ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ವಾಪಸ್ ಕರೆಸಿಕೊಳ್ಳುತ್ತಾ ಭಾರತ? – ಲಕ್ಷದ್ವೀಪವನ್ನ ಅಭಿವೃದ್ಧಿಪಡಿಸಿದರೆ ಸಮಸ್ಯೆ ಪರಿಹಾರವಾಗುತ್ತಾ?

ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ವಾಪಸ್ ಕರೆಸಿಕೊಳ್ಳುತ್ತಾ ಭಾರತ? –  ಲಕ್ಷದ್ವೀಪವನ್ನ ಅಭಿವೃದ್ಧಿಪಡಿಸಿದರೆ ಸಮಸ್ಯೆ ಪರಿಹಾರವಾಗುತ್ತಾ?

ಮಾಲ್ಡೀವ್ಸ್​ನಲ್ಲಿ ಭಾರತದ ಒಂದಷ್ಟು ಸೈನಿಕರನ್ನ ನಿಯೋಜಿಸಲಾಗಿದೆ. 2009ರಲ್ಲಿ ಭಾರತ ಸರ್ಕಾರ ಮಾಲ್ಡೀವ್ಸ್​ಗೆ ಕೆಲ ಹೆಲಿಕಾಪ್ಟರ್​​ಗಳನ್ನ ನೀಡಿತ್ತು. ಜೊತೆಗೆ ವಿಮಾನಗಳನ್ನ ಕೂಡ ನೀಡಲಾಗಿತ್ತು. ಈ ಮಿಲಿಟರಿ ಈಕ್ವೆಪ್​ಮೆಂಟ್​​ಗಳನ್ನ ಮೇಂಟೇನ್​ ಮಾಡೋಕೆ ನಮ್ಮ ಸೈನಿಕರನ್ನ ಮಾಲ್ಡೀವ್ಸ್​​ನಲ್ಲಿ ನಿಯೋಜಿಸಲಾಗಿತ್ತು. ಅದು ಕೂಡ ಅಲ್ಲಿನ ಸರ್ಕಾರದ ಪರ್ಮಿಷನ್​​ನೊಂದಿಗೆ. ಹಾಗೆಯೇ ಮಾಲ್ಡೀವ್ಸ್ ಗಡಿಯನ್ನ ರಕ್ಷಿಸೋಕೆ ಅಂತಾ ಭಾರತವೇ ಅಲ್ಲಿನ ರೇಡಾರ್​​ನ್ನ ಕೂಡ ಅಳವಡಿಸಿತ್ತು. ಆ ರಾಡಾರ್​ಗಳನ್ನ 30 ವರ್ಷಗಳ ಕಾಲ ಬಳಸೋಕೆ ಭಾರತಕ್ಕೂ ಮಾಲ್ಡೀವ್ಸ್​​ ಸರ್ಕಾರದಿಂದ ಅನುಮತಿ ಸಿಕ್ಕಿತ್ತು. ಇವೆಲ್ಲವನ್ನೂ ನಮ್ಮ 75 ಮಂದಿ ಸೈನಿಕರು ನಿರ್ವಹಣೆ ಮಾಡ್ತಾ ಇದ್ದಾರೆ. ಆದ್ರೆ ಈ ಬಾರಿ ಚುನಾವಣಾ ಪ್ರಚಾರದ ವೇಳೆ ಮೊಹಮ್ಮದ್ ಮೊಯಿಜು ತಾನು ಅಧಿಕಾರಕ್ಕೆ ಬಂದ ಕೂಡಲೇ ಮೊದಲಿಗೆ ಭಾರತೀಯ ಸೈನಿಕರನ್ನ ಇಲ್ಲಿಂದ ಓಡಿಸ್ತೇವೆ ಅಂತಾ ಹೇಳುತ್ತಲೇ ಚುನಾವಣೆ ಗೆದ್ದಿದ್ರು. ಅಧ್ಯಕ್ಷರಾಗ್ತಾನೆ ನಿಮ್ಮ ಸೈನಿಕರನ್ನ ವಾಪಸ್ ಕರೆದುಕೊಳ್ಳಿ ಅಂತಾ ಭಾರತಕ್ಕೂ ನೋಟಿಸ್ ನೀಡಿದ್ರು. ನಮ್ಮ ಸೈನಿಕರನ್ನ ಮಾಲ್ಡೀವ್ಸ್​​ನಿಂದ ವಾಪಸ್ ಕರೆಸಿಕೊಳ್ತೇವೆ. ಅರ್ಜೆಂಟ್ ಮಾಡ್ಬೇಡಿ ಅಂತಾ ಭಾರತ ಸರ್ಕಾರ ಕೂಡ ಪ್ರತಿಕ್ರಿಯಿಸುತ್ತೆ. ಆದ್ರೆ ಇದುವರೆಗೂ ಮಾಲ್ಡೀವ್ಸ್​ನಿಂದ ಸೈನಿಕರನ್ನ ವಾಪಸ್ ಕರೆಸಿಕೊಂಡಿಲ್ಲ.

