ಚೆಂದಕ್ಕಿಂತ ಚೆಂದ ಭಾರತೀಯರೇ ಸುಂದರ..! – ಸೌಂದರ್ಯದಲ್ಲಿ ಇಂಡಿಯಾ ಫಸ್ಟ್..!

ಚೆಂದಕ್ಕಿಂತ ಚೆಂದ ಭಾರತೀಯರೇ ಸುಂದರ..! – ಸೌಂದರ್ಯದಲ್ಲಿ ಇಂಡಿಯಾ ಫಸ್ಟ್..!

ಚೆಂದಕ್ಕಿಂತ ಚೆಂದ ಭಾರತೀಯರೇ ಸುಂದರ ಎಂದು ವರದಿಯಾಗಿದೆ. ಫ್ರಾನ್ಸ್‌ ವೆಬ್‌ಸೈಟ್ ನಡೆಸಿದ ಸರ್ವೆಯಲ್ಲಿ ಸುಂದರ ಮತ್ತು ಆಕರ್ಷಕ ವ್ಯಕ್ತಿಗಳಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಲಾಗಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿ ಮಾಡಲಾದ ಈ ಸರ್ವೆಯಲ್ಲಿ ವಿಶ್ವದ 50 ದೇಶಗಳ ಅತಿ ಹೆಚ್ಚು ಆಕರ್ಷಕ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ಅಮೆರಿಕ, ಸ್ವೀಡನ್, ಜಪಾನ್ ಹಾಗೂ ಕೆನಡಾ ಸೇರಿದಂತೆ ಹಲವು ದೇಶಗಳ ಆಕರ್ಷಕ ವ್ಯಕ್ತಿಗಳು ಇದ್ದರು. ಇನ್ನು ಅರಬ್ ರಾಷ್ಟ್ರಗಳ ವಿಚಾರಕ್ಕೆ ಬಂದರೆ, ಲೆಬನಾನ್ ದೇಶೀಯರು 25ನೇ ಸ್ಥಾನ ಪಡೆದಿದ್ದಾರೆ. ಸೌದಿ ಅರೇಬಿಯಾ 43ನೇ ಸ್ಥಾನದಲ್ಲಿ ಇದ್ದರೆ, ಈಜಿಪ್ಟ್ 44ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿದ್ದೀರಾ – ಮಾರ್ಚ್ 31ರೊಳಗೆ ಮಾಡಿದ್ರೆ ನೀವು ಸೇಫ್..!

ಸಾಮಾಜಿಕ ಜಾಲತಾಣಗಳಲ್ಲಿ ಹಲವು ದೇಶಗಳ ಜನರು ಪ್ರಕಟಿಸುವ ಫೋಟೋಗಳನ್ನು ಆಧರಿಸಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಕೆ ಮಾಡಿಕೊಂಡು ಈ ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದ ವರದಿ ಪ್ರಕಾರ ಭಾರತ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.

ಭಾರತದಲ್ಲಿ ಬಾಲಿವುಡ್ ಸಿನೆಮಾ ರಂಗ ವಿಶ್ವ ಪ್ರಸಿದ್ದ ಆಗಿರುವ ಹಿನ್ನೆಲೆಯಲ್ಲಿ ಹಾಗೂ ಹಲವು ನಟರು, ನಟಿಯರು ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಹಿನ್ನೆಲೆಯಲ್ಲಿ ಭಾರತವು ಈ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಳಿಸಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಸ್ವೀಡನ್ ದೇಶದ ಜನರು ಸರಳವಾದ ಉಡುಗೆ ತೊಡುಗೆ ಹಾಗೂ ಅಲಂಕಾರ ಮಾಡಿಕೊಳ್ಳುತ್ತಾರೆ. ಹೀಗಾಗಿ, ಅವರು ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಈ ಅಧ್ಯಯನ ವರದಿ ತಯಾರಿಸಿದ ವೆಬ್ ಸೈಟ್, ತಾನು ಅಧ್ಯಯನ ನಡೆಸಿದ ವಿಧಾನವನ್ನೂ ವಿವರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವ ಎಲ್ಲ ದೇಶಗಳ ಪ್ರಜೆಗಳ ಫೋಟೋಗಳು, ಟಾಪಿಕ್‌ಗಳು, ಬ್ಲಾಗ್‌ಗಳನ್ನು ಪರಿಶೀಲನೆ ನಡೆಸಿರೋದಾಗಿ ವೆಬ್‌ಸೈಟ್ ಹೇಳಿಕೊಂಡಿದೆ. ಜೊತೆಯಲ್ಲೇ ತಮ್ಮ ಫೋಟೋಗಳ ಜೊತೆ ಹಾಕಿಕೊಂಡಿರುವ ಪದಗಳನ್ನೂ ವೆಬ್‌ಸೈಟ್ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಗ್ರಹಿಸಿದೆ. ಆಕರ್ಷಕ, ಸುಂದರ, ಅದ್ಭುತ.. ಹೀಗೆ ಹಲವು ಪದಗಳನ್ನು ಗ್ರಹಿಸಿ ಪಟ್ಟಿ ಮಾಡಿ ತನ್ನ ವರದಿ ಸಿದ್ದಪಡಿಸಿದೆ. ಜೊತೆಯಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಯಾವ ದೇಶದ ಮಂದಿ ಎಷ್ಟು ಪೋಸ್ಟ್ ಹಾಕಿದ್ದಾರೆ. ಅದಕ್ಕೆ ಕಾಮೆಂಟ್ ಎಷ್ಟು ಬಂದಿವೆ, ವೋಟ್‌ಗಳು ಎಷ್ಟು ಬಂದಿವೆ ಎಂಬುದನ್ನೆಲ್ಲಾ ಸೇರಿಸಿ ಮಿಡ್ ಜರ್ನಿ ಎಂಬ ಕೃತಕ ಬುದ್ದಿಮತ್ತೆ ಸಾಧನದಿಂದ ವರ್ಗೀಕರಣ ಮಾಡಿದೆ. ಕೃತಕ ಬುದ್ಧಿಮತ್ತೆ ಮೂಲಕ ಚಿತ್ರಣ ಮಾಡಲಾಗಿದ್ದು, ಮುಖ ಲಕ್ಷಣ, ದವಡೆ, ಉದ್ದ ಕೂದಲು, ವಿಶಾಲ ಕಣ್ಣುಗಳನ್ನು ವರ್ಗೀಕರಣ ಮಾಡಿ ಈ ವರದಿ ಸಿದ್ದಪಡಿಸಲಾಗಿದೆ. ಒಟ್ಟಿನಲ್ಲಿ ಈ ಸರ್ವೆ ಮೂಲಕ ಭಾರತೀಯ ಸಂಜಾತರು ವಿಶ್ವದಲ್ಲೇ ಅತಿ ಹೆಚ್ಚು ಸುಂದರ ಹಾಗೂ ಆಕರ್ಷಕವಾಗಿ ಕಾಣುತ್ತಾರೆ ಎಂದು ಅಧ್ಯಯನ ವರದಿ ಮಾಡಿದೆ.

suddiyaana