ಏಷ್ಯಾಕಪ್ ಫೈನಲ್ ಪ್ರವೇಶಿಸಿದ ಭಾರತ – ಬಾಂಗ್ಲಾ ಬೌಲರ್ಗಳ ಬೆವರಿಳಿಸಿದ ಅಭಿಷೇಕ್ ಶರ್ಮಾ
ಬಾಂಗ್ಲಾ ಬ್ಯಾಟಿಂಗ್ ಬೆನ್ನೆಲೆಬು ಮುರಿದ ಕುಲ್ದೀಪ್ ಯಾದವ್

ಟೀಮ್ ಇಂಡಿಯಾ ಏಷ್ಯಾಕಪ್ನಲ್ಲಿ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಬುಧವಾರ ನಡೆದ ತನ್ನ 2ನೇ ಸೂಪರ್ 4 ಪಂದ್ಯದಲ್ಲಿ ಭರ್ಜರಿ ಆಲ್ರೌಂಡರ್ ಪ್ರದರ್ಶನ ತೋರಿದ ಟೀಮ್ ಇಂಡಿಯಾ, ಬಾಂಗ್ಲಾದೇಶದ ವಿರುದ್ಧ 41 ರನ್ಗಳ ಗೆಲುವು ಸಾಧಿಸಿದೆ.
ಇದನ್ನೂ ಓದಿ:ಇಂಡೋ-ಪಾಕ್ ಫೈನಲ್ FIX – ಹಸರಂಗ ಕೆಣಕಿ ಅಬ್ರಾರ್ ಅತಿರೇಕ
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಅಭಿಷೇಕ್ ಶರ್ಮಾರ 75 ರನ್ಗಳ ನೆರವಿನಿಂದ 168 ರನ್ಗಳಿಸಿತ್ತು., 10 ಓವರ್ ಗಳಲ್ಲಿ 98 ರನ್ಗಳಿಸಿದ್ದ ಟೀಮ್ ಇಂಡಿಯಾ, ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡ ಬಳಿಕ ದಿಢೀರ್ ಕುಸಿತಕಂಡಿತು. ಇದರಿಂದಾಗಿಯೇ 200 ರನ್ಗಳಿಸುವ ಅವಕಾಶ ಕೈ ತಪ್ಪಿತು. ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್ಗಳ ನೆರವಿನಿಂದ 75 ರನ್ಗಳಿಸಿದರು. ಹಾರ್ದಿಕ್ ಪಾಂಡ್ಯ 29 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 38 ರನ್ ಗಳಿಸಿದರು. ಶುಭ್ಮನ್ ಗಿಲ್ 19 ಎಸೆತಗಳಲ್ಲಿ 29 ರನ್ಗಳಿಸಿದರು. ಅಕ್ಷರ್ ಪಟೇಲ್ 15 ಎಸೆತಗಳಲ್ಲಿ 10 ರನ್ಗಳಿಸಿ ನಿರಾಶೆ ಮೂಡಿಸಿದರೆ, ದುಬೆ (2), ಸೂರ್ಯಕುಮಾರ್ ಯಾದವ್ (5) ಹಾಗೂ ತಿಲಕ್ ವರ್ಮಾ (5) ಒಂದಂಕಿ ಮೊತ್ತಕ್ಕೆ ಸೀಮಿತವಾಗಿ ಬೇಸರ ಮೂಡಿಸಿದರು
169 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಸೈಫ್ ಹಸನ್ (69) ಅರ್ಧಶತಕದ ಹೊರತಾಗಿಯೂ 19.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 127ಕ್ಕೆ ಸೀಮಿತವಾಯಿತು. 169 ರನ್ಗಳ ಗುರಿಯನ್ನ ಬೆನ್ನಟ್ಟಿ ಬಾಂಗ್ಲಾದೇಶ 2ನೇ ಓವರ್ನಲ್ಲೇ ಆರಂಭಿಕ ಬ್ಯಾಟರ್ ತಾಂಜಿದ್ ಹಸನ್ (1) ವಿಕೆಟ್ ಕಳೆದುಕೊಂಡಿತು. ಬುಮ್ರಾ ಬೌಲಿಂಗ್ನಲ್ಲಿ ಹಸನ್ ದುಬೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ 2ನೇ ವಿಕೆಟ್ಗೆ ಪರ್ವೇಜ್ ಹೊಸೈನ್ ಹಾಗೂ ಸೈಫ್ ಹಸನ್ 45 ರನ್ಗಳಿಸಿ ಚೇತರಿಕೆ ನೀಡಿದರು. 19 ಎಸೆತಗಲ್ಲಿ 21 ರನ್ಗಳಿಸಿ ಪರ್ವೇಜ್ ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಕಳೆದ ಪಂದ್ಯದ ಹೀರೋ ತೌಹಿದ್ ಹೃದೋಯ್ ಕೇವಲ 6 ರನ್ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿ ಪೆವೆಲಿಯನ್ ಸೇರಿಕೊಂಡರು 5ನೇ ಕ್ರಮಾಂಕದಲ್ಲು ಬಂದ ಶಮೀಮ್ ಹೊಸೈನ್ ಶೂನ್ಯಕ್ಕೆ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಡಕ್ ಔಟ್ ಆದರೆ, ನಾಯಕ ಜಾಕರ್ ಅಲಿ 4 ರನ್ಗಳಿಸಿ ರನ್ ಔಟ್ ಆದರು. ಮೊಹಮ್ಮದ್ ಸೈಫುದ್ದೀನ್ 4, ರಶೀದ್ ಹೊಸೈನ್ 2, ತಾಂಜಿದ್ ಹಸನ್ ಸಕಿಬ್ 0, ಮುಸ್ತಫಿಜುರ್ 6 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಸೈಫ್ ಹಸನ್ 51 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ಗಳ ಸಹಿತ 69 ರನ್ಗಳಿಸಿ 9ನೇ ಆಟಗಾರನಾಗಿ ವಿಕೆಟ್ ಒಪ್ಪಿಸಿದರು. ಹಸನ್ಗೆ ಭಾರತ ನೀಡಿದ 4 ಕ್ಯಾಚ್ ಡ್ರಾಫ್ ಅವಕಾಶ ಕೇವಲ ಅರ್ಧಶತಕ ಪೂರ್ಣಗೊಳಿಸಲು ಮಾತ್ರ ಸಾಧ್ಯವಾಯಿತು. ಭಾರತದ ಪರ ಮಿಂಚಿದ ಕುಲ್ದೀಪ್ ಯಾದವ್ 4 ಓವರ್ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಗುರುವಾರ ನಡೆಯುವ ಬಾಂಗ್ಲಾದೇಶ-ಪಾಕಿಸ್ತಾನ ನಡುವಿನ ಪಂದ್ಯ ನಾಕೌಟ್ ಪಂದ್ಯವಾಗಲಿದೆ. ಆದರೆ ಭಾರತ-ಶ್ರೀಲಂಕಾ ನಡುವಿನ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಲಿದೆ. ಆ ಪಂದ್ಯದಲ್ಲಿ ಭಾರತ ಗೆದ್ದರೂ, ಸೋತರೂ ತನ್ನ ಫೈನಲ್ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ.

ನೋಡಿರಿ

