ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ – ಮೊದಲ ದಿನ ಕಾಂಗರೂಗಳ ಹೆಡೆಮುರಿ ಕಟ್ಟಿದ ಟೀಮ್ ಇಂಡಿಯಾ

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ – ಮೊದಲ ದಿನ ಕಾಂಗರೂಗಳ ಹೆಡೆಮುರಿ ಕಟ್ಟಿದ ಟೀಮ್ ಇಂಡಿಯಾ

ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿಯ ಮೊದಲ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡದ ಹೆಡೆಮುರಿ ಕಟ್ಟಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಕಾಂಗಾರೂ ಪಡೆ ಕೇವಲ 177 ರನ್​ಗಳಿಗೆ ಆಲ್​ಔಟ್ ಆಗಿದೆ. ಗಾಯದಿಂದ ಚೇತರಿಸಿಕೊಂಡು ಸುದೀರ್ಘ ಸಮಯದ ಬಳಿಕ ವಾಪಸ್ ಆಗಿರುವ ಆಲ್​ರೌಂಡರ್ ರವೀಂದ್ರ ಜಡೇಜಾ 5 ವಿಕೆಟ್ ಪಡೆದ್ರೆ, ಆರ್​.ಅಶ್ವಿನ್ ಮೂರು ವಿಕೆಟ್ ಕಿತ್ತಿದ್ದಾರೆ. ಇನ್ನು ಭಾರತ ಒಂದು ವಿಕೆಟ್​​ನಷ್ಟಕ್ಕೆ 77 ರನ್​ ಗಳಿಸಿದೆ. ರೋಹಿತ್ ಶರ್ಮಾ ಅಜೇಯ ಅರ್ಧಶತಕ ಬಾರಿಸಿದ್ದಾರೆ. ಆದ್ರೆ ಕೆಎಲ್​​ ರಾಹುಲ್​​ ಕೇವಲ 20ರನ್​ಗೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.

ಇದನ್ನೂ ಓದಿ:  ಟೆಸ್ಟ್ ನಲ್ಲಿ ವೇಗವಾಗಿ 450 ವಿಕೆಟ್ – ಅನಿಲ್ ಕುಂಬ್ಳೆ ದಾಖಲೆ ಮುರಿದ ಅಶ್ವಿನ್

ಈ ನಡುವೆ ಸ್ಪಿನ್ನರ್ ಆರ್.ಅಶ್ವಿನ್, ಟೆಸ್ಟ್​ ಕ್ರಿಕೆಟ್​​ನಲ್ಲಿ ಅತ್ಯಂತ ವೇಗವಾಗಿ 450 ವಿಕೆಟ್ ಪಡೆದ ಎರಡನೇ ಬೌಲರ್ ಅನ್ನೋ ದಾಖಲೆಗೆ ಪಾತ್ರರಾಗಿದ್ದಾರೆ. 89ನೇ ಟೆಸ್ಟ್​ ಪಂದ್ಯದಲ್ಲಿ ಅಶ್ವಿನ್ 450 ವಿಕೆಟ್​ ಪಡೆದಿದ್ದಾರೆ. ಇನ್ನು ಶ್ರೀಲಂಕಾದ ಮುತ್ತಯ್ಯ ಮುಳೀಧರನ್ ಕೇವಲ 80 ಟೆಸ್ಟ್​ಗಳಲ್ಲೇ 450 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

suddiyaana