ಪಾಕಿಸ್ತಾನದಲ್ಲಿ ಸೌತ್ ಏಷ್ಯಾ ಗೇಮ್ಸ್ – ವೈರಿರಾಷ್ಟ್ರಕ್ಕೆ ಕಾಲಿಡುತ್ತಾ ಭಾರತ?
28 ಕ್ರೀಡೆ.. ಮೋದಿ ನಿರ್ಧಾರವೇನು?

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಕೇವಲ ಕ್ರೀಡೆಗಷ್ಟೇ ಸೀಮಿತವಾಗಿದೆ. ಅದೂ ಕೂಡ ಬಿಗ್ ಟೂರ್ನಮೆಂಟ್ಸ್ ಅಂತಾ ಬಂದಾಗ ಮಾತ್ರ. ಈಗಂತೂ ಎರಡೂ ದೇಶಗಳು ಪರಸ್ಪರರ ದೇಶಗಳಿಗೆ ಪ್ರವಾಸವನ್ನೂ ಮಾಡ್ತಿಲ್ಲ. ಗೇಮ್ಸ್ ಇದ್ದಾಗ ತಟಸ್ಥ ಸ್ಥಳದಲ್ಲಿ ಆಡ್ತಿದ್ದಾರೆ. ಆದ್ರೆ 2027ಕ್ಕೆ ಅತಿದೊಡ್ಡ ಕ್ರೀಡಾಕೂಟಕ್ಕೆ ಪಾಕಿಸ್ತಾನ ಆತಿಥ್ಯ ವಹಿಸ್ತಾ ಇದೆ. ಈಗ ಇರುವಂಥ ಪ್ರಶ್ನೆ ಅಂದ್ರೆ ಈ ಕ್ರೀಡಾಕೂಟಕ್ಕಾಗಿ ಭಾರತ ಪಾಕಿಸ್ತಾನಕ್ಕೆ ಕಾಲಿಡುತ್ತಾ ಅನ್ನೋದು.
ಇದನ್ನೂ ಓದಿ : 2 ಪಂದ್ಯ.. 2 ಶತಕ – ನಂ.3ಗೆ ನಾನಿದ್ದೇನೆಂದ DDP
2027ರ ದಕ್ಷಿಣ ಏಷ್ಯಾ ಕ್ರೀಡಾಕೂಟಕ್ಕೆ ಪಾಕಿಸ್ತಾನ ಆತಿಥ್ಯ ವಹಿಸೋದು ಕನ್ಫರ್ಮ್ ಆಗಿದೆ. ಏಪ್ರಿಲ್ 3ರಿಂದ 11ರವರೆಗೆ ಇಸ್ಲಾಮಾಬಾದ್, ಲಾಹೋರ್ ಮತ್ತು ಪೇಶಾವರದಲ್ಲಿ ಕ್ರೀಡಾಕೂಟ ನಡೆಯಲಿದೆ. ಸುಮಾರು 3,200 ಅಥ್ಲೀಟ್‌ಗಳು, 28 ಕ್ರೀಡೆಗಳು ಹಾಗೂ 346 ಪದಕ ಸ್ಪರ್ಧೆಗಳು ನಡೆಯಲಿವೆ. ಆಗಸ್ಟ್ 23ರಂದು ನಡೆದ ದಕ್ಷಿಣ ಏಷ್ಯಾ ಒಲಿಂಪಿಕ್ ಕೌನ್ಸಿಲ್ ಸಭೆಯಲ್ಲಿ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾದ ಪ್ರತಿನಿಧಿಗಳು ಖುದ್ದಾಗಿ ಭಾಗವಹಿಸಿದ್ರೆ, ಭಾರತದ ಪ್ರತಿನಿಧಿಗಳಾಗಿ ಡಾ. ಪಿ.ಟಿ. ಉಷಾ, ರಘುರಾಮ್ ಅಯ್ಯರ್ ಮತ್ತು ಅಜಯ್ ನರನಾಗ್ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಏನೋ ಆಗಿದೆ. ಹಾಗೇ ಪಾಕ್ನಲ್ಲೇ ಕ್ರೀಡಾಕೂಟ ನಡೆಯೋದೂ ಫೈನಲ್ ಆಗಿದೆ. ಬಟ್ ವಿಷ್ಯ ಅಂದ್ರೆ ಭಾರತ ಭಾಗವಹಿಸುತ್ತಾ ಅನ್ನೋದು.
