AUS ನೆಲದಲ್ಲಿ IND ಹ್ಯಾಟ್ರಿಕ್? – ಬಾರ್ಡರ್ ಗವಾಸ್ಕರ್ ಗೆಲುವು ಫಿಕ್ಸ್
WTC ಫೈನಲ್ ರೇಸ್.. ಯಾರಿಗೆ ಲಾಭ? 

AUS ನೆಲದಲ್ಲಿ IND ಹ್ಯಾಟ್ರಿಕ್? – ಬಾರ್ಡರ್ ಗವಾಸ್ಕರ್ ಗೆಲುವು ಫಿಕ್ಸ್WTC ಫೈನಲ್ ರೇಸ್.. ಯಾರಿಗೆ ಲಾಭ? 

ಕ್ರಿಕೆಟ್ ಲೋಕದಲ್ಲಿ ಇಂಡಿಯಾ ವರ್ಸಸ್ ಪಾಕಿಸ್ತಾನ ಮ್ಯಾಚ್ ಅಂದ್ರೆ ಮೋಸ್ಟ್ ಹೈವೋಲ್ಟೇಜ್ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಬಟ್ ಅದಕ್ಕಿಂದ್ಲೂ ಹೆಚ್ಚು ಕಿಚ್ಚು ಹಚ್ಚೋ ಫೈಟ್ ಅಂದ್ರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಯಾವುದೇ ಪಂದ್ಯ ನಡೆದ್ರೂ ಪ್ರತಿಷ್ಠೆಯ ಕದನ ಆಗಿರುತ್ತೆ. ಅದು ಟಿ20 ಇರಬಹುದು, ಏಕದಿನವಿರಬಹುದು ಇಲ್ಲಾ ಟೆಸ್ಟ್ ಪಂದ್ಯವೇ ಇರಬಹುದು. ಕಳೆದ ಎರಡು ದಶಕಗಳಿಂದ ಆಸ್ಟ್ರೇಲಿಯಾ ತಂಡವನ್ನು ಇನ್ನಿಲ್ಲದಂತೆ ಕಾಡಿದ ಯಾವ್ದಾದ್ರೂ ತಂಡ ಇದ್ರೆ ಅದು ಟೀಂ ಇಂಡಿಯಾ ಮಾತ್ರ. ಸೌರವ್ ಗಂಗೂಲಿ ಕಾಲದಿಂದಲೇ ಶುರುವಾದ ಈ ಜಿದ್ದಾಜಿದ್ದಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿವರೆಗೂ ಬಂದಿದೆ. ತುಂಬಾ ಸಲ ಆಸಿಸ್ ತಂಡವೇ ಮೇಲುಗೈ ಸಾಧಿಸಿದ್ರೂ ಕೂಡ ಅವ್ರುಗೆ ಭಾರತ ಅಂದ್ರೆ ಇನ್ನಿಲ್ಲದ ಭಯ. ಇದೀಗ ನವೆಂಬರ್ ತಿಂಗಳಿಂದ ಆರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿ ಕೂಡ ಭಾರೀ ಕ್ಯೂರಿಯಾಸಿಟಿ ಹುಟ್ಟಿಸಿದೆ. ಅಷ್ಟಕ್ಕೂ ಈ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿ ಉಭಯ ತಂಡಗಳಿಗೆ ಯಾಕೆ ಇಂಪಾರ್ಟೆಂಟ್? ವಿಶ್ವಟೆಸ್ಟ್ ಚಾಂಪಿಯನ್ ಶಿಪ್​ಗೆ ಹೇಗೆ ಪರಿಣಾಮ ಬೀರುತ್ತೆ? ರೋಹಿತ್ ಬಳಗದ ಮುಂದಿರೋ ಸವಾಲುಗಳೇನು? ಈ ಬಗೆಗಿನ ಒಂದಷ್ಟು ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಮೋಕ್ಷಿತಾ ಅಸಲಿ ಮುಖ ರಿವೀಲ್!‌ – ಸೈಲೆಂಟ್‌.. ವೈಲೆಂಟ್‌.. ಗೇಮ್‌ ಪ್ಲ್ಯಾನ್‌!!

