10 ವಿಕೆಟ್‌.. ಗಂಭೀರ್‌ಗೆ ಕುಲ್ದೀಪ್ ಡಿಚ್ಚಿ- BCCIಗೆ ಗವಾಸ್ಕರ್‌ ವಾರ್ನಿಂಗ್
PAK ಕೋಚ್ ಭಾರತದ ಏಜೆಂಟ್

10 ವಿಕೆಟ್‌.. ಗಂಭೀರ್‌ಗೆ ಕುಲ್ದೀಪ್ ಡಿಚ್ಚಿ-  BCCIಗೆ ಗವಾಸ್ಕರ್‌ ವಾರ್ನಿಂಗ್PAK ಕೋಚ್ ಭಾರತದ ಏಜೆಂಟ್

ಕ್ರಿಕೆಟ್‌ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು 

ಮಹಿಳಾ ಏಷ್ಯಾ ಕಪ್ ಸೆಮಿಫೈನಲ್‌ನಲ್ಲಿ ಭಾರತ, ಬಾಂಗ್ಲಾದೇಶವನ್ನು 40 ರನ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ. ಸ್ಮೃತಿ ಮಂದಾನಾ ಬ್ಯಾಟಿಂಗ್‌ನಲ್ಲಿ ವಿಫಲರಾದರೂ ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಆಲ್‌ರೌಂಡ್ ಪ್ರದರ್ಶನ ನೀಡಿದರು. ಬೌಲರ್‌ಗಳ ಶಿಸ್ತುಬದ್ಧ ದಾಳಿಯಿಂದ ಭಾರತ ಬಾಂಗ್ಲಾದೇಶಕ್ಕೆ ಗೆಲುವಿನ ಅವಕಾಶ ನೀಡಲಿಲ್ಲ.

ಭಾರತ ತಂಡ ಭಾನುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯಕ್ಕಾಗಿ ಕಠಿಣ ಅಭ್ಯಾಸ ಆರಂಭಿಸಿದೆ. ಗುರುವಾರ ರಾತ್ರಿ ದೆಹಲಿ ತಲುಪಿದ ಭಾರತ ತಂಡದ ಆಟಗಾರರು ಸ್ಥಳೀಯ ಹೊಟೇಲ್‌ನಲ್ಲಿ ವಿಶ್ರಾಂತಿ ಪಡೆದರು. ಶುಕ್ರವಾರ ಬೆಳಗ್ಗೆ ನೇರವಾಗಿ ಅಭ್ಯಾಸ ಆರಂಭಿಸಿದರು. ಅಭ್ಯಾಸದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಜಸ್ಪ್ರೀತ್ ಬುಮ್ರಾ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ T20I ಸರಣಿಗೆ ಫಿಟ್ ಆಗಿದ್ದಾರೆ. ದೆಹಲಿಯಲ್ಲಿ ನಡೆದ ಅಭ್ಯಾಸಕ್ಕೂ ಅವರು ಹಾಜರಾಗಿದ್ದಾರೆ. ಮತ್ತೊಂದೆಡೆ ಹಾರ್ಷಿತ್ ರಾಣಾ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಸರಣಿಯಿಂದ ಹೊರಬಿದ್ದಿದ್ದಾರೆ. ಬುಮ್ರಾ ಫಿಟ್ ಆಗಿರುವುದು ಏಷ್ಯನ್ ಗೇಮ್ಸ್ ಮತ್ತು ಮುಂದಿನ ಸರಣಿಗಳಿಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡಕ್ಕೆ ದೊಡ್ಡ ಪ್ಲಸ್ ಆಗಿದೆ.

ಇದನ್ನೂ ಓದಿ : ಏಷ್ಯಾಕಪ್ ಗೆದ್ರೂ ಭಾರತಕ್ಕಿಲ್ಲ ಕಪ್ – ಜಿದ್ದು ಸಾಧಿಸ್ತಿದ್ದಾರಾ ಮೊಹ್ಸಿನ್ ನಖ್ವಿ?

ಭಾರತದ ವೇಗಿ ಹಾರ್ಷಿತ್ ರಾಣಾ ಮತ್ತೆ ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಗೆ ಒಳಗಾಗಿದ್ದಾರೆ. ಫಿಟ್ನೆಸ್ ಟೆಸ್ಟ್ ವೇಳೆ ಗಾಯಗೊಂಡ ಕಾರಣ ಅಫ್ಘಾನಿಸ್ತಾನ T20I ಸರಣಿ ಹಾಗೂ ಏಷ್ಯನ್ ಗೇಮ್ಸ್‌ನಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ವಿದರ್ಭದ ವೇಗಿ ಯಶ್ ಠಾಕೂರ್ ಆಯ್ಕೆಯಾಗಿದ್ದಾರೆ. ರಾಣಾ ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡು ರಾಷ್ಟ್ರೀಯ ತಂಡಕ್ಕೆ ಮರಳಿದ್ದರು.

