ಬ್ಯಾಟಿಂಗ್ & ಬೌಲಿಂಗ್ ನಲ್ಲಿ ಅಬ್ಬರಿಸಿದ ಭಾರತ – ವಿಂಡೀಸ್ ವಿರುದ್ಧ ಜಡ್ಡು ಪರಾಕ್ರಮ!

ಬ್ಯಾಟಿಂಗ್ & ಬೌಲಿಂಗ್ ನಲ್ಲಿ ಅಬ್ಬರಿಸಿದ ಭಾರತ – ವಿಂಡೀಸ್ ವಿರುದ್ಧ ಜಡ್ಡು ಪರಾಕ್ರಮ!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಮ್ಯಾಚ್ ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೀತಿದೆ. ಐದು ದಿನಗಳ ಈ ಪಂದ್ಯವನ್ನ ಭಾರತ ಮೂರೇ ದಿನದಲ್ಲಿ ಒನ್ ಸೈಡೆಡ್ ಆಗಿ ಗೆದ್ದಿದೆ. ಅಕ್ಟೋಬರ್ 2 ಅಂದ್ರೆ ಗುರುವಾರ ಈ ಮ್ಯಾಚ್ ಸ್ಟಾರ್ಟ್ ಆಗಿದ್ದು ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್​ಗೆ ಇಳಿದ ವಿಂಡೀಸ್ ಪಡೆ ಕಂಪ್ಲೀಟ್ ಫೇಲ್ಯೂರ್ ಅನುಭವಿಸಿತ್ತು. ಫಸ್ಟ್ ಇನ್ನಿಂಗ್ಸ್​​ನಲ್ಲಿ ಜಸ್ಟ್ 162ಕ್ಕೆ ರನ್​ಗಳಿಗೆ ಕೆರೆಬಿಯನ್ ಬ್ಯಾಟರ್​ಗಳನ್ನ ಆಲೌಟ್ ಮಾಡಿ ಟೀಮ್ ಇಂಡಿಯಾ ಬೌಲರ್​ಗಳು ಧೂಳೆಬ್ಬಿಸಿದ್ರು. ಌಂಡ್ ಮೊದಲ ದಿನವೇ ಭಾರತ ಬ್ಯಾಟಿಂಗ್ ಕೂಡ ಶುರು ಮಾಡಿ 2 ವಿಕೆಟ್ ನಷ್ಟಕ್ಕೆ 121 ರನ್​ಗಳನ್ನ ಕಲೆ ಹಾಕಿತ್ತು. ಬಟ್ ಸೆಕೆಂಡ್ ಡೇ ಅಂತೂ ಭಾರತೀಯ ಬ್ಯಾಟರ್​ಗಳು ಚರಿತ್ರೆಯನ್ನೇ ಸೃಷ್ಟಿಸಿದ್ರು. ಇದೀಗ ಮೂರನೇ ದಿನಕ್ಕೆ ಮ್ಯಾಚ್​ನೇ ಮುಕ್ತಾಯ ಮಾಡಿದ್ದಾರೆ.

5 ವಿಕೆಟ್ ಇದ್ದಾಗಲೇ ಡಿಕ್ಲೇರ್ ಘೋಷಿಸಿದ ಭಾರತ!

