ಭಾರತದ ಸೆಮೀಸ್ ಹಾದಿ ಸಿಂಪಲ್ – ಗೆದ್ರೆ ಟಿಕೆಟ್.. ಬಿದ್ರೆ ಗೇಟ್ ಪಾಸ್!
ಸುಲಭಕ್ಕೆ ಸೋಲುತ್ತಾ ವಿಂಡೀಸ್?

ಅತ್ತ ಸೌತ್ ಆಫ್ರಿಕಾ ಗೆಲ್ತು.. ಇತ್ತ ಭಾರತ ಗೆಲ್ತು.. ಟೀಂ ಇಂಡಿಯಾ ಫ್ಯಾನ್ಸ್ಗೆ ಏನಾಗ್ಬೇಕಿತ್ತೋ ಅದೇ ಆಗಿದೆ. ಈಗ ಟೀಂ ಇಂಡಿಯಾದ ಸೆಮಿಫೈನಲ್ ಸಿನಾರಿಯೋ ಸಿಂಪಲ್ ಆಗಿದೆ. ಇನ್ಮುಂದೆ ಯಾವ ನೆಟ್ ರನ್ ರೇಟ್ ಕೂಡ ಮ್ಯಾಟ್ರ್ ಆಗಲ್ಲ. ಜಿಂಬಾಬ್ವೆ ವಿರುದ್ಧ ಗೆದ್ದಿರೋ ಭಾರತಕ್ಕೆ ಈಗ ಒಂದು ವಿಕ್ಟರಿಯಷ್ಟೇ ಬೇಕಾಗಿದೆ. ಆದ್ರೆ ಅದು ಸುಲಭ ಇಲ್ಲ. ಸೂಪರ್ ಸಂಡೇಯಲ್ಲಿ ನಡೆಯಲಿರೋ ವೆಸ್ಟ್ ಇಂಡೀಸ್ ವರ್ಸಸ್ ಭಾರತದ ನಡುವಿನ ಪಂದ್ಯ ಈ ಟೂರ್ನಿಯ ಮತ್ತೊಬ್ಬ ಸೆಮಿಫೈನಲಿಸ್ಟ್ನ ಡಿಸೈಡ್ ಮಾಡುತ್ತೆ.
ಇದನ್ನೂ ಓದಿ : ಪಾಕ್ಗೆ ಅಫ್ಘಾನ್ ಶಾಕ್ – ಅಮೆರಿಕ ನಿರ್ಮಿತ F-16 ವಿಮಾನ ಹೊಡೆದುರುಳಿಸಿದ ತಾಲಿಬಾನ್
ಟಿ-20 ವಿಶ್ವಕಪ್ನ ಸೂಪರ್ 8 ಹಂತದ ಪಂದ್ಯಗಳು ಇನ್ನೇನು ಕ್ಲೈಮ್ಯಾಕ್ಸ್ ಸ್ಟೇಜ್ನಲ್ಲಿವೆ. ಗ್ರೂಪ್ ಸ್ಟೇಜ್ನಲ್ಲಿ ಸೋಲನ್ನೇ ಕಾಣದೆ ಟೇಬಲ್ ಟಾಪರ್ಗಳೇ ಆಗಿದ್ದ ಗ್ರೂಪ್ 1 ಪಂದ್ಯಗಳಂತೂ ಸಿಕ್ಕಾಪಟ್ಟೆ ಎಂಟರ್ಟೈನಿಂಗ್ ಆಗಿವೆ. ಸದ್ಯಕ್ಕೆ ಟೂರ್ನಿಯಲ್ಲಿ ಎಲ್ಲಾ ಪಂದ್ಯಗಳನ್ನ ಗೆದ್ದಿರೋ ಸೌತ್ ಆಫ್ರಿಕಾ 4 ಅಂಕಗಳೊಂದಿಗೆ ಸೆಮಿಫೈನಲ್ ಟಿಕೆಟ್ ಬುಕ್ ಮಾಡ್ಕೊಂಡಿದೆ. ಬಟ್ ಈಗ 2ನೇ ಸ್ಥಾನಕ್ಕಾಗಿ ವೆಸ್ಟ್ ಇಂಡೀಸ್ ಮತ್ತು ಭಾರತ ಭಾನುವಾರ ಅಖಾಡಕ್ಕಿಳಿಯಲಿವೆ.
ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ಸೆಮಿಫೈನಲ್ ಗೆ ಕ್ವಾಲಿಫೈ!
ಸೂಪರ್ 8 ಆಟ ಇನ್ನೇನು ಅಂತಿಮಘಟ್ಟದಲ್ಲಿದ್ದು ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಮಿಫೈನಲ್ಗೆ ಸೆಲೆಕ್ಟ್ ಆಗಿವೆ. ಗ್ರೂಪ್ 1ನಲ್ಲಿ ಮೊದಲ ಎರಡೂ ಪಂದ್ಯಗಳನ್ನ ಗೆದ್ದಿರೋ ಹರಿಣಪಡೆ 4 ಅಂಕಗಳೊಂದಿಗೆ ಪ್ಲಸ್ 2.890 ನೆಟ್ ರನ್ರೇಟ್ನೊಂದಿಗೆ ಫಸ್ಟ್ ಪ್ಲೇಸ್ನಲ್ಲಿ ಸೆಲೆಕ್ಟ್ ಆಗಿದೆ. ಇನ್ನು ಗ್ರೂಪ್ 2ನಲ್ಲಿ 2 ಪಂದ್ಯ ಗೆದ್ದಿರೋ ಇಂಗ್ಲೆಂಡ್ ಕೂಡ ಸೆಮೀಸ್ ಟಿಕೆಟ್ ಗಿಟ್ಟಿಸಿಕೊಂಡಿದೆ. ನ್ಯೂಜಿಲೆಂಡ್ ಮತ್ತು ಪಾಕ್ ನಡುವೆ 2ನೇ ಟಿಕೆಟ್ಗೆ ಫೈಟ್ ಇದೆ. ಆಲ್ಮೋಸ್ಟ್ ನ್ಯೂಜಿಲೆಂಡ್ ಟಿಕೆಟ್ ಪಡ್ಕೊಳ್ಳಬಹುದು. ಇನ್ನು ಗ್ರೂಪ್ 1ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಈಗ ಡು ಆರ್ ಡೈ ಸ್ಟೇಜ್ನಲ್ಲಿದ್ದಾರೆ. ನೆಟ್ ರನ್ ರೇಟ್ ಅವಶ್ಯಕತೆನೇ ಇಲ್ಲ.
