ಭಾರತಕ್ಕೆ ಕೈಕೊಟ್ಟ Middle Order! – ಸ್ಪಿನ್ನರ್ಸ್ ಗೆ ಬೆಸ್ಟ್ ಮೆಡಿಸಿನ್ ಪಾಟಿದಾರ್
BCCI ಕಣ್ಣಿಗೆ ಕಾಣುತ್ತಾ STATS?

ಐರ್ಲೆಂಡ್ ವಿರುದ್ಧ ಭಾರತದ ಹೀನಾಯ ಸೋಲಿನ ಬಳಿಕ ಸೋಲಿನ ಕಾರಣಗಳ ಬಗ್ಗೆ ಬಿಸಿಸಿಐನಲ್ಲಿ ಪೋಸ್ಟ್ ಮಾರ್ಟಂ ನಡೀತಿದೆ. ಎಲ್ಲಿ ಎಡವಟ್ಟಾಯ್ತು..? ಯಾವ ಹಂತದಲ್ಲಿ ಮ್ಯಾಚ್ ಕೈ ಜಾರಿತು? ನೆಕ್ಸ್ಟ್ ಏನೆಲ್ಲಾ ಇಂಪ್ರೂವ್ ಆಗ್ಬೇಕು, ಸಲ್ಯೂಷನ್ ಏನು ಅನ್ನೋ ಬಗ್ಗೆ ಗ್ರೌಂಡ್ ವರ್ಕ್ ಮಾಡ್ತಿದ್ದಾರೆ. ಅಟ್ ದಿ ಸೇಮ್ ಟೈಂ ಟೀಂ ಇಂಡಿಯಾ ಮಿಡಲ್ ಆರ್ಡರ್ನ ವೀಕ್ನೆಸ್ ಬಟಾಬಯಲಾಗಿದೆ. ಸ್ಪಿನ್ನರ್ಗಳ ಎದುರಲ್ಲಿ ಭಾರತದ ಆಟಗಾರರು ಟೆಸ್ಟ್ ಗೇಮ್ ಆಡ್ತಿದ್ದಾರೆ. ಸೋ ಮಿಡಲ್ ಆರ್ಡರ್ ಸ್ಟ್ರಾಂಗ್ ಆಗ್ಬೇಕು ಅಂದ್ರೆ ಸ್ಪಿನ್ನರ್ಸ್ ಎದುರಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸೋ ರಜತ್ ಪಾಟಿದಾರ್ಗೆ ತಂಡದಲ್ಲಿ ಅವಕಾಶ ಕೊಡಿ ಅನ್ನೋ ಕೂಗು ಜೋರಾಗಿದೆ.
ಇದನ್ನೂ ಓದಿ : ಫಿಫಾ ವಿಶ್ವಕಪ್ 2026ರ ಪವರ್ ರ್ಯಾಕಿಂಗ್ ಬಿಡುಗಡೆ – ಕೊನೆಯಲ್ಲಿ ರೊನಾಲ್ಡೊ , ಮೆಸ್ಸಿಗೆ 2ನೇ ಸ್ಥಾನ
ಐರಿಷ್ ವಿರುದ್ಧ ಭಾರತದ ಸೋಲಿಗೆ ಮುಖ್ಯ ಕಾರಣವೇ ಬ್ಯಾಟಿಂಗ್ ಫೇಲ್ಯೂರ್. ಹಾಗಂತ ಪವರ್ಪ್ಲೇನಲ್ಲಿ ಭಾರತ ಸೋತಿದ್ದಲ್ಲ, ಅಥವಾ ಲೋವರ್ ಆರ್ಡರ್ ಫೈಟ್ ಕೂಡ ದೊಡ್ಡ ಹೊಡೆತ ನೀಡಲಿಲ್ಲ. ಆದ್ರೆ 7 ರಿಂದ 15 ಓವರ್ಗಳಲ್ಲೇ ಭಾರತ ಎಡವಿದೆ. ಮಿಡಲ್ ಆರ್ಡರ್ನ ವೀಕ್ನೆಸ್ ಸೋಲಿಗೆ ಕಾರಣವಾಗಿದೆ. ಅಟ್ ದಿ ಸೇಮ್ ಟೈಂ ಐರ್ಲೆಂಡ್ ಪಡೆ ಇದೇ ಓವರ್ಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ.
ಮಿಡಲ್ ಆರ್ಡರ್ ನಲ್ಲಿ ಮಂಕಾದ ಭಾರತ!