ಕೆಎಲ್ ರಾಹುಲ್, ಧ್ರುವ್ ಜುರೇಲ್ ಹಾಗೇ ರವೀಂದ್ರ ಜಡೇಜಾ ಸೆಂಚುರಿಯೊಂದಿಗೆ ಭಾರತ ಎರಡನೇ ದಿನದಾಟದಲ್ಲೇ ಕಂಪ್ಲೀಟ್ ಮೇಲುಗೈ ಸಾಧಿಸಿತ್ತು. ಹಾಗೇ 5 ವಿಕೆಟ್ ನಷ್ಟಕ್ಕೆ 286 ರನ್​ಗಳ ಮುನ್ನಡೆ ಸಾಧಿಸಿತ್ತು. ಸೋ ಮೂರನೇ ದಿನದಾಟದಲ್ಲಿ ಮತ್ತೆ ಬ್ಯಾಟಿಂಗ್ ಶುರು ಮಾಡಿ ಇನ್ನೊಂದಷ್ಟು ರನ್ಸ್ ಕಲೆ ಹಾಕಿ ಡಿಕ್ಲೇರ್ ಘೋಷಿಸ್ತಾರೆ ಅನ್ಕೊಂಡಿದ್ರು. ಆದ್ರೆ ಶನಿವಾರ ಮ್ಯಾಚ್ ಶುರುವಾಗೋ ಮೊದ್ಲೇ ದಿಢೀರ್ ಡಿಕ್ಲೇರ್ ಘೋಷಿಸಿತು. ಬೌಲಿಂಗ್ ಪ್ಲ್ಯಾನ್ ಮಾಡಿದ್ದ ವಿಂಡೀಸ್ ತಂಡ ಫಾಲೋ ಆನ್​ಗೆ ಒಳಗಾಗಿ ಬ್ಯಾಟಿಂಗ್​ಗೆ ಬರಬೇಕಾಯ್ತು. ಯಾಕಂದ್ರೆ ಭಾರತ ಎರಡನೇ ದಿನದಾಟದಲ್ಲಿ ಬ್ಯಾಟಿಂಗ್​ನಲ್ಲಿ ಸಾಲಿಡ್ ಪ್ರದರ್ಶನ ನೀಡಿತ್ತು.

ಎರಡನೇ ದಿನದಾಟದಲ್ಲೇ ಮೇಲುಗೈ ಸಾಧಿಸಿದ್ದ ಟೀಂ ಇಂಡಿಯಾ!

ಎರಡನೇ ದಿನದಾಟದಲ್ಲಿ ಭಾರತದ ಬ್ಯಾಟರ್​ಗಳು ಕಂಪ್ಲೀಟ್ ಮೇಲುಗೈ ಸಾಧಿಸಿದ್ರು. ಇಡೀ ದಿನ ವಿಂಡೀಸ್ ಬೌಲರ್​ಗಳಿಗೆ 3 ವಿಕೆಟ್ ತೆಗೆಯಲಷ್ಟೇ ಸಾಧ್ಯವಾಗಿತ್ತು. ಅದ್ರಲ್ಲೂ ಭಾರತದ ಪರ ಮೂವರು ಒಂದೇ ದಿನ ಶತಕ ಬಾರಿಸಿದ್ದು ವಿಶೇಷವಾಗಿತ್ತು. ಫಸ್ಟ್ ಡೇ ಹಾಫ್ ಸೆಂಚುರಿ ಸಿಡಿಸಿದ್ದ ಕೆಎಲ್ ರಾಹುಲ್ ಎರಡನೇ ದಿನದಾಟದಲ್ಲಿ ಫಸ್ಟ್ ಸೆಷನ್ ಮುಗಿಯೋ ಹೊತ್ತಿಗೆ 100 ರನ್​ಗಳನ್ನ ಕಂಪ್ಲೀಟ್ ಮಾಡಿದ್ರು. ಌಂಡ್ ನೆಕ್ಸ್​ಟ್ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ಟೆಸ್ಟ್ ಕ್ರಿಕೆಟ್​ನಲ್ಲಿ ಮೊದಲ ಶತಕ ಬಾರಿಸಿದ್ರು. ಜುರೇಲ್ 125 ರನ್​ಗಳ ದೊಡ್ಡ ಕೊಡುಗೆ ನೀಡಿದ್ರು. ಇನ್ನು ಆಲ್​ರೌಂಡರ್ ರವೀಂದ್ರ ಜಡೇಜಾ ಕೂಡ ಒನ್ಸ್ ಅಗೇನ್ ಭಾರತಕ್ಕೆ ನೆರವಾದ್ರು. ಜರೇಲ್ ಜೊತೆ 200 ರನ್​ಗಳ ಪಾರ್ಟ್ನರ್​ಶಿಪ್ ನೀಡಿದ ಜಡ್ಡು 104 ರನ್ ಗಳಿಸಿ ಅಜೇಯರಾಗಿ ಉಳಿದಿದ್ರು. ಈ ಮೂಲಕ ಭಾರತ ಎರಡನೇ ದಿನದಾಟದಲ್ಲಿ 5 ವಿಕೆಟ್ ಕಳೆದುಕೊಂಡು 448 ರನ್​ ಕಲೆಹಾಕಿತ್ತು. ಹೀಗಾಗಿ ಫಾಲೋ ಆನ್​ಗೆ ಸಿಲುಕಿದ ವಿಂಡೀಸ್ ಎರಡನೇ ಇನ್ನಿಂಗ್ಸ್ ನಲ್ಲೂ ಕಮ್ ಬ್ಯಾಕ್ ಮಾಡೋಕೆ ಆಗ್ಲಿಲ್ಲ.  ಒನ್ಸ್ ಅಗೇನ್ ಸೆಕೆಂಡ್ ಇನ್ನಿಂಗ್ಸ್​ನಲ್ಲೂ ಕೆರೆಬಿಯನ್ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡ್ಸಿದ್ರು.

