ಏಷ್ಯಾಕಪ್ ಗೆ IPL ಮಾನದಂಡ – ಟಾಪ್ ಲಿಸ್ಟ್ ನಲ್ಲಿದ್ದವ್ರಿಗೆ ಜಾಕ್ ಪಾಟ್?
ಬ್ಯಾಟಿಂಗ್ & ಬೌಲಿಂಗ್ ರೇಸ್ ಹೇಗಿದೆ?

ಸೆಪ್ಟೆಂಬರ್ 9ರಿಂದ ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿ ಈ ಬಾರಿ ಟಿ-20 ಮಾದರಿಯಲ್ಲಿ ನಡೆಯಲಿದೆ. ಹೀಗಾಗಿ ಸ್ಫೋಟಕ ಬ್ಯಾಟರ್ಸ್ ಮತ್ತು ಬಿರುಗಾಳಿ ಬೌಲರ್ಸ್ನ ಆಯ್ಕೆ ಮಾಡಬೇಕಿದೆ. 2022 ರಲ್ಲಿ ಕೊನೆಯ ಬಾರಿಗೆ ಟಿ20 ಮಾದರಿಯಲ್ಲಿ ಏಷ್ಯಾಕಪ್ ನಡೆದಿತ್ತು. ಸೂಪರ್ ಫೋರ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತ ನಂತರ ಭಾರತ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಫೇಲ್ಯೂರ್ ಆಗಿತ್ತು. ಬಟ್ 2023ರಲ್ಲಿ ಏಕದಿನ ಮಾದರಿಯ ಟೂರ್ನಿಯಲ್ಲಿ ಶ್ರೀಲಂಕಾವನ್ನ ಮಣಿಸಿ ಫೈನಲ್ನಲ್ಲಿ ಚಾಂಪಿಯನ್ ಆಗಿತ್ತು. ಹೀಗಾಗಿ ಈ ಸಲವೂ ಪ್ರಶಸ್ತಿ ಮೇಲೆ ಮೇಲೆ ಕಣ್ಣಿಟ್ಟಿದ್ದು ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದವ್ರ ಲಿಸ್ಟ್ ಮಾಡಿಕೊಂಡಿದೆ.
ಇದನ್ನೂ ಓದಿ : ರೋಹಿತ್ & ವಿರಾಟ್ ಏಕದಿನ ಮಾದರಿಯೂ ಯುಗಾಂತ್ಯ – BCCI ಪ್ಲ್ಯಾನ್ ವರ್ಕೌಟ್ ಆಗುತ್ತಾ?
ಹೈಯೆಸ್ಟ್ ರನ್ ಸ್ಕೋರರ್ಸ್!
ಬ್ಯಾಟರ್ ರನ್ ಸ್ಟ್ರೈಕ್ ರೇಟ್
ಸಾಯಿ ಸುದರ್ಶನ್ 759 156.17
ಸುಯಕುಮಾರ್ ಯಾದವ್ 717 167.91
ವಿರಾಟ್ ಕೊಹ್ಲಿ 657 144.71
ಶುಭಮನ್ ಗಿಲ್ 650 155.87
ಶ್ರೇಯಸ್ ಅಯ್ಯರ್ 604 175.07
ಇನ್ನು ಈ ಟಾಪ್ ಫೈವ್ ಬ್ಯಾಟರ್ಗಳ ಪೈಕಿ ವಿರಾಟ್ ಕೊಹ್ಲಿ ಅಂತೂ ಇರೋದಿಲ್ಲ. ಯಾಕಂದ್ರೆ ಅಲ್ರೆಡಿ ಅವ್ರು ಟಿ-20ಐ ಮಾದರಿಯಿಂದ ರಿಟೈರ್ಡ್ ಆಗಿರೋದ್ರಿಂದ ಅವ್ರ ಹೆಸರು ಇಲ್ಲಿ ಪರಿಗಣನೆಗೆ ಬರಲ್ಲ. ಉಳಿದಂತೆ ಸಾಯಿ ಸುದರ್ಶನ್ ಪಿಕ್ ಮಾಡೋದು ಸ್ವಲ್ಪ ಡೌಟ್ ಇದೆ. ಉಳಿದಂತೆ ಸೂರ್ಯಕುಮಾರ್ ಯಾದವ್, ಶುಭ್ ಮನ್ ಗಿಲ್ ಹಾಗೇ ಶ್ರೇಯಸ್ ಅಯ್ಯರ್ ಬಹುತೇಕ ಸೆಲೆಕ್ಟ್ ಆಗ್ತಾರೆ. ಇನ್ನು ಬೌಲಿಂಗ್ ಸ್ಟ್ರೆಂಥ್ ಬಗ್ಗೆ ನೋಡೋದಾದ್ರೆ..
