ಭಾನುವಾರ ಇಂಡೋ-ಪಾಕ್ ಫೈಟ್ – ಶೇಕ್ ಹ್ಯಾಂಡ್ ಮಾಡ್ತಾರಾ?
PAKನ ಯಾವ ಷರತ್ತಿಗಿಲ್ಲ ಕಿಮ್ಮತ್ತು?

ಭಾನುವಾರ ಇಂಡೋ-ಪಾಕ್ ಫೈಟ್ – ಶೇಕ್ ಹ್ಯಾಂಡ್ ಮಾಡ್ತಾರಾ?PAKನ ಯಾವ ಷರತ್ತಿಗಿಲ್ಲ ಕಿಮ್ಮತ್ತು?

ಟಿ-20 ವಿಶ್ವಕಪ್​ ಸ್ಟಾರ್ಟ್ ಆಗಿ 4 ದಿನಗಳಾಗಿದ್ರೂ ಅಸಲಿ ಕಿಕ್ ಈಗ ಶುರುವಾಗಿದೆ. ಯಾಕಂದ್ರೆ ಭಾನುವಾರ ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ನಡೆಯೋದು ಕನ್ಫರ್ಮ್ ಆಗಿದೆ. ನಿನ್ನೆ, ಮೊನ್ನೆವರೆಗೂ ನಾಟಕ ಮಾಡ್ಕೊಂಡಿದ್ದ ಪಾಕಿಸ್ತಾನ ದುಡ್ಡು ಕೊಡ್ತೀವಿ ಅಂತಿದ್ದಂತೆ ಯುಟರ್ನ್ ಹೊಡೆದಿದೆ.

ಇದನ್ನೂ ಓದಿ : ವಿಶ್ವಕಪ್ ನಲ್ಲಿ DSP ಚಾರ್ಜ್ – ಲಕ್ಕಿ ಸ್ಟಾರ್ ಮೊಹಮ್ಮದ್ ಸಿರಾಜ್

ಫೆಬ್ರವರಿ 15.. ಅಂದ್ರೆ ಇದೇ ಭಾನುವಾರ ಇಂಡೋ-ಪಾಕ್ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯೋದು ಕನ್ಫರ್ಮ್ ಆಗಿದೆ. ಇಷ್ಟು ದಿನ ಪಾಕಿಸ್ತಾನ ಭಾರತದ ವಿರುದ್ಧದ ಪಂದ್ಯವನ್ನ ಬಾಯ್ಕಾಟ್ ಅಂದಿದ್ದ ಕಾರಣ ಪಂದ್ಯ ನಡೆಯುತ್ತೋ ಇಲ್ವೋ ಅನ್ನೋ ಡೌಟಿತ್ತು. ಆದ್ರೆ ಕೊನೆಗೂ ತಾನಾಡಿದ್ದೆಲ್ಲಾ ಡ್ರಾಮಾ ಅಂತಾ ಪಾಕಿಸ್ತಾನ ಉಲ್ಟಾ ಹೊಡೆದಿದೆ. ಹೀಗಾಗಿ ಅಂದುಕೊಂಡಂತೆಯೇ ಶ್ರೀಲಂಕಾದ ಕೊಲಂಬೊದಲ್ಲಿ ರಣರೋಚಕ ಪಂದ್ಯಕ್ಕೆ ಅಖಾಡ ಸಿದ್ಧವಾಗ್ತಿದೆ. ಯಾವಾಗ ಭಾರತ-ಪಾಕ್ ಪಂದ್ಯ ಕನ್ಫರ್ಮ್ ಆಯ್ತೋ ಲಂಕಾದ ಫ್ಲೈಟ್​ಗಳ ಟಿಕೆಟ್ ಒನ್ ಟು ಡಬಲ್ ಆಗಿದೆ. ಯಾಕಂದ್ರೆ ಈ ಪಂದ್ಯ ನೋಡೋಕೆ ಅಭಿಮಾನಿಗಳ ಫ್ಲೈಟ್ ಬುಕ್ಕಿಂಗ್ ಜಾಸ್ತಿಯಾಗ್ತಿದೆ.

ಭಾರತದ ವಿರುದ್ಧ ಮತ್ತೆ ಸೋಲೋಕೆ ರೆಡಿಯಾದ ಪಾಕಿಸ್ತಾನ!

ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿದ್ದಕ್ಕೆ ನಾವೂ ಕೂಡ ಭಾರತದ ವಿರುದ್ಧ ಪಂದ್ಯವನ್ನ ಆಡಲ್ಲ ಬಾಯ್ಕಾಟ್ ಮಾಡ್ತೀವಿ ಅಂದಿದ್ದ ಪಾಕಿಸ್ತಾನ ಕೊನೆಗೂ ಉಲ್ಟಾ ಹೊಡೆದಿದೆ. ಐಸಿಸಿ ಮುಂದೆ ಕೆಲ ಡಿಮ್ಯಾಂಡ್​ಗಳನ್ನ ಇಟ್ಟು ಶೋಆಫ್ ಕೊಟ್ಟಿದ್ದ ಪಾಕ್​ಗೆ ಇಲ್ಲೂ ಶೇಪ್ ಔಟ್ ಆಗಿದ್ದು ಕೊನೆಗೆ ಯಾವುದೇ ದಾರಿ ಇಲ್ದೇ ನಾವು ಭಾರತದ ವಿರುದ್ಧ ಆಡ್ತೀವಿ ಅಂತಾ ಶರಣಾಗಿದ್ದಾರೆ. ಮ್ಯಾಚ್ ಆಡ್ತೀವಿ ಅನ್ನೋದಕ್ಕಿಂತ ಸೋಲೋಕೆ ರೆಡಿಯಾಗಿದ್ದಾರೆ. ಟಿ-20 ವಿಶ್ವಕಪ್ ಇತಿಹಾಸದಲ್ಲಿ 8 ಸಲ ಮುಖಾಮುಖಿ ಆಗಿದ್ರೂ ಭಾರತ 7 ಸಲ ಗೆದ್ದಿದೆ. ಪಾಕ್ ಗೆದ್ದಿರೋದೇ ಒಂದು ಸಲ. ಇನ್ನು ಪಾಕಿಸ್ತಾನದ ಕೆಲ ಡಿಮ್ಯಾಂಡ್​ಗಳನ್ನ ಪರಿಶೀಲನೆ ಮಾಡೋದಾಗಿ ಐಸಿಸಿ ಹೇಳಿದ್ರೆ ಇನ್ನೂ ಕೆಲ ಡಿಮ್ಯಾಂಡ್​ಗಳನ್ನ ಸುತಾರಾಂ ಒಪ್ಪಿಲ್ಲ. ಸೋ ಪಾಕಿಸ್ತಾನದ ಯಾವ ಷರತ್ತುಗಳಿಗೆ ಐಸಿಸಿ ಕೇರ್ ಮಾಡಿಲ್ಲ.

ಯಾವ ಬೇಡಿಕೆಗಳಿಗೆ ಐಸಿಸಿ ಅಸ್ತು!

  1. ಪಾಕಿಸ್ತಾನದ ವಾರ್ಷಿಕ ಆದಾಯ ಹೆಚ್ಚಳಕ್ಕೆ ಮುಂದಿನ ಸಭೆಯಲ್ಲಿ ನಿರ್ಧಾರ
  2. ಟೂರ್ನಿಯಿಂದ ಹೊರ ಬಿದ್ದಿರೋ ಬಾಂಗ್ಲಾಗೆ ಯಾವುದೇ ದಂಡ ಹಾಕಲ್ಲ
  3. ಹ್ಯಾಂಡ್​ ಶೇಕ್ ಮಾಡುವುದನ್ನು ಕಡ್ಡಾಯಗೊಳಿಸಲು ಐಸಿಸಿ ನಿರ್ಧಾರ
  4. ಬಾಂಗ್ಲಾದೇಶಕ್ಕೆ ಬೇರೊಂದು ಪಂದ್ಯಾವಳಿ ಆತಿಥ್ಯದ ಹಕ್ಕು ಬಗ್ಗೆ ಚರ್ಚೆ

ಕಳೆದ ವರ್ಷದ ಮಹಿಳಾ ಟಿ 20 ವಿಶ್ವಕಪ್ ಅನ್ನು ಬಾಂಗ್ಲಾದೇಶದಿಂದ ದುಬೈಗೆ ಶಿಫ್ಟ್ ಮಾಡಲಾಗಿತ್ತು.  ಹೀಗಾಗಿ ಐಸಿಸಿ ಬಾಂಗ್ಲಾದೇಶಕ್ಕೆ ಪರಿಹಾರವಾಗಿ ಬೇರೊಂದು ಪಂದ್ಯಾವಳಿಯ ಆತಿಥ್ಯ ನೀಡಬೇಕು ಎಂದು ಪಿಸಿಬಿ-ಬಿಸಿಬಿ ಆಗ್ರಹಿಸಿದೆ. ಈ ವಿಚಾರವಾಗಿದ್ರೂ ಈಸಿಸಿ ಮುಂದಿನ ದಿನಗಳಲ್ಲಿ ಚರ್ಚೆ ಮಾಡೋದಾಗಿ ಹೇಳಿದೆ. ಆದ್ರಿಲ್ಲಿ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ ಅಷ್ಟೇ. ಬಟ್ ಯಾವೂ ಇನ್ನೂ ಫೈನಲ್ ಆಗಿಲ್ಲ.

