ಮೂರೇ ದಿನಕ್ಕೆ ಮುಗಿದ ಟೆಸ್ಟ್! ಒಂದೇ ದಿನ 2 ಬಾರಿ ಆಲೌಟ್ ಆಗಿದ್ದೇಗೆ?
ಹೇಗಿತ್ತು INDIANS ಅಬ್ಬರ?

ಮೂರೇ ದಿನಕ್ಕೆ ಮುಗಿದ ಟೆಸ್ಟ್! ಒಂದೇ ದಿನ 2 ಬಾರಿ ಆಲೌಟ್ ಆಗಿದ್ದೇಗೆ?ಹೇಗಿತ್ತು INDIANS  ಅಬ್ಬರ?

ಅಫ್ಘಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ರೋಚಕವಾಗಿ ಗೆದ್ದಿದೆ. 5 ದಿನದ ಟೆಸ್ಟ್ ಪಂದ್ಯವನ್ನ 3ನೇ ದಿನದಲ್ಲಿ ಟೀಂ ಇಂಡಿಯಾ ಬಾಯ್ಸ್ ಮುಗಿಸಿದ್ದಾರೆ.  ಅಷ್ಟೇ ಅಲ್ಲ ಜಸ್ಟ್ 24 ಗಂಟೆಯಲ್ಲಿ ಅಫ್ಘಾನ್ ಎರಡು ಸಲ ಟೀಂ ಇಂಡಿಯಾ ಮುಂದೆ ಅಲೌಟ್ ಆಗಿ ಹೀನಾಯವಾಗಿ ಸೋತಿದೆ.

ಎಲ್ಲರ ನಿರೀಕ್ಷೆಯಂತೆ ಅಫ್ಘಾನ್ ವಿರುದ್ದ  ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಕೇವಲ 3 ದಿನಕ್ಕೆ ಪಂದ್ಯ ಮುಗಿದಿದ್ದ, ಅಫ್ಘಾನ್ ಎರಡು ಸಲ ಆಲ್‌ಔಟ್ ಆಗಿದೆ. ಟೀಂ ಇಂಡಿಯಾ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಖತ್ ಆಗಿಯೇ ತನ್ನ ಖದರ್ ತೋರಿಸಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಪಾದರ್ಪಾಣೆ ಪಂದ್ಯದಲ್ಲಿ ಮಾನವ್ ಸುತಾರ್ ಸೂಪರ್ ಡೂಪರ್ ಬೌಲಿಂಗ್ ಮಾಡಿ ವಿಕೆಟ್‌ ಮೇಲೆ ವಿಕೆಟ್ ತೆಗೆದಿದ್ದಾರೆ.

ಶನಿವಾರ ಶುರುವಾದ ಅಫ್ಘಾನ್ ಮತ್ತು ಭಾರತ ನಡುವಿನ ಏಕೈಕ ಟೆಸ್ಟ್‌ಪಂದ್ಯದಲ್ಲಿ, ಟೀಂ ಇಂಡಿಯಾ ತನ್ನ ಖದರ್ ತೋರಿಸಿದೆ. ಶನಿವಾರ ಮತ್ತು ಭಾನುವಾರ ಎರಡು ದಿನ ಟೀಂ ಇಂಡಿಯಾ ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ 564 ರನ್‌ಗಳಿಸಿ ಡಿಕ್ಲೇರ್ ಘೋಷಣೆ ಮಾಡ್ತು.. ಟೀಂ ಇಂಡಿಯಾ ಪರ  ಶುಭಮನ್‌ ಗಿಲ್‌, ರಿಷಭ್‌ ಪಂತ್‌, ಕೆಎಲ್ ರಾಹುಲ್‌ ಅಮೋಘ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ನಾಯಕ ಶುಭಮನ್‌ ಗಿಲ್ 126 ರನ್ ಗಳಿಸಿದರೆ, ರಾಹುಲ್ 100 ರನ್ ಸಿಡಿಸಿದರು. ಸುದರ್ಶನ್ ಮತ್ತು ಪಂತ್ ತಲಾ 81 ರನ್ ಗಳಿಸಿದರು. ಸುಂದರ್ ಕೂಡ ಅಜೇಯ 52 ರನ್ ಗಳಿಸಿದರು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 564 ರನ್ ಕಲೆ ಹಾಕಿ ಡಿಕ್ಲೆರ್ ಮಾಡಿಕೊಳ್ತು.

ಇದನ್ನೂ ಓದಿ: ಮೂರೇ ದಿನದಲ್ಲೇ ಗೆದ್ದ ಭಾರತ – ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 300 ರನ್‌ಗಳ ಜಯ