ಹೈಯೆಸ್ಟ್ ವಿಕೆಟ್ ಟೇಕರ್ಸ್!
ಬ್ಯಾಟರ್ ವಿಕೆಟ್ ಎಕಾನಮಿ ರೇಟ್
ಪ್ರಸಿದ್ಧ್ ಕೃಷ್ಣ 25 ವಿಕೆಟ್ 8.27
ಅರ್ಷದೀಪ್ ಸಿಂಗ್ 21 ವಿಕೆಟ್ 8.88
ಆರ್ ಸಾಯಿ ಕಿಶೋರ್ 19 ವಿಕೆಟ್ 9.24
ಜಸ್ಪ್ರೀತ್ ಬುಮ್ರಾ 18 ವಿಕೆಟ್ 6.67
ಇನ್ನು ಈ ನಾಲ್ವರು ಬೌಲರ್ಗಳ ಲಿಸ್ಟ್ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿದಿದ್ರು. ಬಹುಶಃ ಇವ್ರಿಬ್ಬರಿಗೆ ರೆಸ್ಟ್ ನೀಡಬಹುದು. ಹಾಗೇ ಅರ್ಷದೀಪ್ಗೆ ಚಾನ್ಸ್ ಕೊಡಬಹುದು. ಅರ್ಷದೀಪ್ ಇಂಗ್ಲೆಂಡ್ ಸರಣಿಯಲ್ಲಿದ್ರೂ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಇನ್ನು ಸಾಯಿ ಕಿಶೋರ್ ಐಪಿಎಲ್ನಲ್ಲಿ ಸದ್ದು ಮಾಡಿದ್ರೂ ಕೂಡ ಏಷ್ಯಾಕಪ್ಗೆ ಸೆಲೆಕ್ಟ್ ಆಗೋದಿಲ್ಲ.
ಪ್ರಸ್ತುತ ಐಸಿಸಿ ಪುರುಷರ ಟಿ20ಐ ಶ್ರೇಯಾಂಕದಲ್ಲಿ ಅಗ್ರ 10 ರಲ್ಲಿ ನಾಲ್ವರು ಭಾರತೀಯ ಬ್ಯಾಟ್ಸ್‌ಮನ್‌ಗಳು ಇದ್ದಾರೆ. ಅಭಿಷೇಕ್ ಶರ್ಮಾ (1ನೇ), ತಿಲಕ್ ವರ್ಮಾ (3ನೇ), ಸೂರ್ಯಕುಮಾರ್ ಯಾದವ್ (6ನೇ), ಮತ್ತು ಯಶಸ್ವಿ ಜೈಸ್ವಾಲ್ (10ನೇ) ಅಗ್ರ ಶ್ರೇಯಾಂಕದ ಭಾರತೀಯ T20I ಬ್ಯಾಟರ್‌ಗಳು. ಶುಭಮನ್ ಗಿಲ್, ಆಗಸ್ಟ್ 10ರ ಹೊತ್ತಿಗೆ 40 ನೇ ಸ್ಥಾನದಲ್ಲಿದ್ದಾರೆ. ಹಾಗೇ ಐಸಿಸಿ ಪುರುಷರ ಟಿ20ಐ ಶ್ರೇಯಾಂಕದಲ್ಲಿ ಟಾಪ್ 10 ರಲ್ಲಿ ಮೂವರು ಬೌಲರ್‌ಗಳಿದ್ದಾರೆ. ವರುಣ್ ಚಕ್ರವರ್ತಿ (4ನೇ ಸ್ಥಾನ), ರವಿ ಬಿಷ್ಣೋಯ್ (7ನೇ ಸ್ಥಾನ) ಮತ್ತು ಅರ್ಷದೀಪ್ ಸಿಂಗ್ (10ನೇ ಸ್ಥಾನ)ದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ 42 ನೇ ಸ್ಥಾನದಲ್ಲಿದ್ದಾರೆ.

ನೋಡಿರಿ