3 ಬೇಡಿಕೆಗಳು ತಿರಸ್ಕಾರ!

  1. ಭಾರತ-ಪಾಕ್ ದ್ವಿಪಕ್ಷೀಯ ಸರಣಿ ಎರಡು ದೇಶಗಳ ವಿಚಾರ
  2. ಭಾರತ ಬಾಂಗ್ಲಾ ಪ್ರವಾಸ ಕೈಗೊಳ್ಳುವುದು ಬಿಡುವುದು BCCI ನಿರ್ಧಾರ
  3. ಭಾರತ, ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ತ್ರಿಕೋನ ಸರಣಿ ನಿಮಗೇ ಬಿಟ್ಟದ್ದು

ಇಲ್ಲಿ ಪಿಸಿಬಿಗೆ ಪಾಕ್ ಮತ್ತು ಬಾಂಗ್ಲಾ ವಿಚಾರವಾಗಿ ಇಟ್ಟಿದ್ದ ಪ್ರಶ್ನೆಗಳಿಗೆ ಒಂದು ರೀತಿಯಾಗಿ ಮುಂದಿನ ದಿನಗಳಲ್ಲಿ ನೋಡೋಣ ಅನ್ನೋ ಥರ ಐಸಿಸಿ ರಿಯಾಕ್ಟ್ ಮಾಡಿದೆ. ಆದ್ರೆ ಭಾರತದ ವಿಚಾರದಲ್ಲಿ ಐಸಿಸಿ ಖಡಕ್ ಆಗಿಯೇ ಡಿಸಿಷನ್ಸ್ ತಗೊಂಡಿದೆ. ಸರಣಿಗಳು ಬೇಕಿದ್ರೆ ಬಿಸಿಸಿಐ ಹತ್ರ ಮಾತಾಡ್ಕೊಂಡು ನೀವು ನಿರ್ಧಾರ ಮಾಡ್ಕೊಳ್ಳಿ ನಿಮ್ಮ ನಡುವೆ ನಾವು ಬರಲ್ಲ ಅಂದಿದ್ದಾರೆ. ಅಲ್ಲಿಗೆ ಐಸಿಸಿ ಕಡೆಯಿಂದ ಬಂದ್ರೂ ಪಾಕಿಸ್ತಾನಕ್ಕೆ ಭಾರತದ ನಿರ್ಧಾರವೇ ಅಂತಿಮ ಅನ್ನೋದು ಗೊತ್ತಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಪಾಕಿಸ್ತಾನ ದಿಢೀರ್ ಅಂತಾ ಉಲ್ಟಾ ಹೊಡೆದಿದ್ದೇಕೆ. ಬಾಯ್ಕಾಟ್ ಅಂದ್ರೆ ಮ್ಯಾಚ್ ಆಡೋಕೆ ರೆಡಿಯಾಗಿದ್ದು ಹೇಗೆ ಅನ್ನಿಸ್ಬೋದು. ಅದಕ್ಕೆ ಕಾರಣವೂ ಇದೆ. ದೇಶದ ಆರ್ಥಿಕ ಪರಿಸ್ಥಿತಿಯಂತೆಯೇ ಕ್ರಿಕೆಟ್ ಭವಿಷ್ಯವೂ ಖತಂ ಆಗುತ್ತೆ ಅನ್ನೋ ಭಯ.

ಬರ್ಬಾದ್ ಪಾಕ್ ನ ನಾಟಕ!

ಪಂದ್ಯ ಬಹಿಷ್ಕರಿಸಿದ್ರೆ ಐಸಿಸಿಯಿಂದ ಕಠಿಣ ಕ್ರಮದ ಭಯ

ಕ್ರಿಕೆಟ್‌ ಲೋಕದಲ್ಲಿ ಯಾರಿಂದಲೂ ಸಾಥ್ ಸಿಗದೆ ಒಂಟಿ ಭಯ

ಭಾರತದ ವಿರುದ್ಧ ಆಡದೆ ಜಂಭ ತೋರಿಸಿದ್ರೆ ಆದಾಯ ನಷ್ಟ

ವಿಶ್ವಕಪ್‌ ನಂತಹ ಪ್ರಮುಖ ಟೂರ್ನಿ ಬಿಟ್ರೆ ಭವಿಷ್ಯವೇ ಖತಂ

Shantha Kumari

Leave a Reply

Your email address will not be published. Required fields are marked *