ಅಕ್ಟೋಬರ್ 14ರಂದು ಭಾರತ-ಪಾಕ್ ಕದನ – ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಬರಲಿದ್ದಾರೆ ಲಕ್ಷಾಂತರ ಅಭಿಮಾನಿಗಳು
ಕ್ರಿಕೆಟ್ ಜಗತ್ತು ಈಗ ಕಾಯ್ತಾ ಇರವುದು ಒಂದೇ ಒಂದು ಪಂದ್ಯಕ್ಕಾಗಿ. ಅದು ಭಾರತ VS ಪಾಕಿಸ್ತಾನ. ಅಕ್ಟೋಬರ್ 14ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯಲಿದೆ. 1 ಲಕ್ಷ 30,000ಕ್ಕೂ ಅಧಿಕ ಮಂದಿ ಭಾರತ್-ಪಾಕ್ ಮ್ಯಾಚ್ನ್ನ ಸ್ಟೇಡಿಯಂನಲ್ಲೇ ವೀಕ್ಷಿಸಲಿದ್ದಾರೆ.
ಇದನ್ನೂ ಓದಿ: ಬೌಂಡರಿ ಗೆರೆ ವಿಚಾರದಲ್ಲಿ ಪಾಕಿಸ್ತಾನ ತಂಡದ ಕಳ್ಳಾಟ – ಎರಡೂ ಪಂದ್ಯಗಳಲ್ಲೂ ಪಾಕ್ ಮೋಸದಾಟ?
ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಟಿವಿ, ಡಿಜಿಟಲ್ ಪ್ಲ್ಯಾಟ್ಫಾರ್ಮ್ಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಇನ್ನು ಭಾರತದಲ್ಲಂತೂ ಕೇಳೋದೇ ಬೇಡ. ಈ ಬಾರಿಯ ವರ್ಲ್ಡ್ಕಪ್ನಲ್ಲಿ 48 ಮ್ಯಾಚ್ಗಳು ನಡೆಯುತ್ತಿದ್ದರೂ, 10 ಟೀಮ್ಗಳು ಆಡುತ್ತಿದ್ದರೂ, ಭಾರತ-ಪಾಕಿಸ್ತಾನ ಪಂದ್ಯಕ್ಕೆ ಇರುವ ಹೈಪ್ ಇನ್ಯಾವ ಮ್ಯಾಚ್ಗೂ ಇಲ್ಲ. ಇಡೀ ವರ್ಲ್ಡ್ಕಪ್ಗೆ ಖರ್ಚಾಗುವ ಹಣ ಈ ಪಂದ್ಯದಲ್ಲೇ ಬಂದು ಬಿಡುತ್ತೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾರತೀಯರು ಅಂದು ಕ್ರೀಡಾಂಗಣವನ್ನು ಆವರಿಸಿಕೊಳ್ಳಲಿದ್ದಾರೆ. ಇಷ್ಟೊಂದು ಜನಸಂಖ್ಯೆ ಎದುರು ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡ ಕ್ರಿಕೆಟ್ ಆಡಲಿದೆ. 2022ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಭಾರತ-ಪಾಕ್ ಮಧ್ಯೆ ಟಿ-20 ವರ್ಲ್ಡ್ಕಪ್ ಮ್ಯಾಚ್ ನಡೆದಿತ್ತು. ಅಂದು ಅಲ್ಲಿ ಜನರ ಆಬ್ಬರ ಜೋರಾಗಿತ್ತು. ಅಲ್ಲಿಗಿಂತಲೂ ಹೆಚ್ಚು ಮಂದಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇರುವುದು ಗ್ಯಾರಂಟಿ. ಇಡೀ ಸ್ಟೇಡಿಯಂನಲ್ಲಿ ಕಿಕ್ಕಿರಿದು ಅಭಿಮಾನಿಗಳು ತುಂಬಿರುವುದನ್ನು ನೋಡಿ ಪಾಕಿಸ್ತಾನ ಟೀಮ್ ಹೈರಾಣಾಗುವುದರಲ್ಲಿ ಸಂಶಯವಿಲ್ಲ. ಟೀಮ್ ಇಂಡಿಯಾಕ್ಕೆ ಇಡೀ ಭಾರತೀಯರು ನೀಡುವ ಬೆಂಬಲ ನೋಡಿಯೇ ಅಂದು ಪಾಕಿಸ್ತಾನ ಅಚ್ಚರಿಗೊಳ್ಳಲಿದೆ.