ಚಕ್ರವ್ಯೂಹ ಹೆಣೆದ ಟೀಂ ಇಂಡಿಯಾ – ಪ್ಲೇಯಿಂಗ್ 11ನಲ್ಲಿ ಬಿಗ್ ಟ್ವಿಸ್ಟ್

ಚಕ್ರವ್ಯೂಹ ಹೆಣೆದ ಟೀಂ ಇಂಡಿಯಾ – ಪ್ಲೇಯಿಂಗ್ 11ನಲ್ಲಿ ಬಿಗ್ ಟ್ವಿಸ್ಟ್

ಭಾರತ ಮತ್ತು ಇಂಗ್ಲೆಂಡ್ ಎರಡೂ ರಾಷ್ಟ್ರಗಳಿಗೂ ಈ ಏಕದಿನ ಸರಣಿ ತುಂಬಾನೇ ಇಂಪಾರ್ಟೆಂಟ್ ಆಗಿದೆ. ಯಾಕಂದ್ರೆ ಫೆಬ್ರವರಿ 19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಟೂರ್ನಿ ಕೂಡ ಏಕದಿನ ಮಾದರಿಯಲ್ಲಿ ನಡೆಯುತ್ತಾ ಇರೋದ್ರಿಂದ ಇದೊಂಥರಾ ಮುಂದಿನ ಪರ್ಫಾಮೆನ್ಸ್​ಗೆ ದಿಕ್ಸೂಚಿ ಅಂದ್ರೂ ಕೂಡ ತಪ್ಪಿಲ್ಲ. ಅದ್ರಲ್ಲೂ ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಸರಣಿ ಎನ್ನುವಂತಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋತ ಬಹುತೇಕ ಆಟಗಾರರೇ ಇಲ್ಲೂ ಇರೋದ್ರಿಂದ ಅವ್ರ ಪ್ರದರ್ಶನವೇ ಪ್ರಶ್ನೆ ಮೂಡಿಸಿದೆ. ಹಾಗೇ ಚಾಂಪಿಯನ್ಸ್ ಟ್ರೋಫಿಗೆ ಯಾವ ರೀತಿಯ ತಂಡವನ್ನ ಇಳಿಸಿದ್ರೆ ಬೆಟರ್ ಪರ್ಫಾಮೆನ್ಸ್ ಕೊಡ್ಬೋದು ಅನ್ನೋದಕ್ಕೂ ಒಂದು ಐಡಿಯಾ ಸಿಗಲಿದೆ.

ಇದನ್ನೂ ಓದಿ : ಬುಮ್ರಾ ಬದಲಿಗೆ ಹರ್ಷಿತ್ ರಾಣಾ? – ಶಿಷ್ಯನ ಮೇಲೆ ಗಂಭೀರ್ ಹುಚ್ಚು ಪ್ರೀತಿ?

