ಸೀನಿಯರ್ಸ್ ಬಿಟ್ಟು ಕೆಟ್ಟ ಇಂಡಿಯಾ – ಸಿರಾಜ್, ಶಮಿ, ಭುವಿ ಬೇಡವಾಗಿದ್ದೇಕೆ?
ವಿಶ್ವಕಪ್ ಗಂಭೀರತೆ ಮರೆತ್ರಾ ಗಂಭೀರ್?

ಸೀನಿಯರ್ಸ್ ಬಿಟ್ಟು ಕೆಟ್ಟ ಇಂಡಿಯಾ – ಸಿರಾಜ್, ಶಮಿ, ಭುವಿ ಬೇಡವಾಗಿದ್ದೇಕೆ?ವಿಶ್ವಕಪ್ ಗಂಭೀರತೆ ಮರೆತ್ರಾ ಗಂಭೀರ್?

ನೋ ಸ್ಟಾರ್ ಕಲ್ಚರ್.. ಓನ್ಲಿ ಯಂಗ್ ಸ್ಟರ್ಸ್ ಟೀಂ ಅನ್ಕೊಂಡೇ ಭಾರತ ತಂಡದ ಹೆಡ್ ಕೋಚ್ ಆದವ್ರು   ಗೌತಮ್ ಗಂಭೀರ್. ಹೇಳಿದಂತೆಯೇ ಕೆಲ ಸೀನಿಯರ್ ಪ್ಲೇಯರ್​ಗಳನ್ನ ತಂಡದಿಂದ ಹೊರಗಿಟ್ಟು ಐಪಿಎಲ್​ ಸ್ಟಾರ್​ಗಳಿಗೆ ಟೀಂ ಇಂಡಿಯಾ ಬಾಗಿಲನ್ನೂ ತೆರೆದ್ರು. ಆದ್ರೆ ಮೈದಾನಕ್ಕೆ ಇಳಿದ್ಮೇಲೇ ತಾನೇ ಅಸಲಿಯತ್ತು ಗೊತ್ತಾಗ್ತಿರೋದು. ದಶಕಗಳ ಕಾಲ ಕಟ್ಟಿದ್ದ ಭಾರತದ ಅಜೇಯ ವಿಜಯ ಸಾಮ್ರಾಜ್ಯ ಪತನವಾಗ್ತಿದೆ. ಒಂದೊಂದೇ ದಾಖಲೆಗಳ ಕಂಬಗಳು ಕುಸಿಯುತ್ತಿವೆ. 2027ರ ಏಕದಿನ ವಿಶ್ವಕಪ್ ಮುಂದಿದ್ರೂ ಪ್ರಯೋಗಗಳು ನಿಂತಿಲ್ಲ. ಈಗ ಬೌಲಿಂಗ್ ಯುನಿಟ್ ಅಂತೂ ಆಟಕ್ಕುಂಟು ಲೆಕ್ಕಕ್ಕಿಲ್ಲ.

ಇದನ್ನೂ ಓದಿ : RCB ಮೆಂಟರ್ ಮೇಲೆ CSK ಕಣ್ಣು – ಚೆನ್ನೈ ಕೋಚ್ ಆಗ್ತಾರಾ DK ಬಾಸ್?

ಕ್ರಿಕೆಟ್ ಈಸ್ ಎ ಟೀಂ ಗೇಮ್. ಯಾರೋ ಒಬ್ರಿಂದ ಮ್ಯಾಚ್ ಗೆಲ್ತೇವೆ ಅನ್ನೋದೆಲ್ಲಾ ಸುಳ್ಳು. ಬ್ಯಾಟಿಂಗ್, ಬೌಲಿಂಗ್ ಹಾಗೇ ಆಲ್​ರೌಂಡರ್ಸ್ ಜೊತೆಗೆ ಫೀಲ್ಡಿಂಗ್ ಕೂಡ ಬೆಸ್ಟ್ ಇದ್ದಾಗ್ಲಷ್ಟೇ ಗೆಲ್ಲೋದು. ಇವ್ರಲ್ಲಿ ಯಾರು ಕೈಕೊಟ್ರೂ ರಿಸಲ್ಟ್ ಕೂಡ ಕೈಕೊಡುತ್ತೆ. ಌಂಡ್ ಅನುಭವಿಗಳು ಪ್ಲಸ್ ಹೊಸಬರ ಕಾಂಬಿನೇಷನ್ ಇರಬೇಕು. ಆದ್ರೆ ಹೆಡ್ ಕೋಚ್ ಗೌತಮ್ ಗಂಭೀರ್ ಹಳಬರನ್ನೆಲ್ಲಾ ಸೈಡ್​ಲೈನ್ ಮಾಡಿ ಹೊಸಬರನ್ನೇ ಮೆರೆಸ್ತೇನೆ ಅಂತಾ ಹೋಗಿ ಈಗ ಕೈಸುಟ್ಟುಕೊಂಡಿದ್ದಾರೆ. ಇದೆಲ್ಲಕ್ಕಿಂತ ಆಘಾತಕಾಗಿ ವಿಚಾರ ಅಂದ್ರೆ 2027ರ ಏಕದಿನ ವಿಶ್ವಕಪ್​ಗೆ ಇನ್ನೂ ಟೀಂ ಸೆಟ್ ಆಗಿಲ್ಲ ಅನ್ನೋದು.

