್ಡರ್ ಬ್ಯಾಟಿಂಗ್ ಕಂಪ್ಲೀಟ್ ಕೊಲ್ಯಾಪ್ಸ್. ಕ್ಯಾಪ್ಸನ್ ಸೂರ್ಯ ಮತ್ತು ವೈಸ್ ಕ್ಯಾಪ್ಟನ್ ಗಿಲ್ ನಾನಾ ನೀನಾ ಅಂತಾ ರೇಸ್ಗೆ ಬಿದ್ದವ್ರಂತೆ ಔಟ್ ಆಗ್ತಿದ್ರು. ಸೋ ಇಬ್ರೂ ತಂಡದಲ್ಲಿದ್ರೆ ಬ್ಯಾಕ್ ಫೈರ್ ಗ್ಯಾರಂಟಿ ಅಂತಾ ಬಿಸಿಸಿಐ ಗಿಲ್ಗೆ ನೈಸಾಗಿ ಗೇಟ್ಪಾಸ್ ಕೊಟ್ಟು ಅಕ್ಷರ್ ಪಟೇಲ್ರನ್ನ ವೈಸ್ ಕ್ಯಾಪ್ಟನ್ ಆಗಿ ಮಾಡಿದ್ದಾರೆ. ಬಟ್ ಒಂದು ಟೀಂ ಚೆನ್ನಾಗೇ ಇರುವಾಗ ಈ ಥರ ಸರ್ಜರಿ ಮಾಡಿ ಕನ್ಫ್ಯೂಷನ್ಸ್ ಕ್ರಿಯೇಟ್ ಮಾಡ್ಬಾರ್ದು.
ಜಿತೇಶ್ ಗಿಂತ ಬ್ಯಾಟಿಂಗ್ ನಲ್ಲಿ ಕಿಶನ್ & ರಿಂಕು ಬೆಸ್ಟ್!
ಇನ್ನು ವಿಶ್ವಕಪ್ ತಂಡದಿಂದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಕೂಡ ಔಟ್ ಆಗಿದ್ದಾರೆ. ಸೋ ಗಿಲ್ ಮತ್ತು ಜಿತೇಶ್ ಹೊರಬಿದ್ಮೇಲೆ ಇಶಾನ್ ಕಿಶನ್ ಮತ್ತು ರಿಂಕು ಸಿಂಗ್ ಜಾಯ್ನ್ ಆಗಿದ್ದಾರೆ. ಇವ್ರಿಬ್ಬರೂ ಕೂಡ ಬ್ಯಾಟಿಂಗ್ನಲ್ಲಿ ಬೆಸ್ಟ್ ಇರೋದ್ರಿಂದ ಜಿತೇಶ್ ರನ್ನು ಕೈ ಬಿಟ್ಟು ಚಾನ್ಸ್ ಕೊಟ್ಟಿದ್ದಾರೆ. ಬಹುಶಃ ಪ್ಲೇಯಿಂಗ್ 11ನಲ್ಲಿ ಜಿತೇಶ್ ಜಾಗದಲ್ಲಿ ಕಿಶನ್ ಕಾಣಿಸಿಕೊಳ್ಬೋದು. ಆಲ್ಮೋಸ್ಟ್ ಸೌತ್ ಆಫ್ರಿಕಾ ವಿರುದ್ಧ ಕೊನೇ ಮ್ಯಾಚಲ್ಲಿ ಆಡಿದ್ದ ಆಟಗಾರರೇ ಪ್ಲೇಯಿಂಗ್ 11ನಲ್ಲಿ ಆಡ್ತಾರೆ. ಬ್ಯಾಟಿಂಗ್ ಲೈನಪ್ನಲ್ಲಿ ಸೂರ್ಯ ಮಾತ್ರನೇ ವೀಕ್ ಆಗಿ ಕಾಣ್ತಿದ್ದಾರೆ. ಸೂರ್ಯ ಒಬ್ಬ ಫಾರ್ಮ್ಗೆ ಬಂದ್ರೆ ಈ ಸಲನೂ ಟ್ರೋಫಿ ನಮ್ಮಲ್ಲೇ ಉಳಿಯುತ್ತೆ.
ಭಾರತ ತಂಡಕ್ಕೆ ದೃಷ್ಟಿಬೊಟ್ಟು ಆದ್ರಾ ಹರ್ಷಿತ್ ರಾಣಾ?
