ಭಾರತ 141 ರನ್.. 6 ವಿಕೆಟ್! – ಗೆಲ್ಲಿಸೋಕೆ ಬೌಲರ್ ಗಳೇ ಬೇಕಾ?

ಟೀಂ ಇಂಡಿಯಾವನ್ನ ಬಹುಶಃ ಬರೀ ಬೌಲರ್ಗಳು ಮಾತ್ರನೇ ಕಾಪಾಡ್ಬೇಕು. ಆಸ್ಟ್ರೇಲಿಯಾದಲ್ಲಿ ಈ ಟಾಪ್ ಆರ್ಡರ್ ಬ್ಯಾಟರ್ಸ್ ಅಂತಾ ಕರೆಸಿಕೊಂಡವ್ರು ಸೋಲೋಕಂತ್ಲೇ ಆಡ್ತಾವ್ರೆ ಅನ್ಸುತ್ತೆ. ಬ್ಯಾಟಿಂಗ್ನೇ ಮರೆತು ಆಟ ನೋಡೋಕೆ ಬಂದವ್ರಂತೆ ಹೋಗಿ ಪೆವಿಲಿಯನ್ ಸೇರಿಕೊಳ್ತಿದ್ದಾರೆ. ಇವತ್ತಿನ ಪಂದ್ಯದಲ್ಲೂ ಸೇಮ್ ಟು ಸೇಮ್ ಅದೇ ರಿಪೀಟ್ ಆಗಿದೆ. ಕೈಯಲ್ಲಿರೋ ಮ್ಯಾಚ್ನೂ ಬಿಟ್ಟುಕೊಡ್ತಿದ್ದಾರೆ. ಹಾಗಾದ್ರೆ ಭಾರತದ ಬ್ಯಾಟಿಂಗ್ ವಿಭಾಗ ಬರ್ಬಾದ್ ಆಯ್ತಾ? ಸಿಡ್ನಿಯಲ್ಲೂ ಸೋಲು ಫಿಕ್ಸ್ ಮಾಡ್ತಾರಾ? ಟೆಸ್ಟ್ ಮ್ಯಾಚ್ ನೂ ಬೇಕಾಬಿಟ್ಟಿಯಾಗಿ ಆಡ್ತಿರೋದೇಕೆ? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕುಸುಮಾ ಕೆಟ್ಟ ಅತ್ತೆನಾ? – ಸೊಸೆ ಇರೋದು ಮನೆ ಕೆಲ್ಸಕ್ಕಾ?
ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ 5 ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಟಾಸ್ ವಿನ್ ಆಗಿ ಬ್ಯಾಟಿಂಗ್ ಆಯ್ಕೆ ಮಾಡ್ಕೊಂಡಿತ್ತು. ಬಟ್ ಅಂದುಕೊಂಡಂತ ಪ್ರದರ್ಶನ ಬರ್ಲಿಲ್ಲ. ಹೀಗಾಗಿ 185 ರನ್ಗಳಿಗೆ ಆಲೌಟ್ ಆಗಿತ್ತು. ಭಾರತದ ಈ ಸ್ಕೋರ್ ನೋಡಿದಾಗ ಆಸ್ಟ್ರೇಲಿಯಾ ಈಸಿಯಾಗಿ ಸೋಲಿಸಿಬಿಡುತ್ತೆ ಅನ್ನೋ ಲೆಕ್ಕಾಚಾರ ಶುರುವಾಗಿತ್ತು. ಆದ್ರೆ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದ್ದೇ ಭಾರತೀಯ ಬೌಲರ್ಸ್. ನಾವು ಕೂಡ ಪಂದ್ಯವನ್ನ ಗೆಲ್ಲಿಸಬಲ್ಲೆವು ಅಂತಾ ತೋರಿಸಿಕೊಟ್ಟಿದ್ರು. ಆಸ್ಟ್ರೇಲಿಯಾ ಬ್ಯಾಟರ್ಗಳನ್ನ ಬೆಂಡೆತ್ತಿ 181 ರನ್ಗಳಿಗೆ ಆಲೌಟ್ ಮಾಡಿದ್ರು.
ಆಸ್ಟ್ರೇಲಿಯಾ ಬ್ಯಾಟರ್ ಗಳನ್ನ ಕಾಡಿದ ಭಾರತದ ಬೌಲರ್ಸ್!
ಕಳೆದ ಮೂರು ಪಂದ್ಯಗಳಿಂದ ಭಾರತದ ಬೌಲರ್ಗಳನ್ನ ಆಸಿಸ್ ಬ್ಯಾಟರ್ಸ್ ಇನ್ನಿಲ್ಲದಂತೆ ಕಾಡಿದ್ರು. ಬಟ್ ಈ ಪಂದ್ಯದಲ್ಲಿ ಮಾತ್ರ ಅದು ಉಲ್ಟಾ ಆಗಿತ್ತು. ಟೀಂ ಇಂಡಿಯಾ ಬೌಲರ್ಗಳ ಎದುರು ಹೆಚ್ಚು ಹೊತ್ತು ನಿಲ್ಲೋಕೂ ಪರದಾಡಿದ ಆಸಿಸ್ ಬ್ಯಾಟರ್ಸ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ ಹೊರ ನಡೆದ್ರು. ಮೊದಲ ದಿನದಾಟದ ಕೊನೇ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ಅವ್ರು ಉಸ್ಮಾನ್ ಖ್ವಾಜಾ ಅವರ ವಿಕೆಟ್ ಎಗರಿಸಿದ್ರು. 9 ರನ್ಗಳಿಗೆ 1 ವಿಕೆಟ್ನೊಂದಿಗೆ ಎರಡನೇ ದಿನದಾಟ ಆರಂಭಿಸಿದ್ದ ಆಸಿಸ್ಗೆ ಮತ್ತೆ ಶಾಕ್ ಎದುರಾಗಿತ್ತು. ಇಂದಿನ ಪಂದ್ಯದಲ್ಲಿ ಬುಮ್ರಾ ಜೊತೆ ಸಿರಾಜ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೆಂಕಿ ಬಿರುಗಾಳಿಯಂಗೆ ಬೌಲಿಂಗ್ ಮಾಡಿದ್ರು. ಮೊಹಮ್ಮದ್ ಸಿರಾಜ್ 3 ವಿಕೆಟ್, ಪ್ರಸಿದ್ಧ್ ಕೃಷ್ಣ 3 ವಿಕೆಟ್ ಹಾಗೇ ಬುಮ್ರಾ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ 2 ವಿಕೆಟ್ ಪಡೆದು ಅಬ್ಬರಿಸಿದ್ರು. 181 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್ ಆಯ್ತು.