ಜನವರಿ 25 ರಿಂದ ಭಾರತ-ಇಂಗ್ಲೆಂಡ್ ಪಂದ್ಯ ಶುರು! – ಸೈನಿಕರ ಕುಟುಂಬಗಳಿಗೆ ಫ್ರೀ ಎಂಟ್ರಿ..!

ಜನವರಿ 25 ರಿಂದ ಭಾರತ-ಇಂಗ್ಲೆಂಡ್ ಪಂದ್ಯ ಶುರು! – ಸೈನಿಕರ ಕುಟುಂಬಗಳಿಗೆ ಫ್ರೀ ಎಂಟ್ರಿ..!

ಜನವರಿ 25 ರಂದು ಭಾರತ ಮತ್ತು ಇಂಗ್ಲೆಂಡ್‌ ನಡುವಣ ಟೆಸ್ಟ್‌ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಹೈದರಾಬಾದ್​ನ ರಾಜೀವ್​ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಪಂದ್ಯದ ಎರಡನೇ ದಿನ  ಭಾರತೀಯ ಸಶಸ್ತ್ರ ಪಡೆಗಳ ಕುಟುಂಬಗಳಿಗೆ ಉಚಿತ ಪ್ರವೇಶ ನೀಡುವುದಾಗಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (HCA) ಘೋಷಿಸಿದೆ.

ಇದನ್ನೂ ಓದಿ:  ‘ಅನಿಮಲ್’ನಿರ್ಮಾಣ ಸಂಸ್ಥೆಯಿಂದಲೇ ಚಿತ್ರ ತಂಡದ ಮೇಲೆ ಕೇಸ್! – ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲ್ಲ?

ಹೌದು, ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಎರಡನೇ ದಿನ ಅಂದ್ರೆ ಜನವರಿ 26 ರಂದು ಭಾರತೀಯ ಸಶಸ್ತ್ರ ಪಡೆಗಳ ಕುಟುಂಬಗಳಿಗೆ ಪಂದ್ಯಕ್ಕೆ ಫ್ರೀ ಎಂಟ್ರಿ ಸಿಗಲಿದೆ. ಭಾರತೀಯ ಸಶಸ್ತ್ರ ಪಡೆಗಳ ಕುಟುಂಬಗಳು ಉಚಿತವಾಗಿ ಮ್ಯಾಚ್‌ ನೋಡಬಹುದಾಗಿದೆ. 2024 ರ ಗಣರಾಜ್ಯೋತ್ಸವದಂದು ಭಾರತೀಯ ಸಶಸ್ತ್ರ ಪಡೆಗಳ ಕುಟುಂಬಗಳಿಗೆ ಉಚಿತವಾಗಿ ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಡುವ ಮೂಲಕ ಭಾರತೀಯ ಸೈನಿಕರ ಕುಟುಂಬದವರನ್ನು ಗೌರವಿಸಲು ಹೆಚ್​ಸಿಎ ನಿರ್ಧರಿಸಿದೆ. ಹೀಗಾಗಿ ಗಣರಾಜ್ಯೋತ್ಸವದಂದು ಹೈದರಾಬಾದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಕುಟುಂಬಗಳಿಗೆ ಉಚಿತ ಪ್ರವೇಶ ಇರಲಿದೆ.

ಮೊದಲ ಟೆಸ್ಟ್‌ ಪಂದ್ಯದ ಟಿಕೆಟ್‌ಗಳು ಜನವರಿ 18 ರಿಂದ Paytm ಇನ್‌ಸೈಡರ್ ಅಪ್ಲಿಕೇಶನ್ ಮತ್ತು www.insider.in ಆನ್‌ಲೈನ್‌ನಲ್ಲಿ ಲಭ್ಯವಿರಲಿದೆ. ಆಫ್‌ಲೈನ್ ಟಿಕೆಟ್‌ಗಳ ಮಾರಾಟವು ಜಿಮ್ಖಾನಾ ಮೈದಾನದಲ್ಲಿ ಜನವರಿ 22 ರಿಂದ ಪ್ರಾರಂಭವಾಗಲಿದೆ. ಇಲ್ಲಿ ಪ್ರತಿ ದಿನದ ಟಿಕೆಟ್‌ಗಳ ಬೆಲೆ ₹200 ರಿಂದ ₹4,000 ವರೆಗೆ ಇರುತ್ತದೆ. ಇದೀಗ HCA ಭಾರತೀಯ ಸಶಸ್ತ್ರ ಪಡೆಗಳ ಕುಟುಂಬಗಳಿಗೆ ಒಂದು ದಿನ ಉಚಿತ ಪ್ರವೇಶ ನೀಡಲು ನಿರ್ಧರಿಸಿರುವುದು ವಿಶೇಷ.

ಇನ್ನು ತೆಲಂಗಾಣ ಸರ್ಕಾರಿ ಶಾಲೆಯ VI ರಿಂದ XII ತರಗತಿಯ ವಿದ್ಯಾರ್ಥಿಗಳನ್ನು ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಹೈದಾರಾಬಾದ್​ ಕ್ರಿಕೆಟ್ ಸಂಸ್ಥೆ ಆಹ್ವಾನಿಸಿದೆ. ತಮ್ಮ ಐಡಿ ಕಾರ್ಡ್ ತೋರಿಸಿ ಉಚಿತ ಪ್ರವೇಶ ಪಡೆಯಬಹುದು. ಹಾಗೆಯೇ ಶಾಲಾ ಸಮವಸ್ತ್ರವನ್ನು ಧರಿಸಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ಒದಗಿಸಲಾಗುವುದು ಎಂದು ಹೆಚ್​ಸಿಎ ತಿಳಿಸಿದೆ.

ಭಾರತಇಂಗ್ಲೆಂಡ್ ಸರಣಿ ಯಾವಾಗ ಶುರು?

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜನವರಿ 25 ರಿಂದ ಮಾರ್ಚ್ 7 ರವರೆಗೆ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಭಾಗವಾಗಿರುವ ಈ 5 ಟೆಸ್ಟ್ ಪಂದ್ಯಗಳನ್ನು ಹೈದರಾಬಾದ್, ವಿಶಾಖಪಟ್ಟಣಂ, ರಾಜ್‌ಕೋಟ್, ರಾಂಚಿ ಮತ್ತು ಧರ್ಮಶಾಲಾದಲ್ಲಿ ಆಡಲಾಗುತ್ತದೆ.

ಭಾರತಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಹೀಗಿದೆ..

  • ಜನವರಿ 25 ರಿಂದ 29- ಮೊದಲ ಟೆಸ್ಟ್ ಪಂದ್ಯ (ಹೈದರಾಬಾದ್)
  • ಫೆಬ್ರವರಿ 2 ರಿಂದ 6- ಎರಡನೇ ಟೆಸ್ಟ್ ಪಂದ್ಯ (ವಿಶಾಖಪಟ್ಟಣಂ)
  • ಫೆಬ್ರವರಿ 15 ರಿಂದ 19- ಮೂರನೇ ಟೆಸ್ಟ್ ಪಂದ್ಯ (ರಾಜ್​ಕೋಟ್)
  • ಫೆಬ್ರವರಿ 23 ರಿಂದ 27- ನಾಲ್ಕನೇ ಟೆಸ್ಟ್ ಪಂದ್ಯ (ರಾಂಚಿ)
  • ಮಾರ್ಚ್ 7 ರಿಂದ 11- ಐದನೇ ಟೆಸ್ಟ್ ಪಂದ್ಯ (ಧರ್ಮಶಾಲಾ)

Shwetha M