ಇನ್ನು ಟೀಂ ಇಂಡಿಯಾ ಸ್ಕ್ವಾಡ್ನಲ್ಲಿ ಅಚ್ಚರಿ ಆಯ್ಕೆ ಅನ್ಸಿದ್ದು ಹರ್ಷಿತ್ ರಾಣಾ. ಕೋಚ್ ಗಂಭೀರ್ ವಿಶ್ವಕಪ್ ಟೀಮ್ನಲ್ಲೂ ತಮ್ಮ ಶಿಷ್ಯ ಇರ್ಲಿ ಅನ್ನೋ ಕಾರಣಕ್ಕೆ ಇಲ್ಲೂ ಹರ್ಷಿತ್ ರಾಣಾಗೆ ಮಣೆ ಹಾಕಿದ್ದಾರೆ ಅನ್ಸುತ್ತೆ. ಒಂಥರಾ ತಂಡಕ್ಕೆ ದೃಷ್ಟಿಬೊಟ್ಟು ಅಂದ್ರೂ ತಪ್ಪಾಗಲ್ಲ. ವಿಶ್ವಕಪ್ ತಂಡದಲ್ಲಿ ರಾಣಾ ಕೂಡ ಇದ್ರೂ ಅನ್ನೋ ಹೆಸರು ಇರ್ಲಿ ಅಂತಾ. ಯಾಕಂದ್ರೆ ತಂಡದಲ್ಲಿ ಕ್ವಾಲಿಟಿ ಬೌಲರ್ಗಳೇ ಇದ್ದಾಗ ಬುಮ್ರಾ, ಅರ್ಶದೀಪ್, ಪಾಂಡ್ಯ ಪೇಸ್ ಅಟ್ಯಾಕರ್ಸ್ ಇದ್ದಾಗ ರಾಣಾನ ಕೈಬಿಟ್ಟು ಬ್ಯಾಕಪ್ ಆಗಿ ಒಬ್ಬ ಪ್ಯೂರ್ ಬ್ಯಾಟರ್ನ ಸೆಲೆಕ್ಟ್ ಮಾಡ್ಬೋದಿತ್ತು. ಜೈಸ್ವಾಲ್, ರುತುರಾಜ್ ಅಥವಾ ಶ್ರೇಯಸ್ನ ಪಿಕ್ ಮಾಡ್ಬೋದಿತ್ತು. ಬಟ್ ಎಲ್ಲೆಲ್ಲೂ ರಾಣಾ ಇರ್ಲಿ ಅಂತಾ ಚೂಸ್ ಮಾಡ್ಕೊಂಡಿದ್ದಾರೆ ಅನ್ಸುತ್ತೆ. ಬಟ್ ಫೈನಲ್ಲಾಗಿ ಪ್ಲೇಯಿಂಗ್ 11 ಹೇಗಿರ್ಬೋದು ಅನ್ನೋದನ್ನ ನೋಡೋದಾದ್ರೆ..
ಸಂಭಾವ್ಯ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ
ಸಂಜು ಸ್ಯಾಮ್ಸನ್
ತಿಲಕ್ ವರ್ಮಾ
ಸೂರ್ಯ ಕುಮಾರ್ ಯಾದವ್
ಇಶಾನ್ ಕಿಶನ್
ಹಾರ್ದಿಕ್ ಪಾಂಡ್ಯ
ಅಕ್ಷರ್ ಪಟೇಲ್
ಕುಲ್ದೀಪ್ ಯಾದವ್
ವರುಣ್ ಚಕ್ರವರ್ತಿ
ಅರ್ಷದೀಪ್ ಸಿಂಗ್
ಜಸ್ಪ್ರೀತ್ ಬುಮ್ರಾ
ಸೋ ಇಲ್ಲಿ ಇಬ್ಬರು ಪ್ಯೂರ್ ಸ್ಪಿನ್ನರ್ಸ್ ಌಂಡ್ ಪೇಸರ್ಸ್ ಇರೋದ್ರಿಂದ ಮತ್ತೊಬ್ಬ ಆಲ್ರೌಂಡರ್ನ ಪ್ಲೇಯಿಂಗ್ 11ಗೆ ಸೆಲೆಕ್ಟ್ ಮಾಡ್ಬೇಕು ಅಂದ್ರೆ ಬೌಲರ್ಗಳಲ್ಲೇ ಯಾರನ್ನಾದ್ರೂ ಡ್ರಾಪ್ ಮಾಡ್ತಾರೆ. ಸ್ಪಿನ್ನರ್ ಬಿಡೋದಾ ಅತವಾ ಪೇಸರ್ ಬಿಡೋದಾ ಡಿಸೈಡ್ ಮಾಡ್ತಾರೆ. ಆಗ ಶಿವಂ ದುಬೆ ಇನ್ ಆಗ್ಬೋದು. ಉಳಿದಂತೆ ಸೇಮ್ ಕಾಂಬಿನೇಷನ್ ಕಂಟಿನ್ಯೂ ಆಗುತ್ತೆ.

ನೋಡಿರಿ

