“ವಿಶ್ವದ ಅತ್ಯುತ್ತಮ ಭಕ್ಷ್ಯ”ಗಳ ಪಟ್ಟಿಯಲ್ಲಿ ಭಾರತಕ್ಕೆ 5ನೇ ರ್‍ಯಾಂಕ್‌
ದೇಶದ ಉತ್ತಮ ರೆಸ್ಟಾರೆಂಟ್‌ಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡ ಬೆಂಗಳೂರಿನ "ಕರಾವಳಿ”

“ವಿಶ್ವದ ಅತ್ಯುತ್ತಮ ಭಕ್ಷ್ಯ”ಗಳ ಪಟ್ಟಿಯಲ್ಲಿ ಭಾರತಕ್ಕೆ 5ನೇ ರ್‍ಯಾಂಕ್‌ದೇಶದ ಉತ್ತಮ ರೆಸ್ಟಾರೆಂಟ್‌ಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡ ಬೆಂಗಳೂರಿನ "ಕರಾವಳಿ”

ನವದೆಹಲಿ: ಬಲ್ಗೇರಿಯಾದ ಟೇಸ್ಟ್‌ ಅಟ್ಲಾಸ್‌ ಸಂಸ್ಥೆ 2022ರ “ಅತ್ಯುತ್ತಮ ಭಕ್ಷ್ಯ” ಗಳ ಸಮೀಕ್ಷೆ ನಡೆಸಿದೆ. ಇದರ ರ್‍ಯಾಂಕಿಂಗ್‌  ಅನ್ನು ಬಿಡುಗಡೆ ಮಾಡಲಾಗಿದ್ದು,   2022ರ “ಅತ್ಯುತ್ತಮ ಭಕ್ಷ್ಯ’ಗಳ ಜಾಗತಿಕ ಪಟ್ಟಿಯಲ್ಲಿ ಭಾರತ 5ನೇ ಸ್ಥಾನ ಪಡೆದುಕೊಂಡಿದೆ.

ಈ ಸಮೀಕ್ಷೆಯಲ್ಲಿ ಬೆಂಗಳೂರಿನ ಕರಾವಳಿ, ಮುಂಬೈನ ಶ್ರೀ ಥೇಕರ್‌ ಭೋಜನಾಲಯ, ನವದೆಹಲಿಯ ಬುಖಾರಾ ಮತ್ತು ದಮ್‌ ಪಖ್ತ್, ಗುರುಗ್ರಾಮದ ಕಮೋರಿನ್‌ ಮತ್ತು ಇತರೆ 450 ರೆಸ್ಟಾರೆಂಟ್‌ಗಳನ್ನು ಭಾರತದಲ್ಲಿ ರುಚಿ ರುಚಿಯಾದ ಭೋಜನ ಲಭ್ಯವಿರುವಂಥ ಅತ್ಯುತ್ತಮ ರೆಸ್ಟಾರೆಂಟ್‌ಗಳು ಎಂದು ಹೆಸರಿಸಲಾಗಿದೆ.

ಇದನ್ನೂ ಓದಿ:3,000 ಮೀಟರ್ ಸಮುದ್ರದ ಆಳದಲ್ಲಿ “ಹಳದಿ ಇಟ್ಟಿಗೆ ರಸ್ತೆ”!

ಅತ್ಯುತ್ತಮ ಭಕ್ಷ್ಯ’ಗಳ ಪಟ್ಟಿಯಲ್ಲಿ ಇಟಲಿಯ ಭಕ್ಷ್ಯಗಳು ಮೊದಲ ಸ್ಥಾನ ಗಿಟ್ಟಿಸಿಕೊಂಡರೆ, ಗ್ರೀಸ್‌ ಮತ್ತು ಸ್ಪೇನ್‌ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ. ಆದರೆ, ಜಗತ್ತಿನಾದ್ಯಂತ ಜನಪ್ರಿಯವಾಗಿದ್ದರೂ ಚೈನೀಸ್‌ ಖಾದ್ಯಗಳು ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿವೆ.

ಆಹಾರ ಸಾಮಗ್ರಿಗಳು, ಖಾದ್ಯಗಳು ಮತ್ತು ಪಾನೀಯಗಳು ಹೀಗೆ 3 ವಿಭಾಗಗಳಲ್ಲಿ “ಅತ್ಯುತ್ತಮ’ವಾದುದನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದರಲ್ಲಿ ಭಾರತಕ್ಕೆ 4.54 ಅಂಕಗಳು ದೊರೆತಿದ್ದು, “ಗರಂ ಮಸಾಲ, ಮಲಾಯ್‌, ತುಪ್ಪ, ಬಟರ್‌ ಗಾರ್ಲಿಕ್‌ ನಾನ್‌, ಕೀಮಾ’ಗಳು ಅತಿ ಹೆಚ್ಚು ಅಂಕಗಳನ್ನು ಪಡೆದಿವೆ. ಭಾರತದ ಒಟ್ಟು 460 ಆಹಾರ ವಸ್ತುಗಳು ಪಟ್ಟಿಯಲ್ಲಿದ್ದವು.

suddiyaana