ಪಾಂಡ್ಯಗೆ 10 ಓವರ್ ಬೌಲಿಂಗ್ ಕಷ್ಟ – ODI ಬಾಗಿಲು ಮುಚ್ಚಿದ್ರಾ ಗಂಭೀರ್?
ವಿಶ್ವಕಪ್ ಸೇನೆಗೆ ನಿತೀಶ್ ರೆಡ್ಡಿ ಫಿಕ್ಸ್

ಪಾಂಡ್ಯಗೆ 10 ಓವರ್ ಬೌಲಿಂಗ್ ಕಷ್ಟ – ODI ಬಾಗಿಲು ಮುಚ್ಚಿದ್ರಾ ಗಂಭೀರ್?ವಿಶ್ವಕಪ್ ಸೇನೆಗೆ ನಿತೀಶ್ ರೆಡ್ಡಿ ಫಿಕ್ಸ್

ಐಪಿಎಲ್ ಆದ್ಮೇಲೆ ಟೀಂ ಇಂಡಿಯಾದ ಪ್ರತೀ ಸರಣಿಗೂ ಟೀಂ ಅನೌನ್ಸ್ ಆದಾಗ ಹಾರ್ದಿಕ್ ಪಾಂಡ್ಯ ಹೆಸ್ರೇ ಮಿಸ್ ಆಗಿರುತ್ತೆ. ಕಳೆದ ನಾಲ್ಕು ತಿಂಗಳಿಂದ ಫಿಟ್​ನೆಸ್ ಕ್ಲಿಯರೆನ್ಸ್ ಪಾಸ್ ಆಗೋಕೆ ಆಗಿಲ್ಲ. ಈ ಇಂಜುರಿ ಆಘಾತಕ್ಕೆ ದೊಡ್ಡ ಬೆಲೆಯನ್ನೇ ತೆರಬೇಕಾಗಿದೆ. ಏಕದಿನ ವಿಶ್ವಕಪ್​ ತಂಡದಿಂದಲೇ ಹೊರಬೀಳೋ ಟೆನ್ಷನ್ ಸ್ಟಾರ್ಟ್ ಆಗಿದೆ. ಗೌತಮ್ ಗಂಭೀರ್ ಹೇಳಿರೋ ಮಾತುಗಳು ಹಾರ್ದಿಕ್ ಪಾಂಡ್ಯ ಫ್ಯೂಚರ್ ಬಗ್ಗೆ ದೊಡ್ಡ ಪ್ರಶ್ನೆಗಳನ್ನ ಮೂಡಿಸಿದೆ. ನಿತೀಶ್ ಕುಮಾರ್ ರೆಡ್ಡಿ ಎಂಟ್ರಿ ಪಾಂಡ್ಯ ಸ್ಥಾನಕ್ಕೆ ಕುತ್ತು ತಂದಿದೆ.

ಇದನ್ನೂ ಓದಿ : ಪಂತ್ ಕೈಗೆ ‘ರೆಸ್ಟ್ ಆಫ್ ಇಂಡಿಯಾ’ -ಏಷ್ಯನ್ ಗೇಮ್‌ನಿಂದ ನಿತೀಶ್ OUT

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಅನೌನ್ಸ್ ಆದಾಗ ಅದ್ರಲ್ಲೂ ಕೂಡ ಹಾರ್ದಿಕ್ ಪಾಂಡ್ಯ ಹೆಸರಿಲ್ಲ. 2027ರ ಏಕದಿನ ವಿಶ್ವಕಪ್​ ತಂಡದಲ್ಲಿ ಸೀಮ್ ಬೌಲಿಂಗ್ ಆಲ್​ರೌಂಡರ್ ಆಗಿ ಹಾರ್ದಿಕ್ ಪಾಂಡ್ಯರನ್ನ ರೆಡಿ ಮಾಡೋಕೆ ಬಿಸಿಸಿಐ ರೆಡಿ ಆಗಿತ್ತು. ಯಾಕಂದ್ರೆ ವಿಶ್ವಕಪ್ ನಡೆಯಲಿರೋ ಸೌತ್ ಆಫ್ರಿಕಾದಲ್ಲಿ ಸೀಮ್ ಬೌಲಿಂಗ್ ಆಲ್​ರೌಂಡರ್ಸ್​ಗೆ ಅಗತ್ಯತೆ ಜಾಸ್ತಿ ಇತ್ತು. ಸೋ ಹಾರ್ದಿಕ್​ಗೆ ಫಸ್ಟ್ ಪ್ರಿಯಾರಿಟಿ ನೀಡಲಾಗಿತ್ತು. ಆದ್ರೆ ಹಾರ್ದಿಕ್ ಪಾಂಡ್ಯ ಫಿಟ್​ ಇಲ್ಲದ ಕಾರಣ ಈಗ ಆಲ್ಟರ್ನೇಟಿವ್ ಪ್ಲ್ಯಾನ್ ಸಿದ್ಧವಾಗಿದೆ.

ಹಾರ್ದಿಕ್ ಪಾಂಡ್ಯ ಬದಲಿಗೆ ಸ್ಥಾನ ಪಡೆದ ನಿತೀಶ್ ರೆಡ್ಡಿ!

