ವೈರಲ್ ಆದ ಭಾರತ, ಚೀನಾ ಸೈನಿಕರ ಹೊಡೆದಾಟ ವಿಡಿಯೋ

ವೈರಲ್ ಆದ ಭಾರತ, ಚೀನಾ ಸೈನಿಕರ ಹೊಡೆದಾಟ ವಿಡಿಯೋ

ನವದೆಹಲಿ: ಅರುಣಾಚಲ ಪ್ರದೇಶದಲ್ಲಿನ ತವಾಂಗ್ ವಲಯದ ವಾಸ್ತವ ನಿಯಂತ್ರಣ ರೇಖೆಯ(ಎಲ್​ಎಸಿ) ಬಳಿ ಡಿ. 9 ಭಾರತ ಮತ್ತು ಚೀನಾ ಪಡೆಗಳ ಮಧ್ಯೆ ಘರ್ಷಣೆ ನಡೆದಿದೆ. ಈ ವೇಳೆ ಭಾರತ-ಚೀನಾ ಸೈನಿಕರ ಮಧ್ಯೆ ಹೊಡೆದಾಟ ನಡೆದಿದ್ದು, ಎರಡೂ ದೇಶಗಳ ಕೆಲ ಸೈನಿಕರು ಗಾಯಗೊಂಡಿದ್ದಾರೆ. ಬಳಿಕ ವಿವಾದಾತ್ಮಕ ಪ್ರದೇಶದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದಾರೆ. ಈ ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸೈನಿಕರ ಹೊಡೆದಾಟದ ವಿಡಿಯೋವೊಂದು ವೈರಲ್ ಆಗುತ್ತಿದೆ.

ಇದನ್ನೂ ಓದಿ: ಭಾರತ- ಚೀನಾ ಘರ್ಷಣೆ: ಈಡೇರದ ಚರ್ಚೆಯ ಬೇಡಿಕೆ – ಸಭಾತ್ಯಾಗ ಮಾಡಿದ ವಿಪಕ್ಷಗಳು

ವೈರಲ್ ಆದ ವಿಡಿಯೋದಲ್ಲಿ, ಚೀನಾ ಸೈನಿಕರು ಭಾರತದ ಗಡಿ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ನಡೆಸಿದ ಸಂಘಟಿತ ಪ್ರಯತ್ನವನ್ನು ತೋರಿಸಲಾಗಿದೆ. ಭಾರತದ ಗಡಿಯನ್ನು ದಾಟಲು ಬರುತ್ತಿರುವ ಚೀನಾ ಸೈನಿಕರು ಭಾರತೀಯ ಸೈನಿಕರನ್ನು ಥಳಿಸಿದ್ದಾರೆ. ಈ ಕಾರಣಕ್ಕೆ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಲಾಠಿಗಳಿಂದ ಹೊಡೆಯುವುದನ್ನು ಈ ವಿಡಿಯೊದಲ್ಲಿ ತೋರಿಸಲಾಗಿದೆ. ಈ ವಿಡಿಯೋ ಡಿಸೆಂಬರ್ 9ರ ಘಟನೆಗೆ ಸಂಬಂಧಿಸಿದ್ದಲ್ಲ ಎನ್ನಲಾಗುತ್ತಿದೆ.

ವೈರಲ್ ಆದ ವಿಡಿಯೋ ಜೂನ್ 2020ರಲ್ಲಿ ಪೂರ್ವ ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ನಂತರ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವೇಳೆ 20 ಮಂದಿ ಸೈನಿಕರು ಸಾವನ್ನಪ್ಪಿದ್ದರು ಮತ್ತು 40ಕ್ಕೂ ಹೆಚ್ಚು ಚೀನೀ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು.

suddiyaana