ನವೆಂಬರ್ 12ರಂದು ಭಾರತ- ನೆದರ್ಲೆಂಡ್ ಪಂದ್ಯ – ಮಳೆರಾಯ ಬರಬೇಡಪ್ಪಾ ಅಂತಿದ್ದಾರೆ ಫ್ಯಾನ್ಸ್

ನವೆಂಬರ್ 12ರಂದು ಭಾರತ- ನೆದರ್ಲೆಂಡ್ ಪಂದ್ಯ – ಮಳೆರಾಯ ಬರಬೇಡಪ್ಪಾ ಅಂತಿದ್ದಾರೆ ಫ್ಯಾನ್ಸ್

ಟೀಂ ಇಂಡಿಯಾ ಈಗಾಗ್ಲೇ ವರ್ಲ್ಡ್​ಕಪ್ ಸೆಮಿಫೈನಲ್​​ಗೆ ಎಂಟ್ರಿಯಾಗಿದೆ. ನವೆಂಬರ್​ 15ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ-ನ್ಯೂಜಿಲ್ಯಾಂಡ್ ಹೈವೋಲ್ಟೇಜ್ ಸೆಮಿಫೈನಲ್​ ಮ್ಯಾಚ್​ಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಆದ್ರೆ ಅದಕ್ಕೂ ಮುನ್ನ ಭಾರತೀಯ ತಂಡ ಲೀಗ್​ ಸ್ಟೇಜ್​ನಲ್ಲಿ ತನ್ನ ಕೊನೆಯ ಪಂದ್ಯವನ್ನ ಆಡ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ನೆದರ್​ಲೆಂಡ್​ನ್ನ ಎದುರಿಸಲಿದೆ.

ಇದನ್ನೂ ಓದಿ: ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ ಎಂಟ್ರಿ ಚಾನ್ಸ್ ಇದೆಯಾ ? – ವಾಸಿಂ ಅಕ್ರಂ ಕೊಟ್ಟ ಐಡಿಯಾ ಏನು ಗೊತ್ತಾ?

ಮೊದಲಿಗೆ ಪಿಚ್​ ರಿಪೋರ್ಟ್.. ಹೇಳಿಕೇಳಿ ಬೆಂಗಳೂರಿನ ಚಿನ್ನಸ್ವಾಮಿ ಗ್ರೌಂಡ್ ಬ್ಯಾಟ್ಸ್​​ಮನ್​ಗಳ ಪಾಲಿನ ಮತ್ತೊಂದು ಸ್ವರ್ಗ. ಯಾವತ್ತಿಗೂ ವೆರಿ ಹೈಸ್ಕೋರಿಂಗ್ ಪಿಚ್. ಮೊದಲು ಬ್ಯಾಟಿಂಗ್ ಮಾಡಿದ್ರೆ ಟೀಂ ಇಂಡಿಯಾ ದೊಡ್ಡ ಮೊತ್ತದ ಸ್ಕೋರ್ ಮಾಡಬಹುದು. ಇಲ್ಲಿ ಸವಾಲಾಗಿರೋದು ಒಂದೇ.. ಅದು ಮಳೆಯ ಕಾಟ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಸಂಜೆ ಹೊತ್ತಿನಲ್ಲಿ ಮಳೆಯಾಗುತ್ತಲೇ ಇದೆ. ಹೀಗಾಗಿ ಇಂಡಿಯಾ-ನೆದರ್​ಲ್ಯಾಂಡ್ ಮ್ಯಾಚ್ ವೇಳೆಯೂ ಮಳೆ ಬಂದ್ರೆ ಅನ್ನೋ ಆತಂಕ ಇದ್ದೇ ಇದೆ.

ಆದರೆ, ನೆದರ್​ಲ್ಯಾಂಡ್​ ವಿರುದ್ಧದ ಮ್ಯಾಚ್​ಗೆ ಟೀಂ ಇಂಡಿಯಾದಲ್ಲಿ ಕೆಲ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಹೆಚ್ಚಿದೆ. ಲೀಗ್​ ಸ್ಟೇಜ್​ನಲ್ಲಿ ನಡೆದ 8 ಮ್ಯಾಚ್​ಗಳಲ್ಲೂ ಭಾರತ ತನ್ನ ಫುಲ್​ ಫ್ಲೆಡ್ಜ್ ಟೀಂನ್ನೇ ಕಣಕ್ಕಿಳಿಸಿತ್ತು. ಮೇನ್​ ಪ್ಲೇಯರ್ಸ್​ಗಳಿಗೆ ಯಾರೊಬ್ಬರಿಗೂ ರೆಸ್ಟ್​ ನೀಡಿರಲಿಲ್ಲ. ವರ್ಲ್ಡ್​​ಕಪ್​ನಂಥಾ ಟೂರ್ನಿಯಲ್ಲಿ ರೆಸ್ಟ್ ನೀಡೋಕೂ ಸಾಧ್ಯವಾಗೋದಿಲ್ಲ ಬಿಡಿ. ಆದ್ರೀಗ ಹೇಗೂ ಸೆಮಿಫೈನಲ್​​ಗೆ ಎಂಟ್ರಿಯಾಗಿ ಆಗಿದೆ. ಹೀಗಾಗಿ ನೆದರ್​​ಲ್ಯಾಂಡ್​ ವಿರುದ್ಧದ ಮ್ಯಾಚ್ ಬಗ್ಗೆ ಯಾವುದೇ ವರಿ ಮಾಡಬೇಕಾದ ಅವಶ್ಯಕತೆ ಇಲ್ಲ. ಈ ಕಾರಣಕ್ಕಾಗಿ ಕೆಲ ಮೇನ್ ಪ್ಲೇಯರ್ಸ್​​ಗಳಿಗೆ ಬೆಂಗಳೂರಿನ ಮ್ಯಾಚ್ ವೇಳೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಕೆಲ ವರದಿಗಳ ಪ್ರಕಾರ ನೆದರ್​​ಲ್ಯಾಂಡ್​ ವಿರುದ್ಧದ ಪಂದ್ಯಕ್ಕೆ ವಿರಾಟ್ ಕೊಹ್ಲಿ, ರವೀಂದ್ರ ಜಡೇಜ, ಸೂರ್ಯಕುಮಾರ್ ಯಾದವ್, ಕುಲ್​ದೀಪ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರಿತ್ ಬುಮ್ರಾಗೆ ರೆಸ್ಟ್ ನೀಡುವ​ ಸಾಧ್ಯತೆ ಇದೆ. ಕುಲ್​ದೀಪ್ ಯಾದವ್ ಅಥವಾ ರವೀಂದ್ರ ಜಡೇಜ ಬದಲು ಆರ್.ಅಶ್ವಿನ್​ಗೆ ಆಡೋಕೆ ಚಾನ್ಸ್ ಸಿಗಬಹುದು. ಸೂರ್ಯಕುಮಾರ್ ಯಾದವ್​ ಬದಲು ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಆಡಬಹುದು. ಇನ್ನು ಜಸ್ಪ್ರಿತ್ ಬುಮ್ರಾ ಬದಲು ಕನ್ನಡಿಗ ಪ್ರಸಿಧ್ ಕೃಷ್ಣಗೆ ಪ್ಲೇಯಿಂಗ್​-11ನಲ್ಲಿ ಅವಕಾಶ ಸಿಗಬಹುದು. ಮೊಹಮ್ಮದ್ ಸಿರಾಜ್ ಬದಲು ಶಾರ್ದುಲ್ ಠಾಕುರ್ ಆಡಬಹುದು. ಇವರಿಷ್ಟೇ ಅಲ್ಲ, ಕ್ಯಾಪ್ಟನ್ ರೋಹಿತ್ ಶರ್ಮಾಗೂ ರೆಸ್ಟ್ ನೀಡಿದ್ರೂ ಆಶ್ಚರ್ಯ ಇಲ್ಲ ಅಂತಾ ಹೇಳಲಾಗ್ತಿದೆ. ಇಷ್ಟೂ ಮಂದಿಯ ಪೈಕಿ ಯಾರಿಗೆ ಬೇಕಾದ್ರೂ ರೆಸ್ಟ್ ನೀಡಬಹುದು. ಅದ್ರಲ್ಲೂ ಮೇನ್ ಆಗಿ ಕೇಳಿ ಬರ್ತಿರೋ ಹೆಸರು ವಿರಾಟ್ ಕೊಹ್ಲಿ ಮತ್ತು ಜಸ್ಪ್ತ್ರಿತ್ ಬುಮ್ರಾರದ್ದು. ಒಂದು ವೇಳೆ ರೋಹಿತ್​ಗೆ ವಿಶ್ರಾಂತಿ ನೀಡಿದ್ರು ಅಂದ್ರೆ ಆಗ ಮತ್ತೊಬ್ಬ ಕನ್ನಡಿಗ ಕೆಎಲ್ ರಾಹುಲ್​ ನೆದರ್​​ಲ್ಯಾಂಡ್​ ಮ್ಯಾಚ್​ನಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಬಹುದು.

