ವಾಯುನೆಲೆ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದ್ದು ನಿಜ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಿಂದ ಯಾವುದೇ ಹಾನಿಯೂ ಆಗಿಲ್ಲ ಎಂದು ನಿರಾಕರಿಸುತ್ತಲೇ ಬಂದಿದ್ದ ಪಾಕಿಸ್ತಾನ ಇದೀಗ ಕೊನೆಗೂ ಸತ್ಯ ಬಾಯ್ಬಿಟ್ಟಿದೆ. ಇದೀಗ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಕೊನೆಗೂ ಭಾರತದ ದಾಳಿಯನ್ನ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಇವತ್ತು ಬೆಂಗಳೂರಿನಲ್ಲಿ ಆರ್‌ಸಿಬಿ ಕೆಕೆಆರ್ ಹೈವೋಲ್ಟೇಜ್ ಮ್ಯಾಚ್ – ರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ ವಿಸ್ತರಣೆ
ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಾ, ʻಆಪರೇಷನ್ ಸಿಂಧೂರʼದ ಯಶಸ್ಸನ್ನು ಒಪ್ಪಿಕೊಂಡಿದ್ದಾರೆ. ಮೇ 10ರಂದು ಭಾರತೀಯ ಖಂಡಾಂತರ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಸೇರಿದಂತೆ ಹಲವು ಸ್ಥಳಗಳನ್ನು ಧ್ವಂಸಗೊಳಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ನಿನ್ನೆ ವರೆಗೂ ಏನೂ ಆಗಿಲ್ಲ ಎಂದು ಹೇಳಿಕೊಳ್ಳುತ್ತಿದ್ದ ಪಾಕ್, ತನ್ನ ದೇಶದ ನಾಗರಿಕರನ್ನ ಮೂರ್ಖರನ್ನಾಗಿಸಿ ವಿಜಯೋತ್ಸವ ಆಚರಿಸುತ್ತಿದ್ದ ಪಾಕಿಸ್ತಾನ ಇದೀಗ ಇಡೀ ವಿಶ್ವದ ಮುಂದೆ ತಪ್ಪೊಪ್ಪಿಕೊಂಡಿದೆ. ಈ ಕುರಿತು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲೂ ಹರಿದಾಡುತ್ತಿದೆ.
ವೈರಲ್ ವಿಡಿಯೋನಲ್ಲಿ ಏನಿದೆ?
ಇಸ್ಲಾಮಾಬಾದ್‌ನ ಸಮಾರಂಭದಲ್ಲಿ ಮಾತನಾಡುವ ಶೆಹಬಾಜ್ ಷರೀಫ್, ಮೇ 9 ಮತ್ತು 10ರ ಮಧ್ಯರಾತ್ರಿ ಸುಮಾರು 2:30ರ ಸುಮಾರಿಗೆ, ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ನನಗೆ ಫೋನ್‌ನಲ್ಲಿ ಸುರಕ್ಷಿತವಾಗಿರುವಂತೆ ಹೇಳಿದ್ದರು. ಸಾಹಿಬ್… ಭಾರತವು ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನ ಉಡಾಯಿಸಿದೆ. ಅದರಲ್ಲಿ ಒಂದು ನೂರ್‌ಖಾನ್ ವಾಯುನೆಲೆಯ ಮೇಲೆ ಬಿದ್ದಿದೆ ಮತ್ತು ಕೆಲವು ಇತರ ಪ್ರದೇಶಗಳಲ್ಲಿ ಬಿದ್ದಿವೆ. ನಮ್ಮ ವಾಯುಪಡೆಯು ನಮ್ಮ ದೇಶವನ್ನ ರಕ್ಷಿಸಲು ಸ್ಥಳೀಯ ತಂತ್ರಜ್ಞಾನವನ್ನ ಬಳಸಿತು ಜೊತೆಗೆ ಚೀನೀ ಯುದ್ಧ ವಿಮಾನಗಳಲ್ಲಿ ಆಧುನಿಕ ಗ್ಯಾಜೆಟ್‌ಗಳು ಮತ್ತು ತಂತ್ರಜ್ಞಾನವನ್ನೂ ಸಹ ಬಳಸಿದೆʼ ನೀವು ಸುರಕ್ಷಿತ ಸ್ಥಳದಲ್ಲಿರಿ ಎಂದು ಎಚ್ಚರಿಸಿದ್ದರುʼ ಎಂಬುದಾಗಿ ಪ್ರಧಾನಿ ಹೇಳಿದ್ದಾರೆ.
ನೂರ್‌ಖಾನ್ ಪಾಕ್‌ನ ಪ್ರಮುಖ ವಾಯುನೆಲೆ
ನೂರ್ ಖಾನ್ ವಾಯುನೆಲೆ ಪಾಕ್‌ನ ಹೃದಯವಿದ್ದಂತೆ. ಇದು ಪಾಕಿಸ್ತಾನದ ಉನ್ನತ ಮಟ್ಟದ ಮಿಲಿಟರಿ ಸೌಲಭ್ಯ ಹೊಂದಿರುವ ಪ್ರಮುಖ ಕೇಂದ್ರವಾಗಿತ್ತು. ದೇಶದ ಉನ್ನತ ವಿವಿಐಪಿಗಳು ವಾಯು ಸಾರಿಗೆಗಾಗಿ ಇದನ್ನ ಬಳಸುತ್ತಾರೆ. ಮೇ 10 ರಂದು ಕ್ಷಿಪಣಿ ದಾಳಿ ನಡೆದ ಬಳಿಕ ಭಾರತ ಉಪಗ್ರಹ ಚಿತ್ರ ಸಹಿತ ಸಾಕ್ಷ್ಯವನ್ನ ಬಿಡುಗಡೆ ಮಾಡಿತ್ತು.