ಇದನ್ನೂ ಓದಿ: ಮಾಡಿದ್ದುಣ್ಣೋ ಮಾಲ್ಡೀವ್ಸ್ – ಭಾರತದ ಮುಂದೆ ಮಂಡಿಯೂರದೇ ವಿಧಿಯೇ ಇಲ್ಲ..!

ಮಾಲ್ಡೀವ್ಸ್​ ನಲ್ಲಂತೂ ಭಾರತ ವಿರೋಧಿ ನಡೆ ಹೆಚ್ಚಾಗ್ತಾನೆ ಇದೆ. ಈಗ ಅಧಿಕಾರಕ್ಕೇರಿರೋದು ಕೂಡ ಭಾರತ ವಿರೋಧಿ ಅಧ್ಯಕ್ಷನೇ. ಮುಂದಿನ ದಿನಗಳಲ್ಲಿ ಅಲ್ಲಿಂದ ನಮ್ಮ ಸೈನಿಕರನ್ನೂ ವಾಪಸ್ ಕರೆಸಿಕೊಳ್ಳಬೇಕಾಗಬಹುದು. ಆಗ ಹಿಂದೂ ಮಹಾಸಾಗರದ ಮೇಲಿನ ನಮ್ಮ ಹಿಡಿತ ಕೂಡ ಲೂಸ್ ಆಗುತ್ತೆ. ಚೀನಾ ಮಾಲ್ಡೀವ್ಸ್​ನಲ್ಲಿ ಮಿಲಿಟರಿ ಬೇಸ್​ನ್ನ ಸ್ಥಾಪಿಸಬಹುದು. ಬಳಿಕ ಹಿಂದೂ ಮಹಾಸಾಗರದಲ್ಲಿ ಭಾರತದ ಸಪ್ಲೈ ಚೈನ್​​ಗೆ ಚೀನಾ ಅಡ್ಡಿ ಮಾಡಬಹುದು. 2017ರಲ್ಲಿ ಚೀನಾದ ಮೂರು ಯುದ್ಧ ಹಡಗುಗಳು ಮಾಲ್ಡೀವ್ಸ್​ಗೆ ಹೋಗಿತ್ತು. 2018ರಲ್ಲಿ ಚೀನಾದ 11 ಯುದ್ಧ ಹಡಗುಗಳು ಹಿಂದೂ ಮಹಾಸಾಗರದ ಪೂರ್ವ ಭಾಗದಲ್ಲಿ ಕಾಣಿಸಿಕೊಂಡಿದ್ದವು. ಆಗ ಮಾಲ್ಡೀವ್ಸ್​​ನಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಎಮರ್ಜೆನ್ಸಿ ಹೇರಲಾಗಿತ್ತು. ಅದೇ ಹೊತ್ತಿಗೆ ಚೀನಾ ಯುದ್ಧ ಹಡಗುಗಳು ಮಾಲ್ಡೀವ್ಸ್ ಸಮೀಪ ನಿಯೋಜನೆಗೊಂಡಿದ್ವು. ಹೀಗಾಗಿ ಲಕ್ಷದ್ವೀಪವನ್ನ ಅಭಿವೃದ್ಧಿಪಡಿಸೋದು ಭಾರತಕ್ಕೆ ಅನಿವಾರ್ಯವಾಗಿದೆ.

 

Sulekha