ಕ್ರಿಕೆಟ್ ಜಗತ್ತಿನ ಕಣ್ಣು ಈಗ ವಿರಾಟ್ ಕೊಹ್ಲಿ ಮೇಲೆಯೇ ನೆಟ್ಟಿದೆ. ಸಚಿನ್ ತೆಂಡೂಲ್ಕರ್​ ದಾಖಲೆ ಮುರಿಯೋಕೆ ಕೊಹ್ಲಿಗೆ ಇನ್ನು ಬೇಕಾಗಿರೋದು ಒಂದೇ ಒಂದು ಸೆಂಚೂರಿ. ಬೆಂಗಳೂರಿನಲ್ಲಿ ನೆದರ್​ಲ್ಯಾಂಡ್​ ವಿರುದ್ಧದ ಮ್ಯಾಚ್​ನಲ್ಲಿ 50ನೇ ಶತಕ ಹೊಡಿಬಹುದು ಅನ್ನೋ ನಿರೀಕ್ಷೆಯಲ್ಲಿ ಕ್ರಿಕೆಟ್ ಫ್ಯಾನ್ಸ್ ಇದ್ದಾರೆ. ಆದ್ರೆ, ನೆದರ್​ಲ್ಯಾಂಡ್​ ಮ್ಯಾಚ್​ ವೇಳೆ ಕೊಹ್ಲಿಯನ್ನ ಆಡಿಸಿಲ್ಲ ಅಂದ್ರೆ ರೆಕಾರ್ಡ್ ಸೆಂಚೂರಿ ಪೋಸ್ಟ್​ಪೋನ್ ಆಗುತ್ತೆ. ಒಂದೋ ಮುಂಬೈನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿಫೈನಲ್​​ನಲ್ಲೇ ಬರಬಹುದು. ಸಚಿನ್ ಹೋಮ್​​ ಗ್ರೌಂಡ್​​ನಲ್ಲಿ ವಿರಾಟ್ ಹೊಸ ದಾಖಲೆ ಬರೆದ್ರೂ ಆಶ್ಚರ್ಯ ಇಲ್ಲ. ಆದ್ರೆ ಚಿನ್ನಸ್ವಾಮಿ ವಿರಾಟ್​ ಕೊಹ್ಲಿಗೆ ಹೋಮ್ ಗ್ರೌಂಡ್ ಇದ್ದಂತೆ. ಐಪಿಎಲ್​ನಲ್ಲಿ ಇಷ್ಟು ವರ್ಷಗಳಿಂದ ಕೊಹ್ಲಿ ಆರ್​ಸಿಬಿ ಪರವೇ ಆಡ್ತಾ ಇದ್ದಾರೆ. ಹೀಗಾಗಿ ನೆದರ್​ಲ್ಯಾಂಡ್ ವಿರುದ್ಧದ ಪಂದ್ಯಕ್ಕೆ ಕೊಹ್ಲಿಗೆ ರೆಸ್ಟ್ ಕೊಟ್ರೆ ಅಭಿಮಾನಿಗಳಿಗೆ ನಿರಾಸೆಯಾಗೋದಂತೂ ಗ್ಯಾರಂಟಿ.

ನೆದರ್​​ಲ್ಯಾಂಡ್ ವಿರುದ್ಧದ ಮ್ಯಾಚ್​ಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೀಗಿದೆ.

ಟೀಂ ಇಂಡಿಯಾ PLAYING-11?

ರೋಹಿತ್ ಶರ್ಮಾ

ಶುಬ್ಮನ್ ಗಿಲ್

ಶ್ರೇಯಸ್ ಅಯ್ಯರ್

ಕೆ.ಎಲ್. ರಾಹುಲ್

ಇಶಾನ್ ಕಿಶನ್

ರವೀಂದ್ರ ಜಡೇಜ

ಶಾರ್ದುಲ್ ಠಾಕೂರ್

ಆರ್.ಅಶ್ವಿನ್

ಮೊಹಮ್ಮದ್ ಶಮಿ

ಮೊಹಮ್ಮದ್ ಸಿರಾಜ್

ಪ್ರಸಿಧ್ ಕೃಷ್ಣ

Sulekha