ಭಾರತ 7 ರಿಂದ 15 ಓವರ್, ಓವರ್ ಗೆ 6.89 ರನ್ಸ್ ಸರಾಸರಿಯಲ್ಲಿ 124 ರನ್
ಐರ್ಲೆಂಡ್ ಪ್ರತಿ ಓವರ್ಗೆ 8.44 ರನ್ಗಳ ಸರಾಸರಿಯಲ್ಲಿ 152 ರನ್ ಕಲೆ
ಮಿಡಲ್ ಆರ್ಡರ್ ರನ್ಸ್ ಬರದೇ ಇರೋದೇ ಡೆತ್ ಓವರ್ನಲ್ಲಿ ಭಾರತಕ್ಕೆ ಪ್ರೆಶರ್
ಮೊದಲ ಮ್ಯಾಚಲ್ಲಿ ಆರು ಓವರ್ಗಳಲ್ಲಿ 68/3 ರನ್, 7-15 ಓವರ್ ಗಳಲ್ಲಿ 61/3
7 ರಿಂದ 12 ಓವರ್ ಗಳವರೆಗೆ 32 ರನ್, 12 ನೇ ಓವರ್ ಗೆ 100/6 ಆಗಿತ್ತು
ಎರಡನೇ ಪಂದ್ಯದಲ್ಲಿ 155 ರನ್ ಗಳ ಟಾರ್ಗೆಟ್, ಪವರ್ ಪ್ಲೇನಲ್ಲಿ 41/4 ರನ್
15 ಓವರ್ ಗಳ ನಂತ್ರ 104/5 ಕ್ಕೆ, ಕೊನೆ ಐದು ಓವರ್ ಗಳಲ್ಲಿ 51 ರನ್ಸ್ ಅಗತ್ಯ
ಭಾರತದ ಇದೇ ಕೊಲ್ಯಾಪ್ಸ್ ಈಗ ಮಿಡಲ್ ಆರ್ಡರ್ ವೀಕ್ ಇರೋದನ್ನ ರಿವೀಲ್ ಮಾಡಿದೆ. ಜೊತೆಗೆ ಮೆಡಿಸಿನ್ ಯಾರು, ಸಲ್ಯೂಷನ್ ಹೇಗೆ ಅನ್ನೋದಕ್ಕೂ ಉತ್ತರ ಸಿಕ್ಕಿದೆ. ಟಿ-20ಐ ಮಾದರಿಯಲ್ಲಿ ಭಾರತ ಬಲಿಷ್ಠವಾಗ್ಬೇಕು ಅಂದ್ರೆ ರಜತ್ ಪಾಟಿದಾರ್ ಜಾಯ್ನ್ ಆಗ್ಬೇಕಿದೆ. ಹಾಗಂತ ಪಾಟಿದಾರ್ ಆರ್ಸಿಬಿ ಪ್ಳೇಯರ್, ಕ್ಯಾಪ್ಟನ್ ಅಂತಾ ಅವ್ರಿಗೆ ಸಪೋರ್ಟ್ ಮಾಡ್ತಿಲ್ಲ. ಬ್ಯಾಟಿಂಗ್ ಸ್ಕಿಲ್ ನೋಡಿಯೇ ಚಾನ್ಸ್ ಕೊಡಿ ಅಂತಿರೋದು. ಬೆಂಗಳೂರು ತಂಡ ಕಪ್ ಗೆಲ್ಲೋಕೆ ಒನ್ ಆಫ್ ದಿ ಮೇನ್ ರೀಸನ್ ರಜತ್ ಪಾಟಿದಾರ್ ಕ್ಯಾಪ್ಟನ್ಸಿ ಌಂಡ್ ಬ್ಯಾಟಿಂಗ್ ಇಂಟೆಂಟ್. 2026ರ ಐಪಿಎಲ್ನಲ್ಲಿ ಮಧ್ಯಮ ಓವರ್ಗಳಲ್ಲಿ ಅಬ್ಬರಿಸಿದ್ದಾರೆ.
ಪಾಟಿದಾರ್ ಪರಾಕ್ರಮ!
7 -15 ಓವರ್, 159 ಎಸೆತಗಳಲ್ಲಿ 202.52 ಸ್ಟ್ರೈಕ್ ರೇಟ್, 322 ರನ್ಸ್
ಸ್ಕೋರಿಂಗ್ ದರವು ಪ್ರತಿ ಓವರ್ಗೆ 12 ಕ್ಕಿಂತ ಹೆಚ್ಚು ರನ್ ಗಳನ್ನು ಕಲೆ
7 ರಿಂದ 15 ಓವರ್ ಗಳ ನಡುವೆ 16 ಬೌಂಡರಿಗಳು ಮತ್ತು 28 ಸಿಕ್ಸರ್
ಮಧ್ಯಮ ಓವರ್ ಗಳಲ್ಲಿ ಪ್ರತಿ 3.61 ಎಸೆತಗಳಿಗೆ ಒಂದು ಬೌಂಡರಿ
7 ರಿಂದ 11 ಓವರ್ ಗಳವರೆಗೆ 80 ಎಸೆತಗಳಲ್ಲಿ 190.00 ಸ್ಟ್ರೈಕ್ ರೇಟ್ನಲ್ಲಿ 152 ರನ್
12 ರಿಂದ 15 ಓವರ್ಗಳವರೆಗೆ 215.19 ರಲ್ಲಿ 79 ಎಸೆತಗಳಲ್ಲಿ 170 ರನ್ಸ್
ಪೇಸ್ ಬೌಲರ್, ಸ್ಪಿನ್ನರ್ಸ್ ವಿರುದ್ಧ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸಿದ್ದಾರೆ
ಭಾರತದ ಪರ ನಂ. 4 ಅಥವಾ ನಂ. 5 ಬ್ಯಾಟಿಂಗ್ ಮಾಡೋಕೆ ದಿ ಬೆಸ್ಟ್ ಪ್ಲೇಯರ್

ನೋಡಿರಿ

