34,000 ಸೀಟ್.. 90 ಲಕ್ಷ ಅರ್ಜಿ – RO-KO Vs PAK ಪಂದ್ಯಕ್ಕಾಗಿ ವಾರ್
ಅದೃಷ್ಟ ಇದ್ದವ್ರಿಗಷ್ಟೇ ವಿಶ್ವಕಪ್ ಟಿಕೆಟ್

34,000 ಸೀಟ್.. 90 ಲಕ್ಷ ಅರ್ಜಿ – RO-KO Vs PAK ಪಂದ್ಯಕ್ಕಾಗಿ ವಾರ್ಅದೃಷ್ಟ ಇದ್ದವ್ರಿಗಷ್ಟೇ ವಿಶ್ವಕಪ್ ಟಿಕೆಟ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂದ್ರೆ ಜಸ್ಟ್ ಭಾರತಕ್ಕಷ್ಟೇ ಸ್ಟಾರ್ಸ್ ಅಲ್ಲ. ವಿಶ್ವಕ್ರಿಕೆಟ್​ಗೇ ಇನ್ಸ್​ಪಿರೇಷನ್. ಇದೇ ಕಾರಣಕ್ಕೆ ಜಗತ್ತಿನ ಯಾವುದೇ ಮೂಲೆಯಲ್ಲೂ ಇವ್ರಿಬ್ಬರು ಆಡೋದನ್ನ ನೋಡೋಕೆ ಫ್ಯಾನ್ಸ್ ಮುಗಿ ಬೀಳ್ತಾರೆ. ಪ್ರಸ್ತುತ ನ್ಯೂಜಿಲೆಂಡ್​ನಲ್ಲೂ ಕೂಡ ರೋಕೋ ಜೋಡಿಯದ್ದೇ ಹವಾ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಪಾಕಿಸ್ತಾನ ವಿರುದ್ಧ ರೋಹಿತ್ ಮತ್ತು ಕೊಹ್ಲಿ ಕೊನೆಯ ಬಾರಿ ಆಡೋದನ್ನ ನೋಡಲು ಜಗತ್ತೇ ಕಾಯ್ತಿದೆ. ಲಕ್ಷಾಂತರ ಮಂದಿ ಕ್ಯೂನಲ್ಲಿದ್ದಾರೆ. ಯಾರಿಗಪ್ಪ ಟಿಕೆಟ್ ಕೊಡೋದು ಅಂತಾ ಐಸಿಸಿಯೇ ಕನ್ಫ್ಯೂಸ್ ಆಗಿದೆ.