ಜಡ್ಡು ದಾಳಿಗೆ ಮಕಾಡೆ ಮಲಗಿದ ವಿಂಡೀಸ್ ಬ್ಯಾಟರ್ಸ್!

286 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿದ ವೆಸ್ಟ್ ಇಂಡೀಸ್ ತಂಡದ ಬ್ಯಾಟರ್​ಗಳು ಒಬ್ರ ಹಿಂದೆ ಒಬ್ರಂತೆ ಪೆವಿಲಿಯನ್ ಸೇರ್ಕೊಂಡ್ರು. ಮೊಹಮ್ಮದ್ ಸಿರಾಜ್ ಭಾರತಕ್ಕೆ ಮೊದಲ ಬ್ರೇಕ್ ಥ್ರ್ಯೂ ತಂದುಕೊಟ್ರು. 8 ರನ್​ ಗಳಿಸಿದ್ದ ಚಂದೆರ್​ಪೌಲ್ ವಿಕೆಟ್ ಉರುಳಿಸಿದ್ರು. 12 ರನ್​ಗೆ ಪಸ್ಟ್ ವಿಕೆಟ್ ಕಳ್ಕೊಂಡ ವಿಂಡೀಸ್ 24 ರನ್ ಕಲೆ ಹಾಕುವಷ್ಟ್ರಲ್ಲಿ ಮತ್ತೊಂದು ವಿಕೆಟ್ ಬಿತ್ತು. ಹೀಗೆ ನೆಕ್ಸ್​ಟ್ 35 ರನ್, 36 ರನ್​, 46 ರನ್​ ಕಲೆ ಹಾಕುವಾಗ ಒಂದೊಂದು ವಿಕೆಟ್​​ಗಳು ಉರುಳಿದ್ವು. ಫಸ್ಟ್ ಸೆಷನ್ ಮುಗಿದು ಲಂಚ್ ಬ್ರೇಕ್ ವೇಳೆಗೆಲ್ಲಾ 66 ರನ್​ಗಳಿಗೆ 5 ವಿಕೆಟ್​ಗಳು ಬಿದ್ದಾಗಿತ್ತು. ಸೋ ಅಲ್ಲಿಗೆ ಭಾರತ ಇಡೀ ಪಂದ್ಯದಲ್ಲಿ ಡಾಮಿನೇಟ್ ಮಾಡ್ತಿರೋದು ಸ್ಪಷ್ಟವಾಗಿತ್ತು. ಹಾಗೇ ಎರಡನೇ ಸೆಷನ್​ನಲ್ಲೂ ಜಡ್ಡು ದಾಳಿ ಮುಂದುವರಿದಿತ್ತು. ಲಾಸ್ಟ್ ಮೂಮೆಂಟ್​ನಲ್ಲಿ ಬೌಲರ್​ಗಳ ಪೇಷನ್ಸ್ ಚೆಕ್ ಮಾಡ್ತಿದ್ದ ಜೋಹಾನ್ ಲೇನ್​ಗೆ ಪೆವಿಲಿಯನ್ ಹಾದಿ ತೋರಿಸಿದ್ರು.

