ಏಷ್ಯಾಕಪ್ ಗೆ IND ಫೈಟರ್ಸ್ ಫೈನಲ್? – ಸೂರ್ಯ ಕ್ಯಾಪ್ಟನ್.. ಹೇಗಿದೆ ಟೀಂ?
PAK ವಿರುದ್ಧ ಕಣಕ್ಕಿಳಿಯಲ್ವಾ ಭಾರತ?

2025ರ ಏಷ್ಯಾಕಪ್ ಟೂರ್ನಿ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 29 ರವರೆಗೆ ನಡೆಯಲಿದೆ. ಏಷ್ಯಾಕಪ್ 2025 ಪಂದ್ಯಾವಳಿಗಳು ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿವೆ. ಈ ಸಲ ಟೂರ್ನಮೆಂಟ್ ಟಿ20 ಮಾದರಿಯಲ್ಲಿ ನಡೆಸೋಕೆ ತೀರ್ಮಾನ ಮಾಡ್ಲಾಗಿದೆ. ಒಟ್ಟು 8 ತಂಡಗಳ ನಡುವೆ ಫೈಟ್ ನಡೆಯಲಿದ್ದು, ತಲಾ 4ತಂಡಗಳನ್ನ ಎರಡು ಟೀಮ್ಗಳಾಗಿ ಡಿವೈಡ್ ಮಾಡಲಾಗಿದೆ. ಎ ಗ್ರೂಪ್ನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ಓಮನ್ ತಂಡಗಳಿದ್ದರೆ, ಬಿ ಟೀಮ್ನಲ್ಲಿ ಹಾಂಗ್ ಕಾಂಗ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳಿವೆ. ಈಗಾಗ್ಲೇ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ 22 ಸದಸ್ಯರ ಪ್ರಾಥಮಿಕ ತಂಡವನ್ನು ಪ್ರಕಟಿಸಿದೆ. ಆದ್ರೆ ಪಾಕಿಸ್ತಾನ್ ಹಾಗೂ ಯುಎಇ ಒಳಗೊಂಡ ತ್ರಿಕೋನ ಸರಣಿ ಆದ್ಮೇಲೆ ಏಷ್ಯಾಕಪ್ಗೆ 15 ಆಟಗಾರರನ್ನ ಫೈನಲ್ ಮಾಡೋಕೆ ನಿರ್ಧಾರ ಮಾಡಿದೆ. ಇನ್ನು ಇಂಗ್ಲೆಂಡ್ ವಿರುದ್ಧ ಸರಣಿ ಸಮಬಲ ಸಾಧಿಸಿದ ಸಮಾಧಾನದಲ್ಲಿರೋ ಬಿಸಿಸಿಐ ಏಷ್ಯಾಕಪ್ ಟೂರ್ನಿಗೆ ಯಾರನ್ನೆಲ್ಲಾ ಫೈನಲ್ ಮಾಡ್ಬೇಕು ಅನ್ನೋ ಬಗ್ಗೆ ಬ್ಲ್ಯೂಪ್ರಿಂಟ್ ರೆಡಿ ಮಾಡ್ಕೊಂಡಿದೆ.
ಇದನ್ನೂ ಓದಿ : KL ಮೇಲೆ ಬಿತ್ತು CSK ಕಣ್ಣು? – ಕ್ಯಾಪ್ಟನ್, ಬ್ಯಾಟರ್, ಕೀಪರ್ ಟಾಸ್ಕ್!
ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಟಿ20 ಮಾದರಿಯಲ್ಲಿ ಪಂದ್ಯಾವಳಿ ನಡೆಯೋದ್ರಿಂದ ಪ್ರಸ್ತುತ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಆಗಿದ್ದಾರೆ. ಅವರನ್ನೇ ಕ್ಯಾಪ್ಟನ್ ಆಗಿ ಮುಂದುವರೆಸೋ ಪ್ಲ್ಯಾನ್ನಲ್ಲಿದೆ ಬಿಸಿಸಿಐ. ಇನ್ನು ಟೆಸ್ಟ್ ತಂಡದ ಕ್ಯಾಪ್ಟನ್ ಆಗಿರುವ ಶುಭ್ಮನ್ ಗಿಲ್ ಅವರಿಗೆ ವೈಸ್ ಕ್ಯಾಪ್ಟನ್ಸಿ ನೀಡೋ ಚಾನ್ಸಸ್ ಇದೆ. ಈ ಹಿಂದೆ ಅಕ್ಷರ್ ಪಟೇಲ್ ವೈಸ್ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಉಪನಾಯಕನನ್ನು ಬದಲಿಸಲು ಬಿಸಿಸಿಐ ಮುಂದಾಗಿದೆ.
