ಏನಿದು ಕಾಕ್ರೋಚ್ ಜನತಾ ಪಾರ್ಟಿ? – ಇನ್ಸ್ಟಾದಲ್ಲಿ ಹುಟ್ಟಿದ ಹೊಸ ಪಕ್ಷ ಅಧಿಕಾರಕ್ಕೆ ಬರುತ್ತಾ?

ಏನಿದು ಕಾಕ್ರೋಚ್ ಜನತಾ ಪಾರ್ಟಿ? – ಇನ್ಸ್ಟಾದಲ್ಲಿ ಹುಟ್ಟಿದ ಹೊಸ ಪಕ್ಷ ಅಧಿಕಾರಕ್ಕೆ ಬರುತ್ತಾ?

 

ಭಾರತದಲ್ಲಿ ಹೊಸದೊಂದು ರಾಜಕೀಯ ಪಕ್ಷದ ಉದಯವಾಗಿರುವ ಸಾಧ್ಯತೆ ಕಂಡುಬರುತ್ತಿದೆ. ಇದರ ಹೆಸರು ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) . ಕಾಕ್ರೋಚ್‌ ಎಂದರೆ ಕನ್ನಡದಲ್ಲಿ ಜಿರಳೆ ಎಂದಾಗುತ್ತದೆ. ಜಿರಳೆಗಳ ಪಕ್ಷಅಂತ ಅರ್ಥ. ಆದ್ರೆ ಇಲ್ಲಿ ಜಿರಳೆಗಳು  ಯುವಕರು..  ಏನಿದು ಕಾಕ್ರೋಚ್ ಪಕ್ಷ? ಸುಪ್ರೀಂಕೋರ್ಟ್ ಜಡ್ಜ್‌ ಒಂದು ಮಾತು ಯಾಕೆ ಇಷ್ಟು ದೊಡ್ಡ ಕಿಡಿ ಹತ್ತಿಸಿದೆ. ಫಾಲೋವರ್ಸ್ ನೋಡಿ ಬಿಜೆಪಿ ಶಾಕ್ ಆಗಿದ್ದೇಕೆ ಅನ್ನೋದ್ದನ್ನ ನೋಡೋಣ.

ಸಿಜೆಪಿ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಒಂದು ವಿಡಂಬನಾತ್ಮಕ ಅಭಿಯಾನ. ಇದು ಸದ್ಯ ಆನ್‌ಲೈನ್ ಯುದ್ಧಗಳಲ್ಲಿ ಭಾರತದ ಅತ್ಯಂತ ಶಕ್ತಿಶಾಲಿ ರಾಜಕೀಯ ಪಕ್ಷಗಳನ್ನು ಹಿಂದಿಕ್ಕುತ್ತಿದೆ. ಅಭಿಜೀತ್‌ ದಿಪ್ಕೆ ಎಂಬ ಯುವಕ ಆರಂಭಿಸಿದ ಈ ಅಭಿಯಾನ ಈಗ Gen-Z ಸಂಘಟನೆಯಾಗಿ ಬದಲಾಗುತ್ತಿದೆ. ಭಾರತದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಭಾರತದ ಯುವಕರ ಬಗ್ಗೆ ಹೇಳಿದ್ದಾರೆ ಎನ್ನಲಾದ ಹೇಳಿಕೆಗೆ ಪ್ರತಿಯಾಗಿ, ಆನ್‌ಲೈನ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಲು ಮತ್ತು ವ್ಯಂಗ್ಯದ ಬಾಣಗಳನ್ನು ಬಿಡಲು, ಕಾಕ್ರೋಚ್‌ ಜನತಾ ಪಾರ್ಟಿ ಹೆಸರಿನ ಅಭಿಯಾನವನ್ನು ಆರಂಭಿಸಲಾಗಿತ್ತು.

ನ್ಯಾಯಮೂರ್ತಿ ಸೂರ್ಯಕಾಂತ್  ಹೇಳಿದ್ದೇನು?