ಆಮೇಲೆ ಬ್ಯಾಟಿಂಗ್‌ಗೆ ಇಳಿದ ಅಘ್ಫಾನ್ ಪಡೆ ರನ್‌ಗಳಿಸೋಕೆ ಹೆಣಗಾಡ್ತು.. ಭಾನುವಾರದ ಅಂತ್ಯಕ್ಕೆ ಅಫ್ಘಾನ್ ಗಳಿಸಿದ್ದು 5 ವಿಕೆಟ್ ನಷ್ಟಕ್ಕೆ 113 ರನ್‌ ಮಾತ್ರು..ಇನ್ನು ಸೋಮವಾರ ಆಟ ಮುಂದುವರಿಸಿ ಅಫ್ಘಾನ್‌ಗೆ ಟೀಂ ಇಂಡಿಯಾ ಬೌಲರ್‌ ಸಖತ್‌ ಆಗಿ ಚೋಕ್‌ ಕೊಟ್ರು. ಆಫ್ಘಾನ್‌ಗೆ ಸ್ಪಿನ್ನರ್‌ ಮಾನವ್‌ ಸುತಾರ್‌ ಇನ್ನಿಲ್ಲದಂತೆ ಕಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಭಾನುವಾರ ಮೂರು ವಿಕೆಟ್‌ ಕಿತ್ತಿದ್ದ ಸುತಾರ್ 3ನೇ ದಿನದಾಟದಲ್ಲಿಯೂ ಮತ್ತೆ 3 ವಿಕೆಟ್‌ ಕಿತ್ತರು. ಈ ಮೂಲಕ  ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನ ಇವರೇ ಕಿತ್ತಿದ್ದಾರೆ. ಭಾರತದ ಬೌಲರ್ ಮುಂದೆ  ಅಫ್ಘಾನ್ ಬ್ಯಾಟರ್ ಹೆಚ್ಚು ಹೊತ್ತು ಕ್ರಿಸ್‌್ನಲ್ಲಿ ನಿಲ್ಲೋಕೆ ಆಗಲಿಲ್ಲ  ಅಫ್ಘಾನ್ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಪರ ಮಾನವ್ ಸುತಾರ್ 6 ವಿಕೆಟ್ ಕಿತ್ರೆ, ಪ್ರಸಿದ್ಧ್ ಕೃಷ್ಣ 3 ವಿಕೆಟ್ ಪಡೆದ್ರು, ಇನ್ನು ವಾಷಿಂಗ್ಟನ್ ಸುಂದರ್ 1 ವಿಕೆಟ್ ತೆಗೆದ್ರು, ಈ ಮೂಲಕ ಅಫ್ಘಾನ್ 152 ರನ್‌ಗೆ ಅಲೌಟ್ ಆಯ್ತು.

ಮೊದಲ ಇನ್ನಿಂಗ್ಸ್‌ನಲ್ಲಿ 564 ರನ್ ಕಲೆಹಾಕಿದ್ರಿಂದ ಟೀಂ ಇಂಡಿಯಾ ಅಫ್ಘಾನ್ ಫಾಲೋ ಆನ್ ಹೆರಿತು.. ಮತ್ತೆ ಬ್ಯಾಟಿಂಗ್ ಶುರುಮಾಡಿದ ಅಫ್ಘಾನ್‌ ಬ್ಯಾಟರ್ ಟೀಂ ಇಂಡಿಯಾ ಬೌಲಿಂಗ್‌ಗೆ ಮಂಕಾಗಿ ಹೋದ್ರು. 2ನೇ ಇನ್ಸಿಂಗ್ ಶುರುಮಾಡಿದ ಅಫ್ಘಾನ್‌ ಬ್ಯಾಟರ್ಸ್‌ ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ನಿಲ್ಲಲಿಲ್ಲ. ಒಂದಂಕಿ ರನ್‌ಗೆ ವಿಕೆಟ್ ಕಳೆದುಕೊಂಡ್ರು. ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದ್ದ ಟೀಂ ಇಂಡಿಯಾ ಹೊಸ ಬೌಲರ್ ಮಾನವ ಸುತಾರ್ 2ನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಪಡೆದ್ರು. ಈ ಮೂಲಕ ಸುತಾರ್ ಟೀಂ ಇಂಡಿಯಾ ಟೆಸ್ಟ್ ಪದಾರ್ಪಣೆ ಪಂದ್ಯದಲ್ಲೇ ಒಟ್ಟು 7 ವಿಕೆಟ್ ಕಬಳಿಸಿ ದಾಖಲೆ ಬರೆದ್ರು. ಇನ್ನೂ 2ನೇ ಇನ್ಸಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ 4 ವಿಕೆಟ್ ಕಬಳಿಸಿದ್ರೆ,ಕುಲದೀಪ್ ಯಾದವ್3 ವಿಕೆಟ್ ಸಿರಾಜ್ 1 ವಿಕೆಟ್ ತೆೆಗೆದು ಅಫ್ಘಾನ್‌ ಬ್ಯಾಟರ್‌ಗಳನ್ನ ಕಟ್ಟಿ ಹಾಕಿದ್ರು. ಈ ಮೂಲಕ ಅಫ್ಘಾನ್ ಒಂದೇ ದಿನದಲ್ಲಿ ಟೆಸ್ಟ್‌ನಲ್ಲಿ 2 ಸಲ ಆಲೌಟ್ ಆಯ್ತು.. 2ನೇ ಇನ್ನಿಂಗ್ಸ್‌ನಲ್ಲಿ ಅಫ್ಘನ್ ಪಡೆ 112 ರನ್​ಗಳಿಗೆ ಆಲೌಟ್ ಆಗುವ ಮೂಲಕ 300 ರನ್​ಗಳ ಹೀನಾಯ ಸೋಲು ಅನುಭವಿಸಿತು. ಟೀಂ ಇಂಡಿಯಾ ಸ್ಪಿನ್ ಮೋಡಿಗೆ ಟೆಸ್ಟ್ ಶಿಶುಗಳಾದ ಅಫ್ಘಾನ್ ಆಟಗಾರರು ತತ್ತರಿಸಿ ಹೋದ್ರು.

Kishor KV

Leave a Reply

Your email address will not be published. Required fields are marked *