ಟೀಂ ಇಂಡಿಯಾದ ಸೀನಿಯರ್ಸ್ ತಂಡದಲ್ಲಿ ಬ್ಯಾಟಿಂಗ್ ಲೈನಪ್ ಕಂಪ್ಲೀಟ್ ಹಳ್ಳ ಹಿಡಿದಿತ್ತು. ಯಾರೊಬ್ರೂ ಕೂಡ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಕೊಡ್ತಿಲ್ಲ. ಈಗ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಹೇಗೆ ಆಡ್ತಾರೆ ಅದೇ ಫಾರ್ಮ್ ಚಾಂಪಿಯನ್ಸ್ ಟ್ರೋಫಿಗೂ ಕಂಟಿನ್ಯೂ ಆಗುತ್ತೆ ಅನ್ನೋದು ಬಿಸಿಸಿಐ ಲೆಕ್ಕಾಚಾರ. ಅದ್ರಂತೆಯೇ ಆಟಗಾರರನ್ನ ಕಣಕ್ಕಿಳಿಸಲಾಗುತ್ತೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭ ಮಾಡ್ಬೋದು. ಜೈಸ್ವಾಲ್​ಗೆ ಇದು ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಿದ್ದು, ಅವಕಾಶ ಸಿಗದೇ ಇದ್ರೆ ಶುಭ್​ಮನ್ ಗಿಲ್ ಓಪನರ್ ಆಗಿ ಆಡಲಿದ್ದಾರೆ. ಜೈಸ್ವಾಲ್ ಬಂದ್ರೆ ಗಿಲ್ ಮೂರನೇ ಸ್ಥಾನಕ್ಕೆ ಬರಲಿದ್ದಾರೆ. ಇನ್ನು ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಬರ್ತಾರೆ. ಆ ನಂತ್ರದಲ್ಲಿ ಕೆಎಲ್ ರಾಹುಲ್‌ ಗೆ ಚಾನ್ಸ್ ಸಿಗ್ಬೋದು. ಬಟ್ ಶ್ರೇಯಸ್ ಅಯ್ಯರ್ ದು ಡೌಟ್ ಇದೆ. ಅಯ್ಯರ್ ಹಾಗೂ ಜೈಸ್ವಾಲ್ ಇಬ್ಬರಲ್ಲಿ ಒಬ್ಬರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಸ ಸಿಗ್ಬೋದು. ಇನ್ನು ವಿಕೆಟ್‌ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇನ್ನು ಟೀಮ್ ಇಂಡಿಯಾದಲ್ಲಿ ಆಲ್‌ರೌಂಡರ್‌ಗಳ ದಂಡೇ ಇದೆ. ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್‌ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಬಹುದು. ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್‌ ಶಮಿ ಹಾಗೂ ಕುಲ್‌ದೀಪ್‌ ಯಾದವ್ ಜೊತೆಗೆ ಅರ್ಷದೀಪ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಇದೆಲ್ಲದ್ರ ನಡುವೆ ವರುಣ್ ಚಕ್ರವರ್ತಿ ಕೂಡ ಟೀಂ ಸೇರಿಕೊಂಡಿದ್ದಾರೆ. ಸೋಮವಾರ ತಂಡವನ್ನ ಕೂಡಿಕೊಂಡಿದ್ದು ಪ್ರಾಕ್ಟೀಸ್ ಕೂಡ ನಡೆಸ್ತಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಈ ಸರಣಿಯಲ್ಲಿ ಹೆಚ್ಚಿನ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ. ಅದ್ರಲ್ಲೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಟೀಕೆಗಳು ಸಹ ಕೇಳಿ ಬಂದಿದ್ದವು. ವಿರಾಟ್ ಲಯವನ್ನು ಕಂಡುಕೊಳ್ಳಲು ಭಾರತದಲ್ಲಿ ದೇಶೀಯ ಟೂರ್ನಿಗಳನ್ನು ಆಡಿದ್ದಾರೆ. ಆದರೆ ಈ ವೇಳೆಯೂ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಬಟ್ ಇಂಗ್ಲೆಂಡ್ ವಿರುದ್ಧ ಅಬ್ಬರಿಸಬಹುದು ಎಂಬ ನಿರೀಕ್ಷೆ ಇದೆ. ವಿರಾಟ್ ಕೊಹ್ಲಿ ಅಂಕಿ ಅಂಶಗಳು ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ ಚೆನ್ನಾಗಿದೆ. ಇಂಗ್ಲೆಂಡ್ ವಿರುದ್ಧ ಕೊಹ್ಲಿ ಭಾರತದಲ್ಲಿ ಒಟ್ಟು 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರ ಸರಾಸರಿ 49 ಆಗಿದ್ದು, 747 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಹಾಗೂ 2 ಶತಕಗಳು ಸೇರಿವೆ. ಫೆಬ್ರವರಿ 19 ರಿಂದ ಆರಂಭವಾಗುವ ಚಾಂಪಿಯನ್ಸ್‌ ಟ್ರೋಫಿಗೂ ವಿರಾಟ್ ಕೊಹ್ಲಿ ಫಾರ್ಮ್‌ಗೆ ಬರೋದು ಮುಖ್ಯವಾಗಿದೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರೆ, ತಂಡದಲ್ಲಿ ಅವರ ಸ್ಥಾನ ಮುಂದುವರೆಯಲಿದೆ. ಇಲ್ಲದೆ ಇದ್ದಲ್ಲಿ ಅವರ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ.

ಇನ್ನು ಮೊದಲ ಏಕದಿನ ಪಂದ್ಯ ನಡೆಯಲಿರುವ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಬಗ್ಗೆ ನೋಡೋದದ್ರೆ ಇಲ್ಲಿ ಈವರೆಗೂ  9 ಏಕದಿನ ಪಂದ್ಯಗಳು ನಡೆದಿವೆ. ಕೊನೆಯ ಪಂದ್ಯ ಮಾರ್ಚ್ 2019 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದಿತ್ತು. ಮೊದಲು ಬ್ಯಾಟ್ ಮಾಡಿದ ತಂಡಗಳು 3 ಪಂದ್ಯಗಳನ್ನು ಗೆದ್ದರೆ, ಚೇಸಿಂಗ್ ಮಾಡಿದ ತಂಡಗಳು 6 ಪಂದ್ಯಗಳನ್ನು ಗೆದ್ದುಕೊಂಡಿವೆ. ಈ ಪಿಚ್ ಸ್ಪಿನ್ನರ್‌ಗಳ ಜೊತೆಗೆ ಬ್ಯಾಟಿಂಗ್​ಗೂ ಪ್ಲಸ್ ಆಗಲಿದೆ. ಈ ಮೈದಾನದಲ್ಲಿ ಅತಿ ಹೆಚ್ಚು ಚೇಸ್ ಮಾಡಿದ ಮೊತ್ತ 351 ಆಗಿದೆ. 2013ರಲ್ಲಿ ಆಸೀಸ್ ವಿರುದ್ಧ ಭಾರತ ಗಳಿಸಿದ ಗರಿಷ್ಠ ಮೊತ್ತವಾಗಿದೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳು ನಾಗ್ಪುರದಲ್ಲಿ ಮೊದಲ ಬಾರಿಗೆ ಪರಸ್ಪರ ಮುಖಾಮುಖಿಯಾಗಲಿವೆ. ಒಟ್ಟಾರೆಯಾಗಿ, ಉಭಯ ತಂಡಗಳು ಈವರೆಗೂ 107 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಮೆನ್ ಇನ್ ಬ್ಲೂ ತಂಡವು 58 ಪಂದ್ಯಗಳಲ್ಲಿ ಜಯಗಳಿಸಿ ಮುನ್ನಡೆ ಸಾಧಿಸಿದೆ. ಕ್ರಿಕೆಟ್ ಜನಕರು 44 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.

Shantha Kumari

Leave a Reply

Your email address will not be published. Required fields are marked *