ಭಾರತೀಯ ಸೇನೆಗೆ ರಫೇಲ್ ಬಲ 26 ಫೈಟರ್ ಜೆಟ್.. 63000 ಕೋಟಿ
ರಫೇಲ್ ಮರೈನ್ನ ವಿಶೇಷತೆಯೇನು?

ಭಾರತೀಯ ಸೇನೆಗೆ ರಫೇಲ್ ಬಲ  26 ಫೈಟರ್ ಜೆಟ್..  63000 ಕೋಟಿರಫೇಲ್ ಮರೈನ್ನ ವಿಶೇಷತೆಯೇನು?

ಭಾರತೀಯ ನೌಕಾಪಡೆಗಾಗಿ ಬರೋಬ್ಬರಿ ₹63,000 ಕೋಟಿಗೂ ಹೆಚ್ಚು ಮೌಲ್ಯದ ಒಪ್ಪಂದಕ್ಕೆ ಶೀಘ್ರದಲ್ಲೇ ಭಾರತ ಸರ್ಕಾರ ಫ್ರಾನ್ಸ್ ಜೊತೆ ಸಹಿ ಹಾಕಲಿದ್ದು, ಈ ಒಪ್ಪಂದದ ಭಾಗವಾಗಿ ಭಾರತೀಯ ನೌಕಾಪಡೆಯು 22 ಸಿಂಗಲ್-ಸೀಟರ್ ಮತ್ತು ನಾಲ್ಕು ಟ್ವಿನ್-ಸೀಟರ್ ವಿಮಾನಗಳನ್ನು ಪಡೆಯಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈ ಎರಡೂ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು 4 ವರ್ಷಗಳ ನಂತರ, ಅಂದಾಜು 63,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ರಫೇಲ್ ಜೆಟ್‌ಗಳ ವಿತರಣೆಯನ್ನು ನಿರೀಕ್ಷಿಸಲಾಗಿದೆ. ಮೊದಲ ಬ್ಯಾಚ್ 2029 ರ ಅಂತ್ಯದ ವೇಳೆಗೆ ಬರುವ ನಿರೀಕ್ಷೆಯಿದೆ, ಪೂರ್ಣ ವಿತರಣೆಯು 2031ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಈ ಒಪ್ಪಂದವು ಭಾರತದ ನೌಕಾಪಡೆಯನ್ನು ಬಲಪಡಿಸಲಿದ್ದು, ಮತ್ತು ಹಿಂದೂ ಮಹಾಸಾಗರದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವವನ್ನು ಎದುರಿಸಲು ಸಹಾಯ ಮಾಡಲಿದೆ. ಈ ವಿಮಾನಗಳನ್ನು ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ನಿಯೋಜಿಸಲು ಉದ್ದೇಶಿಸಲಾಗಿದೆ. ಭಾರತೀಯ ವಾಯುಪಡೆಯು ನೌಕಾಪಡೆಯು 22 ಸಿಂಗಲ್ ಸೀಟರ್ ಮತ್ತು ನಾಲ್ಕು ಟ್ವಿನ್ ಸೀಟರ್ ವಿಮಾನಗಳನ್ನು ಈ ಒಪ್ಪಂದದ ಭಾಗವಾಗಿ ಪಡೆಯಲಿದೆ. ಈ ಒಪ್ಪಂದವು ಭಾರತದ ಸಾಗರ ಸಾಮರ್ಥ್ಯವನ್ನು ಹೆಚ್ಚಿಸಲಿದೆ.  ಒಟ್ಟು 26 ರಫೇಲ್ ಯುದ್ಧ ವಿಮಾನಗಳ ಪೈಕಿ ಭಾರತೀಯ ನೌಕಾ ಪಡೆಗೆ 22 ಸಿಂಗಲ್ ಸೀಟರ್ ಯುದ್ಧ ವಿಮಾನಗಳು ಹಾಗೂ 4 ತರಬೇತಿ ಯುದ್ಧ ವಿಮಾನಗಳು ಬೇಕಿವೆ. ಭಾರತೀಯ ನೌಕಾ ಪಡೆಗೆ ಅತ್ಯಗತ್ಯವಾಗಿ ಈ ಯುದ್ಧ ವಿಮಾನಗಳು ಬೇಕಿದ್ದು, ಯುದ್ದ ವಿಮಾನಗಳ ಕೊರತೆ ಇರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಖರೀದಿ ಪ್ರಕ್ರಿಯೆ ನಡೆಸುವಂತೆ ಸೂಚಿಸಿದೆ. ದೇಶದ ಭದ್ರತೆಯ ದೃಷ್ಟಿಯಿಂದ ಈ ಖರೀದಿ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕಾದ್ದು ಅತ್ಯಗತ್ಯವಾಗಿದ.

