ಮೂರನೇ ಟೆಸ್ಟ್ ದಿಢೀರ್ STOP ಆಗಿದ್ಯಾಕೆ – ಒಂದೇ ಒಂದು ರನ್ಗಾಗಿ ನಿದ್ದೆಗೆಟ್ಟ ರೂಟ್

ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್ಮನ್ ಗಿಲ್ ಟಾಸ್ ಸೋತು ಬೌಲಿಂಗ್ ಗೆ ಬಂದಿದ್ದೇನೋ ನಿಜ. ಟಾಸ್ ಸೋತಿದ್ದೇ ತಪ್ಪಾಯ್ತೇನೋ ಅಂತಾ ಮೊದಲ ದಿನ ಅನ್ನಿಸಿದ್ದಂತೂ ಸುಳ್ಳಲ್ಲ. ಆದರೆ, ಟೀಮ್ ಇಂಡಿಯಾ ಬೌಲರ್ಸ್ ಬೆಂಕಿ ಬೌಲಿಂಗ್ ಮಾಡಿದ್ರು. ಇದರ ಜೊತೆಗೆ ಮೊದಲ ದಿನದ ಆಟಕ್ಕೆ ಇನ್ನೂ ಕೆಲ ಓವರ್ಗಳು ಬಾಕಿಯಿತ್ತು. ಆದರೆ, ಪಂದ್ಯವನ್ನು ಸಡನ್ ಆಗಿ ಸ್ಟಾಪ್ ಮಾಡಲಾಯ್ತು. ಜೋ ರೂಟ್ಗೆ ಬೇಕಿದ್ದಿದ್ದು ಒಂದೇ ಒಂದು ರನ್.. ಶತಕ ಮುಗಿಸಿಯೇಬಿಡ್ತಿದ್ರು. ಹೀಗಿರುವಾಗಲೇ ಮ್ಯಾಚ್ ಸ್ಥಗಿತಗೊಂಡಿತ್ತು. ಅದೇಕೆ ಅನ್ನೋ ವರದಿ ಇಲ್ಲಿದೆ.
ಇದನ್ನೂ ಓದಿ: ಬುಮ್ರಾ ಎಂಟ್ರಿ.. ದುಬಾರಿ ಕೃಷ್ಣ ಔಟ್ – ಕರುಣ್ಗೆ ಸಿಕ್ಕಿದೆ ಗೋಲ್ಡನ್ ಚಾನ್ಸ್
ಮೂರನೇ ಟೆಸ್ಟ್ನ ಮೊದಲ ದಿನ ಇಂಗ್ಲೆಂಡ್ ಕ್ಯಾಪ್ಟನ್ ಟಾಸ್ ಗೆದ್ದು ಬ್ಯಾಟಿಂಗ್ ಸೆಲೆಕ್ಟ್ ಮಾಡ್ಕೊಂಡ್ರು. ವೆದರ್ ಕೂಡಾ ಬೊಂಬಾಟ್ ಆಗಿತ್ತು. ಮಳೆಯೂ ಇರಲಿಲ್ಲ, ಗಾಳಿಯೂ ಇರಲಿಲ್ಲ. ಕೆಟ್ಟ ಬಿಸಿಲಂತೂ ಇರಲೇ ಇರಲಿಲ್ಲ. ಕೂಲ್ ಆಗಿಯೇ ಟೆಸ್ಟ್ ಮ್ಯಾಚ್ ನಡೀತಾ ಇತ್ತು. ಕೂಲ್ ಅಂತಾ ಯಾಕ್ ಹೇಳ್ದೆ ಗೊತ್ತಾ.. ನಮ್ಮ ಟೀಮ್ ಇಂಡಿಯಾ ಬೌಲರ್ಗಳು ಕೂಲ್ ಆಗಿಯೇ ಬೌಲಿಂಗ್ ನಡೆಸಿ, ಆಂಗ್ಲರ ಅಹಂಕಾರಕ್ಕೆ ಟೈಮ್ ನೋಡಿ ಪೆಟ್ಟು ಕೊಡ್ತಿದ್ರು. ಸ್ಟಾರ್ಟಿಂಗ್ಗೆ ಆಕಾಶ್ದೀಪ್, ಬುಮ್ರಾ ಬೌಲಿಂಗ್ ನಲ್ಲಿ ಜಾಕ್ ಕ್ರಾವ್ಲಿ, ಬೆನ್ ಡಕೆಟ್ ಎಚ್ಚರಿಕೆಯಲ್ಲೇ ಬ್ಯಾಟಿಂಗ್ ಮಾಡಿದ್ರು. ಮೊದಲ ವಿಕೆಟ್ಗೆ 43 ರನ್ಗಳ ಜೊತೆಯಾಟವಾಡಿ ಬಿಗ್ ಸ್ಕೋರ್ ಕಲೆ ಹಾಕೋ ಲೆಕ್ಕಾಚಾರದಲ್ಲಿದ್ರು. 14ನೇ ಓವರ್ನಲ್ಲಿ ಬೌಲಿಂಗ್ಗೆ ಬಂದ ನಿತೀಶ್ ಕುಮಾರ್ ರೆಡ್ಡಿ ಇಂಗ್ಲೆಂಡ್ ಆಟಗಾರರಿಗೆ ಡಬಲ್ ಶಾಕ್ ಕೊಟ್ರು. ಒಂದೇ ಓವರ್ನಲ್ಲಿ ಬೆನ್ ಡಕೆಟ್, ಜಾಕ್ ಕ್ರಾವ್ಲಿ ವಿಕೆಟ್ ಕಬಳಿಸಿದರು.
ನಂತರ ಕ್ರೀಸ್ನಲ್ಲಿ ಜೊತೆಯಾದ ಓಲಿ ಪೋಪ್, ಜೋ ರೂಟ್ ತಂಡಕ್ಕೆ ಆಸರೆಯಾದ್ರು. ತಾಳ್ಮೆಯ ಆಟವಾಡಿದ ಈ ಜೋಡಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದರು. ಮೊದಲ ಸೆಷನ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ 83 ರನ್ಗಳಿಸಿತು. ಅಗ್ರೆಸ್ಸಿವ್ ಆಟ ಬಿಟ್ಟು ತಾಳ್ಮೆಯ ಆಟವಾಡಿದ ಜೋ ರೂಟ್ 102 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ರು. 3ನೇ ವಿಕೆಟ್ಗೆ ಪೋಪ್ ಹಾಗೂ ರೂಟ್ ಜೋಡಿ ಶತಕದ ಜೊತೆಯಾಟವಾಡಿತು. 2ನೇ ಸೆಷನ್ನಲ್ಲಿ ವಿಕೆಟ್ ಬಿಟ್ಟುಕೊಡದ ಇಂಗ್ಲೆಂಡ್ 24 ಓವರ್ಗಳಲ್ಲಿ 70 ರನ್ಗಳಿಸಿತು. ಟೀ ಬ್ರೇಕ್ ವೇಳೆಗೆ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 153 ರನ್ಗಳಿಸಿತು.
3ನೇ ಸೆಷನ್ನ ಮೊದಲ ಎಸೆತದಲ್ಲೇ ಟೀಮ್ ಇಂಡಿಯಾಗೆ ಸಕ್ಸಸ್ ಸಿಗ್ತು. ಒಲಿ ಪೋಪ್ ಆಟಕ್ಕೆ ರವೀಂದ್ರ ಜಡೇಜಾ ಬ್ರೇಕ್ ಹಾಕಿದ್ರು. 11 ರನ್ಗಳಿಸಿದ್ದ ಬ್ರೂಕ್, ಬೂಮ್ರಾ ಬೌಲಿಂಗ್ನಲ್ಲಿ ಕ್ಲೀನ್ಬೋಲ್ಡ್ ಆಗಿ ನಿರ್ಗಮಿಸಿದ್ರು. ನಂತರ ಜೋ ರೂಟ್, ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಸಾಲಿಡ್ ಪಾರ್ಟನರ್ಶಿಪ್ ಬಿಲ್ಡ್ ಮಾಡಿದ್ರು. 191 ಎಸೆತಗಳನ್ನ ಎದುರಿಸಿದ ರೂಟ್, ಆಕರ್ಷಕ 9 ಬೌಂಡರಿ ಸಹಿತ ಅಜೇಯ 99 ರನ್ಗಳಿಸಿದ್ರು. ಅಲ್ಲೇ ಜೋ ರೂಟ್ ನಿದ್ದೆಗೆಟ್ಟಿದ್ದು. ಯಾಕೆಂದ್ರೆ, ಸಡನ್ ಆಗಿ ಪಂದ್ಯವೇ ಸ್ಟಾಪ್ ಆಗಿತ್ತು.
ಇನ್ನೇನು ಜೋ ರೂಟ್ ಸೆಂಚೂರಿ ಸಿಡಿಸ್ತಾರೆ ಅನ್ನೋವಾಗ್ಲೇ ಮ್ಯಾಚ್ ಸ್ಟಾಪ್ ಆಯ್ತು. ಬಹಳಷ್ಟು ಲೇಡಿಬಗ್ಗಳು ಮೈದಾನಕ್ಕೆ ಬಂದವು. ಈ ಕೀಟಗಳಿಂದ ಜಸ್ಪ್ರೀತ್ ಬುಮ್ರಾ ಸಿಕ್ಕಾಪಟ್ಟೆ ಡಿಸ್ಟರ್ಬ್ ಆದ್ರು. ಕೀಟಗಳ ಕಾರಣದಿಂದಾಗಿ ಸ್ಟೋಕ್ಸ್ ಕೂಡ ತೊಂದರೆ ಅನುಭವಿಸಿದರು. ಕೊನೆಗೂ ಅಂಪೈರ್ಗಳೊಂದಿಗೆ ಚರ್ಚಿಸಿ ಪಂದ್ಯ ಸ್ಥಗಿತಗೊಳಿಸಲಾಯ್ತು.
ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್ 251ಗಳಿಸಿದೆ. ಸೆಕೆಂಡ್ ಡೇ ಎರಡೂ ಟೀಮ್ಗೂ ಇಂಪಾರ್ಟೆಂಟ್. ಇಂಗ್ಲೆಂಡ್ ತಂಡವನ್ನ ಆದಷ್ಟು 300ರ ಗಡಿಯಲ್ಲಿ ಕಟ್ಟಿ ಹಾಕಿದ್ರೆ ಟೀಮ್ ಇಂಡಿಯಾಗೆ ಅಡ್ವಾಂಟೇಜ್ ಸಿಗಲಿದೆ. ಹೇಗೂ ಕೆಲ ಓವರ್ಗಳ ನಂತರ ನ್ಯೂ ಬಾಲ್ ಟೀಮ್ ಇಂಡಿಯಾ ಬೌಲರ್ಗಳ ಕೈಗೆ ಸಿಗಲಿದೆ.

ನೋಡಿರಿ

