ಭಾರತ-ಪಾಕಿಸ್ತಾನ ಮ್ಯಾಚ್‌ ಕ್ಯಾನ್ಸಲ್‌? – ಕ್ರಿಕೆಟ್​ ಅಭಿಮಾನಿಗಳಿಗೆ ಬೇಸರ

ಭಾರತ-ಪಾಕಿಸ್ತಾನ ಮ್ಯಾಚ್‌ ಕ್ಯಾನ್ಸಲ್‌? – ಕ್ರಿಕೆಟ್​ ಅಭಿಮಾನಿಗಳಿಗೆ ಬೇಸರ

ಇಡೀ ಕ್ರಿಕೆಟ್​ ಜಗತ್ತು ಸೆಪ್ಟೆಂಬರ್ 2ರಂದು ನಡೆಯಬೇಕಿರುವ ಭಾರತ-ಪಾಕಿಸ್ತಾನ ಮ್ಯಾಚ್​ಗಾಗಿ ಕಾಯ್ತಾ ಇದೆ. ಆದ್ರೀಗ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗುವಂಥಾ ಸುದ್ದಿ ಹೊರಬಿದ್ದಿದೆ. ಏಷ್ಯಾಕಪ್​​ನಲ್ಲಿ ಭಾರತ-ಪಾಕಿಸ್ತಾನ ನಡುವೆ ಮೊದಲ ಪಂದ್ಯ ನಡೆಯೋದೆ ಅನುಮಾನವಾಗಿದೆ.

ನಿಗದಿ ಪ್ರಕಾರ ಶನಿವಾರದಂದು ಶ್ರೀಲಂಕಾದ ಪಲ್ಲೆಕೆಲೆ ಸ್ಟೇಡಿಯಂನಲ್ಲಿ ಇಂಡಿಯಾ-ಪಾಕ್ ಮ್ಯಾಚ್ ನಡೆಯಬೇಕು. ಆದರೆ ಆ ದಿನವಿಡೀ ಮಳೆ ಬರುವ ಸಾಧ್ಯತೆ ದಟ್ಟವಾಗಿದೆ. ಕಳೆದ ಎರಡು ದಿನಗಳಿಂದಲೂ ಪಲ್ಲೆಕೆಲೆಯಲ್ಲಿ ನಿರಂತರ ಮಳೆಯಾಗುತ್ತಲೇ ಇದೆ. ಹವಾಮಾನ ವರದಿಯ ಪ್ರಕಾರ ಮ್ಯಾಚ್​ ನಡೆಯುವ ದಿನದಂದು ಕೂಡ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಶ್ರೀಲಂಕಾ ಹವಾಮಾನ ಇಲಾಖೆ ಹೇಳಿರುವ ಪ್ರಕಾರ ಶನಿವಾರದಂದು ಮಳೆ ಬರುವ ಸಾಧ್ಯತೆ ಶೇಕಡಾ 90ರಷ್ಟಿದೆ. ವೆದರ್ ರಿಪೋರ್ಟ್ ನೋಡಿದರೆ ಮ್ಯಾಚ್​ ದಿನದಂದು ಭಾರತ ಮತ್ತು ಪಾಕಿಸ್ತಾನದ ಆಟಗಾರರು ಹೋಟೆಲ್​​ನಿಂದ ಹೊರ ಬರೋದೆ ಅನುಮಾನ.

ಇದನ್ನೂ ಓದಿ: ರೋಚಕ ಪಂದ್ಯವೊಂದಕ್ಕೆ ಸಜ್ಜಾಗಿ! – ಕೆ.ಎಲ್‌ ರಾಹುಲ್‌ ಜೀವನಾಧಾರಿತ ಚಿತ್ರ ನಿರ್ಮಾಣ?

ಶ್ರೀಲಂಕಾ ಕ್ರಿಕೆಟ್​ ಮಂಡಳಿ ಯಾವಾಗಲೂ ಆಗಸ್ಟ್ ಮತ್ತು ಸೆಪ್ಟೆಂಬರ್​ ತಿಂಗಳ ಹೊತ್ತಲ್ಲಿ ಯಾವುದೇ ಪಂದ್ಯಗಳನ್ನ ಆಯೋಜಿಸೋದೆ ಇಲ್ಲ. ಈ ಸಮಯದಲ್ಲಿ ಪಲ್ಲೆಕೆಲೆಯಲ್ಲಿ ಭಾರಿ ಮಳೆಯಾಗೋದ್ರಿಂದ ಕಳೆದ ಹಲವು ದಶಕಗಳಿಂದಲೂ ಎರಡು ತಿಂಗಳುಗಳ ಕಾಲ ಕ್ರಿಕೆಟ್​ ಮ್ಯಾಚ್​ ಆಯೋಜಿಸುತ್ತಿಲ್ಲ. ಪಲ್ಲೆಕೆಲೆಯಲ್ಲಿ ಇದುವರೆಗೆ 33 ಅಂತಾರಾಷ್ಟ್ರೀಯ ಮ್ಯಾಚ್​ಗಳಾಗಿದ್ದು, ಈ ಪೈಕಿ 3 ಪಂದ್ಯಗಳು ಮಾತ್ರ ಮಳೆಗಾಲದ ಸಮಯದಲ್ಲಿ ನಡೆದಿದೆ. ಆದರೀಗ ಮಳೆ ಬರುತ್ತೆ ಅನ್ನೋದು ಗೊತ್ತಿದ್ದೂ ಗೊತ್ತಿದ್ದು ಅದೇ ಮೈದಾನದಲ್ಲಿ ಭಾರತ-ಪಾಕಿಸ್ತಾನದಂಥಾ ಹೈವೋಲ್ಟೇಜ್ ಪಂದ್ಯವನ್ನ ಆಯೋಜಿಸಲಾಗಿದೆ. ಇದು ಕ್ರಿಕೆಟ್​ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

suddiyaana