2036ರಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಭಾರತದಲ್ಲೇ ನಡೆಯುತ್ತಾ?

2036ರಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಭಾರತದಲ್ಲೇ ನಡೆಯುತ್ತಾ?

2036ರಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಭಾರತದಲ್ಲೇ ನಡೆಯುತ್ತಾ? ಈ ನಿಟ್ಟಿನಲ್ಲಿ ಒಂದಷ್ಟು ತಯಾರಿ ಕೂಡ ನಡೀತಿದೆ.  2036ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬಿಡ್ ಮಾಡೋದಕ್ಕೆ ಭಾರತ ಸಿದ್ಧವಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ 2036 ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆ ಬಿಡ್ ಸಲ್ಲಿಸಲು ಸರ್ಕಾರ ಸಕಲ ಬೆಂಬಲ ನೀಡಲಿದೆ. ಗುಜರಾತ್​​ನ ಅಹ್ಮದಾಬಾದ್​ ನಗರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ನಗರವಾಗಲಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ಇದನ್ನೂ ಓದಿ:ಧೋನಿ ಮಗಳಿಗೆ ಮೆಸ್ಸಿ ಸ್ಪೆಷಲ್ ಗಿಫ್ಟ್ – ಫುಟ್ಬಾಲ್ ತಾರೆಯಿಂದ ಉಡುಗೊರೆ ಪಡೆದ ಜೀವಾ

ಅಹ್ಮದಾಬಾದ್​ನಲ್ಲಿ ವಿಶ್ವ ದರ್ಜೆಯ ಕ್ರೀಡಾ ಸೌಕರ್ಯಗಳಿದ್ದು, ಒಲಿಂಪಿಕ್ಸ್​ನ್ನು ಆಯೋಜಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ವರ್ಷ ಭಾರತದಲ್ಲಿ ಜಿ-20 ಶೃಂಗಸಭೆ ನಡೆಯಲಿದ್ದು, ಅಂಥಾ ದೊಡ್ಡ ಜಾಗತಿಕ ಮಟ್ಟದ ಕಾರ್ಯಕ್ರಮವನ್ನ ಹಮ್ಮಿಕೊಳ್ಳುವುವಾದ್ರೆ, ಭಾರತಕ್ಕೆ ಒಲಿಂಪಿಕ್ಸ್ ನ್ನು ಆಯೋಜಿಸುವ ಸಾಮರ್ಥ್ಯ ಕೂಡ ಇದೆ ಅಂತಾ ಅನುರಾಗ್ ಠಾಕೂರ್ ಹೇಳಿದ್ದಾರೆ.

ಹಾಗಾದರೆ, ಭಾರತ ನಿಜಕ್ಕೂ ಜಗತ್ತಿನ ಅತೀ ದೊಡ್ಡ ಕ್ರೀಡಾಕೂಟ ಒಲಿಂಪಿಕ್ಸ್​ಅನ್ನು ಆಯೋಜಿಸುವ ಸಾಮರ್ಥ್ಯ ಹೊಂದಿದ್ಯಾ? ನಮ್ಮ ಮುಂದಿರೋ ಸವಾಲುಗಳೇನು? ಒಲಿಂಪಿಕ್ಸ್​ ಆಯೋಜನೆಯಿಂದಾಗುವ ಲಾ​ಭವೇನು? ಈ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ…

ಇನ್ನು ಒಲಿಂಪಿಕ್ಸ್​ ಆಯೋಜಿಸಿದ ರಾಷ್ಟ್ರಕ್ಕೆ ಜಾಗತಿಕ ಮಟ್ಟದಲ್ಲೇನೊ ದೊಡ್ಡ ಹೆಸರು ಬರುತ್ತೆ. ಒಂದಷ್ಟು ಉದ್ಯೋಗ ಕೂಡ ಸೃಷ್ಟಿಯಾಗುತ್ತೆ. ಆದ್ರೆ, ಇಂಥಾ ಜಾಗತಿಕ ಮಟ್ಟದ ಕ್ರೀಡಾಕೂಟ ಆಯೋಜಿಸುವಾಗ ಒಂದು ಸಣ್ಣ ಎಡವಟ್ಟಾದ್ರೂ, ಇಡೀ ದೇಶಕ್ಕೆ ಮಸಿ ಮೆತ್ತಿಕೊಳ್ಳುತ್ತೆ. ಯಾಕಂದ್ರೆ, 2010ರಲ್ಲಿ ಕಾಮನ್​​ವೆಲ್ತ್​  ಕ್ರೀಡಾಕೂಟದಲ್ಲಿ ಸಾವಿರಾರು ಕೋಟಿ ಮೊತ್ತದ ಭ್ರಷ್ಟಚಾರ ನಡೆದಿತ್ತು. ಕ್ರೀಡಾಕೂಟ ಆರಂಭಕ್ಕೆ ಕೆಲ ದಿನಗಳ ಮುನ್ನವೇ ಜನರು ಸಂಚರಿಸೋ ಸೇತುವೆಯೊಂದು ಮುರಿದು ಬಿದ್ದಿತ್ತು. ಕಳಪೆ ಕಾಮಗಾರಿ, ಭ್ರಷ್ಟಾಚಾರದಿಂದ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮುಜುಗರವುಂಟು ಮಾಡಿತ್ತು.

suddiyaana