ಎರಡನೇ ಸೆಷನ್ ನಲ್ಲಿ ಸಿರಾಜ್ ಸಿಡಿಲು!

ಲಂಚ್ ಬ್ರೇಕ್ ಬಳಿಕ ವಿಂಡೀಸ್ ಪರ ಅಲಿಕ್ ಅಥಾನಜೆ ಹಾಗೇ ಜಸ್ಟಿನ್ ಗ್ರೀವ್ ಒಂದೊಳ್ಳೆ ಪಾರ್ಟ್ನರ್​ಶಿಪ್ ನೀಡಿದ್ರು. 46 ರನ್​ಗಳ ಜೊತೆಯಾಟವಾಡಿದ್ರು. ಇಬ್ಬರ ಪಾರ್ಟ್ನರ್​ಶಿಪ್ ಬಿಲ್ಡ್ ಆಗ್ತಿರೋ ಟೈಮಲ್ಲೇ ವಾಷಿಂಗ್ಟನ್ ಸುಂದರ್ ಬ್ರೇಕ್ ಥ್ರ್ಯೂ ತಂದುಕೊಟ್ರು. 38 ರನ್ ಗಳಿಸಿದ್ದ ಅಥಾನಜೆ ವಿಕೆಟ್ ಒಪ್ಪಿಸಿದ್ರು. ಆ ಬಳಿಕ ಸಿರಾಜ್ ಸಿಡಿಲು ಮತ್ತೆ ಅಪ್ಪಳಿಸಿತು. 25 ರನ್ ಗಳಿಸಿದ್ದ ಜಸ್ಟಿನ್ ಗ್ರೀವ್ಸ್ ಸಿರಾಜ್​ ಅವ್ರ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ರೆ ಅದೇ ಓವರ್​ನಲ್ಲೇ ಜೋಮೆಲ್ ವಾರಿಕಾನ್ ರನ್ನ ಡಕ್ ಔಟ್ ಮಾಡಿದ್ರು. ಹೀಗೆ ಆಲೌಟ್ ಟಾರ್ಗೆಟ್​ನೊಂದಿಗೆ ಮೈದಾನಕ್ಕಿಳಿದ ಭಾರತದ ಪರ ಆಲ್​ರೌಂಡರ್ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಗ್ರೇಟ್ ಪರ್ಫಾಮೆನ್ಸ್ ನೀಡಿದ್ರು. ಅದ್ರಲ್ಲೂ ಜಡ್ಡು ಬ್ಯಾಟ್ ಌಂಡ್ ಬಾಲ್​ನಲ್ಲೂ ಇಂಪ್ರೆಸ್ಸಿವ್ ಇನ್ನಿಂಗ್ಸ್ ಆಡಿದ್ರು. ಅಂತಿಮವಾಗಿ ವಿಂಡೀಸ್ ತಂಡ 146 ರನ್​ಗಳಿಗೆ ಆಲೌಟ್ ಆಯ್ತು. ಎರಡನೇ ಸೆಷನ್ ನಲ್ಲೇ ವಿಂಡೀಸ್ ಸೋಲೊಪ್ಪಿಕೊಳ್ತು. ಇನ್ನು ಭಾರತದ ಪರ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ರವೀಂದ್ರ ಜಡೇಜಾ ನಾಲ್ಕು ವಿಕೆಟ್ ತೆಗೆದ್ರೆ ಸಿರಾಜ್ ಮೂರು ವಿಕೆಟ್ ಉರುಳಿಸಿದ್ರು. ಕುಲ್ದೀಪ್ ಯಾದವ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ತೆಗೆದ್ರು.