ಭಾರತ-ವಿಂಡೀಸ್ ಮಾಡು ಇಲ್ಲವೇ ಮಡಿ!
2 ಪಂದ್ಯಗಳನ್ನ ಗೆದ್ದಿರೋ ಸೌತ್ ಆಫ್ರಿಕಾಗೆ ಟಿಕೆಟ್ ಫಿಕ್ಸ್
2 ಪಂದ್ಯಗಳನ್ನ ಸೋತಿರೋ ಜಿಂಬಾಬ್ವೆಗಿಲ್ಲ ಸೆಮೀಸ್ ಟಿಕೆಟ್
ಭಾರತ ಮತ್ತು ವೆಸ್ಟ್ ಇಂಡೀಸ್ ಗೆ ಈಗ ಸಮಾನ ಅವಕಾಶ
ಇಬ್ಬರೂ ಒಂದು ಪಂದ್ಯ ಗೆದ್ದು ಒಂದು ಸೋತು 2 ಅಂಕ
ಭಾನುವಾರದ ಪಂದ್ಯದಲ್ಲಿ ಗೆದ್ದವರಿಗೆ ಸೆಮಿಫೈನಲ್ ಟಿಕೆಟ್
ಅಂಕಗಳ ಆಧಾರದ ಮೇಲೆ ಮುಂದಿನ ಸುತ್ತಿಗೆ ಆಯ್ಕೆ
ಸೋ ಈಗ ಯಾವ ನೆಟ್ರನ್ ರೇಟ್ ಬ್ಯಾಟಿಂಗ್ ಚೇಸಿಂಗ್ ಮಾರ್ಜಿನ್ ಏನೂ ಪ್ರಶ್ನೆನೇ ಬರಲ್ಲ. ಗೆದ್ರಾ ಸೀದಾ ಸೆಮೀಸ್ಗೆ ಎಂಟರ್ ಆಗ್ತಾರೆ. ಸೋತ್ರೆ ಟೂರ್ನಿಗೆ ಟಾಟಾ ಬೈ ಬೈ ಅಂತಾ ಗುಡ್ ಬೈ ಹೇಳಿ ನೆಕ್ಸ್ಟ್ ವಿಶ್ವಕಪ್ಗೆ ರೆಡಿ ಆಗ್ಬೇಕು. ಌಂಡ್ ಒನ್ ಮೋರ್ ಥಿಂಗ್ ಮಳೆ ಬಂದ್ರೆ ಅಥವಾ ಪಂದ್ಯ ಇನ್ಯಾವುದೋ ಕಾರಣಕ್ಕೆ ರದ್ದಾದ್ರೂ ವೆಸ್ಟ್ ಇಂಡೀಸ್ಗೆ ಸೆಮೀಸ್ ಟಿಕೆಟ್ ಸಿಗುತ್ತೆ. ಯಾಕಂದ್ರೆ ಭಾರತಕ್ಕಿಂತ ಅವ್ರ ನೆಟ್ ರನ್ ರೇಟ್ ಚೆನ್ನಾಗಿದೆ. ಹೀಗಾಗಿ ಭಾರತ ಮಸ್ಟ್ ಌಂಡ್ ಶುಡ್ ಗೆಲ್ಲಲೇಬೇಕು. ಹಾಗಂತ ವಿಂಡೀಸ್ ಪಡೆಯನ್ನ ಸೋಲಿಸೋದು ಕೂಡ ಸುಲಭ ಏನಿಲ್ಲ. ಯಾಕಂದ್ರೆ ಟಿ-20 ವಿಶ್ವಕಪ್ ಅಂತಾ ಬಂದಾಗ ಅವ್ರು ಭಾರತದ ಎದುರು ಕಂಪ್ಲೀಟ್ ಡಾಮಿನೇಟ್ ಮಾಡಿದ್ದಾರೆ. ವಿಶ್ವಕಪ್ನ 4 ಸಲ ಮುಖಾಮುಖಿ ಆಗಿದ್ದು ಮೂರು ಸಲ ಕೆರೆಬಿಯನ್ ಕಲಿಗಳೇ ಗೆದ್ದಿದ್ದಾರೆ. ಭಾರತ 1 ಸಲ ಅಷ್ಟೇ ವಿನ್ ಆಗಿದೆ. ದೈತ್ಯ ಆಟಗಾರರನ್ನೇ ಹೊಂದಿರೋ ವಿಂಡೀಸ್ ಪಡೆಯನ್ನ ಮೆಟ್ಟಿ ನಿಲ್ಲಲೇಬೇಕಿದೆ ಭಾರತ.

ನೋಡಿರಿ

