5ನೇ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ – ಭಾರತ Vs ಇಂಗ್ಲೆಂಡ್ ಟೆಸ್ಟ್ ಸರಣಿ ಸಮಬಲ

5ನೇ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ –  ಭಾರತ Vs ಇಂಗ್ಲೆಂಡ್ ಟೆಸ್ಟ್ ಸರಣಿ ಸಮಬಲ

5ನೇ ಪಂದ್ಯವನ್ನ ರೋಚಕವಾಗಿ ಗೆದ್ದ ಭಾರತ ಸರಣಿಯನ್ನ ಸಮಬಲ ಮಾಡಿಕೊಂಡಿದೆ.  5ನೇ ಟೆಸ್ಟ್ ನ 5ನೇ ದಿನದ ಕೊನೆ ಕ್ಷಣದಲ್ಲಿ ಭಾರತ ಗೆಲುವಿ ಅದ್ಭುತ ಹೋರಾಟ ನಡೆಸಿತು.  ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಅಂತೂ ಇಂತೂ ಟೀಂ ಇಂಡಿಯಾ ಆರು ರನ್ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲದೊಂದಿಗೆ ತನ್ನ ಅಭಿಯಾನ ಮುಗಿಸಿದೆ. 5 ವಿಕೆಟ್ ಕಬಳಿಸಿದ ವೇಗಿ ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾ ಗೆಲುವಿನ ರೂವಾರಿ ಎನಿಸಿದರು.

ಇದನ್ನೂ ಓದಿ: ಸಾರಿಗೆ ನೌಕರರಿಗೆ ಹೈಕೋರ್ಟ್‌ ಶಾಕ್‌! – ನಾಳೆ ನಡೆಯಬೇಕಿದ್ದ ಮುಷ್ಕರ ಮುಂದೂಡಿಕೆ!

ಗೆಲ್ಲಲು 374 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿತ್ತು. ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ಗೆಲ್ಲಲು ಕೇವಲ 35 ರನ್ ಅಗತ್ಯವಿತ್ತು. ವಿಕೆಟ್ ಕೀಪರ್ ಬ್ಯಾಟರ್ ಜೇಮೀ ಸ್ಮಿತ್ ಹಾಗೂ ಜೇಮಿ ಓವರ್‌ಟನ್ ಕ್ರೀಸ್‌ನಲ್ಲಿದ್ದರು. ಐದನೇ ದಿನದಾಟದ ಮೊದಲ ಓವರ್‌ನ ಮೊದಲೆರಡು ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಮರು ಓವರ್‌ನಲ್ಲೇ ವೇಗಿ ಮೊಹvictoryಮ್ಮದ್ ಸಿರಾಜ್, ಜೇಮೀ ಸ್ಮಿತ್(2) ಅವರನ್ನು ಬಲಿ ಪಡೆಯುವ ಮೂಲಕ ಇಂಗ್ಲೆಂಡ್‌ಗೆ ಶಾಕ್ ನೀಡಿದರು. ಇದಾದ ಕೆಲ ಹೊತ್ತಿನಲ್ಲೇ ಅಮೂಲ್ಯ 9 ರನ್ ಬಾರಿಸಿದ್ದ ಜೇಮಿ ಓವರ್‌ಟನ್ ಅವರನ್ನು ಬಲಿಪಡೆಯುವ ಮೂಲಕ ಆತಿಥೇಯರಿಗೆ ಡಬಲ್ ಶಾಕ್ ನೀಡಿದರು.

 

Kishor KV