ಯುದ್ದ ವಿಮಾನಗಳ ಕ್ಯಾರಿಯರ್ ನೌಕೆಗಳಾದ ಐಎನ್‌ಎಸ್ ವಿಕ್ರಮಾದಿತ್ಯ ಹಾಗೂ ವಿಕ್ರಾಂತ್‌ಗಳಲ್ಲಿ ಸದ್ಯ ಮಿಗ್ 29 ಯುದ್ಧ ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಸ್ಥಾನವನ್ನು ರಫೇಲ್ ಯುದ್ಧ ವಿಮಾನಗಳು ಆಕ್ರಮಿಸಲಿವೆ. ಇನ್ನು ಸ್ಕಾರ್ಪಿಯನ್ ದರ್ಜೆಯ ಮೂರು ಜಲಾಂತರ್ಗಾಮಿ ನೌಕೆಗಳೂ ಕೂಡಾ ಭಾರತಕ್ಕೆ ಅತ್ಯಗತ್ಯವಾಗಿ ಬೇಕಿದ್ದು, ಈ ಸಬ್‌ಮೆರಿನ್‌ಗಳನ್ನು ಮುಂಬೈನಲ್ಲಿ  ನಿರ್ಮಿಸಲಾಗುತ್ತದೆ. ಈ ಸಬ್‌ಮೆರಿನ್‌ ನಿರ್ಮಾಣಕ್ಕೆ ಫ್ರಾನ್ಸ್ ತಂತ್ರಜ್ಞಾನ ನೆರವು ನೀಡಲಿದೆ. ಈ ಯೋಜನೆಗೆ ಪ್ರಾಜೆಕ್ಟ್ 75 ಎಂದು ಹೆಸರಿಡಲಾಗಿದೆ.

 ನೌಕಾಪಡೆಯು ಎಷ್ಟು ವಿಮಾನಗಳನ್ನು ಹೊಂದಿದೆ?

ನೌಕಾಪಡೆಯು ಪ್ರಸ್ತುತ 45 ಮಿಗ್-29 ಕೆ ಜೆಟ್‌ಗಳಲ್ಲಿ 40 ಮಾತ್ರ ಹೊಂದಿದೆ. ಇವುಗಳನ್ನು 2009 ರಿಂದ ರಷ್ಯಾದಿಂದ 52 ಬಿಲಿಯನ್ ವೆಚ್ಚದಲ್ಲಿ ಸೇರಿಸಲಾಯಿತು. ಇವು 40,000 ಟನ್‌ಗಳಿಗಿಂತ ಹೆಚ್ಚು ತೂಕದ ವಿಮಾನವಾಹಕ ನೌಕೆಗಳಾದ ಹಳೆಯ ರಷ್ಯನ್ ಮೂಲದ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಹೊಸ ಸ್ಥಳೀಯ ಐಎನ್‌ಎಸ್ ವಿಕ್ರಾಂತ್‌ಗಳ ಡೆಕ್‌ಗಳಿಂದ ಕಾರ್ಯನಿರ್ವಹಿಸುತ್ತವೆ. ಮಿಗ್-29ಕೆ ವಿಮಾನಗಳು ಕಳೆದ ಕೆಲವು ವರ್ಷಗಳಿಂದ ಕಳಪೆ ಸೇವಾ ಸಾಮರ್ಥ್ಯ ಮತ್ತು ಇತರ ಸಮಸ್ಯೆಗಳಿಂದ ಬಳಲುತ್ತಿವೆ.

 ರಫೇಲ್ ಮೆರೈನ್ ಫೈಟರ್ ಜೆಟ್‌ನ ವಿಶೇಷತೆಯೇನು?

ರಫೇಲ್ ಮೆರೈನ್ ಭಾರತದಲ್ಲಿರುವ ರಫೇಲ್ ಯುದ್ಧ ವಿಮಾನಗಳಿಗಿಂತ ಹೆಚ್ಚು ಮುಂದುವರಿದಿದೆ. ಇದರ ಎಂಜಿನ್ ಹೆಚ್ಚು ಶಕ್ತಿಶಾಲಿಯಾಗಿದೆ, ಆದ್ದರಿಂದ ಈ ಫೈಟರ್ ಜೆಟ್ ಐಎನ್ಎಸ್ ವಿಕ್ರಾಂತ್ ನಿಂದ ಸ್ಕಿ ಜಂಪ್ ಮಾಡಬಹುದು.  ಇದು ತುಂಬಾ ಕಡಿಮೆ ಜಾಗದಲ್ಲಿಯೂ ಇಳಿಯಬಹುದು. ಇದನ್ನು ‘ಶಾರ್ಟ್ ಟೇಕ್ ಆಫ್ ಆದರೆ ಅರೆಸ್ಟ್ ಲ್ಯಾಂಡಿಂಗ್’ ಎಂದು ಕರೆಯಲಾಗುತ್ತದೆ. * ರಫೇಲ್‌ನ ಎರಡೂ ರೂಪಾಂತರಗಳಲ್ಲಿ ಸುಮಾರು 85 ಪ್ರತಿಶತ ಭಾಗಗಳು ಒಂದೇ ಆಗಿವೆ ಇದರರ್ಥ ಬಿಡಿಭಾಗಗಳಿಗೆ ಸಂಬಂಧಿಸಿದ ಯಾವುದೇ ಕೊರತೆ ಅಥವಾ ಸಮಸ್ಯೆಗಳು ಎಂದಿಗೂ ಇರುವುದಿಲ್ಲ.

 

Kishor KV

Leave a Reply

Your email address will not be published. Required fields are marked *