ಬೊಂಬಾಟ್ ಬ್ಯಾಂಟಿಗ್, ಫ್ಲಾಪ್ ಬೌಲಿಂಗ್ – ಗೆಲ್ಲೋ ಪಂದ್ಯ ಟೀಂ ಇಂಡಿಯಾ ಕೈ ಬಿಟ್ಟಿದ್ದು ಹೇಗೆ ಗೊತ್ತಾ?

ಬೊಂಬಾಟ್ ಬ್ಯಾಂಟಿಗ್, ಫ್ಲಾಪ್ ಬೌಲಿಂಗ್ – ಗೆಲ್ಲೋ ಪಂದ್ಯ ಟೀಂ ಇಂಡಿಯಾ ಕೈ ಬಿಟ್ಟಿದ್ದು ಹೇಗೆ ಗೊತ್ತಾ?

ವಿರಾಟ್‌ ಕೊಹ್ಲಿ  ಹಾಗೂ ಋತುರಾಜ್‌ ಗಾಯಕ್ವಾಡ್‌ ಅವರ ಶತಕ ಬಾರಿಸಿದ್ರೂ ದಕ್ಷಿಣ ಆಫ್ರೀಕಾ ವಿರುದ್ಧ ಭಾರತ ಸೋತಿದೆ. ಅದ್ಭುತ ಬ್ಯಾಟಿಂಗ್ ಮಾಡಿದ್ರೂ ಕೂಡ ಬೌಲಿಂಗ್‌ ವೈಫಲ್ಯದಿಂದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 4 ವಿಕೆಟ್‌ಗಳ ಸೋಲು ಅನುಭವಿಸಿತು. ಭಾರತ ನೀಡಿದ್ದ 359 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ, ಏಡೆನ್‌ ಮಾರ್ಕ್ರಮ್‌ ಶತಕ, ಡೆವಾಲ್ಡ್‌ ಬ್ರೆವಿಸ್‌ ಹಾಗೂ ಮ್ಯಾಥ್ಯೂ ಬ್ರೀಟ್ಜ್ಕೆ ಅವರ ಅರ್ಧಶತಕಗಳ ಬಲದಿಂದ 49.2 ಓವರ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು. ಆ ಮೂಲಕ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ತವರಿನಾಚೆ ಅತ್ಯಂತ ದೊಡ್ಡ ಮೊತ್ತವನ್ನು ಚೇಸ್‌ ಮಾಡಿದ ತಂಡ ಎಂಬ ಸಾಧನೆಗೆ ಹರಿಣ ಪಡೆ ಭಾಜನವಾಯಿತು. 3ನೇ ಪಂದ್ಯ ನಿರ್ಣಾಯಕವಾಗಿದ್ದು, ಡಿ 6 ರಂದು ವಿಶಾಖಪಟ್ಟಣಂನಲ್ಲಿ ನಡೆಯಲಿದೆ.

ಇದನ್ನೂ ಓದಿ: KING ಬ್ಯಾಕ್ ಟು ಬ್ಯಾಕ್ ಸೆಂಚುರಿ – BBCIಗೆ ಗುದ್ದಿದ ಗಾಯಕ್ವಾಡ್ ಶತಕ

 ಎರಡನೇ ಏಕದಿನ ಪಂದ್ಯದಲ್ಲಿ ಕೊನೆಯ ಓವರ್‌ವರೆಗೂ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಗೆಲುವಿಗಾಗಿ ಪೈಪೋಟಿ ನಡೆದಿತ್ತು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಇಬ್ಬನಿಯ ಕಾರಣ ಭಾರತದ ಬೌಲರ್‌ಗಳು ಚೆಂಡಿನ ಮೇಲೆ ಹೆಚ್ಚಿನ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಬೃಹತ್‌ ಮೊತ್ತದ ಗುರಿ ನೀಡಿದ ಹೊರತಾಗಿಯೂ ಎದುರಾಳಿ ತಂಡವನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.ದಕ್ಷಿಣ ಆಫ್ರಿಕಾ ತಂಡದ ಚೇಸಿಂಗ್‌ನಲ್ಲಿ ಕ್ಬಿಂಟನ್‌ ಡಿ ಕಾಕ್‌ ಬಿಟ್ಟರೆ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಉಪಯುಕ್ತ ಕೊಡುಗೆ ನೀಡಿದರು. ವಿಶೇಷವಾಗಿ ಆರಂಭಿಕ ಏಡೆನ್‌ ಮಾರ್ಕ್ರಮ್‌ 98 ಎಸೆತಗಳಲ್ಲಿ 110 ರನ್‌ ಗಳಿಸಿ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತದಲ್ಲಿ ಒಡಿಐ ಶತಕ ಸಿಡಿಸಿದ ಮೊದಲ ಆಫ್ರಿಕಾ ಬ್ಯಾಟರ್‌ ಎಂಬ ಸಾಧನೆಗೆ ಮಾರ್ಕ್ರಮ್‌ ಭಾಜನರಾದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ 34 ಎಸೆತಗಳಲ್ಲಿ ಡೆವಾಲ್ಡ್‌ ಬ್ರೆವಿಸ್‌ 54 ರನ್‌ ಗಳಿಸಿ ತಮ್ಮ ತಂಡದ ಮೇಲಿನ ಒತ್ತಡವನ್ನು ಕಡಿಮೆ ಮಾಡಿದರು. ಮ್ಯಾಥ್ಯೂ ಬ್ರೀಟ್ಜ್ಕೆ ( 68 ರನ್‌) ಕೂಡ ಉಪಯುಕ್ತ ಕಾಣಿಕೆ ನೀಡಿದರು. ನಾಯಕ ತೆಂಬಾ ಬವೂಮ ಕೂಡ 46 ರನ್‌ ಗಳಿಸಿದರು. ಇನ್ನು ಕೊನೆಯಲ್ಲಿ ಒತ್ತಡದ ಸನ್ನಿವೇಶದಲ್ಲಿ 15 ಎಸೆತಗಳಲ್ಲಿ 29 ರನ್‌ ಗಳಿಸಿದ ಕಾರ್ಬಿನ್‌ ಬಾಷ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.

Kishor KV