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ್ದ ಭಾರತಕ್ಕೆ ನ್ಯೂಜಿಲೆಂಡ್ ತಂಡ ಬಿಗ್ ಶಾಕ್ ಕೊಟ್ಟಿದೆ. ಟೆಸ್ಟ್ ಸರಣಿಯ ಮೂರು ಪಂದ್ಯಗಳ ಪೈಕಿ ಮೊದಲ 2ಪಂದ್ಯಗಳನ್ನ ಗೆದ್ದು ಇನ್ನೂ ಒಂದು ಮ್ಯಾಚ್ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿತ್ತು. ತವರು ನೆಲದಲ್ಲೇ ಭಾರತ ಬಾರೀ ಮುಖಭಂಗ ಅನುಭವಿಸಿದೆ.  ನ್ಯೂಜಿಲೆಂಡ್ ಸರಣಿಯನ್ನ ಕಳ್ಕೊಂಡಿರೋ ಭಾರತಕ್ಕೆ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿ ಬಹಳನೇ ಮಹತ್ವದ್ದು. ಇಡೀ ಕ್ರಿಕೆಟ್ ಜಗತ್ತೇ ಕಾಯ್ತಿರೋ ಮೋಸ್ಟ್ ಅವೇಯ್ಟಿಂಗ್ ಸರಣಿ ಅಂದ್ರೆ ಬಾರ್ಡರ್ ಗವಾಸ್ಕರ್ ಟ್ರೋಫಿ. ನವೆಂಬರ್ 22 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದು ಈಗಾಗ್ಲೇ ಟೀಂ ಇಂಡಿಯಾ ಅನೌನ್ಸ್ ಕೂಡ ಮಾಡ್ಲಾಗಿದೆ.

18 ಸದಸ್ಯರ ತಂಡವನ್ನು ಆಯ್ಕೆ ಮಾಡಿದ ಟೀಂ ಇಂಡಿಯಾ!

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಮುಂದಿನ ತಿಂಗಳು 22 ರಿಂದ ಆರಂಭವಾಗಲಿದೆ. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ 18 ಸದಸ್ಯರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಿದೆ. ಇನ್ನೂ ಮೂವರು ಆಟಗಾರರನ್ನು ಪ್ರವಾಸಿ ಮೀಸಲು ಎಂದು ತಂಡಕ್ಕೆ ತೆಗೆದುಕೊಳ್ಳಲಾಗಿದೆ. ಬಾರ್ಡರ್ ಗವಾಸ್ಕರ್ ಸರಣಿಗೆ ನಾಯಕರಾಗಿ ರೋಹಿತ್ ಶರ್ಮಾ ಮತ್ತು ಉಪನಾಯಕರಾಗಿ ಜಸ್ಪ್ರೀತ್ ಬುಮ್ರಾ ಆಯ್ಕೆಯಾಗಿದ್ದಾರೆ. ಹಾಗೇಯಶಸ್ವಿ ಜೈಶ್ವಾಲ್, ಅಭಿಮನ್ಯು ಈಶ್ವರನ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿ ರಾಜ್, ಆಕಾಶ್ ದೀಪ್, ಕೃಷ್ಣ, ಹರ್ಷಿತ್, ಕೃಷ್ಣ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಇದ್ದಾರೆ. ಮೀಸಲು ಆಟಗಾರರಾಗಿ ಮುಖೇಶ್ ಕುಮಾರ್, ನವದೀಪ್ ಸೈನಾ, ಖಲೀಲ್ ಅಹಮದ್​ಗೆ ಸ್ಥಾನ ಸಿಕ್ಕಿದೆ.

10 ಸಲ ಭಾರತ ಗೆಲುವು.. 5 ಸಲ ಆಸಿಸ್ ಜಯಭೇರಿ!

ಇನ್ನು 1996-97ರಲ್ಲಿ ಮೊದಲ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿ ಆರಂಭವಾಗಿತ್ತು. ಅಂದಿನಿಂದ ಈವರೆಗೂ ಒಟ್ಟು 16 ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯಾವಳಿ ನಡೆದಿದೆ. ಇದರಲ್ಲಿ 10 ಬಾರಿ ಭಾರತ ಟ್ರೋಫಿ ವಿಜಯಪತಾಕೆ ಹಾರಿಸಿದ್ರೆ 5 ಬಾರಿ ಆಸ್ಟ್ರೇಲಿಯಾ ಗೆದ್ದಿದೆ. ಒಂದು ಬಾರಿ ಸರಣಿ ಡ್ರಾ ಆಗಿದೆ. ಭಾರತವೇ ಹೆಚ್ಚು ಸಲ ಟ್ರೋಫಿಯನ್ನ ತನ್ನದಾಗಿಸಿಕೊಂಡಿದ್ದಾರೆ. ಇನ್ನು ಆಡಿರುವ ಒಟ್ಟು 56 ಪಂದ್ಯಗಳಲ್ಲಿ ಭಾರತ 24 ಗೆದ್ದಿದ್ದರೆ, ಆಸ್ಚ್ರೇಲಿಯಾ 20 ಪಂದ್ಯಗಳನ್ನು ಗೆದ್ದಿದೆ. 12 ಪಂದ್ಯಗಳು ಡ್ರಾ ಆಗಿವೆ.

