ದೇಶದಲ್ಲಿ ಕೈಕೊಟ್ಟ ವರುಣ – ರಾಷ್ಟ್ರ ರಾಜಧಾನಿಯಲ್ಲಿ 85 ವರ್ಷಗಳಲ್ಲೇ ಅತಿ ಹೆಚ್ಚು ತಾಪಮಾನ ದಾಖಲು!

ದೇಶದಲ್ಲಿ ಕೈಕೊಟ್ಟ ವರುಣ – ರಾಷ್ಟ್ರ ರಾಜಧಾನಿಯಲ್ಲಿ 85 ವರ್ಷಗಳಲ್ಲೇ ಅತಿ ಹೆಚ್ಚು ತಾಪಮಾನ ದಾಖಲು!

ನವದೆಹಲಿ: ಪ್ರತಿವರ್ಷ ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಿನಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಆದ್ರೆ ಈ ಭಾರಿ ಮಾತ್ರ ದೇಶದಲ್ಲಿ ಮಳೆಯ ಸುಳಿವೇ ಇಲ್ಲ. ಕಳೆದ ಮೂರು ವಾರಗಳಿಂದ ದೇಶದ ಹಲವೆಡೆ ಮಳೆ ಕೈ ಕೊಟ್ಟಿದ್ದರಿಂದ ಬಿಸಿಲಿಲ ಝಳ ಹೆಚ್ಚಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸೋಮವಾರ  40.1 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದ್ದು, ಕಳೆದ 85 ವರ್ಷಗಳಲ್ಲಿ ಸೆಪ್ಟೆಂಬರ್‍ನಲ್ಲಿ ವರದಿಯಾದ ಅತಿಹೆಚ್ಚಿನ ತಾಪಮಾನ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: ಕೇವಲ 5 ತಿಂಗಳಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆ – ಡ್ರಗ್ಸ್ ವಿರುದ್ಧ ಸಮರ ಸಾರಿದ್ದ ದಕ್ಷ ಅಧಿಕಾರಿ ಟ್ರಾನ್ಸ್‌ಫರ್

1938ರ ಸೆಪ್ಟೆಂಬರ್ 16 ರಂದು ದಾಖಲಾದ 40.6 ಡಿಗ್ರಿ ಸೆಲ್ಸಿಯಸ್ ಸೆಪ್ಟೆಂಬರ್ ನಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ ದಾಖಲಾಗಿತ್ತು. ಹೆಚ್ಚಿನ ತಾಪಮಾನಕ್ಕೆ ಮಳೆ  ಕೊರತೆ ಮತ್ತು ದುರ್ಬಲ ಮಾನ್ಸೂನ್ ಪರಿಸ್ಥಿತಿಗಳು ಕಾರಣವೆಂದು ಹವಾಮಾನ ಇಲಾಖೆ ಹೇಳಿದೆ. ದೆಹಲಿಯಲ್ಲಿ ಆಗಸ್ಟ್‍ನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿತ್ತು. ಆದರೆ ಈ ಬಾರಿ ಶೇ.61 ರಷ್ಟು ಮಳೆಯ ಕೊರತೆ ಕಂಡುಬಂದಿದ್ದು, ಸೆಪ್ಟೆಂಬರ್ 4 ರವರೆಗಿನ ತಿಂಗಳ ಸಾಮಾನ್ಯ ಮಳೆ 32.4 ಮಿ.ಮೀ ಆಗಿದ್ದರೆ ಸೆಪ್ಟೆಂಬರ್‍ನಲ್ಲಿ ಇಲ್ಲಿಯವರೆಗೆ ಮಳೆಯಿಲ್ಲ.

ಇನ್ನು ದೆಹಲಿಯಲ್ಲಿ 7 ದಿನಗಳಲ್ಲಿ ಸ್ವಲ್ಪಮಟ್ಟಿಗೆ ಮೋಡ ಕವಿದ ವಾತಾವರಣ ಕಂಡುಬರಲಿದೆ. ಈ ವಾರ ಗರಿಷ್ಠ ಮತ್ತು ಕನಿಷ್ಠ ತಾಪಮಾನ 37 ಮತ್ತು 27 ಡಿಗ್ರಿ ಸೆಲ್ಸಿಯಸ್‍ನಷ್ಟು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

suddiyaana