ಮುಂಬೈನಲ್ಲಿ ಇಂಡಿಯಾ ಮಹಾಮೈತ್ರಿ ಕೂಟದ ಸಭೆ – ಬಿಜೆಪಿಯಿಂದಲೂ ಚುನಾವಣಾ ತಂತ್ರಗಾರಿಕೆ!

ಮುಂಬೈನಲ್ಲಿ ಇಂಡಿಯಾ ಮಹಾಮೈತ್ರಿ ಕೂಟದ ಸಭೆ – ಬಿಜೆಪಿಯಿಂದಲೂ ಚುನಾವಣಾ ತಂತ್ರಗಾರಿಕೆ!

2024ರ ಲೋಕಸಭಾ ಚುನಾವಣೆಗೆ ಪಕ್ಷಗಳು ಈಗಿನಿಂದಲೇ ರಣತಂತ್ರ ರೂಪಿಸುತ್ತಿವೆ. ಮೋದಿ ನೇತೃತ್ವದ ಎನ್​ಡಿಎ ಸರ್ಕಾರವನ್ನ ಸೋಲಿಸುವ ನಿಟ್ಟಿನಲ್ಲಿ ವಿಪಕ್ಷಗಳೆಲ್ಲಾ ಮಹಾಮೈತ್ರಿ ಒಕ್ಕೂಟವನ್ನ ರಚನೆ ಮಾಡಿಕೊಂಡಿವೆ. ಬಿಜೆಪಿ ಕೂಡ ಹಲವು ಪಕ್ಷಗಳನ್ನು ಜೊತೆಯಲ್ಲೇ ಕಟ್ಟಿಕೊಂಡು ತನ್ನ ಬಲ ಹೆಚ್ಚಿಸಿಕೊಳ್ತಿದೆ. ಈಗ ಗುರುವಾರ ಮತ್ತು ಶುಕ್ರವಾರ ಮುಂಬೈನಲ್ಲಿ ಇಂಡಿಯಾ ಮತ್ತು ಎನ್​ಡಿಎ ಒಕ್ಕೂಟಗಳು ಪ್ರತ್ಯೇಕ ಸಭೆ ನಡೆಸಲಿವೆ.

ಇದನ್ನೂ ಓದಿ: ಪ್ರಧಾನಿ ಮೋದಿ ಹೇಳುತ್ತಿರುವುದು ಸುಳ್ಳು.. ಚೀನಾ ಭಾರತದ ಭೂ ಪ್ರದೇಶವನ್ನು ಆಕ್ರಮಿಸಿಕೊಂಡಿದೆ – ರಾಹುಲ್‌ ಗಾಂಧಿ

ಇಂಡಿಯಾ ಒಕ್ಕೂಟದ 26 ಪಕ್ಷಗಳು ಭಾಗಿಯಾಗಿ ತಮ್ಮ ಯೋಜನೆ ಮತ್ತು ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಿವೆ. ಸಭೆಯಲ್ಲಿ ಚುನಾವಣೆಗೆ ಸೀಟು ಹಂಚಿಕೆ ಸೂತ್ರವನ್ನ ಕೈಗೊಳ್ಳುವ ನಿರೀಕ್ಷೆ ಇದೆ. ಹಾಗೂ ಇದೇ ವೇಳೆ ಮೈತ್ರಿಕೂಟವು ತಮ್ಮ ಲೋಗೋವನ್ನು ಅನಾವರಣಗೊಳಿಸಲಿದೆ. ಹಾಗೇ ಬಿಜೆಪಿ ಕೂಡ ಮಹಾರಾಷ್ಟ್ರದ ಎಲ್ಲಾ ಲೋಕಸಭಾ ಕ್ಷೇತ್ರಗಳ ಬಗ್ಗೆ ಚರ್ಚಿಸಲು ನಾಳೆಯೇ ಸಭೆ ಕರೆದಿರೋದು ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನಿವಾಸದಲ್ಲಿ ಆಗಸ್ಟ್ 31 ರಂದು ಎನ್‌ಡಿಎ ನಾಯಕರ ಭೋಜನಕೂಟ ನಡೆಯಲಿದೆ.

ಇನ್ನು ಎನ್​ಡಿಎ ಜೊತೆಗಿನ ಮೈತ್ರಿಯನ್ನ ತಳ್ಳಿ ಹಾಕಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. ಎನ್‌ಡಿಎ ಮತ್ತು INDIA ಮೈತ್ರಿಕೂಟಗಳು ಹೆಚ್ಚಾಗಿ ಜಾತಿವಾದಿ, ಕೋಮುವಾದಿ ಮತ್ತು ಬಂಡವಾಳಶಾಹಿ ನೀತಿಗಳನ್ನು ಹೊಂದಿರುವ ಪಕ್ಷಗಳಾಗಿವೆ. ಆದ್ದರಿಂದ ಅವರೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದಿದ್ದಾರೆ.

suddiyaana