ಟೀಂ ಇಂಡಿಯಾ ಮುಂದೆ ಹೀನಾಯವಾಗಿ ಸೋತ ಪಾಕಿಸ್ತಾನ

ಕೊಲೊಂಬೊದ ಆರ್.ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026 ಗುಂಪು ಹಂತದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಮಣಿಸಿ ಭರ್ಜರಿ ಗೆಲವು ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಉತ್ತಮ ರನ್ ರೇಟ್ ಕಾಯ್ದುಕೊಳ್ಳುವುದಲ್ಲದೆ, ಪಾಯಿಂಟ್ಸ್ ಟೇಬಲ್ನಲ್ಲಿ 6 ಅಂಕಗಳ ಮೂಲಕ ಅಗ್ರಸ್ಥಾನದಲ್ಲಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ಗಳನ್ನು ಕಲೆಹಾಕಿತು. ಇದರಲ್ಲಿ ಬಹುತೇಕ ರನ್ಗಳ ಪಾಲು ಆರಂಭಿಕನಾಗಿ ಅಭಿಷೇಕ್ ಶರ್ಮಾ ಜೊತೆ ಕಣಕ್ಕಿಳಿದ ಇಶಾನ್ ಕಿಶಾನ್ ಅವರದ್ದಾಗಿದೆ. ಇವರು ಕೇವಲ 40 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ ಬರೋಬ್ಬರಿ 77 ರನ್ಗಳನ್ನು ಕಲೆಹಾಕುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಮತ್ತೊಂದೆಡೆ, ಬೌಲರ್ಗಳು ಸಹ ಮಾರಕ ಬೌಲಿಂಗ್ ದಾಳಿ ನಡೆಸಿ ಪಾಕ್ ಬ್ಯಾಟರ್ಗಳಿಗೆ ಕಾಡಿದರು.
ಟೀಂ ಇಂಡಿಯಾ ಪರ ಬ್ಯಾಟಿಂಗ್ ಮಾಡಿದ, ಇಶಾನ್ ಕಿಶನ್ 77(40), ನಾಯಕ ಸೂರ್ಯಕುಮಾರ್ ಯಾದವ್ 32(29), ಶಿವಂ ದುವೆ 27(17), ತಿಲಕ್ ವರ್ಮಾ 25(24), ರಿಂಕು ಸಿಂಗ್ ಅಜೇಯ 11(4) ರನ್ ಸಿಡಿಸಿ ಮಿಂಚಿದರೆ, ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಾಟೇಲ್ ಶೂನ್ಯ ಸುತ್ತಿದರು.
ಇದನ್ನೂ ಓದಿ: ಫೆಬ್ರವರಿ 17 ಕ್ಕೆ ಕಂಕಣ ಸೂರ್ಯಗ್ರಹಣ – ಭಾರತದಲ್ಲಿ ಗೋಚರಿಸುತ್ತಾ, ಸೂತಕ ಇದ್ಯಾ?
ಭಾರತ ನೀಡಿದ 176 ರನ್ಗಳ ಗುರಿ ಮುಟ್ಟುವಲ್ಲಿ ವಿಫಲವಾಗಿ ಪಾಕಿಸ್ತಾನ ಸೋಲು ಕಂಡಿತು. ಪಾಕಿಸ್ತಾನವು 18 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು ಕೇವಲ 114 ರನ್ ಗಳಿಸಿ ಭಾರತದ ವಿರುದ್ಧ 61 ರನ್ಗಳ ಅಂತರದಿಂದ ಹೀನಾಯ ಸೋಲನುಭವಿಸಿತು. ಈ ಮೂಲಕ ಭಾರತದ ಬೌಲರ್ಗಳು ಪಾಕಿಸ್ತಾನದ ಬ್ಯಾಟರ್ಗಳ ವಿರುದ್ಧ ಹಿಡಿತ ಸಾಧಿಸಿ ಎಲ್ಲಾ ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಭಾರತದ ಪರ ಬೌಲಿಂಗ್ ಮಾಡಿದ, ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬೂಮ್ರಾ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರೆ, ಕಿಲ್ದೀಪ್ ಯಾದವ್ ಹಾಗೂ ತಿಲಕದ ವರ್ಮಾ ತಲಾ ಒಂದು ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಪಾಕಿಸ್ತಾನ ತಂಡವನ್ನು 114 ರನ್ಗಳಿ ಕಟ್ಟಿಹಾಕಿದರು. ಭಾರತದ ನೀಡಿದ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡ ಆರಂಭದಲ್ಲೇ ವಿಕೆಟ್ಗಳನ್ನು ಕಳೆದುಕೊಂಡು ಒತ್ತಡಕ್ಕೆ ಒಳಗಾಯಿತು. ಪಾಕಿಸ್ತಾನದ ಬ್ಯಾಟರ್ಗಳು ಕೆಲ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಪಂದ್ಯದ ಅಂತ್ಯದಲ್ಲಿ ಭಾರತೀಯ ಬೌಲರ್ಗಳ ಮಾರಕ ದಾಳಿಯನ್ನು ಎದುರಿಸಲಾಗಲಿಲ್ಲ. ಈ ಮೂಲಕ ಪಾಕಿಸ್ತಾನ ತಂಡ ಅಂತಿಮವಾಗಿ ಗುರಿ ತಲುಪುವಲ್ಲಿ ವಿಫಲವಾಗಿ ಸೋಲಿಗೆ ಶರಣಾಯಿತು.

ನೋಡಿರಿ

