ಬೂಮಾಸ್ತ್ರವಿಲ್ಲದ ಭಾರತ ಬಲಹೀನ – ಚಾಂಪಿಯನ್ಸ್ ಟ್ರೋಫಿ ಮಿಸ್ಸಾಗುತ್ತಾ?

ಬೂಮಾಸ್ತ್ರವಿಲ್ಲದ ಭಾರತ ಬಲಹೀನ – ಚಾಂಪಿಯನ್ಸ್ ಟ್ರೋಫಿ ಮಿಸ್ಸಾಗುತ್ತಾ?

ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತಾರೋ ಇಲ್ಲವೋ ಅನ್ನೋದೇ ಬಿಸಿಸಿಐ ದೊಡ್ಡ ತಲೆ ಬಿಸಿಯಾಗಿದೆ.  ಜಸ್ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿ ವೇಳೆಗೆ ಫಿಟ್ ಆಗದೇ ಇದ್ರೆ ಟೀಂ ಇಂಡಿಯಾದ ಪೇಸಿಂಗ್ ಅಟ್ಯಾಕ್ ತುಂಬಾನೇ ವೀಕ್ ಆಗುತ್ತೆ ಅಂತಾ  ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ. ಐಸಿಸಿ ಟೂರ್ನಮೆಂಟ್‌ಗಾಗಿ 15 ಸದಸ್ಯರ ತಾತ್ಕಾಲಿಕ ತಂಡದಲ್ಲಿ ಬುಮ್ರಾ ಅವರ ಹೆಸರೂ ಇದೆ. ಆದರೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಂತರ ಕ್ರಿಕೆಟ್ ಆಡಿಲ್ಲ. ಆಟಗಾರನ ಪ್ರಗತಿಯ ಕುರಿತು ಪ್ರಸ್ತುತ ಯಾವುದೇ ಮಾಹಿತಿ ಇಲ್ಲ.

ಇದನ್ನೂ ಓದಿ : ರಚಿನ್ ರಕ್ತ ಚಿಮ್ಮಿಸಿತಾ LED ಲೈಟ್ಸ್? –  ಮೈದಾನಗಳಲ್ಲೇ ಪಾಕಿಸ್ತಾನ ಎಡವಟ್ಟು

ಚಾಂಪಿಯನ್ಸ್‌ ಟ್ರೋಫಿಯ ಪಂದ್ಯಗಳಿಗೆ ಜಸ್ಪ್ರಿತ್ ಬುಮ್ರಾ ಅಲಭ್ಯರಾದ್ರೆ ಇವರ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಸದ್ಯಕ್ಕೆ ಈ ಪ್ರಶ್ನೆಗೆ ಎರಡು ಹೆಸರುಗಳು ಕೇಳಿ ಬರ್ತಿದೆ. ಅದ್ರಲ್ಲಿ ಒಂದು ಮೊಹಮ್ಮದ್ ಸಿರಾಜ್ ಮತ್ತೊಂದು ಹರ್ಷಿತ್ ರಾಣಾ. ಈಗಾಗಲೇ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಹರ್ಷಿತ್ ರಾಣಾ ಆ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಇನ್ನು ದೇಶೀಯ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ, ಆಯ್ಕೆದಾರರ ಗಮನ ಕದ್ದಿರುವ ಮೊಹಮ್ಮದ್‌ ಸಿರಾಜ್‌ ಸಹ ದುಬೈ ಫ್ಲೈಟ್ ಏರಲು ತಯಾರಾಗಿದ್ದಾರೆ. ಒಂದು ವೇಳೆ ಬುಮ್ರಾ ಚಾಂಪಿಯನ್ಸ್ ಟ್ರೋಫಿಯನ್ನು ಮಿಸ್‌ ಮಾಡಿಕೊಂಡರೆ ಇವರಿಬರಲ್ಲಿ ಒಬ್ಬರಿಗೆ ಸ್ಥಾನ ಖಚಿತ ಎಂದು ಹೇಳಲಾಗುತ್ತಿದೆ.

ಸದ್ಯಕ್ಕಿರೋ ರಿಪೋರ್ಟ್ಸ್ ನೋಡ್ತಿದ್ರೆ ಜಸ್‌ಪ್ರೀತ್ ಬುಮ್ರಾ ಚಾಂಪಿಯನ್ಸ್‌ ಟ್ರೋಫಿಯ ಆರಂಭಿಕ ಕೆಲ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಬಹುದು. ಟೂರ್ನಿಯ ಮಧ್ಯೆ ತಂಡಕ್ಕೆ ಬರಬಹುದು. ಒಟ್ಟಾರೆ ಆಯ್ಕೆ ಸಮಿತಿ ತೀರ್ಮಾನ ಅಂತಿಮವಾಗಲಿದೆ. ಫೆಬ್ರವರಿ 19ರಿಂದ ಪಾಕ್‌ನಲ್ಲಿ ಪ್ರಾರಂಭಗೊಳ್ಳಲಿರುವ ಟೂರ್ನಿಯಲ್ಲಿ ಭಾರತ ತನ್ನ ಎಲ್ಲಾಪಂದ್ಯಗಳನ್ನು ತಟಸ್ಥ ಸ್ಥಳವಾದ ದುಬೈನಲ್ಲಿ ಆಡಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಜತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತ ತಂಡ ಮೊದಲ ಪಂದ್ಯವನ್ನು ಫೆ.20 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಫೆ.23 ರಂದು ಭಾರತ – ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

Shantha Kumari

Leave a Reply

Your email address will not be published. Required fields are marked *