ಬ್ಯಾಟಿಂಗ್​ ನಲ್ಲಿ ಶತಕ.. ಬೌಲಿಂಗ್ ನಲ್ಲೂ ಮಿಂಚಿದ ಜಡ್ಡು!

ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಯಾವತ್ತೂ ಕೂಡ ಟೀಂ ಇಂಡಿಯಾದ ಭರವಸೆ ಕಳ್ಕೊಂಡಿಲ್ಲ. ಇನ್ನೇನು ಕರಿಯರ್ ಮುಗಿತಾನೇ ಬಂದಿದೆ ಅನ್ನುವಾಗ್ಲೇ ಕೆರಿಯರ್​ನ ಪೀಕ್​ನಲ್ಲಿರುವಂತೆ ಪರ್ಫಾಮೆನ್ಸ್ ನೀಡ್ತಿದ್ದಾರೆ. ಫಸ್ಟ್ ಇನ್ನಿಂಗ್ಸ್​ನಲ್ಲಿ ಬೌಲಿಂಗ್​ನಲ್ಲಿ 3 ಓವರ್ ಅಷ್ಟೇ ಬೌಲ್ ಮಾಡಿದ್ರು. 15 ರನ್ ನೀಡಿ ಯಾವುದೇ ವಿಕೆಟ್ ತೆಗೆಯೋಕೆ ಆಗಿರಲಿಲ್ಲ. ಬಟ್ ಬ್ಯಾಟಿಂಗ್​ನಲ್ಲಿ ಕಂಪ್ಲೀಟ್ ಮಿಂಚಿಂದ್ರು. 176 ಎಸೆತಗಳಲ್ಲಿ 104 ರನ್ ಗಳಿಸಿ ಅಜೇಯರಾಗಿ ಉಳಿದಿದ್ರು. ಌಂಡ್ ಮೂರನೇ ದಿನ ಬೌಲಿಂಗ್​ನಲ್ಲಿ ಕೆರೆಬಿಯನ್ ಬ್ಯಾಟರ್​ಗಳನ್ನ ಬೆಂಡೆತ್ತಿದ್ರು. ಇಂಗ್ಲೆಂಡ್ ಸಿರೀಸ್​ನಲ್ಲೂ ಕೂಡ ಅದ್ಭುತ ಪ್ರದರ್ಶನ ನೀಡಿದ್ರು. 10 ಇನ್ನಿಂಗ್ಸ್​ಗಳಿಂದ 516 ರನ್​ಗಳನ್ನ ಕಲೆ ಹಾಕಿದ್ರು. ಸರಣಿಯ ನಾಲ್ಕನೇ ಹೈಯೆಸ್ಟ್ ಸ್ಕೋರರ್ ಆಗಿದ್ರು. ಭಾರತ ಮೂರನೇ ಸ್ಕೋರರ್ ಆಗಿದ್ರು.  ಇನ್ನು ಬೌಲಿಂಗ್​ನಲ್ಲೂ 5 ಪಂದ್ಯಗಳಿಂದ 7 ವಿಕೆಟ್ ತೆಗೆದಿದ್ರು. ಜಡ್ಡುರ ಇದೇ ಪ್ರದರ್ಶನದಿಂದಲೇ ಟೀಂ ಇಂಡಿಯಾದಲ್ಲಿ ವಿಂಡೀಸ್ ಸರಣಿಗೆ ವೈಸ್ ಕ್ಯಾಪ್ಟನ್ಸಿ ನೀಡಲಾಗಿತ್ತು. ಜಡ್ಡು ತಮ್ಮ ಮೇಲೆ ಮ್ಯಾನೇಜ್​ಮೆಂಟ್ ಇಟ್ಟಿರೋ ನಂಬಿಕೆಯನ್ನ ದುಪ್ಪಟ್ಟು ಮಾಡಿಕೊಳ್ತಿದ್ದಾರೆ.

