ಆಸ್ಟ್ರೇಲಿಯಾವನ್ನು 236 ರನ್ಗಳಿಗೆ ನಿಯಂತ್ರಿಸಿದ ಭಾರತ – ಬೌಲಿಂಗ್ನಲ್ಲಿ ರಾಣಾ, ಫೀಲ್ಡಿಂಗ್ನಲ್ಲಿ ಕೊಹ್ಲಿ, ಶ್ರೇಯಸ್ ಕಮಾಲ್

ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ಸ್ ಮೇಲುಗೈ ಸಾಧಿಸಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಹಿಡಿದ ಅದ್ಭುತ ಕ್ಯಾಚ್ ಸಂಚಲನ ಸೃಷ್ಟಿಸಿದೆ. ಜೊತೆಗೆ ಹರ್ಷಿತ್ ರಾಣಾ ಬೌಲಿಂಗ್ನಲ್ಲಿ ಕಮಾಲ್ ಮಾಡಿದ್ದಾರೆ.
ಇದನ್ನೂ ಓದಿ:ಆಸೀಸ್ ವಿರುದ್ಧ ಕಣಕ್ಕಿಳಿದ ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ – 3ನೇ ಪಂದ್ಯದಲ್ಲಾದರೂ ಪಾಠ ಕಲಿಯುತ್ತಾ ಭಾರತ?
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತು. ಆದರೆ ಮಧ್ಯದ ಓವರ್ಗಳಲ್ಲಿ ತಂಡದ ಇನ್ನಿಂಗ್ಸ್ ಕುಸಿದಿದೆ. ಟಾಸ್ ಗದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 46. 4 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 236 ರನ್ಗಳಿಸಿತು. ಮ್ಯಾಟ್ ರೆನ್ಶಾ 56, ಮ್ಯಾಥ್ಯೂ ಶಾರ್ಟ್ 30, ನಾಯಕ ಮಿಚೆಲ್ ಮಾರ್ಷ್ 41 ರನ್ಗಳಿಸಿದರು. ಭಾರತದ ಪರ ಹರ್ಷಿತ್ ರಾಣಾ 39ಕ್ಕೆ 4 ವಿಕೆಟ್ ಪಡೆದು ಮಿಂಚಿದರು. ಆಸ್ಟ್ರೇಲಿಯಾ ತಂಡ ಮೊದಲ ವಿಕೆಟ್ಗೆ 9.2 ಓವರ್ಗಳಲ್ಲಿ 61 ರನ್ಗಳ ಜೊತೆಯಾಟ ನಡೆಸಿತು. ಆದರೆ ಈ ವಿಕೆಟ್ ಬ್ರೇಕ್ ಆದ ನಂತರ ಆಸ್ಟ್ರೇಲಿಯಾದಿಂದ ಉತ್ತಮ ಜೊತೆಯಾಟ ಬರಲಿಲ್ಲ. ಹೆಡ್ 25 ಎಸೆತಗಳಲ್ಲಿ 29 ರನ್ಗಳಿಸಿ ಸಿರಾಜ್ ಬೌಲಿಂಗ್ನಲ್ಲಿ ಪ್ರಸಿಧ್ ಕೃಷ್ಣಗೆ ಕ್ಯಾಚ್ ನೀಡಿದರು. ನಂತರ ಮಿಚೆಲ್ ಮಾರ್ಷ್ 50 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 41 ರನ್ಗಳಿಸಿ ಔಟ್ ಆದರು. ಕಳೆದ ಪಂದ್ಯದಲ್ಲಿ 74 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮ್ಯಾಥ್ಯೂ ಶಾರ್ಟ್ ಇಂದು 41 ಎಸೆತಗಳಲ್ಲಿ ಕೇವಲ 30 ರನ್ಗಳಿಸಿ ಸಿರಾಜ್ಗೆ ಎರಡನೇ ಬಲಿಯಾದರು. ಈ ಹಂತದಲ್ಲಿ ಒಂದಾದ ಒಂದಾದ ರೆನ್ಶಾ ಹಾಗೂ ಅಲೆಕ್ಸ್ ಕ್ಯಾರಿ 59 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಕ್ಯಾರಿ 24 ರನ್ಗಳಿಸಿ ಹರ್ಷಿತ್ ರಾಣಾ ಬೌಲಿಂಗ್ನಲ್ಲಿ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿ ಔಟ್ ಆದರು.
