ಟೀಂ ಇಂಡಿಯಾಗೆ CHASING ಚಿಂತೆ – 12 ವರ್ಷ.. 150+ ರನ್ಸ್.. 2 ಗೆಲುವು
ಸಚಿನ್ ನಿವೃತ್ತಿ ಬಳಿಕ ಬ್ಯಾಟಿಂಗ್ ವೀಕ್?

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತಿದ್ದಕ್ಕಿಂತ ಇಷ್ಟು ಸಣ್ಣ ಮೊತ್ತವನ್ನ ಚೇಸ್ ಮಾಡೋಕೆ ಆಗ್ಲಿಲ್ವಲ್ಲ ಅನ್ನೋದೇ ಕೋಟ್ಯಂತರ ಭಾರತೀಯರ ಸಿಟ್ಟಿಗೆ ಕಾರಣ ಆಗಿದೆ. 193 ರನ್.. 100ಕ್ಕೂ ಹೆಚ್ಚು ಓವರ್ಸ್.. ಒಂದಿಡೀ ದಿನ ಟೈಂ.. ರವೀಂದ್ರ ಜಡೇಜಾ ಏಕಾಂಗಿ ಹೋರಾಟ. ಕೊನೆಗೆ 22 ರನ್ಗಳಿಂದ ಸೋಲು. ಹಾಗಂತ ಭಾರತ ಈ ರೀತಿ ಸೋಲ್ತಿರೋದು ಇದೇ ಮೊದ್ಲಲ್ಲ. ಕಳೆದೊಂದು ದಶಕದಿಂದಲೂ ಇದೇ ಕಥೆ.. ಚೇಸಿಂಗ್ ಅಂತಾ ಬಂದ್ರೆ ಭಾರತ ಕಂಪ್ಲೀಟ್ ಫ್ಲ್ಯಾಪ್
ಇದನ್ನೂ ಓದಿ : ಕೇವಲ 30 ದಿನಗಳಲ್ಲಿ ಮಲೆ ಮಾದಪ್ಪನ ಹುಂಡಿಗೆ 2.36 ಕೋಟಿ ಕಾಣಿಕೆ!
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ನಾಲ್ವರು ಬ್ಯಾಟ್ಸ್ಮನ್ಗಳು ಐದು ಶತಕಗಳನ್ನ ಬಾರಿಸಿದ್ರು. ಹಾಗೇ ಎರಡನೇ ಟೆಸ್ಟ್ ಮ್ಯಾಚಲ್ಲಿ ಶುಭ್ಮನ್ ಗಿಲ್ ಡಬಲ್ ಸೆಂಚುರಿ ಜೊತೆಗೆ ಒಂದು ಸೆಂಚುರಿ ಸಿಡಿಸಿದ್ರು. ಇನ್ನು ಮೂರನೇ ಮ್ಯಾಚ್ನ ಫಸ್ಟ್ ಇನ್ನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಕೂಡ ಶತಕ ಬಾರಿಸಿದ್ರು. ಹೀಗೆ ಸ್ಟಾರ್ ಬ್ಯಾಟರ್ಗಳೇ ಇದ್ದು 193 ರನ್ ಈಸಿಯಾಗಿ ಗೆಲ್ತಾರೆ ಅಂತಾನೇ ಇಡೀ ಕ್ರಿಕೆಟ್ ಜಗತ್ತೇ ಅನ್ಕೊಂಡಿತ್ತು. ಅಷ್ಟೇ ಯಾಕೆ ಭಾರತದ ದಿಗ್ಗಜರು ಕೂಡ ನಮ್ದೇ ಗೆಲುವು ಅಂತಾ ಆಲ್ರೆಡಿ ಪ್ರೆಡಿಕ್ಟ್ ಮಾಡಿದ್ರು. ಬಟ್ ಕೊನೆಗೆ 22 ರನ್ಗಳಿಂದ ಇಂಗ್ಲೆಂಡ್ಗೆ ಶರಣಾಗಬೇಕಾಯ್ತು. ಹಾಗಂತ ಲಾರ್ಡ್ಸ್ ಟೆಸ್ಟ್ ಮಾತ್ರವಲ್ಲ.. ದಶಕದಿಂದಲೂ ಚೇಸಿಂಗ್ ಬಂತಂದ್ರೆ, ಟೀಮ್ ಇಂಡಿಯಾ ಗೆಲ್ಲೋಕಾಗ್ದೇ ಒದ್ದಾಡ್ತಿದೆ.