ಇದನ್ನೂ ಓದಿ : ₹40 ಕೋಟಿ ಕೊಟ್ರಷ್ಟೇ ಆಡ್ತೀವಿ – IPL ಫ್ರಾಂಚೈಸಿಗಳಿಗೆ ಸ್ಟಾರ್ಸ್ ಬೆದರಿಕೆ

ಕ್ರಿಕೆಟ್ ಜಗತ್ತಿನ ಐಕಾನಿಕ್ ಪ್ಲೇಯರ್ಸ್ ಆಗಿರೋ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರಸ್ತುತ ಭಾರತದ ಪರ ಏಕದಿನ ಪಂದ್ಯಗಳನ್ನ ಮಾತ್ರ ಆಡ್ತಿದ್ದಾರೆ. ಅದೂ ಕೂಡ 2027ರ ಏಕದಿನ ವಿಶ್ವಕಪ್​ವರೆಗೂ ಮಾತ್ರ. ಆ ನಂತ್ರದಲ್ಲಿ ಮತ್ತೆಂದೂ ಮೆನ್ ಇನ್ ಬ್ಲ್ಯೂ ಜೆರ್ಸಿ ತೊಟ್ಟು ಮೈದಾನಕ್ಕಿಳಿಯಲ್ಲ. ಌಂಡ್ ಇದನ್ನ ಅಫಿಶಿಯಲ್ ಆಗಿ ಅವ್ರೇ ಅನೌನ್ಸ್ ಕೂಡ ಮಾಡಿದ್ದಾರೆ. ಮತ್ತೊಂದೆಡೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮಲ್ಟಿನೇಷನ್ಸ್ ಟೂರ್ನಿಗಳಲ್ಲಿ ಮಾತ್ರವೇ ಮುಖಾಮುಖಿ ಆಗ್ತಿರುವಂಥದ್ದು. ಸೋ ಅಲ್ಲಿಗೆ ಪಾಕ್ ವಿರುದ್ಧ ರೋಹಿತ್ ಮತ್ತು ಕೊಹ್ಲಿ ಏಕದಿನ ವಿಶ್ವಕಪ್​ನಲ್ಲಿ ಕೊನೇ ಬಾರಿಗೆ ಕಣಕ್ಕಿಳಿಯುತ್ತಾರೆ. ಇದೇ ಐತಿಹಾಸಿಕ ಪಂದ್ಯವನ್ನ ಕಣ್ತುಂಬಿಕೊಳ್ಳೋಕೆ ಲಕ್ಷಾಂತರ ಫ್ಯಾನ್ಸ್ ದುಂಬಾಲು ಬಿದ್ದಿದ್ದಾರೆ.

ಇಂಡೋ-ಪಾಕ್ ಪಂದ್ಯಕ್ಕೆ 90 ಲಕ್ಷಕ್ಕೂ ಹೆಚ್ಚು ಟಿಕೆಟ್ ಗಳಿಗೆ ಬೇಡಿಕೆ!

ಭಾರತ ವರ್ಸಸ್ ಪಾಕಿಸ್ತಾನ ಮ್ಯಾಚ್ ಅಂದ್ರೇನೇ ಇಡೀ ಕ್ರಿಕೆಟ್ ಜಗತ್ತು ಅಲರ್ಟ್ ಆಗಿಬಿಡುತ್ತೆ. ಅದ್ರಲ್ಲೂ ಇಂಡೋ-ಪಾಕ್ ಫ್ಯಾನ್ಸ್ ಅಂತೂ ತುದಿಗಾಲಲ್ಲಿ ಕಾಯ್ತಿರ್ತಾರೆ. ಅಂಥಾದ್ರಲ್ಲಿ ನಾಲ್ಕು ವರ್ಷಕ್ಕೊಮ್ಮೆ ಬರೋ ಪ್ರತಿಷ್ಠಿತ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಭಾರತ-ಪಾಕ್ ಮ್ಯಾಚ್ ಅಂದ್ರೆ ಬಿಡ್ತಾರೆ. ಅದೂ ಅಲ್ದೇ ರೋಹಿತ್ ಮತ್ತು ಕೊಹ್ಲಿ ಪಾಕ್ ವಿರುದ್ಧ ಆಡೋ ಕೊನೇ ಮ್ಯಾಚ್. 2027ರಲ್ಲಿ ಏಷ್ಯಾಕಪ್​ನಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಲಿದ್ದು ಆ ನಂತ್ರ ಐಸಿಸಿ ವಿಶ್ವಕಪ್ ನಡೆಯಲಿದೆ. ಮುಂದಿನ ಏಷ್ಯಾಕಪ್ 50 ಓವರ್​ಗಳ ಮಾದರಿಯಲ್ಲಿ ನಡೆಯಲಿದ್ದು ಅಲ್ಲಿಯೂ ಭಾರತ-ಪಾಕ್ ಪಂದ್ಯ ಇರುತ್ತೆ. ಆದ್ರೆ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ದೇಶಗಳು ಜಂಟಿಯಾಗಿ ಆಯೋಜನೆ ಮಾಡಲಿರುವ 2027ರ ಏಕದಿನ ವಿಶ್ವಕಪ್ ರೋಕೋಗೆ ಕೊನೇ ಟೂರ್ನಮೆಂಟ್. ಇದೇ ಕಾರಣಕ್ಕೆ ಭಾರತ-ಪಾಕ್ ಪಂದ್ಯ ನೋಡಲು 90 ಲಕ್ಷಕ್ಕೂ ಹೆಚ್ಚು ಮಂದಿ ಟಿಕೆಟ್​ಗಾಗಿ ಅಪ್ಲಿಕೇಷನ್ ಹಾಕಿದ್ದಾರೆ. 2027ರ ಅಕ್ಟೋಬರ್ 2 ರಿಂದ ಟೂರ್ನಿ ಆರಂಭವಾಗಲಿದ್ದು, ಟೂರ್ನಿಯ 6ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಅಕ್ಟೋಬರ್ 10 ರಂದು ನಡೆಯಲಿರುವ ಈ ಹೈವೋಲ್ಟೇಜ್​ ಮ್ಯಾಚ್​ ಟಿಕೆಟ್​​ಗಳಿಗಾಗಿ 90 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯೇ ಅನೌನ್ಸ್ ಮಾಡಿರೋ ಅಫಿಶಿಯಲ್ ಮಾಹಿತಿ ಇದು. ಹಾಗೇ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಬೇಡಿಕೆ ಪಡೆದ ಗುಂಪು ಹಂತದ ಪಂದ್ಯ ಎನ್ನುವಂತ ದಾಖಲೆಗೂ ಕಾರಣವಾಗಿದೆ.  ಸೌತ್ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಐತಿಹಾಸಿಕ ವಾಂಡರರ್ಸ್ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಮ್ಯಾಚ್ ನಡೆಯಲಿದ್ದು ಇನ್ನೂ 11 ತಿಂಗಳುಗಳು ಬಾಕಿ ಇರುವಾಗ್ಲೇ ಈ ಮಟ್ಟಿಗಿನ ಕ್ರೇಜ್ ಶುರುವಾಗಿದೆ.