ಪ್ರಮುಖ ಪ್ರಕರಣವೊಂದರ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನಿರುದ್ಯೋಗಿ ಯುವಕರ ಬಗ್ಗೆ ಮಾತನಾಡಿದ್ದರು. ನಕೆಲವು ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ. ಉದ್ಯೋಗ ಮತ್ತು ಸ್ಥಾನಮಾನ ಸಿಗದಿದ್ದಾಗ ಅವರು ಆರ್‌ಟಿಐ (RTI) ಕಾರ್ಯಕರ್ತರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರ ಸೋಗಿನಲ್ಲಿ ಇಡೀ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಕಾಕ್ರೋಚ್ ಜನತಾ ಪಾರ್ಟಿ ಹುಟ್ಟಿಕೊಂಡಿದೆ.

10 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌

@cockroachjantaparty ಹ್ಯಾಂಡಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಖಾತೆ  ಸುಮಾರು 10 ಮಿಲಿಯನ್ ಫಾಲೋವರ್ಸ್‌ ಗಡಿ ದಾಟಿದೆ. ಆಡಳಿತಾರೂಢ ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ @bjp4india ಪ್ರಸ್ತುತ ಸುಮಾರು 8.7 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೆ, ಕಾಂಗ್ರೆಸ್‌ನ @incindia ಖಾತೆಯು ಸುಮಾರು 13.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. 2012 ರಲ್ಲಿ ಸ್ಥಾಪನೆಯಾದ ಆಮ್ ಆದ್ಮಿ ಪಕ್ಷ (ಆಪ್‌) ಸುಮಾರು 1.9 ಮಿಲಿಯನ್ ಫಾಲೋವರ್ಸ್‌ ಹೊಂದಿದೆ.

 

ಯಾರು ಈ ಅಭಿಜೀತ್ ದಿಪ್ಕೆ

ಅಭಿಜೀತ್ ದಿಪ್ಕೆ ʼಕಾಕ್ರೋಚ್‌ ಜನತಾ ಪಾರ್ಟಿʼ ಯನ್ನುಎಕ್ಸ್‌ನಲ್ಲಿ ಸ್ಥಾಪಿಸಿ ಪ್ರಚಾರ ಮಾಡುತ್ತಿದ್ದಾರೆ. ಪ್ರಸುತ್ತ ರಾಜಕೀಯ ವ್ಯವಸ್ಥೆ ಪ್ರಶ್ನೆ ಮಾಡ್ತಿರುವ ದಿಪ್ಕೆ ಈ ವಿನೂತನ ಪ್ರಯತ್ನಕ್ಕೆ ದೇಶದ ಜೆನ್ ಜಿ ಗಳಿಂದ ಬೆಂಬಲ ವ್ಯಕ್ತವಾಗಿತ್ತಿದೆ. ಪುಣೆಯಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿರುವ ಇವರು, ಪ್ರಸ್ತುತ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ (Public Relations) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಇವರು ಈ ಹಿಂದೆ (2020 ರಿಂದ 2023 ರವರೆಗೆ) ಆಮ್ ಆದ್ಮಿ ಪಕ್ಷದ (AAP) ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಪ್ರಚಾರ ತಂಡದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು.

ಅಭಿಜೀತ್ ದಿಪ್ಕೆ ಈ ಹಿಂದೆ ಆಪ್‌ ಪಕ್ಷದಲ್ಲಿ ಕೆಲಸ ಮಾಡಿದ ವ್ಯಕ್ತಿ ಎಂದು ಬಿಜೆಪಿ ಬೆಂಬಲಿತ ವ್ಯಕ್ತಿಗಳು ಎಕ್ಸ್‌ನಲ್ಲಿ ಪೋಸ್ಟ್‌ ಹಾಕುತ್ತಿದ್ದಾರೆ. ಅಭಿಜೀತ್ ದಿಪ್ಕೆ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್‌ ಪಕ್ಷದ ವಿರುದ್ಧವೂ ಪೋಸ್ಟ್‌ ಹಾಕಿದ್ದರು. ಆದರೆ ಕಾಕ್ರೋಚ್‌ ಜನತಾ ಪಾರ್ಟಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾರಣ ಹಳೆಯ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *