ಕೊಹ್ಲಿ Vs ಬಾಬರ್.. ಧೋನಿ Vs ಜಾವೇದ್ – ಭಾರತೀಯರೇ GREAT ಎಂದ ಯೂನಿಸ್
PAK ದಿಗ್ಗಜನ ಸತ್ಯಕ್ಕೆ ಫ್ಯಾನ್ಸ್ ಕೆಂಡ 

ಕೊಹ್ಲಿ Vs ಬಾಬರ್.. ಧೋನಿ Vs ಜಾವೇದ್ – ಭಾರತೀಯರೇ GREAT ಎಂದ ಯೂನಿಸ್PAK ದಿಗ್ಗಜನ ಸತ್ಯಕ್ಕೆ ಫ್ಯಾನ್ಸ್ ಕೆಂಡ 

ಕ್ರಿಕೆಟ್ ಜಗತ್ತಿನಲ್ಲಿ ಇಂಡೋ-ಪಾಕ್ ಮ್ಯಾಚಸ್ ಅಂದ್ರೆ ಗೇಟೆಸ್ಟ್ ರೈವಲ್ರಿ ಅದು. ಎರಡೂ ದೇಶಗಳಿಗೆ ಪ್ರತಿಷ್ಠೆಯಾದ್ರೆ ಮೈದಾನದಲ್ಲಿ ಆಟಗಾರರಿಗೆ ಗರ್ವದ ಪ್ರಶ್ನೆ.. ಇನ್ನು ಅಭಿಮಾನಿಗಳಿಂತೂ ಎಮೋಷನಲ್ ಮೂಮೆಂಟ್ಸ್. ಸೋ ಹಿಂದಿನಿಂದ್ಲೂ ಕೂಡ ಎರಡೂ ದೇಶಗಳ ಲೆಜೆಂಡರಿ ಕ್ರಿಕೆಟರ್ಸ್ ನಡುವೆ ಕಂಪೇರಿಸನ್ ಇದ್ದದ್ದೇ. ರಿಯಾಲಿಟಿ ಏನಂದ್ರೆ ಭಾರತದ ಪ್ಲೇಯರ್​ಗಳೇ ಗ್ರೇಟ್ ಅಂತಾ ಜಗತ್ತಿಗೇ ಗೊತ್ತಿದ್ರೂ ಅದನ್ನ ಪಾಕ್​ ಆಟಗಾರರು ಒಪ್ಪಲ್ಲ. ಬಟ್ ಈ ಸಲ ಪಾಕ್​ನ ಮಾಜಿ ಕ್ಯಾಪ್ಟನ್. ಫಾಸ್ಟ್ ಬೌಲಿಂಗ್ ದಿಗ್ಗಜ ವಕಾರ್ ಯೂನಿಸ್ ನೀಡಿಯೋ ಇಂಟರ್​ವ್ಯೂ ಕ್ರಿಕೆಟ್ ಲೋಕದಲ್ಲಿ ಹಲ್​ಚಲ್ ಎಬ್ಬಿಸಿದೆ.

ಇದನ್ನೂ ಓದಿ : 3 ಮ್ಯಾಚ್.. 139 ರನ್ಸ್ – ದುಬಾರಿಯಾದ್ರೂ ಗೆಲ್ಲಿಸಿದ ಭುವಿ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಶ್ರೇಷ್ಠ ವೇಗದ ಬೌಲರ್ ವಕಾರ್ ಯೂನಿಸ್, ಭಾರತ ಮತ್ತು ಪಾಕಿಸ್ತಾನದ ದಿಗ್ಗಜ ಆಟಗಾರರ ನಡುವಿನ ಹೋಲಿಕೆಯಲ್ಲಿ ಬಹುತೇಕ ಭಾರತೀಯ ಕ್ರಿಕೆಟಿಗರನ್ನೇ ಸೆಲೆಕ್ಟ್ ಮಾಡಿದ್ದು ಬಾರೀ ಚರ್ಚೆಯಾಗ್ತಿದೆ. ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನ ರಾಪಿಡ್-ಫೈರ್ ಸುತ್ತಿನಲ್ಲಿ ಭಾಗಿಯಾಗಿದ್ದ ವಕಾರ್ ಯೂನಿಸ್ ರಿಗೆ ಎರಡೂ ದೇಶಗಳ ಪ್ರಮುಖ ಆಟಗಾರರನ್ನು ಎದುರುಬದಿರಾಗಿಸಿ ಒಬ್ರನ್ನ ಸೆಲೆಕ್ಟ್ ಮಾಡೋಕೆ ಕೇಳಲಾಗಿತ್ತು. ಈ ವೇಳೆ ಯೂನಿಸ್ ತಮ್ಮದೇ ದೇಶದ ದಿಗ್ಗಜರನ್ನು ಬದಿಗೊತ್ತಿ, ಟೀಮ್ ಇಂಡಿಯಾ ಆಟಗಾರರ ಸಾಮರ್ಥ್ಯವನ್ನು ಮುಕ್ತಕಂಠದಿಂದ ಅಪ್ರಿಶಿಯೇಟ್ ಮಾಡಿದ್ದಾರೆ.

ಭಾರತೀಯರೇ ಗ್ರೇಟ್!