ಸಂಭಾವ್ಯ ಆಟಗಾರರು!
ಯಶಸ್ವಿ ಜೈಸ್ವಾಲ್
ಅಭಿಷೇಕ್ ಶರ್ಮಾ
ಶುಭ್ ಮನ್ ಗಿಲ್
ಸೂರ್ಯಕುಮಾರ್ ಯಾದವ್
ಸಂಜು ಸ್ಯಾಮ್ಸನ್
ಜಿತೇಶ್ ಶರ್ಮಾಗೆ
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ಹಾರ್ದಿಕ್ ಪಾಂಡ್ಯ
ವಾಷಿಂಗ್ಟನ್ ಸುಂದರ್
ಅಕ್ಷರ್ ಪಟೇಲ್
ವರುಣ್ ಚಕ್ರವರ್ತಿ
ಅರ್ಷದೀಪ್ ಸಿಂಗ್
ಮೊಹಮ್ಮದ್ ಸಿರಾಜ್
ಹರ್ಷಿತ್ ರಾಣಾ
ಈ ಸಲ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದೇ ಕಳೆದ 21 ವರ್ಷಗಳಲ್ಲಿ ಮೊದಲ ಟೂರ್ನಿ ಆಗಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ಸ್ವರೂಪದಿಂದ ನಿವೃತ್ತರಾಗಿರುವುದರಿಂದ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗುವುದಿಲ್ಲ. 21 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ಇಬ್ಬರು ಆಟಗಾರರು ಏಷ್ಯಾಕಪ್‌ನಲ್ಲಿ ಮೈದಾನದಲ್ಲಿ ಕಾಣಿಸುವುದಿಲ್ಲ.
ರೋ-ಕೊ ಇಲ್ಲದ ಏಷ್ಯಾಕಪ್!
ರೋಹಿತ್- ಕೊಹ್ಲಿ ಇಲ್ಲದೆ ಏಷ್ಯಾಕಪ್ ಆಡಿದ್ದು 2004 ರಲ್ಲಿ
ಆಗ ಅವರಿಬ್ಬರೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರಲಿಲ್ಲ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇವರಿಬ್ಬರಲ್ಲಿ ಒಬ್ಬರಾದ್ರೂ ಇರ್ತಿದ್ರು
2010 ಹಾಗೇ 2016ರಲ್ಲಿ ಇಬ್ಬರೂ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ರು
ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ 2018 ರ ಏಷ್ಯಾಕಪ್ ನಲ್ಲಿ ಗೆಲುವು
2023 ರಲ್ಲಿಯೂ ಸಹ, ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಪ್ರಶಸ್ತಿ
ಟೂರ್ನಿಯಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಆಡಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯುಎಇ ತಂಡವನ್ನು ಎದುರಿಸಲಿದೆ. ಇನ್ನು ಸೆಪ್ಟೆಂಬರ್ 14 ರಂದು ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಸೆಣಸಲಿದೆ. ಇದಾದ ಬಳಿಕ ಸೆಪ್ಟೆಂಬರ್ 19 ರಂದು ಭಾರತ-ಒಮಾನ್ ಮುಖಾಮುಖಿಯಾಗಲಿದೆ. ಬಟ್ ಇಲ್ಲಿ ಪಾಕಿಸ್ತಾನ್ ವಿರುದ್ಧ ಮ್ಯಾಚ್ ಆಡ್ತಾರಾ ಅನ್ನೋ ಬಗ್ಗೆ ಕುತೂಹಲ ಇದೆ. ಈ ಮೂರು ಪಂದ್ಯಗಳ ಮೂಲಕ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಂಡರೆ, ಸೂಪರ್ ಫೋರ್ ಹಂತಕ್ಕೇರಲಿದೆ. ಸೂಪರ್ ಫೋರ್ನಲ್ಲಿ ಒಟ್ಟು ನಾಲ್ಕು ತಂಡಗಳು ಅರ್ಹತೆ ಪಡೆಯಲಿದ್ದು, ಈ ತಂಡಗಳ ನಡುವೆ ಪಂದ್ಯಗಳು ಜರುಗಲಿದೆ. ಇದ್ರಲ್ಲಿ ಟಾಪ್ 2ನಲ್ಲಿ ಇರೋ ಟೀಮ್ಗಳ ನಡುವೆ ಸೆಪ್ಟೆಂಬರ್ 29ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

ನೋಡಿರಿ