ಹ್ಯಾಟ್ರಿಕ್ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ!

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬಲಿಷ್ಠ ಟೀಮ್ ಇಂಡಿಯಾವನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಕಳೆದ 10 ವರ್ಷಗಳಿಂದ ಭಾರತ ತಂಡದ ಎದುರು ಕಾಂಗೂರು ಪಡೆ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. 2018-19 ಮತ್ತು 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಸರಣಿಯನ್ನು ಟೀಂ ಇಂಡಿಯಾ ಗೆದ್ದಿತ್ತು. ತವರಿನಲ್ಲಿ ಆಸ್ಟ್ರೇಲಿಯಾ ಕಳೆದ ಎರಡು ಬಾರಿಯೂ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡಿದೆ.

ಸರಣಿಗೆ ಕರ್ನಾಟಕದ ಇಬ್ಬರಿಗೆ ಸ್ಥಾನ ನೀಡಿದ ಬಿಸಿಸಿಐ!

ಆಸ್ಟ್ರೇಲಿಯಾ ಸರಣಿಗೂ ಮುನ್ನ ಕನ್ನಡಿಗರನ್ನ ಬಹುವಾಗಿ ಕಾಡಿದ ಪ್ರಶ್ನೆ ಅಂದ್ರೆ ಕೆಎಲ್ ರಾಹುಲ್ ಆಯ್ಕೆಯಾಗ್ತಾರಾ ಅನ್ನೋದು. ಕೊನೆಗೂ ಬಿಸಿಸಿಐ ರಾಹುಲ್​ಗೆ ಚಾನ್ಸ್ ನೀಡಿದೆ. ಹಾಗೇ ಮತ್ತೊಬ್ಬ ಕನ್ನಡಿಗನೂ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದ ಕೆಎಲ್ ರಾಹುಲ್ ಎರಡನೇ ಟೆಸ್ಟ್‌ನಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಕಳೆದುಕೊಂಡರು. ಅಸ್ಥಿರ ಪ್ರದರ್ಶನದಿಂದ ಟೀಕೆಗಳನ್ನು ಎದುರಿಸುತ್ತಿದ್ದರೂ, ಅವರ ಅನುಭವವನ್ನು ಪರಿಗಣಿಸಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗೆ ಆಯ್ಕೆ ಮಾಡಲಾಗಿದೆ. ಕೆಎಲ್ ರಾಹುಲ್ ಜೊತೆ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾ ವೇಗದ ಬೌಲರ್ ಗಳಿಗೆ ನೆರವು ನೀಡುವ ಪಿಚ್‌ಗಳಾಗಿರುವ ಕಾರಣ ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆಗೆ ಪರಿಗಣಿಸಲಾಗಿದೆ.

ಒಟ್ನಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯು ನವೆಂಬರ್ 22 ರಂದು ಆರಂಭವಾಗಲಿದೆ. 22ರಿಂದ 26ರ ನಡುವೆ ಮೊದಲ ಟೆಸ್ಟ್ ಪರ್ತ್‌ನಲ್ಲಿ ನಡೆಯಲಿದೆ. ಆ ಬಳಿಕ ಅಡಿಲೇಡ್‌ನಲ್ಲಿ ಡಿಸೆಂಬರ್ 6 ರಿಂದ 10 ರವರೆಗೆ ಎರಡನೇ ಟೆಸ್ಟ್, ಡಿಸೆಂಬರ್ 14 ರಿಂದ 18 ರವರೆಗೆ ಬ್ರಿಸ್ಬೇನ್‌ನಲ್ಲಿ ಮೂರನೇ ಟೆಸ್ಟ್ ಮತ್ತು ಡಿಸೆಂಬರ್ 26 ರಿಂದ 30 ರವರೆಗೆ ಮೆಲ್ಬೋರ್ನ್‌ನಲ್ಲಿ ನಾಲ್ಕನೇ ಟೆಸ್ಟ್ ನಡೆಯಲಿದೆ. ಅಂತಿಮ ಟೆಸ್ಟ್ ಜನವರಿ 3 ರಿಂದ 7 ರವರೆಗೆ ಸಿಡ್ನಿಯಲ್ಲಿ ನಡೆಯಲಿದೆ. ಮುಂದಿನ ವರ್ಷದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್​ ರೇಸ್​ನಲ್ಲಿ ಉಳೀಬೇಕು ಅಂದ್ರೆ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲ್ಲಲೇಬೇಕಿದೆ.

Shwetha M