ಅನುಭವಿ ಬೌಲರ್ ಗಳನ್ನೆಲ್ಲಾ ಬಿಟ್ಟು ಕೆಟ್ಟ ಮ್ಯಾನೇಜ್ ಮೆಂಟ್!

ವಿಶ್ವಕಪ್ ಇತಿಹಾಸಗಳನ್ನ ಕೆದಕಿದ್ರೆ ಚಾಂಪಿಯನ್ ಆಗಿರೋ ತಂಡಗಳಲ್ಲಿ ಬೌಲರ್​ಗಳ ಕೊಡುಗೆ ತುಂಬಾನೇ ದೊಡ್ಡದು. ಈ ಹಿಂದೆ ಭಾರತ ಗೆದ್ದದ್ದೂ ಕೂಡ ಬೌಲರ್​ಗಳ ಅಟ್ಯಾಕ್​ನಿಂದಲೇ. ಆದ್ರೆ ಗಂಭೀರ್ ಮಾತ್ರ ಬೌಲಿಂಗ್ ಯುನಿಟ್ ವೀಕ್ ಮಾಡ್ತಾನೇ ಹೋಗ್ತಿದ್ದಾರೆ. ಬುಮ್ರಾ ಬೆಸ್ಟ್ ಬೌಲರ್ ಆಗಿದ್ರೂ ಪದೇಪದೆ ಇಂಜುರಿಯಿಂದ ಪಂದ್ಯಗಳನ್ನ ಮಿಸ್ ಮಾಡಿಕೊಳ್ತಿದ್ದಾರೆ. ಬುಮ್ರಾ ಇದ್ದಾಗಷ್ಟೇ ಇತರೆ ಬೌಲರ್ ಗಳು ಕೂಡ ಸ್ಟ್ರಾಂಗ್ ಪರ್ಫಾಮೆನ್ಸ್ ನೀಡ್ತಾರೆ. ಬುಮ್ರಾ ಇಲ್ಲಾ ಅಂದ್ರೆ ಭಾರತದ ಬೌಲಿಂಗ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಸೋ ಇಲ್ಲಿಗೆ ಬೂಮ್ರಾಗೆ ಆಲ್ಟರ್​ನೇಟಿವ್ ಆಪ್ಶನ್ ತಂಡದಲ್ಲಿಲ್ಲ. ಆದ್ರೆ ಏಕದಿನ ವಿಶ್ವಕಪ್​ನಲ್ಲಿ ಆಡೋ ಎಲ್ಲಾ ಸಾಮರ್ಥ್ಯ ಇದ್ರೂ ತಂಡದಿಂದ ಯಾರೆಲ್ಲಾ ಹೊರಗಿದ್ದಾರೆ ಅನ್ನೋದನ್ನ ಹೇಳ್ತಾ ಹೋಗ್ತೇನೆ ನೋಡಿ.

ಮ್ಯಾಚ್ ವಿನ್ನರ್ಸ್ ಬೇಡವಾದ್ರಾ?