ಪ್ರಶ್ನೆ :  ಸಚಿನ್ ತೆಂಡೂಲ್ಕರ್ Vs ಇಂಜಮಾಮ್-ಉಲ್-ಹಕ್

ಆಯ್ಕೆ : ಸಚಿನ್ ತೆಂಡೂಲ್ಕರ್

ಪ್ರಶ್ನೆ :  ವಿರಾಟ್ ಕೊಹ್ಲಿ Vs ಬಾಬರ್ ಅಜಮ್

ಆಯ್ಕೆ : ವಿರಾಟ್ ಕೊಹ್ಲಿ

ಪ್ರಶ್ನೆ :  ಎಂ.ಎಸ್. ಧೋನಿ Vs ಜಾವೇದ್ ಮಿಯಾಂದಾದ್

ಆಯ್ಕೆ : ಎಂ.ಎಸ್ ಧೋನಿ

ಪ್ರಶ್ನೆ :  ಜಸ್ಪ್ರಿತ್ ಬುಮ್ರಾ Vs ಶಾಹೀನ್ ಅಫ್ರಿದಿ

ಆಯ್ಕೆ : ಜಸ್ಪ್ರೀತ್ ಬುಮ್ರಾ

ಪ್ರಶ್ನೆ : ರೋಹಿತ್ ಶರ್ಮಾ Vs ಫಖರ್ ಜಮಾನ್

ಆಯ್ಕೆ : ರೋಹಿತ್ ಶರ್ಮಾ

ಪ್ರಶ್ನೆ : ರಾಹುಲ್ ದ್ರಾವಿಡ್ Vs ಯೂನಿಸ್ ಖಾನ್

ಆಯ್ಕೆ : ರಾಹುಲ್ ದ್ರಾವಿಡ್

ಪ್ರಶ್ನೆ : ವಿ.ವಿ.ಎಸ್. ಲಕ್ಷ್ಮಣ್ Vs ಮಿಸ್ಬಾ-ಉಲ್-ಹಕ್

ಆಯ್ಕೆ: ವಿ.ವಿ.ಎಸ್. ಲಕ್ಷ್ಮಣ್

ಪ್ರಶ್ನೆ : ಮೊಹಮ್ಮದ್ ಶಮಿ Vs ಮೊಹಮ್ಮದ್ ಅಮೀರ್

ಆಯ್ಕೆ : ಮೊಹಮ್ಮದ್ ಶಮಿ

ಪ್ರಶ್ನೆ : ವೀರೇಂದ್ರ ಸೆಹ್ವಾಗ್ Vs ಸಯೀದ್ ಅನ್ವರ್

ಆಯ್ಕೆ : ಸಯೀದ್ ಅನ್ವರ್

ಇಲ್ಲಿ ರ್ಯಾಪಿಡ್ ಫೈಯರ್ ಸುತ್ತಲ್ಲಿ 9 ಪ್ರಮುಖ ಹೋಲಿಕೆಗಳಲ್ಲಿ 8 ಬಾರಿ ಭಾರತೀಯ ಆಟಗಾರರನ್ನೇ ಶ್ರೇಷ್ಠ ಎಂದು ಆಯ್ಕೆ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಪಾಕಿಸ್ತಾನದಿಂದ ಸ್ಥಾನ ಪಡೆದ ಏಕೈಕ ಆಟಗಾರನೆಂದರೆ ಆರಂಭಿಕ ಬ್ಯಾಟರ್ ಸಯೀದ್ ಅನ್ವರ್ ಮಾತ್ರ. ಪಾಕಿಸ್ತಾನದ ಮಾಜಿ ನಾಯಕ ಹಾಗೂ ಕೋಚ್ ಆಗಿದ್ದ ವಕಾರ್ ಯೂನಿಸ್ ಅವರ ಈ ನಿಷ್ಪಕ್ಷಪಾತ ಮತ್ತು ಕ್ಲಿಯರ್ ಒಪೀನಿಯನ್ ಸೋಶೀಯಲ್ ಮೀಡಿಯಾದಲ್ಲಿ ಹಲ್​ಚಲ್ ಎಬ್ಬಿಸಿದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ವಕಾರ್ ಅವರ ಮೆಚುರಿಟಿ ಬಗ್ಗೆ ಅಪ್ರಿಶಿಯೇಟ್ ಮಾಡ್ತಿದ್ರೆ  ಕೆಲವು ಪಾಕಿಸ್ತಾನಿ ಅಭಿಮಾನಿಗಳು ತಮ್ಮ ದೇಶದ ಜಾವೇದ್ ಮಿಯಾಂದಾದ್ ಅಥವಾ ಮೊಹಮ್ಮದ್ ಅಮೀರ್ ಅವರಂತಹ ಆಟಗಾರರನ್ನು ನಿರ್ಲಕ್ಷಿಸಿದ್ದಕ್ಕೆ ಫುಲ್ ಸಿಟ್ಟಾಗಿದ್ದಾರೆ. ಬಟ್ ಎಂಡ್ ಆಫ್ ದಿ ಡೇ ಸತ್ಯ ಸತ್ಯವೇ ಆಗಿರುತ್ತೆ ಅನ್ನೋದು ಇಲ್ಲಿ ಪ್ರೂವ್ ಆಗಿದೆ.

Shantha Kumari

Leave a Reply

Your email address will not be published. Required fields are marked *