ವಿಂಡೀಸ್ ಸರಣಿಗೆ ಅನೌನ್ಸ್ ಆಗಿರೋ ಏಕದಿನ ತಂಡದಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡಲಾಗಿದೆ. ಇಂಟ್ರೆಸ್ಟಿಂಗ್ ವಿಚಾರದ ಅಂದ್ರೆ ನಿತೀಶ್ ರೆಡ್ಡಿ ಏಷ್ಯನ್ ಗೇಮ್ಸ್​ಗಾಗಿ ಭಾರತ ತಂಡದ ಟಿ-20ಐ ತಂಡದಲ್ಲಿದ್ರು. ಹೀಗಿದ್ರೂ ಏಷ್ಯನ್ ಗೇಮ್ಸ್​ನಿಂದ ತೆಗೆದು ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಸೆಲೆಕ್ಟ್ ಮಾಡಿದ್ದಾರೆ. ಇದರ ಅರ್ಥವೇ 2027ರ ಏಕದಿನ ವಿಶ್ವಕಪ್​​ಗೆ ನಿತೀಶ್ ಕೂಡ ಇರ್ತಾರೆ ಅನ್ನೋ ಸಂದೇಶ ಇದು. ಈ ಬಗ್ಗೆ ಹೆಡ್ ಕೋಚ್ ಗೌತಮ್ ಗಂಭೀರ್ ಅವ್ರೇ ಮಾತನಾಡಿದ್ದಾರೆ.

ಹಾರ್ದಿಕ್ ಪಾಂಡ್ಯಗೆ 10 ಓವರ್ ಬೌಲಿಂಗ್ ಕಷ್ಟನಾ?

ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಹಾರ್ದಿಕ್ ಪಾಂಡ್ಯ ಕಂ ಬ್ಯಾಕ್ ಬಗ್ಗೆ  ಅತ್ಯಂತ ಸ್ಪಷ್ಟ ಮೆಸೇಜ್ ಪಾಸ್ ಮಾಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಮುಗಿದ ಬಳಿಕ ಮಾತನಾಡಿದ ಗಂಭೀರ್, ಹಾರ್ದಿಕ್ ಪಾಂಡ್ಯ ಸದ್ಯಕ್ಕೆ ಏಕದಿನ ಪಂದ್ಯಗಳಲ್ಲಿ ತಮ್ಮ ಕೋಟಾದ ಪೂರ್ಣ 10 ಓವರ್‌ಗಳನ್ನು ಬೌಲಿಂಗ್ ಮಾಡಲು ಸಿದ್ಧವಾಗಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್ ಫಿಟ್​ನೆಸ್ ಮೇಲೆ ಹೆಚ್ಚಿನ ಪ್ರೆಶರ್ ಕ್ರಿಯೇಟ್ ಮಾಡುತ್ತೆ. ಹೀಗಾಗಿ ಫಿಟ್ ಇಲ್ಲದ ಆಟಗಾರನನ್ನು ನಾವು ಬಲವಂತವಾಗಿ ತಂಡಕ್ಕೆ ಸೇರಿಸಲು ಬಯಸುವುದಿಲ್ಲ. ಹಾಗೇ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಪರಿಗಣಿಸಬೇಕಾದರೆ ಅವರು ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಮಾಡಬೇಕಾಗುತ್ತದೆ. ಕೇವಲ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡಲು ಸಾಧ್ಯವಿಲ್ಲ ಅನ್ನೋದನ್ನ ಮ್ಯಾನೇಜ್‌ಮೆಂಟ್ ಕ್ಲಿಯರ್ ಮಾಡಿದೆ. ಪ್ರಸ್ತುತ ಪಾಂಡ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ರಿಕವರ್ ಆಗ್ತಿದ್ದಾರೆ.  ಹಾರ್ದಿಕ್ ಆಬ್ಸೆನ್ಸ್​ನಲ್ಲಿ ಯುವ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಬ್ಯಾಕ್-ಅಪ್ ಸಿಕ್ಕಂತಾಗಿದೆ. ಹೀಗಾಗಿ ಮ್ಯಾನೇಜ್​ಮೆಂಟ್​ನ ನಿರ್ಧಾರ ಪಾಂಡ್ಯರನ್ನ ತಂಡದಿಂದ ಹೊರಹಾಕಿದ ನಿರ್ಧಾರವಲ್ಲ ಎಂದಿದ್ದಾರೆ. ಬಟ್ ಇಲ್ಲಿ ಒಂದಂತೂ ಕ್ಲಿಯರ್ ಆಗಿದೆ. ಹಾರ್ದಿಕ್ ಪಾಂಡ್ಯಗೆ ಪರ್ಯಾಯವಾಗಿ ನಿತೀಶ್ ರೆಡ್ಡಿಯನ್ನ ಏಕದಿನ ವಿಶ್ವಕಪ್ ತಂಡದಲ್ಲಿ ಆಡಿಸೋಕೆ ಮ್ಯಾನೇಜ್​ಮೆಂಟ್ ಸಿದ್ಧವಾಗಿದೆ ಅನ್ನೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ.

Shantha Kumari

Leave a Reply

Your email address will not be published. Required fields are marked *