121 ಪಂದ್ಯಗಳಲ್ಲಿ 194 ಏಕದಿನ ವಿಕೆಟ್ಸ್ ಪಡೆದಿರೋ ಕುಲ್ದೀಪ್ ಹೊರಗೆ

108 ಏಕದಿನ ಪಂದ್ಯಗಳಲ್ಲಿ 206 ವಿಕೆಟ್ಸ್ ಪಡೆದಿರುವ ಮೊಹಮ್ಮದ್ ಶಮಿ

2015ರಲ್ಲಿ 17 ವಿಕೆಟ್, 2019ರಲ್ಲಿ 14 ವಿಕೆಟ್, 2023ರಲ್ಲಿ 24 ವಿಕೆಟ್

2023ರಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ನಲ್ಲಿ ಶಮಿ 7 ವಿಕೆಟ್

121 ಪಂದ್ಯಗಳಲ್ಲಿ 141 ವಿಕೆಟ್ಸ್ ಪಡೆದಿರುವ ಭುವನೇಶ್ವರ್ ಕೂಡ ಔಟ್

50 ಏಕದಿನ ಪಂದ್ಯಗಳಲ್ಲಿ 76 ವಿಕೆಟ್ಸ್ ಪಡೆದಿರುವ ಸಿರಾಜ್ ಗೂ ಇಲ್ಲ ಚಾನ್ಸ್

210 ಏಕದಿನ ಪಂದ್ಯಗಳಲ್ಲಿ 232 ವಿಕೆಟ್ಸ್ ಪಡೆದಿರೋ ಜಡೇಜಾ ಸೈಡ್ ಲೈನ್

ಇಲ್ಲಿ ಟೀಂ ಇಂಡಿಯಾದಲ್ಲಿ ಚಾನ್ಸ್ ಕೊಡದೆ ಯಾರನ್ನೆಲ್ಲಾ ಹೊರಗಿಟ್ಟಿದ್ದಾರೋ ಇವ್ರೆಲ್ಲಾ ಸಿಂಗಲ್ ಆಗಿ ನಿಂತು ಮ್ಯಾಚ್ ವಿನ್ ಮಾಡಿರೋ ಸಾಮರ್ಥ್ಯ ಇರೋ ಬೌಲರ್​ಗಳು. ಅದ್ರಲ್ಲೂ 2027ರ ಏಕದಿನ ವಿಶ್ವಕಪ್ ನಲ್ಲಿ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಹಾಗೇ ಮೊಹಮ್ಮದ್ ಶಮಿ ದಿ ಬೆಸ್ಟ್ ಪೇಸ್ ಬೌಲಿಂಗ್ ಕಾಂಬಿನೇಷನ್ ಆಗ್ತಾರೆ. ಆದ್ರೆ ಗಂಭೀರ್ ಅವ್ರ ಫೇವರಿಸಂಗಾಗಿ ಸ್ಟಾರ್ ಆಟಗಾರರಿಗೆ ಅವಕಾಶಗಳೇ ಸಿಗ್ತಿಲ್ಲ. ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್​ಗೆ ಎಕ್ಸ್​ಪೀರಿಯನ್ಸ್ ಕಡಿಮೆ.. ಅರ್ಶದೀಪ್ ಮತ್ತು ಪ್ರಸಿದ್ಧ್ ಕೃಷ್ಣ ಇದ್ರೂ ರನ್ಸ್​ ಕೊಡೋದ್ರಲ್ಲಿ ಉದಾರಿಗಳು. ಹರ್ಷಿತ್ ರಾಣಾ ಆನ್ ಌಂಡ್ ಆಫ್.. ಡಿಪೆಂಡ್ ಆಗೋಕೆ ಆಗಲ್ಲ. ಸೋ ಸದ್ಯಕ್ಕಿರೋ ತಂಡದಲ್ಲಿ ಬುಮ್ರಾ ಒಬ್ರನ್ನ ಬಿಟ್ರೆ ಉಳಿದವ್ರೆಲ್ಲಾ ಸಪೋರ್ಟಿಂಗ್ ಬೌಲರ್ಸ್ ಅಷ್ಟೇ ಇರೋದು. ಹಾಗಂತ ಬರೀ ಸೀನಿಯರ್​ಗಳೇ ಇರ್ಲಿ ಹೊಸಬರು ಬೇಡ ಅಂತಾ ಹೇಳ್ತಿಲ್ಲ. ಇಬ್ಬರ ಕಾಂಬಿನೇಷನ್ ಇರ್ಬೇಕು. ಅನುಭವಿಗಳ ಆಟ ನೋಡ್ತಾ ನೋಡ್ತಾ ಹೊಸಬರು ಕಲೀಬೇಕು. ಆದ್ರಿಲ್ಲಿ ಸೀನಿಯರ್​ಗಳೇ ಇಲ್ಲ ಅಂದಾಗ ಕಲಿಯೋದಾದ್ರೂ ಯಾರಿಂದ.

Shantha Kumari