ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ – ವೈರಿ ರಾಷ್ಟ್ರದ ಜೊತೆಗಿನ ಮ್ಯಾಚ್ ಬೇಡ ಎಂದು ಬಾಯ್ಕಟ್ ಟ್ರೆಂಡ್

ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ – ವೈರಿ ರಾಷ್ಟ್ರದ ಜೊತೆಗಿನ ಮ್ಯಾಚ್ ಬೇಡ ಎಂದು ಬಾಯ್ಕಟ್ ಟ್ರೆಂಡ್

ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅಕ್ಟೋಬರ್ 14ರ ಶನಿವಾರದಂದು ಪಂದ್ಯ ನಡೆಯಲಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಮ್ಯಾಚ್ ನಡೆಯಲಿದ್ದು, ಈ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಅಹ್ಮದಾಬಾದ್​ಗೆ ತಲುಪಿದ್ದಾರೆ. ಇನ್ನು ಬದ್ಧವೈರಿಗಳ ಪಂದ್ಯ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳೂ ಕೂಡ ತೆರಳಿದ್ದಾರೆ.

ಇದನ್ನೂ ಓದಿ : ರೋಚಕ ಹಣಾಹಣಿಗೆ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜು – ಭಾರತ-ಪಾಕ್ ಪಂದ್ಯಕ್ಕೆ ಪೊಲೀಸ್ ಬಿಗಿಬಂದೋಬಸ್ತ್

ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಪಂದ್ಯ ವೀಕ್ಷಣೆಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ. ಆದರೆ ಕ್ರಿಕೆಟ್ ಅಭಿಮಾನಿಗಳಿಗೆ ಉಳಿದುಕೊಳ್ಳಲು ಹೋಟೆಲ್ ಗಳ ಬಾಡಿಗೆ ದಿಢೀರ್ 10 ಪಟ್ಟು ಹೆಚ್ಚಾಗಿದೆ. ಅಹಮದಾಬಾದ್ ನಲ್ಲಿ ಸಾಮಾನ್ಯ ದಿನಗಳಲ್ಲಿ ಒಂದು ದಿನ ಹೋಟೆಲ್ ಬಾಡಿಗೆ 6 ಸಾವಿರ ಇರುತ್ತಿದೆ. ಇದೀಗ ಮ್ಯಾಚ್ ಇರೋದ್ರಿಂದ 70 ಸಾವಿರಕ್ಕೆ ಏರಿಸಿದ್ದಾರೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು 70 ಸಾವಿರ ಕೊಟ್ಟು ಹೋಟೆಲ್ ಗೆ ಹೋಗೋದಕ್ಕಿಂತ 7 ಸಾವಿರ ಕೊಟ್ಟು ಆಸ್ಪತ್ರೆ ಸೇರುತ್ತಿದ್ದಾರೆ. ಆರೋಗ್ಯ ತಪಾಸಣೆ ನೆಪದಲ್ಲಿ 7 ಸಾವಿರ ಕಟ್ಟಿ ಆಸ್ಪತ್ರೆಗೆ ದಾಖಲಾದ್ರೆ ಆರೋಗ್ಯ ತಪಾಸಣೆಯೂ ಆಗುತ್ತೆ ಹಣವೂ ಉಳಿಯುತ್ತೆ ಅಂತಾ ಈ ಐಡಿಯಾ ಮಾಡಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನ ಭಾರತದ ಮೇಲೆ ಪದೇಪದೆ ಹಿಂಸಾತ್ಮಕ ಕೃತ್ಯಗಳಿಗೆ ಬೆಂಬಲ ನೀಡುತ್ತಿದೆ. ಹೀಗಾಗಿ ವೈರಿ ರಾಷ್ಟ್ರದ ಜೊತೆ ಪಂದ್ಯ ನಡೆಸಬಾರದು ಎಂದು ಬಾಯ್ಕಟ್ ಟ್ರೆಂಡ್ ಕೂಡ ಶುರುವಾಗಿದೆ.

Shantha Kumari