2013ರ ಬಳಿಕ 150+ ಸ್ಕೋರ್ ಚೇಸ್ ಮಾಡಿದ್ದೇ 2 ಸಲ!
ನಿಜ. ಅಕ್ಷರಶಃ ನಿಜ. ಈ ನಂಬರ್ಸ್ ಕೇಳಿದ್ರೆ ನಿಮಗೂ ಶಾಕ್ ಆಗ್ಬೋದು. ಅಷ್ಟಕ್ಕೂ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತಕ್ಕೆ ಚೇಸಿಂಗ್ ಪ್ರಾಬ್ಲಂ ಶುರುವಾಗಿದ್ದೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಿವೃತ್ತಿ ಬಳಿಕ. ಸಚಿನ್ 2013ರಲ್ಲಿ ನಿವೃತ್ತಿಯಾಗಿದ್ರು. 2013ರ ಬಳಿಕ ಟೀಮ್ ಇಂಡಿಯಾ 150+ ಟಾರ್ಗೆಟ್ ಅನ್ನ ಟೆಸ್ಟ್ನಲ್ಲಿ ಸಕ್ಸಸ್ಫುಲ್ ಆಗಿ ಚೇಸ್ ಮಾಡಿರೋದು ಜಸ್ಟ್ 2 ಬಾರಿ ಮಾತ್ರ. 2021ರಲ್ಲಿ ಬ್ರಿಸ್ಬೇನ್ನಲ್ಲಿ ಆಸಿಸ್ ವಿರುದ್ಧ ಗೆದ್ರೆ, 2024ರ ಇಂಗ್ಲೆಂಡ್ ವಿರುದ್ಧದ ರಾಂಚಿ ಟೆಸ್ಟ್ ಮತ್ತೊಂದು. ಸೋ ಈ ಎರಡೇ ಮ್ಯಾಚ್ಗಳಲ್ಲಿ ಭಾರತ 150ಕ್ಕಿಂತ ಹೆಚ್ಚು ಸ್ಕೋರ್ನ ಚೇಸ್ ಮಾಡಿ ಗೆದ್ದಿರೋದು. 2013 ಬಳಿಕ ಒಟ್ಟು 26 ಪಂದ್ಯಗಳಲ್ಲಿ ಟೀಮ್ ಇಂಡಿಯಾ 150ಕ್ಕೂ ಹೆಚ್ಚಿನ ಟಾರ್ಗೆಟ್ ಚೇಸ್ ಮಾಡಿದೆ. ಈ ಪೈಕಿ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಬಿಟ್ರೆ 17 ಪಂದ್ಯಗಳಲ್ಲಿ ಸೋಲುಂಡಿದೆ. ಇನ್ನುಳಿದ 7 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.
ಬ್ಯಾಟರ್ ಗಳಿಂದ ಬರ್ತಿಲ್ಲ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್!
ಭಾರತದ ಈ ಕಳಪೆ ದಾಖಲೆಗೆ ಕಾರಣವೇ ಬ್ಯಾಟರ್ಗಳ ಪ್ರದರ್ಶನ. ಟೀಮ್ ಇಂಡಿಯಾದ ಬ್ಯಾಟಿಂಗ್ ಯುನಿಟ್ನಿಂದ ಸಂಘಟಿತ ಹೋರಾಟವೇ ಬರ್ತಿಲ್ಲ. ಕೆಲವೇ ಕೆಲವು ಬ್ಯಾಟ್ಸ್ಮನ್ಗಳ ಮೇಲೆ ಡಿಪೆಂಡ್ ಆಗ್ತಿದೆ. ಈ ಹಿಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಾ ಆಟಗಾರರಾದ್ರೆ, ಈಗ ಶುಭ್ಮನ್ ಗಿಲ್, ಕೆ.ಎಲ್ ರಾಹುಲ್, ರಿಷಭ್ ಪಂತ್ ರಂತಾ ಆಟಗಾರರ ಮೇಲೆ ತಂಡ ಡಿಪೆಂಡ್ ಆಗಿದೆ. ಅದ್ರಲ್ಲೂ ಚೇಸಿಂಗ್ ವೇಳೆ ಟೀಮ್ ಇಂಡಿಯಾಗೆ ದೊಡ್ಡ ಹೊರೆಯಾಗ್ತಿರೋದೆ ದಿಢೀರ್ ಕುಸಿತ. ಇಂಗ್ಲೆಂಡ್ ಪ್ರವಾಸದಲ್ಲೂ ಇದು ಪದೇ ಪದೇ ಕಾಣ್ತಿದೆ. ಟಾಪ್ ಆರ್ಡರ್ ಬ್ಯಾಟರ್ಸ್ ಬೇಗ ಔಟಾದ್ರೆ ಉಳಿದ ಆಟಗಾರರ ಒತ್ತಡ ಹೆಚ್ಚಾಗ್ತಿದೆ. ಒತ್ತಡ ಅಂತಿಮವಾಗಿ ಸೋಲಿನೊಂದಿಗೆ ಅಂತ್ಯವಾಗ್ತಿದೆ. ಲಾರ್ಡ್ಸ್ ಟೆಸ್ಟ್ನಲ್ಲೂ ಆಗಿದ್ದು ಇದೇ. 4ನೇ ದಿನದಾಟದ ಅಂತ್ಯದಲ್ಲೇ 4 ವಿಕೆಟ್ ಕಳೆದುಕೊಂಡ ಪರಿಣಾಮ ಉಳಿದ ಆಟಗಾರರು ಪ್ರೆಶರ್ನಲ್ಲಿದ್ರು. ಆ ಪ್ರೆಶರ್ನ ನಿಭಾಯಿಸುವಲ್ಲಿ ಫೇಲ್ಯೂರ್ ಆಗಿ ಸೋಲೊಪ್ಪಿಕೊಂಡ್ರು.
ಬಿಗ್ ಹಿಟ್ ಗಳ ಮೋಹ.. ಪಾರ್ಟ್ನರ್ ಶಿಪ್ ಬರ್ತಿಲ್ಲ!
ಟೆಸ್ಟ್ ಕ್ರಿಕೆಟ್ ಅಂದ್ರೇನೇ ಪೇಷನ್ಸ್ ಗೇಮ್. ಇಲ್ಲಿ ನೀವೆಲ್ಲಾ ಬಾಲ್ ಫೇಸ್ ಮಾಡಿದ್ರಿ ಅನ್ನೋದು ಮ್ಯಾಟ್ರ್ ಆಗಲ್ಲ. ಬಟ್ ಎಷ್ಟು ರನ್ಸ್ ಬಂತು ಅನ್ನೋದೇ ಕೊನೆಗೆ ಇಂಪಾಟೆಂಟ್ ಆಗೋದು. ಅದ್ರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ಪಾರ್ಟನರ್ಶಿಪ್ಗಳೇ ಇಂಪ್ಯಾಕ್ಟ್ ಮಾಡೋದು. ಒಂದೊಳ್ಳೆ ಜೊತೆಯಾಟ ಬಂದ್ರೆ ಒಂದಿಡಿ ಸೆಷನ್ನ ಡಾಮಿನೇಟ್ ಮಾಡಬಹುದು. ಎದುರಾಳಿ ತಂಡವನ್ನ ಒತ್ತಡಕ್ಕೆ ಸಿಲುಕಿಸಬಹುದು. ಆದ್ರೆ ಈಗಿರುವ ಟೀಮ್ ಇಂಡಿಯಾಗೆ ಪಾರ್ಟ್ನರ್ಶಿಪ್ನ ಕೊರತೆ ಕಾಡ್ತಿದೆ. ಈ ಹಿಂದಿನ ಎಡ್ಜ್ಬಾಸ್ಟನ್ ಟೆಸ್ಟ್ನಲ್ಲಿ ಜೊತೆಯಾಟಗಳು ಗೆಲುವಿಗೆ ದಾರಿ ಮಾಡಿಕೊಟ್ಟಿದ್ವು. ಲಾರ್ಡ್ಸ್ ಟೆಸ್ಟ್ನಲ್ಲೂ ಕೆ.ಎಲ್.ರಾಹುಲ್-ರಿಷಭ್ ಪಂತ್ ಜೊತೆಯಾಟ ಫಸ್ಟ್ ಇನ್ನಿಂಗ್ಸ್ನಲ್ಲಿ ಮೇಲುಗೈ ತಂದುಕೊಟ್ಟಿತ್ತು. ಬಟ್ 2ನೇ ಇನ್ನಿಂಗ್ಸ್ನಲ್ಲಿ ಇಂತಹ ಪಾರ್ಟ್ನರ್ಶಿಪ್ ಬರಲೇ ಇಲ್ಲ. ಹೀಗಾಗೇ ಪಂದ್ಯವನ್ನ ಸೋಲಬೇಕಾಯ್ತು.

ನೋಡಿರಿ

