ಜಾಗತಿಕ ಹಸಿವು ಸೂಚ್ಯಂಕದಲ್ಲಿ111 ನೇ ಸ್ಥಾನಕ್ಕೆ ಕುಸಿದ ಭಾರತ – ಸಮೀಕ್ಷೆಯೇ ತಪ್ಪು ಎಂದ ಕೇಂದ್ರ ಸರ್ಕಾರ

ಜಾಗತಿಕ ಹಸಿವು ಸೂಚ್ಯಂಕದಲ್ಲಿ111 ನೇ ಸ್ಥಾನಕ್ಕೆ ಕುಸಿದ ಭಾರತ – ಸಮೀಕ್ಷೆಯೇ ತಪ್ಪು ಎಂದ ಕೇಂದ್ರ ಸರ್ಕಾರ

ನವದೆಹಲಿ: ಭಾರತದಲ್ಲಿ ಮಕ್ಕಳ ಅಪೌಷ್ಠಿಕತೆ ಕಂಡುಬರುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತದ ಸ್ಥಾನ ತೀರಾ ಕುಸಿತ ಕಾಣುತ್ತಿದೆ. ಇದೀಗ 2023 ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ಪಟ್ಟಿ ಪ್ರಕಟವಾಗಿದ್ದು, 125 ದೇಶಗಳ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 111 ನೇ ಸ್ಥಾನಕ್ಕೆ ಇಳಿದಿದೆ. ಎಂದು ವರದಿಯಾಗಿದೆ.

125 ದೇಶಗಳ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 111 ನೇ ಸ್ಥಾನಕ್ಕೆ ಇಳಿದಿದೆ. ಮಕ್ಕಳ ಅಪೌಷ್ಟಿಕತೆಯೂ ಭಾರತದಲ್ಲಿ ಕಂಡುಬರುತ್ತಿದೆ ಮತ್ತು ಇದು 18.7 ಪ್ರತಿಶತದಷ್ಟಿದೆ. ಕಳೆದ ವರ್ಷ ಭಾರತವು ಈ ಸೂಚ್ಯಂಕದಲ್ಲಿ 107 ನೇ ಸ್ಥಾನದಲ್ಲಿತ್ತು. ಬಿಡುಗಡೆಯಾದ ಈ ಜಾಗತಿಕ ಹಸಿವು ಸೂಚ್ಯಂಕದಲ್ಲಿ, ಭಾರತದ ಸ್ಕೋರ್ 28.7 ಪ್ರತಿಶತವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪಾಕ್ ವಿರುದ್ಧ ಕಣಕ್ಕಿಳಿಯಲು ಶುಭ್‌ಮನ್ ಗಿಲ್ ಪ್ರ್ಯಾಕ್ಟೀಸ್ – ಇಶಾನ್ ಕಿಶನ್ ಮತ್ತು ಗಿಲ್ ನಡುವೆ ಆಡೋದ್ಯಾರು?

ಇನ್ನು ನೆರೆಯ ದೇಶಗಳಾದ ಪಾಕಿಸ್ತಾನ(102ನೇ ಸ್ಥಾನ), ಬಾಂಗ್ಲಾದೇಶ(81), ನೇಪಾಳ(69) ಹಾಗೂ ಶ್ರೀಲಂಕಾ(60) ಭಾರತಕ್ಕಿಂತಲೂ ಉತ್ತಮ ಸ್ಥಾನದಲ್ಲಿವೆ.

ಇದೀಗ ಗ್ಲೋಬಲ್ ಹಂಗರ್ ಇಂಡೆಕ್ಸ್ ವರದಿಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಇದು ದೇಶದ ನಿಜವಾದ ಸ್ಥಾನವನ್ನು ಪ್ರತಿಬಿಂಬಿಸುತ್ತಿಲ್ಲ. “ಹಸಿವಿನ” ಸಮೀಕ್ಷೆಯೇ ದೋಷಯುಕ್ತ ಎಂದು ಹೇಳಿದೆ. ಹಸಿವು ಸೂಚ್ಯಂಕವು “ಗಂಭೀರವಾದ ಕ್ರಮಶಾಸ್ತ್ರೀಯ ಸಮಸ್ಯೆಗಳಿಂದ ಬಳಲುತ್ತಿದೆ ಮತ್ತು ದುರುದ್ದೇಶಪೂರಿತ ಉದ್ದೇಶವನ್ನು ಹೊಂದಿದೆ” ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿದೆ.

ಸೂಚ್ಯಂಕದ ಸಮೀಕ್ಷೆಯೇ ತಪ್ಪಾಗಿದೆ ಮತ್ತು ಅದು ಗಂಭೀರ ಕ್ರಮಶಾಸ್ತ್ರೀಯ ಸಮಸ್ಯೆಗಳಿಂದ ಬಳಲುತ್ತಿದೆ. ಸೂಚ್ಯಂಕದ ಲೆಕ್ಕಾಚಾರ ಹಾಕಲು ಬಳಸಿರುವ ನಾಲ್ಕು ಸೂಚಕಗಳ ಪೈಕಿ ಮೂರು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ ಹಾಗೂ ಅದು ಇಡೀ ಜನಸಂಖ್ಯೆಯ ಪ್ರಾತಿನಿಧಿತ್ವ ಆಗಲು ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Shwetha M