69 ವರ್ಷಗಳ ಹಳೆಯ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ಇಂಗ್ಲೆಂಡ್ – ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಮುಖಭಂಗ

ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 28 ರನ್‌ಗಳಿಂದ ಭಾರತವನ್ನು ಸೋಲಿಸಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ಮೂಲಕ ಆಂಗ್ಲರ ತಂಡ ಹೊಸ ದಾಖಲೆ ನಿರ್ಮಿಸಿದೆ. 69 ವರ್ಷಗಳ ಇತಿಹಾಸದಲ್ಲಿ ಹೈದರಾಬಾದ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ಮೊದಲ ತಂಡ ಇಂಗ್ಲೆಂಡ್ ಆಗಿದೆ.
ಇದನ್ನೂ ಓದಿ: ಕೆ.ಎಲ್ ಶತಕ ಮಿಸ್.. ಗಿಲ್ ಕೆರಿಯರ್ ಗಿರ ಗಿರ – ಎರಡನೇ ದಿನದ ಟೆಸ್ಟ್ ಪಂದ್ಯದ ಹೈಲೆಟ್ಸ್
ಟೀಮ್ ಇಂಡಿಯಾ ಆಟಗಾರರು ಈ ರೀತಿ ಸೋಲೊಪ್ಪಿಕೊಳ್ಳುತ್ತಾರೆ ಅಂತಾ ಯಾರು ಕೂಡ ಅಂದುಕೊಂಡಿರಲಿಲ್ಲ. ನಮ್ಮದೇ ಗ್ರೌಂಡ್ನಲ್ಲಿ, ಸ್ಪಿನ್ನರ್ಸ್ಗಳಿಗೆ ಫೇವರ್ ಆಗಿರೋ ಪಿಚ್ನಲ್ಲಿ ಎಲ್ಲಾ ವಿಭಾಗದಲ್ಲೂ ಟೀಂ ಇಂಡಿಯಾಗಿಂತ ಇಂಗ್ಲೆಂಡ್ ತಂಡ ನೆಕ್ಟ್ಸ್ ಲೆವೆಲ್ನಲ್ಲಿ ಪರ್ಫಾಮ್ ಮಾಡಿದೆ. ಬ್ಯಾಟಿಂಗ್ನಲ್ಲೂ ಅಷ್ಟೇ, ಬೌಲಿಂಗ್ನಲ್ಲೂ ಅಷ್ಟೇ ಇಂಗ್ಲೆಂಡ್ ಟಾಪ್ ಕ್ಲಾಸ್. ಸೆಕೆಂಡ್ ಇನ್ನಿಂಗ್ಸ್ನಲ್ಲಂತೂ ಬೌಲಿಂಗ್ ಮತ್ತು ಬೌಟಿಂಗ್ ಎರಡರಲ್ಲೂ ಫೇಲ್ ಆದ್ರು. ಒಬ್ಬರೇ ಒಬ್ಬರು ಸೆಂಚೂರಿ ಹೊಡೆದಿಲ್ಲ. ಇಂಗ್ಲೆಂಡ್ ಓಲಿ ಪಾಪ್ 196 ರನ್ ಹೊಡೆದಿದ್ದಾರೆ. ಘಟಾನುಘಟಿ ಸ್ಪಿನ್ನರ್ಸ್ಗಳಿದ್ರೂ ಓಲಿ ಪಾಪ್ರನ್ನ ಔಟ್ ಮಾಡಲು ಸಿಕ್ಕಾಪಟ್ಟೆ ಒದ್ದಾಡಿದ್ದಾರೆ.
ಸೆಕೆಂಡ್ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಬಾಟ್ಸ್ಮನ್ಗಳನ್ನಂತೂ ಇಂಗ್ಲೆಂಡ್ನ ಟಾಮ್ ಹಾರ್ಟ್ಲಿಯಿಂದಾಗಿ ಪೆವಿಲಿಯನ್ಗೆ ಪರೇಡ್ ಮಾಡಿದ್ರು. ಒಬ್ಬರೇ 7 ವಿಕೆಟ್ ತೆಗೆದಿದ್ದಾರೆ. ನಮ್ಮ ಬ್ಯಾಟ್ಸ್ಮನ್ಗಳ ಕಡೆಯಿಂದ ಫೈಟೇ ಇರಲಿಲ್ಲ. ಇಂಥಾ ಸ್ವಿಚ್ಯುವೇಶನ್ನಲ್ಲಿ ನಿಜಕ್ಕೂ ಟೀಂ ಇಂಡಿಯಾ ರಿಷಬ್ ಪಂತ್ರನ್ನ ಮಿಸ್ ಮಾಡಿಕೊಳ್ತಾ ಇದೆ. ಪಂತ್ರಂಥಾ ಒಬ್ಬ ಫೀಯರ್, ಮ್ಯಾಚ್ ವಿನ್ನಿಂಗ್ ಬ್ಯಾಟ್ಸ್ಮನ್ನ ಅಗತ್ಯ ತಂಡಕ್ಕೆ ತುಂಬಾನೆ ಇದೆ. ಆ್ಯಕ್ಚುವಲಿ ರಿಷಬ್ ಪಂತ್ರಂಥಾ ಮತ್ತೊಬ್ಬ ಆಟಗಾರ ಟೀಂ ಇಂಡಿಯಾ ಸಿಕ್ಕಿದ್ದಾರೆ. ರಿಂಕು ಸಿಂಗ್. ಶ್ರೇಯಸ್ ಅಯ್ಯರ್ ಅಥವಾ ಶುಬ್ಮನ್ ಗಿಲ್ರನ್ನ ಡ್ರಾಪ್ ಮಾಡಿ ರಿಂಕು ಸಿಂಗ್ಗಾದ್ರೂ ಚಾನ್ಸ್ ನೀಡಬಹುದು. ಟೆಸ್ಟ್ನಲ್ಲೂ ಆಡೋ ಕೆಪಾಸಿಟಿ ರಿಂಕು ಸಿಂಗ್ಗೆ ಇದೆ. ಸೋ ಸದ್ಯಕ್ಕೆ ರಿಷಬ್ ಪಂತ್ ಪ್ಲೇಸ್ನ್ನ ರಿಂಕು ಸಿಂಗ್ ರಿಪ್ಲೇಸ್ ಮಾಡಬಹುದು. ಹೀಗಾಗಿ ಮುಂದಿನ ಮ್ಯಾಚ್ಗಳಲ್ಲಾದ್ರೂ ರಿಂಕು ಸಿಂಗ್ಗೆ ಚಾನ್ಸ್ ಸಿಗುತ್ತಾ ನೋಡ್ಬೇಕಿದೆ. ಫಸ್ಟ್ ಎರಡು ಟೆಸ್ಟ್ಗಳಿಗೆ ಅನೌನ್ಸ್ ಆಗಿದ್ದ ಸ್ಕ್ವಾಡ್ನಲ್ಲಿ ರಿಂಕು ಸಿಂಗ್ ಹೆಸರಿಲ್ಲ. ಉಳಿದ ಮೂರು ಮ್ಯಾಚ್ಗಳಿಗಾದ್ರೂ ಅವರನ್ನ ಪಿಕ್ ಮಾಡ್ತಾರಾ ನೋಡ್ಬೇಕಿದೆ.
ಇನ್ನು ಇಂಗ್ಲೆಂಡ್ ಟೀಮ್ನ ಬಗ್ಗೆಯೂ ಒಂದಷ್ಟು ಹೇಳಲೇಬೇಕು. ಅವರು ಕಂಪ್ಲೀಟ್ ಪ್ಲ್ಯಾನ್ ಮಾಡಿಕೊಂಡೇ ಭಾರತಕ್ಕೆ ಬಂದಿದ್ದಾರೆ. ನಮ್ಮ ಸ್ಪಿನ್ನರ್ಸ್ಗಳನ್ನ ಹೇಗೆ ಫೇಸ್ ಮಾಡಬೇಕು. ನಮ್ಮ ಬ್ಯಾಟ್ಸ್ಮನ್ಗಳಿಗೆ ಸ್ಪಿನ್ನರ್ಸ್ಗಳ ಮೂಲಕವೇ ಹೇಗೆ ಕೌಂಟರ್ ಅಟ್ಯಾಕ್ ಮಾಡ್ಬೇಕು. ಬೇಸ್ಬಾಲ್ ಕ್ರಿಕೆಟ್ ಇಲ್ಲಿ ನಡೆಯುತ್ತಾ? ಇಲ್ವಾ? ಇವೆಲ್ಲವನ್ನೂ ಸ್ಟಡಿ ಮಾಡಿ, ಪ್ಲ್ಯಾನ್ ಮಾಡಿಯೇ ಬಂದಿರೋದು. ಅದ್ರಲ್ಲೂ ಅವರ ಕೋಚ್ ಇದ್ದಾರಲ್ಲಾ. ಬ್ರೆಂಡನ್ ಮೆಕಲಂ..ಮಾಸ್ಟರ್ ಸ್ಟ್ರ್ಯಾಟಜಿಸ್ಟ್. ವರ್ಲ್ಡ್ಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ಯಾವ ರೀತಿ ನಮ್ಮ ಪ್ರತಿಯೊಬ್ಬ ಬ್ಯಾಟ್ಸ್ಮನ್ಗಳಿಗೆ ಪ್ರತ್ಯೇಕ ತಂತ್ರ ಹೆಣೆದಿತ್ತೋ, ಅದೇ ರೀತಿ ಇಂಗ್ಲೆಂಡ್ ಕೂಡ ನಮ್ಮ ಪ್ರತಿಯೊಬ್ಬ ಬ್ಯಾಟ್ಸ್ಮನ್ಗಳೂ ಕೌಂಟರ್ ಸ್ಟ್ರ್ಯಾಟಜಿ ಮಾಡಿದೆ. ಇದು ಅವರ ಬೌಲಿಂಗ್ ಸೆಲೆಕ್ಷನ್, ಫೀಲ್ಡಿಂಗ್ ಪ್ಲೇಸ್ಮೆಂಟ್ನಲ್ಲೇ ಗೊತ್ತಾಗುತ್ತೆ. ಅಂತೂ ಫಸ್ಟ್ ಟೆಸ್ಟ್ನ್ನ ಟೀಂ ಇಂಡಿಯಾ ಸೋತಾಗಿದೆ.