2025ರಲ್ಲೇ 3ನೇ ಬಾರಿಗೆ ಒಂದೇ ಪಂದ್ಯದಲ್ಲಿ ಮೂವರ ಶತಕ!

2024ರಲ್ಲಿ ಭಾರತ ಟೆಸ್ಟ್ ಸರಣಿಗಳಲ್ಲಿ ಸಾಕಷ್ಟು ಏಳುಬೀಳುಗಳನ್ನ ಕಂಡಿತ್ತು. ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಹಾಗೇ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಸಕ್ಸಸ್ ಸಿಗ್ಲಿಲ್ಲ. ಹೀಗಾಗಿ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್​ನಲ್ಲಿ ಆಡೋ ಅವಕಾಶವನ್ನೂ ಕಳ್ಕೊಂಡಿತ್ತು. ಬಟ್ ಈ ವರ್ಷ ಟೆಸ್ಟ್​ನಲ್ಲಿ ಬೆಟರ್ ಆಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯನ್ನ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅದ್ರಲ್ಲೂ ಬ್ಯಾಟಿಂಗ್​ನಲ್ಲಿ ಶತಕಗಳ ದಾಖಲೆ ನಡೀತಿದೆ. ಭಾರತ ತಂಡದ ಮೂವರು ಬ್ಯಾಟರ್​ಗಳು ಒಂದೇ ಪಂದ್ಯದಲ್ಲಿ 3 ಸಲ ಶತಕ ಸಿಡಿಸಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಮೂವರು ಬ್ಯಾಟರ್ಗಳು 2 ಪಂದ್ಯಗಳಲ್ಲಿ ಶತಕದ ಸಾಧನೆ ಮಾಡಿದ್ದರು. ಲೀಡ್ ನಲ್ಲಿ ನಡೆದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಸೆಂಚುರಿ ಬಾರಿಸಿದ್ರು. ಆ ಬಳಿಕ ಮ್ಯಾಂಚೆಸ್ಟರ್ ನಲ್ಲಿ ನಡೆದ ಟೆಸ್ಟ್ ನಲ್ಲೂ ಶುಭ್ಮನ್ ಗಿಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್  ಶತಕ ಬಾರಿಸಿದ್ರು. ಈಗ ಅಹಮದಾಬಾದ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಕೆಎಲ್ ರಾಹುಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ ಸೆಂಚುರಿ ಬಾರಿಸಿದ್ದಾರೆ. ಅದೂ ಕೂಡ ಒಂದೇ ದಿನ ಅನ್ನೋದೇ ಮತ್ತೊಂದು ವಿಶೇಷ. ಒಟ್ನಲ್ಲಿ ವೈಟ್​ಬಾಲ್​ನಲ್ಲಿ ಕಂಪ್ಲೀಟ್ ಡಾಮಿನೇಟಿವ್ ಮೋಡ್​ನಲ್ಲಿದ್ದ ಭಾರತ ಈಗ ರೆಡ್ ಬಾಲ್​ನಲ್ಲೂ ಫಾರ್ಮ್​ಗೆ ಬರ್ತಿದೆ. ವಿಂಡೀಸ್ ವಿರುದ್ಧ ಫಸ್ಟ್ ಮ್ಯಾಚ್ ಗೆದ್ದಿದ್ದು ಅಕ್ಟೋಬರ್ 10ರಿಂದ ಶುರುವಾಗಲಿರುವ ಎರಡನೇ ಪಂದ್ಯವನ್ನೂ ಒನ್ ಸೈಡೆಡ್ ಆಗಿಯೇ ಗೆಲ್ಲೋ ಕಾನ್ಫಿಡೆನ್ಸ್​ನಲ್ಲಿದೆ.

Shantha Kumari