ಇಂಗ್ಲೆಂಡ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಕುಲ್ದೀಪ್ ಯಾದವ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಯಾರ್ಕ್‌ಶೈರ್ ಪರ ಎಸೆದು ಒಟ್ಟು 10 ವಿಕೆಟ್ ಪಡೆದು ಎಸೆಕ್ಸ್ ವಿರುದ್ಧ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಟೆಸ್ಟ್ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಕುಲ್ದೀಪ್, ಈ ಪ್ರದರ್ಶನದ ಮೂಲಕ ಆಯ್ಕೆದಾರರು ಮತ್ತು ಗೌತಮ್ ಗಂಭೀರ್‌ಗೆ ಬಲವಾದ ಸಂದೇಶ ನೀಡಿದ್ದಾರೆ.

ದುಲೀಪ್ ಟ್ರೋಫಿಯಲ್ಲಿ ಇಶಾನ್ ಕಿಶನ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಮತ್ತೆ ಚರ್ಚೆಗೆ ಬಂದಿದೆ. ಈ ಪ್ರದರ್ಶನದ ನಂತರ ಅವರ ಮುಂದಿನ ರಾಷ್ಟ್ರೀಯ ತಂಡದ ಅವಕಾಶದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ಗೆ ಮರಳಲು ಬಯಸುತ್ತಿರುವ ಇಶಾನ್‌ಗೆ ದೇಶೀಯ ಕ್ರಿಕೆಟ್‌ನ ಈ ಭರ್ಜರಿ ಪ್ರದರ್ಶನ ಪ್ರಮುಖ ಹೆಜ್ಜೆಯಾಗಿದೆ.

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಯುವ ಬ್ಯಾಟರ್ ಮೊಹಮ್ಮದ್ ಕುನೈನ್ ಕುರೇಶಿ ಗಮನ ಸೆಳೆದಿದ್ದಾರೆ. ಕೇವಲ ಎರಡನೇ ಪ್ರಥಮ ದರ್ಜೆ ಪಂದ್ಯದಲ್ಲೇ ಅವರು ಅಜೇಯ 116 ರನ್ ಸಿಡಿಸಿದ್ದಾರೆ. ಈ ಇನ್ನಿಂಗ್ಸ್ ಈಸ್ಟ್ ಝೋನ್‌ಗೆ ಪಂದ್ಯದಲ್ಲಿ ಹಿಡಿತ ಸಾಧಿಸಲು ನೆರವಾಯಿತು. ರಣಜಿ ಅನುಭವವಿಲ್ಲದೇ ದೊಡ್ಡ ವೇದಿಕೆಯಲ್ಲಿ ನೀಡಿದ ಪ್ರದರ್ಶನ ಈಗ ಅವರತ್ತ ಗಮನ ಸೆಳೆಯುವಂತೆ ಮಾಡಿದೆ.

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 453 ರನ್ ಗಳಿಸಿ 320 ರನ್ ಮುನ್ನಡೆ ಸಾಧಿಸಿತು. ಬಳಿಕ ಪಾಕಿಸ್ತಾನದ ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಮಳೆ ಆಟಕ್ಕೆ ಅಡ್ಡಿಯಾದರೂ ಇಂಗ್ಲೆಂಡ್ ಸರಣಿ ವೈಟ್‌ವಾಶ್ ಮಾಡುವ ಹಾದಿಯಲ್ಲಿದೆ.

ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಆಟಗಾರರ ಮೇಲಿನ ಅತಿಯಾದ ವೇಳಾಪಟ್ಟಿ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಿರಂತರ ಅಂತಾರಾಷ್ಟ್ರೀಯ ಪಂದ್ಯಗಳಿಂದ ಆಟಗಾರರ ಮೇಲಿನ ಹೊರೆ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ. ದೇಶೀಯ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಮೂರು ವಿಭಿನ್ನ ತಂಡಗಳನ್ನು ನಿರಂತರವಾಗಿ ಆಡಿಸುವ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಅವರು, ತಂಡದ ಹೆಡ್ ಕೋಚ್ ಮೈಕ್ ಹೆಸನ್ ಅವರನ್ನು ಭಾರತೀಯ ಏಜೆಂಟ್ ಎಂದು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಮೈಕ್ ಹೆಸನ್ ಪಾಕ್ ತಂಡವನ್ನು ಕೂಡಿಕೊಳ್ಳುವ ಮುನ್ನ ಐಪಿಎಲ್​ನಲ್ಲಿ ಹೆಡ್ ಕೋಚ್ ಆಗಿ ಕೆಲಸ ಮಾಡಿದ್ದರು. ಹೀಗಾಗಿ ಅವರಿಗೆ ಭಾರತದೊಂದಿಗೆ ನಂಟಿದೆ. ಹೆಸನ್ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ನಾಶಮಾಡಲು ಬಂದಿರುವ ಭಾರತೀಯ ಏಜೆಂಟ್ ಆಗಿರಬಹುದು’ ಎಂದಿದ್ದಾರೆ.

Kishor KV

Leave a Reply

Your email address will not be published. Required fields are marked *