ಬೇಡಿಕೆ ಬೆಟ್ಟದಷ್ಟು.. ಆಸನ ಸಾಮರ್ಥ್ಯ ಅಟ್ಟದಷ್ಟು!

ಪರಿಸ್ಥಿತಿ ಹೆಂಗಿದೆ ನೋಡಿ. ಭಾರತ ಪಾಕ್ ಪಂದ್ಯಕ್ಕೆ ಇರೋ ಡಿಮ್ಯಾಂಡ್ ನೋಡಿದ್ರೆ ಹತ್ತತ್ರ ಕೋಟಿಗೂ ಹೆಚ್ಚು ಜನ ಅರ್ಜಿ ಸಲ್ಲಿಕೆ ಮಾಡೋ ಸನಿಹದಲ್ಲಿದ್ದಾರೆ. ಆದ್ರೆ ಆಸೆ ಬೆಟ್ಟದಷ್ಟು ಕಾಸು ಅಟ್ಟದಷ್ಟು ಅನ್ನೋ ಹಾಗೇ ಕ್ರೀಡಾಂಗಣದ ಸಾಮರ್ಥ್ಯವೇ ಕಡಿಮೆ. ಪಂದ್ಯ ನಡೆಯಲಿರುವ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯ ಕೇವಲ 34,000 ಮಾತ್ರ. ಇದೇ ಈಗ ಆಯೋಜಕರಿಗೆ ದೊಡ್ಡ ತಲೆನೋವಾಗಿದೆ. ಸೋ ಅಲ್ಲಿಗೆ ಒಂದೊಂದು ಸೀಟ್​ಗೂ ನೂರಾರು ಫ್ಯಾನ್ಸ್ ನಡುವೆ ಪೈಪೋಟಿ ಇದೆ. ಇದು ವಿಶ್ವಕಪ್ ಇತಿಹಾಸದಲ್ಲೇ ಕಂಡುಕೇಳರಿಯದ ಟಿಕೆಟ್ ಕ್ರೇಝ್ ಸೃಷ್ಟಿಸಿದೆ. ಹಾಗ್ ನೋಡಿದ್ರೆ  ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯ ಕೂಡ ಜೋಹಾನ್ಸ್‌ಬರ್ಗ್‌ನ ಇದೇ ವಾಂಡರರ್ಸ್ ಸ್ಟೇಡಿಯಂನಲ್ಲೇ ನಡೆಯಲಿದೆ. ಆದರೆ, ಫೈನಲ್​ ಪಂದ್ಯಕ್ಕೆ ಸಲ್ಲಿಕೆಯಾಗಿರುವುದು 80 ಲಕ್ಷ ಟಿಕೆಟ್ ಅರ್ಜಿಗಳು ಮಾತ್ರ. ಸೋ ಅಲ್ಲಿಗೆ ಭಾರತ ಮತ್ತು ಪಾಕಿಸ್ತಾನ್ ನಡುವಿನಲೀಗ್ ಹಂತದ ಪಂದ್ಯದ ಕ್ರೇಝ್, ಇಡೀ ಟೂರ್ನಿಯ ಚಾಂಪಿಯನ್ಸ್ ಘೋಷಣೆ ಮಾಡಲಿರೋ ಫೈನಲ್ ಪಂದ್ಯದ ಕ್ರೇಜ್​ನೂ ಮೀರಿ ನಿಂತಿದೆ. ಇದೇ ಕಾರಣಕ್ಕೆ ಯಾರಿಗೆ ಟಿಕೆಟ್ ಕೊಡ್ಬೇಕು ಅನ್ನೋ ಕನ್ಫ್ಯೂಷನ್​ನಲ್ಲಿರೋ ಐಸಿಸಿ ಹೊಸ ಐಡಿಯಾ ಮಾಡಿದೆ.