ಇದೇ ವೇಳೆ ಬ್ಯಾಟಿಂಗ್ನಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ, ಫಿಲ್ಡಿಂಗ್ನಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಕಳೆದ ಪಂದ್ಯದಲ್ಲಿ ಆಸೀಸ್ ಗೆಲುವಿನ ಹೀರೋ ಎನಿಸಿಕೊಂಡಿದ್ದ ಮ್ಯಾಥ್ಯೂ ಶಾರ್ಟ್ ಅವರ ವಿಕೆಟ್ ಉರುಳಿಸಿದರು. ಆಸ್ಟ್ರೇಲಿಯಾದ ಇನ್ನಿಂಗ್ಸ್ನ 22 ನೇ ಓವರ್ನ ಮೂರನೇ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಮ್ಯಾಥ್ಯೂ ಶಾರ್ಟ್ ಅವರನ್ನು ಔಟ್ ಮಾಡಿದರು. ಶಾರ್ಟ್, ಸ್ಕ್ವೇರ್ ಲೆಗ್ ಕಡೆಗೆ ಸ್ವೀಪ್ ಶಾಟ್ ಆಡಿದರು. ಚೆಂಡು ವೇಗವಾಗಿ ಬೌಂಡರಿಯತ್ತ ಹೋಗುತ್ತಿತ್ತು. ಆದರೆ ಅಲ್ಲಿಯೇ ನಿಂತಿದ್ದ ವಿರಾಟ್ ಕೊಹ್ಲಿ ತಮ್ಮ ಎರಡೂ ಕೈಗಳಿಂದ ಚೆಂಡನ್ನು ಹಿಡಿದರು. ಚೆಂಡಿನ ವೇಗ ಎಷ್ಟು ಹೆಚ್ಚಾಗಿತ್ತೆಂದರೆ ವಿರಾಟ್ ಅದನ್ನು ಹಿಡಿದಾಗ ನೆಲಕ್ಕೆ ಬಿದ್ದರು. ಇದೀಗ ವಿರಾಟ್ ಹಿಡಿದ ಕ್ಯಾಚ್ನ ವಿಡಿಯೋ ಸೋಶಿಯಲ್ ಮೀಡಿಯಾದ ವೈರಲ್ ಆಗುತ್ತಿದೆ.
ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಕ್ಯಾಚ್ ಹಿಡಿಯುವ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಿಂದಾಗಿ ಶ್ರೇಯಸ್ ಮೈದಾನ ತೊರೆದು ಡಗೌಟ್ ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಇನ್ನಿಂಗ್ಸ್ನ 33.4 ನೇ ಓವರ್ನಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಅವರನ್ನು ಹರ್ಷಿತ್ ರಾಣಾ ಔಟ್ ಮಾಡಿದರು. 24 ರನ್ ಗಳಿಸಿ ಆಡುತ್ತಿದ್ದ ಕ್ಯಾರಿ ಹೈ ಶಾಟ್ ಹೊಡೆದರು. ಈ ವೇಳೆ ಶ್ರೇಯಸ್ ಅಯ್ಯರ್ ಕ್ಯಾಚ್ ಹಿಡಯುವ ಸಲುವಾಗಿ ಹಿಂದಕ್ಕೆ ಓಡಿದರು. ಕೊನೆಗೆ ಕ್ಯಾಚ್ ಹಿಡಿಯುವಲ್ಲೂ ಯಶಸ್ವಿಯಾದರು. ಆದರೆ ಕ್ಯಾಚ್ ಹಿಡಿಯುವ ಭರದಲ್ಲಿ ಗಾಯಗೊಂಡರು. ತೀವ್ರ ನೋವಿನಿಂದಾಗಿ ಅಯ್ಯರ್ ಮೈದಾನದಲ್ಲೇ ಬಿದ್ದು ನರಳಾಡುತ್ತಿದ್ದರು.

ನೋಡಿರಿ