ಕ್ರೀಡಾಕೂಟಕ್ಕೆ ಒಪ್ಪಿದ್ರೂ ಭಾಗವಹಿಸುವಿಕೆ ತಿಳಿಸದ ಭಾರತ!
ಸೌತ್ ಏಷ್ಯಾ ಒಲಿಂಪಿಕ್ ಕೌನ್ಸಿಲ್ ಸಭೆಯಲ್ಲಿ ಭಾರತ ಭಾಗಿಯಾಗಿದೆ. ಕ್ರೀಡಾಕೂಟಕ್ಕೆ ಸಮ್ಮತಿಯನ್ನೂ ನೀಡಿದೆ. ಆದ್ರೆ ಕ್ರೀಡಾಕೂಟದಲ್ಲಿ ಆಡ್ತಾರಾ ಇಲ್ವಾ ಅನ್ನೋದ್ರ ಅಧಿಕೃತವಾಗಿ ಹೇಳಿಲ್ಲ. ಇದಕ್ಕೆ ಮುಖ್ಯ ಕಾರಣವೇ ಭಾರತ ಪಾಕಿಸ್ತಾನ ನಡುವಿನ ರಾಜಕೀಯ ಮತ್ತು ಕ್ರೀಡೆಯಲ್ಲಿನ ವೈಮನ್ಸುಗಳು. ಭಾರತ ಪಾಕ್ ಆಟಗಾರರು ಬಹುರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡಿದ್ರೂ ದ್ವಿಪಕ್ಷೀಯ ಸರಣಿಗಳಿಗೆ ಅವಕಾಶವಿಲ್ಲ. ಹೀಗಾಗಿ ಪಾಕ್ನಲ್ಲಿ ನಡೆಯುವ ಇಷ್ಟು ದೊಡ್ಡ ಮಟ್ಟದ ಸ್ಪೋರ್ಟ್ಸ್ ಈವೆಂಟ್ಗೆ ಭಾರತ ಪಾಕಿಸ್ತಾನಕ್ಕೆ ತೆರಳುತ್ತಾ ಅನ್ನೋ ಪ್ರಶ್ನೆಗಳಿವೆ. ಹೀಗಾಗಿ ಭಾರತದ ಅಂತಿಮ ನಿರ್ಧಾರದಲ್ಲಿ ಕ್ರೀಡಾ ಸಚಿವಾಲಯ, ಭಾರತೀಯ ಒಲಿಂಪಿಕ್ ಸಂಸ್ಥೆ ಮತ್ತು ಸಂಬಂಧಪಟ್ಟ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ನಿಲುವು ಪ್ರಮುಖವಾಗಲಿದೆ. ಎಂಡ್ ಆಫ್ ದಿ ಡೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರವೇ ಫೈನಲ್ ಆಗಲಿದೆ. ಹಾಗಂತ ಭಾರತದ ಪಂದ್ಯಗಳನ್ನ ತಟಸ್ಥ ಸ್ಥಳದಲ್ಲಿ ಆಡಿಸಬೇಕು ಅನ್ನೋದು ಕಷ್ಟವೇ. ಯಾಕಂದ್ರೆ ಕೇವಲ ಕ್ರಿಕೆಟ್ ಮಾತ್ರವೇ ಆಗಿದ್ರೆ ಆಗ ಬೇರೆ ಕಡೆ ಆಡಿಸಬಹುದಿತ್ತು. ಬಟ್ 28 ಕ್ರೀಡೆಗಳು ನಡೆಯೋದ್ರಿಂದ ಸ್ವಲ್ಪ ಕಷ್ಟ ಆಗ್ಬೋಹುದು. ಒಂದ್ವೇಳೆ ಭಾರತ ನಾವು ಪಾಕಿಸ್ತಾನಕ್ಕೆ ಕಾಲಿಡಲ್ಲ ಕ್ರೀಡಾಕೂಟವನ್ನೇ ಬಾಯ್ಕಾಟ್ ಮಾಡ್ತೀವಿ ಅಂದ್ರೆ ಬೇರೆಯದ್ದೇ ಸಮಸ್ಯೆ ಎದುರಾಗಲಿವೆ.
