ಭಾರತ-ಅಫ್ಘಾನಿಸ್ತಾನ ಟೆಸ್ಟ್ & ಏಕದಿನ ಸರಣಿಗೆ ತಂಡ ಪ್ರಕಟ – KL ಉಪನಾಯಕ.. ಪಡಿಕ್ಕಲ್ & ಪ್ರಸಿದ್ಧ್ ಗೂ ಚಾನ್ಸ್!

ಐಪಿಎಲ್ ಕ್ಲೈಮ್ಯಾಕ್ಸ್ ಗೆ ಕೆಲ ದಿನಗಳಷ್ಟೇ ಬಾಕಿ ಇದ್ದು ನಂತರ ಟೀಂ ಇಂಡಿಯಾ ಪಂದ್ಯಗಳು ಆರಂಭವಾಗುತ್ತವೆ. ಜೂನ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ ಪಂದ್ಯಗಳನ್ನ ಆಡಲಿದೆ. ಇದಕ್ಕಾಗಿ ಬಿಸಿಸಿಐ ತಂಡ ಪ್ರಕಟ ಮಾಡಿದೆ. ಅಫ್ಘಾನಿಸ್ತಾನ್ ವಿರುದ್ಧದ ಸರಣಿಗಾಗಿ ಭಾರತ ಏಕದಿನ ಹಾಗೂ ಟೆಸ್ಟ್ ತಂಡಗಳನ್ನು ಅನೌನ್ಸ್ ಮಾಡಿದ್ದು ಎರಡೂ ತಂಡಗಳ ನಾಯಕನಾಗಿ ಶುಭ್ಮನ್ ಗಿಲ್ ಮುಂದುವರೆದಿದ್ದಾರೆ. ಹಾಗೂ ಟೆಸ್ಟ್ ತಂಡದ ಉಪನಾಯಕನಾಗಿ ಕೆಎಲ್ ರಾಹುಲ್ ಕಾಣಿಸಿಕೊಂಡಿದ್ದಾರೆ. ಏಕದಿನ ತಂಡದ ವೈಸ್ ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ಧೋನಿ ಎದುರಲ್ಲೇ ನೆಲ ಕಚ್ಚಿದ CSK – ವಿಶಿಲ್ ಹಾಕಿ ಮನೆಗೆ ಕಳಿಸಿದ ಕಿಶನ್
ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪ ನಾಯಕ), ಬಿ. ಸಾಯಿ ಸುದರ್ಶನ್, ರಿಷಭ್ ಪಂತ್, ದೇವದತ್ ಪಡ್ಡಿಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಧ್ರುವ್ ಜುರೆಲ್.
ಭಾರತ ಏಕದಿನ ತಂಡ: ಶುಭ್ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪ ನಾಯಕ), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ.
ಈ ಬಾರಿ ಟೀಂ ಇಂಡಿಯಾದಲ್ಲಿ ಹೊಸ ಹುಡುಗರಿಗೂ ಅವಕಾಶ ಸಿಕ್ಕಿದ್ದು ವಿಶೇಷ
ಮಾನವ್ ಸುತಾರ್ (ಸ್ಪಿನ್ನರ್)
ಗುರ್ನೂರ್ ಬ್ರಾರ್ (ವೇಗದ ಬೌಲರ್).
ಏಕದಿನ ತಂಡದಲ್ಲಿ ಹೊಸ ಮುಖಗಳು:
ಗುರ್ನೂರ್ ಬ್ರಾರ್ (ವೇಗದ ಬೌಲರ್)
ಪ್ರಿನ್ಸ್ ಯಾದವ್ (ವೇಗದ ಬೌಲರ್)
ಹರ್ಷ್ ದುಬೆ (ಸ್ಪಿನ್ನರ್)
ಮೇ 31ರಂದು ಫೈನಲ್ ಪಂದ್ಯದೊಂದಿಗೆ ಈ ಸೀಸನ್ ಮುಕ್ತಾಯವಾಗುತ್ತೆ. ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಸರಣಿ ಶುರುವಾಗಲಿದೆ. ಈ ಸರಣಿಯು ಜೂನ್ 6 ರಿಂದ ಆರಂಭವಾಗಲಿದ್ದು, ಮೊದಲಿಗೆ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಫ್ಘಾನಿಸ್ತಾನ್ ತಂಡವನ್ನು ಎದುರಿಸಲಿದೆ.
ಜೂನ್ 6 ಬೆಳಿಗ್ಗೆ 9:30 ಭಾರತ vs ಅಫ್ಘಾನಿಸ್ತಾನ್ ಟೆಸ್ಟ್ ನ್ಯೂ ಚಂಡೀಗಢ್
ಜೂನ್ 14 ಮಧ್ಯಾಹ್ನ 1:30 ಭಾರತ vs ಅಫ್ಘಾನಿಸ್ತಾನ್ ಏಕದಿನ ಪಂದ್ಯ ಧರ್ಮಶಾಲಾ
ಜೂನ್ 17 ಮಧ್ಯಾಹ್ನ 1:30 ಭಾರತ vs ಅಫ್ಘಾನಿಸ್ತಾನ್ ಏಕದಿನ ಪಂದ್ಯ ಲಕ್ನೋ
ಜೂನ್ 20 ಮಧ್ಯಾಹ್ನ 1:30 ಭಾರತ vs ಅಫ್ಘಾನಿಸ್ತಾನ್ ಏಕದಿನ ಪಂದ್ಯ ಚೆನ್ನೈ

ನೋಡಿರಿ