ಅದೃಷ್ಟ ಇದ್ದವರಿಗೆ ಸಿಗುತ್ತೆ ಪಂದ್ಯ ನೋಡುವ ಭಾಗ್ಯ!

ಯಾವಾಗ ಎಕ್ಸ್​ಟ್ರೀಮ್ ಲೆವೆಲ್​ನಲ್ಲಿ ಡಿಮ್ಯಾಂಡ್ ಸೃಷ್ಟಿಯಾಯ್ತೋ ಐಸಿಸಿ ಹೊಸ ಪ್ಲ್ಯಾನ್ ಮಾಡಿದೆ. ಟಿಕೆಟ್‌ಗಳನ್ನು ಅದೃಷ್ಟದ ಆಧಾರದ ಮೇಲೆ ನೀಡಲು ಮುಂದಾಗಿದೆ. ಕಂಪ್ಯೂಟರೀಕೃತ ರೇಂಡಮೈಸ್ಡ್ ಬ್ಯಾಲೆಟ್ ಅಥವಾ ಲಾಟರಿ ಪ್ರಕ್ರಿಯೆಯ ಮೂಲಕ ಅಭಿಮಾನಿಗಳನ್ನು ಸೆಲೆಕ್ಟ್ ಮಾಡಲಾಗುತ್ತದೆ. ಐಸಿಸಿಯ ಅಧಿಕೃತ ಟಿಕೆಟ್ ಪೋರ್ಟಲ್‌ನಲ್ಲಿ ನವೆಂಬರ್ 21, 2026 ರವರೆಗೆ ಬ್ಯಾಲೆಟ್ ವಿಂಡೋ ತೆರೆದಿರಲಿದ್ದು, ಸೋ ಇಂಟ್ರೆಸ್ಟ್ ಇದ್ದವ್ರು ಅರ್ಜಿ ಸಲ್ಲಿಕೆ ಮಾಡ್ಬೋದಾಗಿದೆ. ಅಷ್ಟಕ್ಕೂ ಇಲ್ಲಿ ಫ್ಯಾನ್ಸ್ ಈ ಲೆವೆಲ್​ಗೆ ಮುಗಿಬೀಳೋಕೆ ಕಾರಣವೇ ಪಾಕ್ ವಿರುದ್ಧ ರೋಕೋ ಪ್ರದರ್ಶನ. ಎಸ್​ಪೆಶಲಿ ವಿರಾಟ್​ ಕೊಹ್ಲಿ.

ಪಾಕ್ ಬೌಲಿಂಗ್ ಪಡೆಯನ್ನೇ ಧ್ವಂಸ ಮಾಡಿರುವ ಕೊಹ್ಲಿ!

ಏಕದಿನ ಮಾದರಿಯಲ್ಲಿ ಪಾಕಿಸ್ತಾನ ತಂಡದ ವಿರುದ್ಧ ವಿರಾಟ್ ಕೊಹ್ಲಿ ಪ್ರದರ್ಶನ ಭಯಂಕರವಾಗಿದೆ. ಪಾಕ್ ವಿರುದ್ಧ ಬರೀ ರನ್ ಗಳಿಸಿಲ್ಲ, ಬದಲಿಗೆ ಅವರ ಬೌಲಿಂಗ್ ಪಡೆಯನ್ನೇ ಧ್ವಂಸಗೊಳಿಸಿ ಸಿಂಗಲ್ ಶೇರ್​ನಂತೆ ನಿಂತು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಪಾಕ್ ವಿರುದ್ಧ 17 ಏಕದಿನ ಪಂದ್ಯಗಳನ್ನ ಆಡಿದ್ದು 59ರ ಸರಾಸರಿಯಲ್ಲಿ 778 ರನ್ಸ್ ಕಲೆ ಹಾಕಿದ್ದಾರೆ. 4 ಶತಕಗಳೂ ಇವೆ. ಹಾಗೇ ಕೊಹ್ಲಿಯವ್ರ ಏಕದಿನ ಕ್ರಿಕೆಟ್​ನ ಬೆಸ್ಟ್ ಇನ್ನಿಂಗ್ಸ್ ಕೂಡ ಪಾಕ್ ವಿರುದ್ಧವೇ ಬಂದಿದೆ. 2012ರ ಏಷ್ಯಾಕಪ್​ನಲ್ಲಿ ಪಾಕಿಸ್ತಾನ ನೀಡಿದ್ದ 330 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಕೊಹ್ಲಿ ಕೇವಲ 148 ಎಸೆತಗಳಲ್ಲಿ 183 ರನ್ ಚಚ್ಚಿ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದರು. ಅದ್ರಲ್ಲೂ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ ಅವರ ಸರಾಸರಿ 91.5 ಕ್ಕಿಂತ ಹೆಚ್ಚಿದೆ. ವಿಶ್ವಕಪ್ ಪಂದ್ಯಗಳಲ್ಲಂತೂ ಅವರ ಸರಾಸರಿ 103 ದಾಟಿದೆ. ಸೋ ಇದನ್ನ ನೋಡಿದ್ರೇನೇ ಗೊತ್ತಾಗುತ್ತೆ ಕೊಹ್ಲಿಗೆ ಪಾಕ್ ವಿರುದ್ಧದ ಪಂದ್ಯಗಳಂದ್ರೆ ಅದೆಷ್ಟು ಫೇವರೆಟ್ ಅನ್ನೋದು. ಇನ್ನು ರೋಹಿತ್ ಕೂಡ 19 ಇನ್ನಿಂಗ್ಸ್​ಗಳಲ್ಲಿ 51ರ ಆವರೇಜ್​ನಲ್ಲಿ 893 ರನ್ಸ್ ಸ್ಕೋರ್ ಮಾಡಿದ್ದಾರೆ. 2 ಶತಕ, 8 ಅರ್ಧಶತಕಗಳೂ ಸೇರಿವೆ. ಒಟ್ನಲ್ಲಿ ರೋಕೋಗೆ ಪಾಕ್ ಪಡೆಯನ್ನ ಸೋಲಿಸೋದಂದ್ರೆ ಒಂಥರಾ ಖುಷಿ. ಹೀಗಾಗಿ ಕೊನೇ ಬಾರಿ ಇವ್ರಿಬ್ರು ಪಾಕ್ ಬೆಂಡೆತ್ತೋದನ್ನ ನೋಡೋಕೆ ಕ್ರಿಕೆಟ್ ಜಗತ್ತೇ ಇಷ್ಟೊಂದು ಎಕ್ಸೈಟ್ ಆಗಿರೋದು.

Shantha Kumari

Leave a Reply

Your email address will not be published. Required fields are marked *