ಭಾರತ ಭಾಗವಹಿಸದಿದ್ರೂ ಕಷ್ಟ!
ಭಾರತ ತಂಡವನ್ನು ಕಳುಹಿಸದೇ ಇದ್ರೆ ಕ್ರೀಡಾಪಟುಗಳಿಗೆ ಅತಿದೊಡ್ಡ ನಷ್ಟ
ದಕ್ಷಿಣ ಏಷ್ಯಾದಲ್ಲಿ ಭಾರತವು ಕ್ರೀಡಾ ಕ್ಷೇತ್ರದಲ್ಲಿ ಅತ್ಯಂತ ಬಲಿಷ್ಠ ರಾಷ್ಟ್ರ
ಕ್ರೀಡಾಕೂಟದಲ್ಲಿ ಭಾರತ ಯಾವಾಗಲೂ ಪದಕ ಬೇಟೆಯಲ್ಲಿ ಫಸ್ಟ್ ಪ್ಲೇಸ್
ಭಾರತೀಯ ಅಥ್ಲೀಟ್ ಗಳು ನೂರಾರು ಪದಕಗಳನ್ನು ಗೆಲ್ಲುವ ಅವಕಾಶ ಕೈತಪ್ಪುತ್ತೆ
ಭಾರತವಿಲ್ಲದಿದ್ದರೆ ಕ್ರೀಡಾಕೂಟದ ಪೈಪೋಟಿ ಮತ್ತು ರೋಚಕತೆಯೂ ಕುಸಿತ
ಇತರ ದೇಶಗಳ ಕ್ರೀಡಾಪಟುಗಳಿಗೂ ಬಲಿಷ್ಠ ತಂಡದ ವಿರುದ್ಧದ ಸ್ಪರ್ಧೆ ಸಿಗಲ್ಲ
ಭಾರತೀಯ ಮಾರುಕಟ್ಟೆ ಮತ್ತು ಪ್ರೇಕ್ಷಕರು ಇಲ್ಲದಿದ್ದರೆ ಕ್ರೀಡಾಕೂಟಕ್ಕೂ ನಷ್ಟ
ಕ್ರೀಡಾಕೂಟದ ಪ್ರಾಯೋಜಕತ್ವ ಮತ್ತು ಆದಾಯದ ಮೇಲೆಯೂ ಎಫೆಕ್ಟ್
ಹೀಗೆ ಭಾರತವನ್ನ ಬಿಟ್ಟು ಕ್ರೀಡಾಕೂಟ ಆಯೋಜನೆ ಮಾಡೋದ್ರಿಂದ ಅವ್ರಿಗೂ ನಷ್ಟವಾಗಲಿದೆ. ಇತ್ತ ಪಾಕಿಸ್ತಾನಕ್ಕೆ ಕಾಲಿಡಲ್ಲ ಹೊಡೆಗುಳಿಯುತ್ತೇವೆ ಅಂದ್ರೆ ಭಾರತದ ಕ್ರೀಡಾಪಟುಗಳಿಗೂ ನಷ್ಟವಾಗುತ್ತೆ. ಹೀಗಾಗಿ ಭಾರತ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದೇ ಕುತೂಹಲ ಮೂಡಿಸಿದೆ. ಮತ್ತೊಂದ್ಕಡೆ 23 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಈಗ ಹೋಸ್ಟಿಂಗ್ ಅವಕಾಶ ಸಿಕ್ಕಿದ್ದು ಪ್ರಿಪರೇಷನ್ಸ್ ಶುರು ಮಾಡಿದೆ. ದಕ್ಷಿಣ ಏಷ್ಯಾದ ರಾಷ್ಟ್ರಗಳೂ ಸಿದ್ಧವಾಗ್ತಿವೆ. ಆದ್ರೆ ಆದ್ರೆ ಭಾರತದ ಕ್ರೀಡಾಪಟುಗಳು ಪಾಕಿಸ್ತಾನದ ನೆಲದಲ್ಲಿ ಆಡ್ತಾರಾ ಅನ್ನೋದೇ ಈಗಿರೋ ದೊಡ್ಡ ಪ್ರಶ್ನೆ.

ನೋಡಿರಿ

